ಸೋಲಿಗಿಂತ ಹೆಚ್ಚಾಗಿ ಸದೃಢ ಸರ್ಕಾರ ತಂದಿರುವ ಖುಷಿ ಇದೆ; ಎಚ್​ ವಿಶ್ವನಾಥ್​​

ಉಪಚುನಾವಣೆ ಸೋಲು ಬೇಸರ ಮೂಡಿಸಿದರೂ ಬೇರೆ ಕಡೆಯಲ್ಲಿ ನಮಗೆ ಉತ್ತಮ ಜಯ ಸಿಕ್ಕಿದೆ. ಇದರಿಂದ ಸ್ಥಿರ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಯಡಿಯೂರಪ್ಪ ಅವರು ನಮ್ಮ ಜೊತೆ ಇದ್ದಾರೆ ಎನ್ನುವುದಕ್ಕಿಂತ ನಾವು ಅವರ ಜೊತೆ ಇದ್ದೇವೆ ಎಂಬ ಖುಷಿ ಇದೆ

news18-kannada
Updated:December 10, 2019, 5:11 PM IST
ಸೋಲಿಗಿಂತ ಹೆಚ್ಚಾಗಿ ಸದೃಢ ಸರ್ಕಾರ ತಂದಿರುವ ಖುಷಿ ಇದೆ; ಎಚ್​ ವಿಶ್ವನಾಥ್​​
ಹೆಚ್.ವಿಶ್ವನಾಥ್​
  • Share this:
ಹುಣಸೂರು (ಡಿ.10): ಉಪಚುನಾವಣಾ ಸೋಲಿಗಿಂತ ಸದೃಢ ಸರ್ಕಾರ ತಂದಿರುವ ಖುಷಿ ನನಗೆ ಇದೆ ಎಂದು ಹುಣಸೂರು ಪರಾಜಿತ ಅಭ್ಯರ್ಥಿ ಎಚ್​ ವಿಶ್ವನಾಥ್​ ತಿಳಿಸಿದ್ದಾರೆ. 

ತಮ್ಮ ಸೋಲಿನ ಬಗ್ಗೆ ಮೌನ ಮುರಿದು ಮಾತನಾಡಿದ ಅವರು,  ಉಪಚುನಾವಣೆಯಲ್ಲಿ ನನ್ನ ಸೋಲಿಗೆ ಎಲ್ಲರೂ ಒಂದಾಗಿ ಕೆಲಸ ಮಾಡಿದರು. ಜಿಟಿ ದೇವೇಗೌಡ, ಸಿದ್ದರಾಮಯ್ಯ, ಕುಮಾರಸ್ವಾಮಿ ಎಲ್ಲರೂ ಸೇರಿಕೊಂಡು ನನ್ನನ್ನು ಸೋಲಿಸಿದ್ದಾರೆ.

ಜನರು ನನ್ನನ್ನು ಗೆಲ್ಲಿಸಲಿಲ್ಲ ಎಂದು ದೂರುವುದಿಲ್ಲ. ಜನರಿಗೆ ಗೊತ್ತಿದೆ ಯಾರನ್ನು ಗೆಲ್ಲಿಸಬೇಕು ಎಂದು. ಸೋಲಿಗೆ ನಮ್ಮನ್ನು ನಾವೇ ದೂರಿಕೊಳ್ಳಬೇಕು ಎಂದರು.

ಉಪಚುನಾವಣೆ ಸೋಲು ಬೇಸರ ಮೂಡಿಸಿದರೂ ಬೇರೆ ಕಡೆಯಲ್ಲಿ ನಮಗೆ ಉತ್ತಮ ಜಯ ಸಿಕ್ಕಿದೆ. ಇದರಿಂದ ಸ್ಥಿರ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಯಡಿಯೂರಪ್ಪ ಅವರು ನಮ್ಮ ಜೊತೆ ಇದ್ದಾರೆ ಎನ್ನುವುದಕ್ಕಿಂತ ನಾವು ಅವರ ಜೊತೆ ಇದ್ದೇವೆ ಎಂಬ ಖುಷಿ ಇದೆ ಎಂದರು.

ಸೋಲಿನ ಬಳಿಕ ಪಕ್ಷ ಕೈ ಬಿಡುತ್ತದೆ ಎಂಬ ಯಾವ ಅಂಜಿಕೆ ನಮಗೆ ಇಲ್ಲ. ಶುದ್ಧ ರಾಜಕಾರಣಕ್ಕಾಗಿ ತ್ಯಾಗ ಮಾಡಿದವರು ನಾವು. ಯಡಿಯೂರಪ್ಪ ಅವರು ಒಮ್ಮೆ ಮಾತು ಕೊಟ್ಟ ಮೇಲೆ ತಪ್ಪುವುದಿಲ್ಲ. ಹೀಗಾಗಿ ಪಕ್ಷ ನಮ್ಮನ್ನು ಯಾವುದೇ ಕಾರಣಕ್ಕೆ ಕೈ ಬಿಡುವುದಿಲ್ಲ ಎಂಬ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನು ಓದಿ: ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಬೆನ್ನಲ್ಲೇ ಕೆಸಿ ವೇಣುಗೋಪಾಲ್ ಕೂಡ ರಾಜೀನಾಮೆಗೆ ನಿರ್ಧಾರ

ವಿಪಕ್ಷ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕುರಿತು ಮಾತನಾಡಿದ ಅವರು, ನೀವೇ ನೋಡಿ ಭಗವಂತ ಎಲ್ಲೋ ಒಂದು ಕಡೆ ತೋರಿಸುತ್ತಾನೆ ಎಂದು. ಅದು ಈಗ ಆಗಿದೆ ಎಂದು ಮಾರ್ಮಿಕವಾಗಿ ಪ್ರತಿಕ್ರಿಯಿಸಿದರು.
First published:December 10, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ