ಸಾರಾ ಮಹೇಶ್- ಹೆಚ್. ವಿಶ್ವನಾಥ್ ಆಣೆ ಪ್ರಮಾಣಕ್ಕೆ ವೇದಿಕೆ ಸಜ್ಜು; ಚಾಮುಂಡಿ ಬೆಟ್ಟದಲ್ಲಿಂದು ಹೈಡ್ರಾಮ?

ಹೆಚ್. ವಿಶ್ವನಾಥ್ ದುಡ್ಡಿನಾಸೆಗೆ ಬಲಿಯಾಗದೆ ಕೇವಲ ಅಸಮಾಧಾನದಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರೆ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಪ್ರಮಾಣ ಮಾಡಲಿಎಂದು ಸಾ.ರಾ ಮಹೇಶ್ ಸವಾಲು ಹಾಕಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ವಿಶ್ವನಾಥ್, ನಾನು ಪ್ರಮಾಣ ಮಾಡುತ್ತೇನೆ. ಆದರೆ, ನನ್ನನ್ನು ಕೊಂಡುಕೊಂಡವನು ಸಾ.ರಾ ಮಹೇಶ್ ಜೊತೆ ಬರಲೇಬೇಕು ಎಂದು ತಿರುಗೇಟು ನೀಡಿದ್ದರು.

Sushma Chakre | news18-kannada
Updated:October 17, 2019, 8:26 AM IST
ಸಾರಾ ಮಹೇಶ್- ಹೆಚ್. ವಿಶ್ವನಾಥ್ ಆಣೆ ಪ್ರಮಾಣಕ್ಕೆ ವೇದಿಕೆ ಸಜ್ಜು; ಚಾಮುಂಡಿ ಬೆಟ್ಟದಲ್ಲಿಂದು ಹೈಡ್ರಾಮ?
ಹೆಚ್. ವಿಶ್ವನಾಥ್- ಸಾರಾ ಮಹೇಶ್
  • Share this:
ಮೈಸೂರು (ಅ. 17): ಜೆಡಿಎಸ್​ನ ಮಾಜಿ ಸಚಿವರಾದ ಸಾ.ರಾ. ಮಹೇಶ್ ಮತ್ತು ಹೆಚ್. ವಿಶ್ವನಾಥ್ ನಡುವಿನ ಜಗಳ ಕ್ಲೈಮ್ಯಾಕ್ಸ್​ ಹಂತ ತಲುಪಿದೆ. ಇಂದು ಇಬ್ಬರೂ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಆಣೆ-ಪ್ರಮಾಣ ಮಾಡಲಿದ್ದು, ಅದಕ್ಕಾಗಿ ವೇದಿಕೆ ಸಜ್ಜಾಗಿದೆ.

ಹುಣಸೂರು ಕ್ಷೇತ್ರದ ಅನರ್ಹ ಶಾಸಕ ಹೆಚ್. ವಿಶ್ವನಾಥ್ ಮತ್ತು ಸಾ.ರಾ. ಮಹೇಶ್ ನಡುವೆ ವಾಕ್ಸಮರ ಏರ್ಪಟ್ಟಿತ್ತು. ತಾವು ಮಾಡಿದ ಆರೋಪ ನಿಜವೆಂದು ಚಾಮುಂಡಿ ಬೆಟ್ಟಕ್ಕೆ ಬಂದು ಪ್ರಮಾಣ ಮಾಡಬೇಕೆಂದು ಸಾ.ರಾ. ಮಹೇಶ್ ಆಹ್ವಾನ ನೀಡಿದ್ದರು. ಅದಕ್ಕೆ ಒಪ್ಪಿದ್ದ ಹೆಚ್. ವಿಶ್ವನಾಥ್ ಇಂದು ಬೆಳಗ್ಗೆ 9 ಗಂಟೆಗೆ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಪ್ರಮಾಣ ಮಾಡಲಿದ್ದಾರೆ.

ಈ ಹಿಂದೆ ಸುದ್ದಿಗೋಷ್ಠಿಯಲ್ಲಿ ಸಾ.ರಾ. ಮಹೇಶ್ ವಿರುದ್ಧ ಆರೋಪ ಮಾಡಿದ್ದ ಹೆಚ್. ವಿಶ್ವನಾಥ್, ಅವರು ಅಕ್ರಮವಾಗಿ ನೂರಾರು ಕೋಟಿ ರೂ. ಸಂಪಾದಿಸಿದ್ದಾರೆ ಎಂದಿದ್ದರು. ಅದಕ್ಕೆ ಮಾರನೇ ದಿನ ಸುದ್ದಿಗೋಷ್ಠಿಯಲ್ಲಿ ತಿರುಗೇಟು ನೀಡಿದ್ದ ಸಾ.ರಾ. ಮಹೇಶ್ ಅನರ್ಹ ಶಾಸಕ ಹೆಚ್. ವಿಶ್ವನಾಥ್ ಅವರ ಖಾಸಗಿ ವಿಚಾರಗಳನ್ನು ಪ್ರಸ್ತಾಪಿಸಿದ್ದರು. ನಾನು ಹೇಳಿದ ವಿಷಯ ನಿಜವಲ್ಲದಿದ್ದರೆ ಅಥವಾ ನೀವು ಮಾಡಿದ ಆರೋಪ ನಿಜವಾದರೆ ಚಾಮುಂಡಿ ಬೆಟ್ಟದಲ್ಲಿ ಪ್ರಮಾಣಕ್ಕೆ ಬನ್ನಿ ಎಂದು ಆಹ್ವಾನಿಸಿದ್ದರು.

ಡಿಕೆಶಿ ಅಕ್ರಮ ಹಣ ವರ್ಗಾವಣೆ ಪ್ರಕರಣ: ಮಾಜಿ ಕಾಂಗ್ರೆಸ್​​ ಶಾಸಕ ಕೆ.ಎನ್​​ ರಾಜಣ್ಣ ಇಡಿ ವಿಚಾರಣೆ ಅಂತ್ಯ

ಮೈಸೂರು ಭಾಗದ ಪ್ರಭಾವಿ ನಾಯಕರಾದ ಈ ಇಬ್ಬರ ನಡುವೆ ವೈಯಕ್ತಿಕ ಟೀಕೆಗಳು ಏರ್ಪಟ್ಟು ವಿವಾದವಾಗಿ ಪರಿಣಮಿಸಿತ್ತು. ಸಾ.ರಾ. ಮಹೇಶ್ ಮೊದಲು ಚಾಮುಂಡಿ ಬೆಟ್ಟದಲ್ಲಿ ಪ್ರಮಾಣ ಮಾಡುವ ವಿಷಯ ಪ್ರಸ್ತಾಪಿಸಿದ್ದರು. ನಂತರ ಹೆಚ್. ವಿಶ್ವನಾಥ್ ಅವರೂ ಸಾ.ರಾ. ಮಹೇಶ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ನನ್ನನ್ನು ಮಾರಿ ಕೊಂಡವನು ಅಂತ ಸಾರಾ ಮಹೇಶ್ ಆರೋಪಿಸುತ್ತಾರೆ. ನನ್ನನ್ನು ಖರೀದಿ ಮಾಡಿದವನನ್ನು ಚಾಮುಂಡಿ ಬೆಟ್ಟಕ್ಕೆ ಕರೆದುಕೊಂಡು ಬನ್ನಿ ಎಂದು ಸವಾಲು ಹಾಕಿದ್ದರು. ನಿನ್ನೆ ಮತ್ತೆ ಸಾ.ರಾ ಮಹೇಶ್, ವಿಶ್ವನಾಥ್ ತಮಗೆ ನೀಡಿದ್ದ ಸವಾಲನ್ನು ಪ್ರಸ್ತಾಪಿಸಿ ಇಂದು ಚಾಮುಂಡಿ ಬೆಟ್ಟಕ್ಕೆ ಬರುವಂತೆ ಆಹ್ವಾನ ನೀಡಿದ್ದರು.

ನಾನು ಕುರುಬ ಎಂದು ಹೀಗೆ ಸಾರಾ ಮಹೇಶ್​​​ ಹಿಂಸೆ ನೀಡುತ್ತಿದ್ದಾರೆ: ಅನರ್ಹ ಶಾಸಕ ಎಚ್​​. ವಿಶ್ವನಾಥ್​​

ನಾನು ಹೇಳಿದಂತೆ ಹೆಚ್. ವಿಶ್ವನಾಥ್ ದುಡ್ಡಿನಾಸೆಗೆ ಬಲಿಯಾಗದೆ ಕೇವಲ ಅಸಮಾಧಾನದಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರೆ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಪ್ರಮಾಣ ಮಾಡಲಿ. ನಾನು ಕೂಡ ಬರುತ್ತೇನೆ ಎಂದು ಸಾ.ರಾ ಮಹೇಶ್ ಸವಾಲು ಹಾಕಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ವಿಶ್ವನಾಥ್, ನಾನು ಚಾಮುಂಡಿ ಬೆಟ್ಟಕ್ಕೆ ಬರುತ್ತೇನೆ. ಆದರೆ ನನ್ನನ್ನು ಕೊಂಡುಕೊಂಡವನು ಸಾ.ರಾ ಮಹೇಶ್ ಜೊತೆ ಬರಲೇಬೇಕು ಎಂದು ತಿರುಗೇಟು ನೀಡಿದ್ದರು.ಹೆಚ್​​. ವಿಶ್ವನಾಥ್​​ 25 ಕೋಟಿಗೆ ಮಾರಾಟವಾಗಿದ್ದಾರೆ ಎಂಬ ಸಾರಾ ಮಹೇಶ್​​ ಗಂಭೀರ ಆರೋಪಕ್ಕೆ ಅನರ್ಹ ಶಾಸಕ ತಿರುಗೇಟು ನೀಡಿದ್ದರು. ನಾನು ಕುರುಬ ಎಂಬ ಕಾರಣಕ್ಕೆ ಸಾರಾ ಮಹೇಶ್ ಹೀಗೆ ಹಿಂಸೆ ನೀಡುತ್ತಿದ್ದಾರೆ. ನಾನು ಚಾಮುಂಡಿ ಬೆಟ್ಟಕ್ಕೆ ಹೋಗುತ್ತೇನೆ. ಸಾರಾ ಮಹೇಶ್ ಸದನದಲ್ಲಿ ನಾನು 25 ಕೋಟಿಗೆ ಮಾರಾಟ ಆಗಿದ್ದೇನೆ ಎಂಬ ಆರೋಪ ಮಾಡಿದ್ದರು. ಹಾಗಾಗಿ ಸಾರಾ ಮಹೇಶ್ ನನ್ನನ್ನ ಕೊಂಡುಕೊಂಡವರನ್ನು ಬೆಟ್ಟಕ್ಕೆ ಕರೆದುಕೊಂಡು ಬರಲಿ. ಆತನ ಆರೋಪ ನಿಜ ಎಂದು ಸಾಬೀಪಡಿಸಲಿ ಎಂದು ಕುಟುಕಿದ್ದರು.

‘ಸಾರಾ ಮಹೇಶ್ ಕೊಚ್ಚೆ ಗುಂಡಿ, ನಾನ್ಯಾಕೇ ಕಲ್ಲೆಸೆದು ಶರ್ಟ್​​ ಕೊಳೆ ಮಾಡಿಕೊಳ್ಳಲಿ‘: ಹೆಚ್. ವಿಶ್ವನಾಥ್​

ನಾಳೆ ನಾನು ಬೆಟ್ಟಕ್ಕೋಗಿ ಸಾರಾ ಮಹೇಶ್​ಗಾಗಿ ಕಾಯುತ್ತೇನೆ. ನನ್ನನ್ನು ಖರೀದಿ ಮಾಡಿದವರು ಆತನೊಂದಿಗೆ ಬರಬೇಕು. ಸಾರಾ ಮಹೇಶ್​ ಒಬ್ಬರೇ ಬಂದರೇ ಅವರ ಆರೋಪ ಸುಳ್ಳು ಎಂದರ್ಥ. ನನಗೆ ಭಾರೀ ಕೆಲಸ ಇದೆ. ಆದ್ದರಿಂದ ಈ ವಿಚಾರಕ್ಕೆ ಇಲ್ಲಿಗೆ ಅಂತ್ಯ ಹಾಡೋಣ ಎಂದರು. ನನ್ನ ಮೇಲೆ ಸುಖಾ ಸುಮ್ಮನೆ ಆರೋಪ ಮಾಡಲಾಗುತ್ತಿದೆ. ನಾನು ಕುರುಬ ಎಂಬ ಕಾರಣಕ್ಕೆ ಹೀಗೆ ಹಿಂಸೆ ನೀಡಲಾಗ್ತಿದೆ. ನಮಗೆ ಇಂತವರಿಂದ ರಕ್ಷಣೆ ಇಲ್ಲವೇ? ಎಂದರು. ಹಾಗೆಯೇ ಸಾರಾ ಮಹೇಶ್​​ ನೀಡುವ ಹೇಳಿಕಗೆ ಮನ್ನಣೆ ನೀಡದೇ, ಮಾಧ್ಯಮಗಳು ನಮ್ಮ ರಕ್ಷಣೆಗೆ ನಿಲ್ಲಬೇಕು ಎಂದುನಿನ್ನೆ ವಿಶ್ವನಾಥ್  ಜರಿದಿದ್ದರು.

ಮಹೇಶ್​​ ಏನು ನನ್ನ ಮಾಲೀಕನೇ? ಆತನ ಮುಂದೆ ನಾನ್ಯಾಕೇ ಪ್ರಮಾಣ ಮಾಡಬೇಕು. ಅವನೇ ನನ್ನ ಖರೀದಿ ಮಾಡಿದವರನ್ನು ಕರೆದುಕೊಂಡು ಚಾಮುಂಡಿ ಬೆಟ್ಟದಲ್ಲಿ ದೇವರ ಮುಂದೆ ಪ್ರಮಾಣ ಮಾಡಲಿ. ಇಲ್ಲದೇ ಹೋದಲ್ಲಿ ಇದೊಂದು ಹಿಟ್​​ ಅಂಡ್​​ ರನ್​​ ಕೇಸ್​ ಎಂದು ಭಾವಿಸಬೇಕಾಗುತ್ತದೆ ಎಂದು ಹೆಚ್​. ವಿಶ್ವನಾಥ್ ಕಿಡಿಕಾರಿದ್ದರು.

ರಾಜ್ಯದಲ್ಲಿ ರಾಜಕಾರಣಿಗಳ ನಡುವೆ ಆಣೆ-ಪ್ರಮಾಣ ಹೊಸದೇನಲ್ಲ. ಈ ಹಿಂದೆ ಮಾಜಿ ಸಿಎಂ ಹೆಚ್​.ಡಿ. ಕುಮಾರಸ್ವಾಮಿ ಮತ್ತು ಸಿಎಂ ಬಿ.ಎಸ್. ಯಡಿಯೂರಪ್ಪ ಕೂಡ ಧರ್ಮಸ್ಥಳ ಮಂಜುನಾಥಸ್ವಾಮಿ ಸನ್ನಿಧಿಯಲ್ಲಿ ಆಣೆ-ಪ್ರಮಾಣ ಮಾಡಿದ್ದು ದೊಡ್ಡ ಸುದ್ದಿಯಾಗಿತ್ತು.

First published:October 17, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading