ಸಚಿವಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಎಚ್ ನಾಗೇಶ್ಗೆ ಅಂಬೇಡ್ಕರ್ ಅಭಿವೃದ್ಧಿ ನಿಗಮ ಅಧ್ಯಕ್ಷ ಸ್ಥಾನ
ರಾಜೀನಾಮೆ ನೀಡಲು ಹಿಂದೇಟು ಹಾಕಿದ್ದ ಎಚ್ ನಾಗೇಶ್ಗೆ ತಾವು ಸೂಚಿಸಿದ ನಿಗಮ ಮಂಡಳಿ ಸ್ಥಾನ ನೀಡುವುದಾಗಿ ಸಿಎಂ ಅಭಯ ನೀಡಿದ್ದರು
news18-kannada Updated:January 13, 2021, 9:08 PM IST

ಹೆಚ್ ನಾಗೇಶ್
- News18 Kannada
- Last Updated: January 13, 2021, 9:08 PM IST
ಬೆಂಗಳೂರು (ಜ. 13): ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಸಂಪುಟ ವಿಸ್ತರಣೆಗೆ ಅನುಕೂಲ ಮಾಡಿಕೊಂಡಿದ್ದ ಎಚ್ ನಾಗೇಶ್ಗೆ ಸಿಎಂ ಕೊಟ್ಟ ಮಾತಿನಂತೆ ಇದಕ್ಕೆ ಸಮಾನ ದರ್ಜೆ ಹುದ್ದೆ ನೀಡಿದ್ದಾರೆ. ಎಚ್ ನಾಗೇಶ್ ಅವರಿಗೆ ಸಚಿವ ಸ್ಥಾನಕ್ಕೆ ಬದಲಾಗಿ ನಿಗಮ ಮಂಡಳಿ ಸ್ಥಾನ ನೀಡುವ ಭರವಸೆ ನೀಡಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಓಲೈಸಿದ್ದರು. ಅದರಂತೆ ಇಂದು ಬೆಳಗ್ಗೆ ತನ್ನ ಸಚಿವ ಸ್ಥಾನಕ್ಕೆ ನಾಗೇಶ್ ರಾಜೀನಾಮೆ ನೀಡಿದ್ದರು. ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಕಾರ್ಯ ಮುಗಿಯುತ್ತಿದ್ದಂತೆ ಮುಖ್ಯಮಂತ್ರಿಗಳು ನಾಗೇಶ್ಗೆ ಅಂಬೇಡ್ಕರ್ ಅಭಿವೃದ್ಧಿ ನಿಗಮ ಅಧ್ಯಕ್ಷರಾಗಿ ನೇಮಕ ಮಾಡಿ ಆದೇಶ ನೀಡಿದ್ದಾರೆ. ಈ ಮೂಲಕ ಮುಖ್ಯಮಂತ್ರಿ ಕೊಟ್ಟ ಮಾತಿನಂತೆ ಅವರಿಗೆ ಸಂಪುಟ ದರ್ಜೆ ಸ್ಥಾನಮಾನ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.
ಇನ್ನು ಈ ಹಿಂದೆ ಅಂಬೇಡ್ಕರ್ ಅಭಿವೃದ್ಧಿ ನಿಗಮ ಅಧ್ಯಕ್ಷರಾಗಿ ಮುನಿಕೃಷ್ಣ ಕಾರ್ಯನಿರ್ವಹಿಸುತ್ತಿದ್ದರು. ಅವರನ್ನು ಮಾರುಕಟ್ಟೆ ಸಂವಹನ, ಜಾಹೀರಾತು ಲಿಮಿಟೆಡ್ ಹುದ್ದೆಗೆ ತೋರಿಸಲಾಗಿದೆ.
ಇದೇ ನಿಗಮ ಬೇಡಿಕೆ ಇಟ್ಟಿದ್ದ ನಾಗೇಶ್
ರಾಜೀನಾಮೆ ನೀಡಲು ಹಿಂದೇಟು ಹಾಕಿದ್ದ ಎಚ್ ನಾಗೇಶ್ಗೆ ತಾವು ಸೂಚಿಸಿದ ನಿಗಮ ಮಂಡಳಿ ಸ್ಥಾನ ನೀಡುವುದಾಗಿ ಸಿಎಂ ಅಭಯ ನೀಡಿದ್ದರು. ಈ ಹಿನ್ನಲೆ ನಾಗೇಶ್ಅಂಬೇಡ್ಕರ್ ಅಭಿವೃದ್ಧಿ ನಿಗಮ ಅಧ್ಯಕ್ಷ ಸ್ಥಾನ ಬೇಡಿಕೆ ಇರಿಸಿದ್ದರು
ರಾಜೀನಾಮೆ ನೀಡಿದ ಬಳಿಕ ಮಾತನಾಡಿದ್ದ ನಾಗೇಶ್, ರಾಜೀನಾಮೆಗೆ ಕಾರಣ ಗೊತ್ತಿಲ್ಲ. ಸಚಿವ ಸ್ಥಾನಕ್ಕೆ ಸಮಾನಾಂತರ ಹುದ್ದೆ ಕೊಡುತ್ತಾರೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ. ಈ ಕಾರಣಕ್ಕಾಗಿ ಮನಪೂರ್ವಕವಾಗಿ ಒಪ್ಪಿಗೆ ನೀಡಿದ್ದೇನೆ ಎಂದು ತಿಳಿಸಿದ್ದರು.