ಕುಮಾರಸ್ವಾಮಿ ಅದೃಷ್ಟದಿಂದ ಮುಖ್ಯಮಂತ್ರಿ ಆದವರು: ಸಚಿವ ವಿ ಸೋಮಣ್ಣ ಟೀಕೆ

ಈ ನಾಡಹಬ್ಬ ಅಧಿಕಾರಿಗಳಿಗಾಗಿ ಇರುವ ಹಬ್ಬ ಅಲ್ಲ. ರಾಜ್ಯದ 6.5 ಕೋಟಿ ಕನ್ನಡಿಗರು ಮಾಡುವ ಹಬ್ಬ. ಇಡೀ ವಿಶ್ವಕ್ಕೆ ಮೈಸೂರು ಮಹಾರಾಜರು ಕೊಟ್ಟ ಕಾಣಿಕೆ. ಇದು ದೇಶದೆಲ್ಲೆಡೆಗಿಂತ ಮೈಸೂರಿನಲ್ಲಿ ಮತ್ರ ಇಷ್ಟು ವಿಜೃಂಭಣೆಯಿಂದ ನಡೆಯುತ್ತೆ. ಇದನ್ನ ಕುಮಾರಸ್ವಾಮಿ ಅರಿತುಕೊಂಡರೆ ಒಳ್ಳೆಯದು ಎಂದು ಸೋಮಣ್ಣ ಚಾಟಿ ಬೀಸಿದರು.

G Hareeshkumar | news18-kannada
Updated:September 13, 2019, 3:54 PM IST
ಕುಮಾರಸ್ವಾಮಿ ಅದೃಷ್ಟದಿಂದ ಮುಖ್ಯಮಂತ್ರಿ ಆದವರು: ಸಚಿವ ವಿ ಸೋಮಣ್ಣ ಟೀಕೆ
ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಸಚಿವ ವಿ ಸೋಮಣ್ಣ
G Hareeshkumar | news18-kannada
Updated: September 13, 2019, 3:54 PM IST
ಮೈಸೂರು(ಸೆ. 13): ಮಾಜಿ ಸಿಎಂ ಕುಮಾರಸ್ವಾಮಿ ಅವರು ರಾಜಕಾರಣಕ್ಕೆ ಬಂದಿದ್ದು 1996ರಲ್ಲಿ. ನಾನು ರಾಜಕಾರಣಕ್ಕೆ ಬಂದಿದ್ದು 1983ರಲ್ಲಿ. ಕುಮಾರಸ್ವಾಮಿ ಅದೃಷ್ಟದಿಂದ ಸಿಎಂ ಆದವರು. ಅದೃಷ್ಟ ಯಾರ ಅಪ್ಪನ ಸ್ವತ್ತು ಅಲ್ಲ ಎಂದು ಹೆಚ್​ಡಿಕೆಗೆ ಸಚಿವ ವಿ. ಸೋಮಣ್ಣ ತಿರುಗೇಟು ನೀಡಿದರು.

ಕುಮಾರಸ್ವಾಮಿ ಅವರೇ ಎರಡು ಬಾರಿ ಮುಖ್ಯಮಂತ್ರಿ ಆಗಿದ್ದೀರಿ. ನಿಮ್ಮ ಕಾರ್ಯವೈಖರಿ ಬಗ್ಗೆ ನಾನು ಟೀಕೆ ಮಾಡೋದಿಲ್ಲ. ನೀವೇ ಆತ್ಮಾವಲೋಕನ ಮಾಡಿಕೊಂಡರೆ ಸಾಕಾಗಿದೆ ಎಂದು ಸೋಮಣ್ಣ ಹೇಳಿದರು.

ಈ ಪಾರಂಪರಿಕ ಹಬ್ಬವನ್ನು ಎಲ್ಲರ ಸಹಕಾರದಿಂದ ಮಾಡುತ್ತಿದ್ದೇನೆ. ದಸರಾ ಮುಗಿದ ನಂತರ ಒಂದು ಕ್ಷಣವೂ ವ್ಯರ್ಥ ಮಾಡದೇ ವಸತಿ ಇಲಾಖೆ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.

ಇದನ್ನೂ ಓದಿ : ಸಿಎಂ ವಿರುದ್ಧ ತಿರುಗಿಬಿದ್ದ ಮಂಡ್ಯ ಬಿಜೆಪಿ: ಹಾಲು ಒಕ್ಕೂಟದ ನಾಮನಿರ್ದೇಶನ ತಡೆಹಿಡಿಯಲು ರಾಜ್ಯಾಧ್ಯಕ್ಷರಿಗೆ ಪತ್ರ

ಸೋಮಣ್ಣ ಅವರು ವಸತಿ ಸಚಿವರಾಗಿದ್ದಾರೋ ದಸರಾ ಸಚಿವರಾಗಿದ್ದಾರೋ ಗೊತ್ತಾಗುತ್ತಿಲ್ಲ. ದಸರಾ ಹಬ್ಬವನ್ನು ಅಧಿಕಾರಿಗಳೇ ನಿಭಾಯಿಸಬಲ್ಲರು. ಅದಕ್ಕೆ ಸೋಮಣ್ಣ ತಲೆಕಡಿಸಿಕೊಂಡಿದ್ದಾರೆ ಎಂದು ನಿನ್ನೆ ಕುಮಾರಸ್ವಾಮಿ ಮಾಡಿದ ವ್ಯಂಗ್ಯಕ್ಕೆ ಅವರು ತೀಕ್ಷ್ಣ ಪ್ರತಿಕ್ರಿಯೆ ನೀಡಿದರು.

ಈ ನಾಡಹಬ್ಬ ಅಧಿಕಾರಿಗಳಿಗಾಗಿ ಇರುವ ಹಬ್ಬ ಅಲ್ಲ. ರಾಜ್ಯದ 6.5 ಕೋಟಿ ಕನ್ನಡಿಗರು ಮಾಡುವ ಹಬ್ಬ. ಇಡೀ ವಿಶ್ವಕ್ಕೆ ಮೈಸೂರು ಮಹಾರಾಜರು ಕೊಟ್ಟ ಕಾಣಿಕೆ. ಇದು ದೇಶದೆಲ್ಲೆಡೆಗಿಂತ ಮೈಸೂರಿನಲ್ಲಿ ಮತ್ರ ಇಷ್ಟು ವಿಜೃಂಭಣೆಯಿಂದ ನಡೆಯುತ್ತೆ. ಇದನ್ನ ಕುಮಾರಸ್ವಾಮಿ ಅರಿತುಕೊಂಡರೆ ಒಳ್ಳೆಯದು ಎಂದು ಸೋಮಣ್ಣ ಚಾಟಿ ಬೀಸಿದರು.

ಇದನ್ನೂ ಓದಿ :  ವಿ ಸೋಮಣ್ಣ ವಸತಿ ಸಚಿವರೋ, ದಸರಾ ಸಚಿವರೋ ಎಂಬ ಅನುಮಾನ ಮೂಡುತ್ತಿದೆ: ಕುಮಾರಸ್ವಾಮಿ ಲೇವಡಿ
Loading...

ನಾನು ದಸರಾ ಜೊತೆ ಇಲಾಖೆ ಕಾರ್ಯಗಳನ್ನೂ ಮಾಡುತ್ತಿದ್ದೇನೆ. ಹಾನಿಗೊಳಗಾದ 40 ಸಾವಿರಕ್ಕೂ ಅಧಿಕ ಮನೆಗಳ ನಿರ್ಮಾಣಕ್ಕೆ ನಮ್ಮ ಇಲಾಖೆಯಿಂದ ಕೆಲಸಗಳು ಆಗುತ್ತಿವೆ. ರಾಜ್ಯದಲ್ಲಿ ನೆರೆಯಿಂದ 32 ಸಾವಿರ ಕೋಟಿ ನಷ್ಟವಾಗಿದ್ದು, ಇದನ್ನ ಕೇಂದ್ರದ ಗಮನಕ್ಕೆ ತಂದಿದ್ದೇವೆ. ಅವರು ಇನ್ನೆರಡು ದಿನದಲ್ಲಿ ನೆರವಾಗುತ್ತಾರೆ ಎನ್ನುವ ಭರವಸೆ ಇದೆ ಎಂದು ವಿ. ಸೋಮಣ್ಣ ತಿಳಿಸಿದರು.

First published:September 13, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...