Politics: ಬೆಟ್ಟಿಂಗ್, ಮೋಸ, ಕಣ್ಣೀರು, ನಾಚಿಕೆ ಪುರಾಣ: ಎಚ್​ಡಿಕೆ-ಅಶ್ವಥ್ ನಾರಾಯಣ ಸಮರ!

ರಾಜ್ಯ ರಾಜಕಾರಣದಲ್ಲಿ ಈಗ ಕುಮಾರಸ್ವಾಮಿ-ಅಶ್ವಥ್ ನಾರಾಯಣ್ ನಡುವೆ ಟ್ವೀಟ್ ವಾರ್ ಜೋರಾಗಿದೆ. ಇಬ್ಬರು ನಾಯಕರು ನಾಚಿಕೆ, ಕಣ್ಣೀರು, ಬೆಟ್ಟಿಂಗ್, ಮೋಸ ಅಂತೆಲ್ಲಾ ಕಿತ್ತಾಟ ನಡೆಸ್ತಿದ್ದಾರೆ. ಬಿಚ್ಚಿಡಲೇ ಬಿಚ್ಚಿಡಲೇ ಅಂತಾ ಸವಾಲ್ ಹಾಕ್ತಿದ್ದಾರೆ.

ಕುಮಾರಸ್ವಾಮಿ- ಅಶ್ವಥ್ ನಾರಾಯಣ ಟ್ವೀಟ್ ಸಮರ

ಕುಮಾರಸ್ವಾಮಿ- ಅಶ್ವಥ್ ನಾರಾಯಣ ಟ್ವೀಟ್ ಸಮರ

  • Share this:
ರಾಜ್ಯ ರಾಜಕಾರಣದಲ್ಲಿ (Politics) ಈಗ ಕುಮಾರಸ್ವಾಮಿ-ಅಶ್ವಥ್ ನಾರಾಯಣ್ ನಡುವೆ ಟ್ವೀಟ್ (Tweet) ವಾರ್ ಜೋರಾಗಿದೆ. ಇಬ್ಬರ ನಡುವೆ ಸರಣಿ ಟ್ವೀಟ್​ ಸಮರ ಶುರುವಾಗಿದೆ. ಇಬ್ಬರು ಕೂಡ ಏಕವಚನದಲ್ಲೇ ವಾಗ್ದಾಳಿ ನಡೆಸ್ತಿದ್ದಾರೆ. ನಕಲಿ ಸರ್ಟಿಫಿಕೇಟ್‌ ರಾಜ, ನಕಲಿ ಸರ್ಟಿಫಿಕೇಟ್‌ ಶೂರ ನನ್ನನ್ನು ಹುಡುಕುತ್ತಿದ್ದಾರೆ. ಎಲ್ಲಿದ್ಯಪ್ಪ ಕುಮಾರಸ್ವಾಮಿ (Kumaraswamy) ಎಂದು ಕೇಳಿದ್ದಾರೆ. ಸದನದಲ್ಲೂ ಕಾಣಿಸಿಲ್ಲವಂತೆ, ರಾಮನಗರದಲ್ಲೂ (Ramanagara) ಕಂಡಿಲ್ಲವಂತೆ. ಕಣ್ಣಿಗೆ ಕಾಮಾಲೆಯಾದರೂ ಬಂದಿರಬೇಕು, ಜಾಣ ಕುರುಡಾದರೂ ಇರಬೇಕು ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಹರಿಹಾಯ್ದಿದ್ದಾರೆ. ಇದಕ್ಕೆ ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ (Ashwath Narayan) ಕೂಡ ತಿರುಗೇಟು ಕೊಟ್ಟಿದ್ದಾರೆ. ಇಬ್ಬರ ನಡುವೆ ಸರಣಿ ಟ್ವೀಟ್​ ವಾರ್ ಮುಂದುವರಿದಿದೆ.

ಸಚಿವರೇ ನಿಮ್ಮ ಕೌಶಲ್ಯತೆ ಗೊತ್ತು?

ಕಲಾಪವೆಂದರೆ ಮೈ ಬೆಚ್ಚಗಾಗುತ್ತಾ ಉನ್ನತ ಶಿಕ್ಷಣ ಸಚಿವರೇ? ನಿಮ್ಮ ಕೌಶಲ್ಯತೆ ಗೊತ್ತಿದೆ. ಅಕ್ರಮ ಮುಚ್ಚಿಕೊಳ್ಳಲು ಅಕ್ರಮದ ದಾಖಲೆಗಳಿದ್ದ ಬಿಬಿಎಂಪಿ ಕಟ್ಟಡಕ್ಕೇ ಬೆಂಕಿ ಹಾಕಿಸಿದ್ದಾ? ಆಪರೇಷನ್‌ ಕಮಲದಲ್ಲೂ ಕುಶಲತೆ? ಕೋಟಿ ಕೋಟಿ ಹಣ ತುಂಬಿಸಿಕೊಂಡು ಹೋಗಿ ಶಾಸಕರ ಮನೆಗಳಲ್ಲಿ ಇಟ್ಟು ಬರುವುದಾ? ಕೌಶಲ್ಯ ಮಂತ್ರಿಯಾಗಿದ್ದಕ್ಕೂ ಸಾರ್ಥಕ ಎಂದಿದ್ದಾರೆ.

H D Kumaraswamy Ashwath Narayana tweet war Karnataka Politics
ಕುಮಾರಸ್ವಾಮಿ, ಅಶ್ವಥ್ ನಾರಾಯಣ ಟ್ವೀಟ್ ಸಮರ


ದಾಖಲೆಗಳನ್ನು ಬಿಚ್ಚಲೇ?- ಎಚ್​​ಡಿಕೆ

ಕರಾವಳಿ ಕೊಲೆಗಳು, ಮಳೆ-ನೆರೆ ಚರ್ಚೆಗೆ ಅಧಿವೇಶನ ಕರೆಯಬೇಕೆಂದು ಹೇಳಿದ್ದೇನೆ. ಇದಕ್ಕೆ ಅಶ್ವಥ್ ನಾರಾಯಣ ಸಿಟ್ಟಿಗೇಳೋದು ಯಾಕೆ? ಉನ್ನತ ಶಿಕ್ಷಣದ ಹುಳುಕು ಹೊರ ಬರುತ್ತವೆ ಎಂಬ ಭಯವೇ? ನನ್ನಲ್ಲೂ ದಾಖಲೆಗಳಿವೆ. ಬಿಚ್ಚಿದರೆ ಅವೇ ಸರ್ಟಿಫಿಕೇಟ್‌ ಕೋರ್ಸ್‌ಗಿಂತ ಬೃಹತ್‌ ಚಾಪ್ಟರ್‌ 1, ಚಾಪ್ಟರ್ 2, ಚಾಪ್ಟರ್‌ 3 ಆಗುತ್ತವೆ ಎಂದಿದ್ದಾರೆ.

ಬಹಿರಂಗ ಚರ್ಚೆಗೆ ಬನ್ನಿ

ನನ್ನ ಸರಕಾರವನ್ನು ತೆಗೆಯಲು ಕ್ರಿಕೆಟ್‌ ಬೆಟ್ಟಿಂಗ್‌ ದಂಧೆಕೋರರ ಜತೆ ಶಾಮೀಲಾಗಿದ್ದು, ಹಣದ ಹೊಳೆ ಹರಿಸಿದ್ದು ಎಲ್ಲವೂ ಗೊತ್ತಿದೆ. ಧೈರ್ಯ ಇದ್ದರೆ ಬಹಿರಂಗ ಚರ್ಚೆಗೆ ಬನ್ನಿ, ಬಿಚ್ಚಿಡಬೇಕು ಎಂದರೆ ಎಲ್ಲವನ್ನೂ ಬಿಚ್ಚಿಡುತ್ತೇನೆ ಅಂತಾ ಕಿಡಿಕಾರಿದ್ದಾರೆ.

ಇದನ್ನೂ ಓದಿ: ಸುಶೀಲ್​ ಮೋದಿಯನ್ನು ಸೈಡ್​ಲೈನ್​ ಮಾಡಿದ್ದೇ ಬಿಜೆಪಿಗೆ ಮುಳುವಾಯ್ತಾ? ನಿತೀಶ್​ ಮಾತುಗಳೇ ಸಾಕ್ಷಿ!

ನಿಮ್ಮ ಕಥೆ ಬಿಚ್ಚಬೇಕೆ?

ಜೆಡಿಎಸ್‌ ಕಂಪನಿ ಎನ್ನುತ್ತೀರಿ! ನಿಮ್ಮ ಕಂಪನಿಗಳ ಕಥೆ ಬಿಚ್ಚಬೇಕೆ? ಹೊರಗೆ ಸಾಚಾತನ, ಒಳಗೆ ಸೋಗಲಾಡಿತನ. ಎರಡು ತಲೆಯ ಕುಶಲತೆಯನ್ನು ಎಲ್ಲಿಂದ ಕಲಿತಿರಿ? ಸಂಘದಿಂದ ಬಂದ ಸಂಸ್ಕಾರವೇ? ಅಥವಾ ತಮ್ಮ ಹಿನ್ನೆಲೆಯೇ ಇದಾ? ನಿಮ್ಮ ನೈಜ ಹಿನ್ನೆಲೆಯ ಪುರಾಣ ಗೊತ್ತಿದ್ದವರಿಗೆ ಇದೇನು ಅಚ್ಚರಿಯಲ್ಲ ಬಿಡಿ ಎಂದು ಕುಮಾರಸ್ವಾಮಿ ಟೀಕಿಸಿದ್ದಾರೆ.

ಅಶ್ವಥ್ ನಾರಾಯಣ ತಿರುಗೇಟು

ಕುಮಾರಸ್ವಾಮಿಗೆ ಅಶ್ವಥ್ ನಾರಾಯಣ್ ತಿರುಗೇಟು ಕೊಟ್ಟಿದ್ದಾರೆ. ಕೆಂಗಲ್‌ ಹನುಮಂತಯ್ಯನವರು, ವಿಧಾನಸೌಧ ಕಟ್ಟಿಕೊಟ್ಟರೂ ನೀವು ತಾಜ್‌ ವೆಸ್ಟೆಂಡ್​​ನಲ್ಲಿ ಕುಳಿತು ಸರ್ಕಾರ ನಡೆಸಿದ್ರಿ. ಅಂದು ತಮ್ಮನ್ನು ವಿಧಾನಸೌಧದಲ್ಲಿ ಹುಡುಕಿದರೆ ಸಿಗಲಿಲ್ಲ ಅಂತಾ ಕುಟುಕಿದ್ದಾರೆ.

H D Kumaraswamy Ashwath Narayana tweet war Karnataka Politics
ಸಚಿವ ಅಶ್ವಥ್ ನಾರಾಯಣ


ನಿಮಗೆ ನಾಚಿಕೆ ಆಗಲಿಲ್ಲವೇ..?

ಕುಮಾರಸ್ವಾಮಿಯವರನ್ನು 2006ರಲ್ಲಿ ಬಿಜೆಪಿ ಮುಖ್ಯಮಂತ್ರಿಯನ್ನಾಗಿ ಮಾಡಿತ್ತು. ಅಧಿಕಾರದಾಸೆಗೆ ಕೊಟ್ಟ ಮಾತು ತಪ್ಪಿ ನಡೆವಾಗ ನಾಚಿಕೆ ಆಗಲಿಲ್ಲವೇ? ಹಿಂದಿನಿಂದ ಚೂರಿ ಹಾಕುವ ಕಲೆಯನ್ನು ಎಲ್ಲಿ ಕಲಿತಿರಿ ಎಚ್​ಡಿಕೆಯವರೇ?  ಆಗ ನಿಮಗೆ ಮೋಸ ಮಾಡಿದ್ದೇನೆಂಬ ಪಾಪ ಪ್ರಜ್ಞೆ ಕಾಡಲಿಲ್ಲವೇ‌‌ ಅಂತಾ ಪ್ರಶ್ನಿಸಿದ್ದಾರೆ.

ಕಳ್ಳದಾರಿಯಲ್ಲಿ ಸಿಎಂ ಆಗಿದ್ಯಾರು?

ಕುರ್ಚಿಯಾಸೆಗೆ ಕಳ್ಳರ ಜತೆಗೂ ಸೇರುತ್ತೇನೆಂಬುದನ್ನು ಸಾಬೀತುಪಡಿಸಿದ ತಮ್ಮ ಕಳ್ಳಾಟಗಳನ್ನು ಎಷ್ಟು ದಿನ ಬಚ್ಚಿಡಬಲ್ಲಿರಿ? ಗೆದ್ದಿದ್ದು ಮೂರು ಮತ್ತೊಂದು ಸೀಟ್‌ ಆದರೂ ಗೆದ್ದಲು ಕಟ್ಟಿದ ಹುತ್ತದಲ್ಲಿ ಸೇರಿಕೊಂಡ ಹಾವಿನಂತೆ ಕಳ್ಳದಾರಿಯಲ್ಲಿ ಸಿಎಂ ಆದದ್ದು ಯಾರು ಅಂತಾ ಅಶ್ವಥ್ ನಾರಾಯಣ್ ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆ ಚರ್ಚೆ, ಬೊಂಬೆ ಸಿಎಂ ಎಂದ ಕಾಂಗ್ರೆಸ್!

ಆದಿಚುಂಚನಗಿರಿ ಶ್ರೀಗಳ ಫೋನ್‌ ಕದ್ದಾಲಿಕೆ ಮಾಡಿದ ಕುಮಾರಸ್ವಾಮಿ ಅವರನ್ನು ಎಲ್ಲಿದ್ದೀರಿ ಎಂದು ಕೇಳಿದರೆ ವಿಷ ಸರ್ಪದಂತೆ ಬುಸುಗುಡುವುದೇಕೆ? ಸುಮಲತಾರನ್ನು ಸೋಲಿಸಲು ಹಣದ ಹೊಳೆಯನ್ನೇ ಹರಿಸಿದ ಕುಮಾರಸ್ವಾಮಿಯವರೆಷ್ಟು ಶುದ್ಧಹಸ್ತರು ಅಂತಾ ಕುಮಾರಸ್ವಾಮಿಗೆ ಪ್ರಶ್ನೆ ಮಾಡಿದ್ದಾರೆ.

ಹೋದಲ್ಲೆಲ್ಲಾ ಕಣ್ಣೀರು ಸುರಿಸೋ ನಾಟಕ

ನಿಮ್ಮ ದಾಖಲೆಗಳನ್ನು? ಗೆದ್ದಲು ಹಿಡಿಯುವ ಮುನ್ನ ಬಹಿರಂಗಪಡಿಸಿ ಸ್ವಾಮಿ. ನೀವು ಈವರೆಗೆ ಹೇಳಿದ ಸುಳ್ಳುಗಳನ್ನು ಎಣಿಸಲು ಸಾಧ್ಯವೇ? ಹೋದಲ್ಲೆಲ್ಲಾ ಕಣ್ಣೀರು ಸುರಿಸುವ ನಾಟಕವೇಕೆ? ರಾಮನಗರ ಜಿಲ್ಲೆಯ ಕೇತೋಹಳ್ಳಿಯಲ್ಲಿ ಎಷ್ಟು ಭೂಮಿಯನ್ನು ಲಪಟಾಯಿಸಿದ್ದೀರಿ ಅಂತಾ ಅಶ್ವಥ್ ನಾರಾಯಣ ಪ್ರಶ್ನೆ ಮಾಡಿದ್ದಾರೆ.
Published by:Thara Kemmara
First published: