Karnataka Assembly: 55 ಲಕ್ಷ ಬಡವರಿಗೆ ವಿಶೇಷ ಪ್ಯಾಕೇಜ್ ಕೊಡಿ: ಸರ್ಕಾರಕ್ಕೆ HDK ಆಗ್ರಹ

H.D. Kumaraswamy: ಆಸ್ಪತ್ರೆಗಳಲ್ಲಿ ಚಿಕಿತ್ಸೆ ದುಬಾರಿಯಾಗಿದೆ ಲಕ್ಷಾಂತರ ರೂಪಾಯಿ ಆಸ್ಪತ್ರೆಗಳಿಗೆ ಸುರಿಯುತ್ತಿದ್ದಾರೆ. ಜನರ ಮೇಲೆ ಹೊರೆ ಹೆಚ್ಚಾಗಿದೆ ಇದನ್ನು ಸರಿಪಡಿಸುವುದರ ಕಡೆ ನಾವು ಗಮನ ಕೊಡಬೇಕು ಫುಡ್ ಡೆಲಿವರಿ  ಮಾಡುವವರು, ಓಲಾ ಉಬರ್​ ಚಾಲಕರು ಹೇಗ್ ಬದುಕಬೇಕು? ಎಂದು ಸರ್ಕಾರವನ್ನು ಪ್ರಶ್ನಿಸಿದ್ದಾರೆ.  ಐದಾರು ಲಕ್ಷ ಬಿಲ್ ಬಡವರು ಕಟ್ಟಿದ್ದಾರೆ.

ಎಚ್​. ಡಿ.ಕುಮಾರಸ್ವಾಮಿ

ಎಚ್​. ಡಿ.ಕುಮಾರಸ್ವಾಮಿ

  • Share this:
ಸರ್ಕಾರ(Government) ಜನರ ಕಷ್ಟವನ್ನು ಅರ್ಥ ಮಾಡಿಕೊಳ್ಳಬೇಕು. ಬಡವರ ಮೇಲೆ ಹೆಚ್ಚಿನ ಭಾರ ಹಾಕಬಾರದು ಎಂದು ಮಾಜಿ ಸಿಎಂ ಕುಮಾರಸ್ವಾಮಿ(H.D.Kumaraswamy) ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ವಿಧಾನಸಭೆಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ (Session)ಮಾತನಾಡಿದ ಕುಮಾರಸ್ವಾಮಿ , ರೈತ ಎತ್ತಿನ ಗಾಡಿ ಮೂಲಕ ತನ್ನ ಕೆಲಸ ಮಾಡ್ತಾನೆ. ಎತ್ತು ಗಾಡಿಯ ಭಾರ ಹೊರುತ್ತೆ. ಎತ್ತಿಗೆ ಮುಂದೆ ಚಲಿಸದಿದ್ರೆ ಏಟು ಬೀಳಬಹುದು ಹಾಗೆಯೇ ಎತ್ತಿನ‌ಗಾಡಿಯ ಚಕ್ರ ಗುಂಡಿಗೆ ಬಿದ್ರೆ ಮತ್ತೆ ಎತ್ತಿಗೇ‌ ಏಟು ಬೀಳುತ್ತೆ ಏನೇ ಆದರೂ ಅಂತಿಮವಾಗಿ ಮೂಕ‌ ಪ್ರಾಣಿ ಎತ್ತು ಹಿಂಸೆ ಅನುಭವಿಸುತ್ತೆ ಈ ದೇಶದಲ್ಲೂ ಅದೇ ಪರಿಸ್ಥಿತಿ ಇದೆ.  ಜನಸಾಮಾನ್ಯರು ಅಂತಿಮವಾಗಿ ಕಷ್ಟ ಅನುಭವಿಸಬೇಕು ಎಂದು ಬಡ ರೈತರ ಪರಿಸ್ಥಿತಿ, ಆರ್ಥಿಕ ಪರಿಸ್ಥಿತಿ ಯನ್ನು ಎತ್ತಿನ ಗಾಡಿ ಎತ್ತುಗಳಿಗೆ ಹೋಲಿಕೆ ಮಾಡಿದ್ದಾರೆ.  

ಕೊರೊನಾ ವೇಳೆ ಸಾಕಷ್ಟು ಸಮಸ್ಯೆಯನ್ನು ಜನರು ಅನುಭವಿಸಿದ್ದಾರೆ. ಈಗ ಇಂಧನ ದರ ಏರಿಕೆ ಬರೆ. ಇದು ಜನರಿಗೆ ಕಷ್ಟವನ್ನುಂಟು ಮಾಡಿದೆ.  ನಾನು ಸರ್ಕಾರಕ್ಕೆ ಎರಡು ಮೂರು ಬಾರಿ ಮನವಿ  ಮಾಡಿದ್ದೆ.ವಿಶೇಷ ಅಧಿವೇಶನ ಕರೆಯಲು ಮನವಿ ಮಾಡಿದ್ದೆ ಎಂದರು.  ಇವತ್ತು ಬೆಲೆ ಏರಿಕೆ ಬಗ್ಗೆ ಒಂದು ಪಕ್ಷದ ಅಡಿ ಚರ್ಚೆ ಮಾಡಬಾರದು ನಮ್ಮ ರಾಜಕೀಯ ಲಾಭ ನೋಡಬಾರದು ಪಕ್ಷಾತೀತವಾಗಿ ಜನರ ಕಷ್ಟ ನೋಡಬೇಕು ಪಕ್ಷದ ಹೊರತಾಗಿ ಜನರ ಕಷ್ಟಕ್ಕೆ ಸ್ಪಂದಿಸಬೇಕು ಎಂದು ಪರೋಕ್ಷವಾಗಿ ಕಾಂಗ್ರೆಸ್ ಗೆ  ಮಾಜಿ ಸಿಎಂ  ಟಾಂಗ್ ಕೊಟ್ಟಿದ್ದಾರೆ.

ಖಜಾನೆ ತುಂಬಲು ಕೆಲ ಬಾರಿ ಅನಿವಾರ್ಯ ಬೆಲೆ ಹೆಚ್ಚಿಸಬೇಕಾಗುತ್ತದೆ ಇದು ಯಾವುದೇ ಸರ್ಕಾರಕ್ಕೆ ಅನಿವಾರ್ಯ ಕೆಲ ಸಂದರ್ಭದಲ್ಲಿ ಜನ ಹೊರೆ ಹೊರಬೇಕಾಗುತ್ತದೆ ಒಂದು ವರ್ಗದ ಜನರಿಗೆ ಬೆಲೆ ಏರಿಕೆ ಬಿಸಿ ತಟ್ಟಲ್ಲ ಆದ್ರೆ ಚಿಕ್ಕ ಪುಟ್ಟ ಕೆಲಸ ಮಾಡೋರಿಗೆ ಬದುಕು ಕಷ್ಟ ಆಗುತ್ತೆ. ತೆರಿಗೆ ರೂಪದಲ್ಲಿ ಬರುತ್ತಿರುವ ಹಣ ಬಳಕೆ ಮಾಡಿಕೊಳ್ಳೋದು ಮುಖ್ಯ. ಯಡಿಯೂರಪ್ಪ ಸಿಎಂ ಆದ ಒಂದೇ ತಿಂಗಳಲ್ಲಿ ಉತ್ತರ ಕರ್ನಾಟಕ ಪ್ರವಾಹ ಪರಿಸ್ಥಿತಿ ಎದುರಾಯಿತು. ಪ್ರವಾಹ ವೇಳೆ ಜಮೀನು, ರಸ್ತೆ ನಷ್ಟ ಆಯ್ತು ಇದನ್ನೆಲ್ಲ ಸರಿಪಡಿಸುವ ಹೊಣೆ ಸರ್ಕಾರದ ಮೇಲೆ ಬಿತ್ತು. ನಂತರ ಕೊರೋನಾ ಬಂತು. ಸರ್ಕಾರಕ್ಕೆ ಕೂಡ ಸವಾಲಿನ ಪರಿಸ್ಥಿತಿ.  ಕೊರೊನಾ ಲೋಪದೋಷಗಳ ಬಗ್ಗೆ ನಾನು ಮಾತಾಡಲ್ಲ ಜನರ ಬದುಕು ಸರಿಪಡಿಸುವುದು ಮುಖ್ಯ ಎಂದಿದ್ದಾರೆ.

ಬಡವರ್ಗದ ಜನರ ಮನೆಗೆ ಬೆಂಕಿ ಬಿದ್ದಿದೆ ಬದುಕಿಗೆ ಕಷ್ಟ ಇದೆ.  ಉರಿಯುವ ಮನೆಯಲ್ಲಿ ಗಳ ಹಿಡಿಯುವುದು ಸರಿಯೇ.? ಅಂತ ವರ್ಗದ ಜನರ ಮೇಲೆ ತೆರಿಗೆ ಹಾಕಿದರೆ ಹೇಗೆ.? ಪ್ರತಿ ವರ್ಷ ಬಡವರು ಒಂದು ಲಕ್ಷ ತೆರಿಗೆ ವಿವಿಧ ರೂಪದಲ್ಲಿ ಕಟ್ಟುತ್ತಾನೆ ನಿನ್ನೆ ಸಿದ್ದರಾಮಯ್ಯ ಇದೆ ವಿಚಾರವಾಗಿ ಮಾತನಾಡಿದ್ರು ಅಂತಹ ಬಡವರಿಗೆ ಸರ್ಕಾರ ಬದುಕು ಕಟ್ಟಿಕೊಡಬೇಕು ಇದು ಸರ್ಕಾರದ ಮುಖ್ಯ ಆದ್ಯತೆ ಆಗಬೇಕು.ಅಮೃತಾ ಯೋಜನೆ ಗಳನ್ನು ಏನು ಘೋಷಣೆ ಮಾಡಿದ್ದೀರಿ ಅವುಗಳನ್ನು ಒಂದು ವರ್ಷಗಳ ಕಾಲ ಮುಂದಕ್ಕೆ ಹಾಕಿ.ಆ ಯೋಜನೆಗಳನ್ನು ಸದ್ಯಕ್ಕೆ ಬದಿಗಿಡಿ ಬಡವರ ಬದುಕು ಕಟ್ಟಿಕೊಡುವ ಕೆಲಸ ಮೊದಲು ಮಾಡಿ ಎಂದು ಸರ್ಕಾರಕ್ಕೆ ಕುಮಾರಸ್ವಾಮಿ ಸಲಹೆ ನೀಡಿದ್ದಾರೆ.

ಅಲ್ಲದೇ, ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಇಲ್ಲ. ಕೆಲ ಶಾಲೆಗಳಲ್ಲಿ ಶೇ. 35 ರಷ್ಟೂ ಹಾಜರಾತಿ‌ ಇಲ್ಲ ಆನ್ ಲೈನ್ ಕ್ಲಾಸ್​ ಉಪಯೋಗಕ್ಕೆ ಬರುತ್ತಿಲ್ಲ. ಶೇಕಡಾ ೫೦ ರಷ್ಟು ಮಕ್ಕಳಿಗೆ ಶಿಕ್ಷಣವೇ ಇಲ್ಲ.. ಮಕ್ಕಳಿಗೆ ಅವರು ಓದುವ ವಿಷಯಗಳೇ ಮರೆತು‌ ಹೋಗಿದೆ. ಇನ್ನೊಂದು ಕಡೆ  ಶಾಲಾ ವಾಹನಗಳಿಗೂ ಕೆಲಸ ಇಲ್ಲ ಸ್ಕೂಲ್ ಬಸ್ ಚಾಲಕರಿಗೆ ಶಾಲೆಗಳು ಹಣ ಕೊಟ್ಟಿಲ್ಲ ಊಟಕ್ಕೆ ಆ ಚಾಲಕರು ಏನ್ ಮಾಡಬೇಕು..? ಇದು ರಾಜ್ಯದಲ್ಲಿರುವ ಶಿಕ್ಷಣ ವ್ಯವಸ್ಥೆ ಎಂದು ಸರ್ಕಾರದ ವಿರುದ್ಧ ಹಾರಿಹಾಯ್ದಿದ್ದಾರೆ.

ಆಸ್ಪತ್ರೆಗಳಲ್ಲಿ ಚಿಕಿತ್ಸೆ ದುಬಾರಿಯಾಗಿದೆ ಲಕ್ಷಾಂತರ ರೂಪಾಯಿ ಆಸ್ಪತ್ರೆಗಳಿಗೆ ಸುರಿಯುತ್ತಿದ್ದಾರೆ. ಜನರ ಮೇಲೆ ಹೊರೆ ಹೆಚ್ಚಾಗಿದೆ ಇದನ್ನು ಸರಿಪಡಿಸುವುದರ ಕಡೆ ನಾವು ಗಮನ ಕೊಡಬೇಕು ಫುಡ್ ಡೆಲಿವರಿ  ಮಾಡುವವರು, ಓಲಾ ಉಬರ್​ ಚಾಲಕರು ಹೇಗ್ ಬದುಕಬೇಕು? ಎಂದು ಸರ್ಕಾರವನ್ನು ಪ್ರಶ್ನಿಸಿದ್ದಾರೆ.  ಐದಾರು ಲಕ್ಷ ಬಿಲ್ ಬಡವರು ಕಟ್ಟಿದ್ದಾರೆ. ಇವತ್ತು ತೆರಿಗೆ ಸಂಗ್ರಹ ‌ಮಾಡಿದ್ದೀರ ಸರ್ಕಾರದ ಖಜಾನೆ ತುಂಬಿಸಿಕೊಂಡಿದ್ದೀರಿ ಬಡವರನ್ನು ಎತ್ತು ಮಾಡಿ ಚಡಿ ಏಟು ಕೊಟ್ಟಿದ್ದೀರ ಯಾರಿಗೆ ಹೊಡೆತ ಕೊಟ್ಟಿದ್ದಾರೆ ಅವರ ಬದುಕು ಸರಿ ಮಾಡಬೇಕು ಬಡವರ ತೆರಿಗೆ ಬಡವರಿಗೆ ಯೋಜನೆ ರೂಪದಲ್ಲಿ ವಿತರಿಸಿ ಎಂದು  ಸರ್ಕಾರಕ್ಕೆ ಕುಮಾರಸ್ವಾಮಿ ಮನವಿ ಮಾಡಿದ್ದಾರೆ.

ಈ ನಡುವೆ ಯಡಿಯೂರಪ್ಪ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿರುವ ಎಚ್​ಡಿಕೆ, ನಿಮ್ಮ ಜತೆಗೂ ನಾನು ಕಾಲ ಸರ್ಕಾರ ನಡೆಸಿದ್ದೇನೆ. ನಿಮಗೂ ಬಡವರ ಪರ ಕಾಳಜಿ ಇರೋದನ್ನು ನಾನು ಗಮನಿಸಿದ್ದೇನೆ. ನೀವು ಬೊಮ್ಮಾಯಿಯವರಿಗೆ ಹೇಳಿ ಬಡವರಿಗೆ ಪ್ಯಾಕೇಜ್ ಕೊಡಿಸಿ. 55 ಲಕ್ಷ ಬಡ ಕುಟುಂಬಗಳಿಗೆ  ಸರ್ಕಾರ ವಿಶೇಷ ಪ್ಯಾಕೇಜ್ ಕೊಡಲಿ.  ಯಡಿಯೂರಪ್ಪ ನಿಮ್ಮ ಜಾಗದಲ್ಲಿ ಇದ್ದಿದ್ರೆ, ಒಪ್ಪಿಕೊಳ್ಳುತ್ತಿದ್ರು. ಬೊಮ್ಮಾಯಿ ನೋಡಿ ಈ ಮಾತನ್ನ ಹೇಳಿದ  ಮಾಜಿ ಸಿಎಂ.

ಇದನ್ನೂ ಓದಿ: ತನ್ನ ಬಳಿ ಮೊಬೈಲ್ ಯಾಕಿಲ್ಲವೆಂದು ಕಾರಣ ಬಿಚ್ಚಿಟ್ಟ ಸಿದ್ದರಾಮಯ್ಯ; ಸದನದ ಸ್ವಾರಸ್ಯಗಳು

ನಾನು ಈಗ ತಾಜ್ ವೆಸ್ಟ್ ಎಂಡ್ ನಲ್ಲಿ ಇಲ್ಲ ಬಿಡದಿಯ ತೋಟದ ಮನೆ ನಲ್ಲಿದ್ದೇನೆ ನಿತ್ಯ ಐನೂರು‌ ಜನ ಕಷ್ಟ ಹೇಳಿಕೊಳ್ಳಲು ಬರ್ತಾರೆ.  ಇದು  ಸಧ್ಯದ ಪರಿಸ್ಥಿತಿ. ಬೀದಿ ಬದಿ ವ್ಯಾಪಾರಿಗಳು, ಸಣ್ಣ ಅಂಗಡಿಗಳು, ಮಾಲ್ ಸಿಬ್ಬಂದಿ, ಥಿಯೇಟರ್ ಮುಚ್ಚಿವೆ ಲಕ್ಷಾಂತರ ಕುಟುಂಬಗಳ ಬದುಕು ಸರಿಪಡಿಸುವ ಕೆಲಸ ಸರ್ಕಾರ ಮಾಡಬೇಕು ಎಂದು ಕುಮಾರ ಸ್ವಾಮಿ ಆಗ್ರಹಿಸಿದ್ದಾರೆ.

ಈ ನಡುವೆ ಮೈತ್ರಿ ಸರ್ಕಾರದ ವಿಚಾರವನ್ನು ಮಾತನಾಡಿದ ಅವರು, ಹಿಂದೆ ಮೈತ್ರಿ ಸರ್ಕಾರದಲ್ಲಿ ತುಂಬ ಸಮಸ್ಯೆ ಇತ್ತು.  ಏಳು ಕೆಜಿ ಅಕ್ಕಿ ಕೊಡಬೇಕು ಅನ್ನೋದು ಒತ್ತಾಯ. ಸಿದ್ದರಾಮಯ್ಯ ನವರು ಒತ್ತಾಯ ಮಾಡ್ತಿದ್ರು ಆದರೆ ಅವರು ಐದು ಕೆಜಿಗೆ ಮಾತ್ರ ಹಣ ಇಟ್ಟಿದ್ರು‌ ನಾನು ಅವತ್ತು ಅದನ್ನು ಸರಿದೂಗಿಸಬೇಕಾದ್ರೆ ಕಷ್ಟವಾಯ್ತು ಎಂದಿದ್ದಾರೆ.

ವಸತಿ ನಿರ್ಮಾಣಕ್ಕೆ ೨೯ ಸಾವಿರ ಕೋಟಿ ಬೇಕಿತ್ತು ಆಗ ನಾನು ೨೯ ಸಾವಿರ ಕೋಟಿ ಎಲ್ಲಿಂದ ತರಬೇಕಿತ್ತು‌ ಸಾಲಮನ್ನಾ ಮಾಡಿ ಅಂದ್ರೆ ಹೇಗೆ‌ ಆಗಲೂ ನನಗೆ ಸಮಸ್ಯೆಯಾಗಿತ್ತು ಬೇರೆ ಯೋಜನೆಗಳಿಗೆ ಹಣ ಒದಗಿಸುವುದು ಕಷ್ಟವಾಗಿತ್ತು.  ನಾನು ಮುಖ್ಯಮಂತ್ರಿ ಆದಾಗಾ ರೈತರ ಸಾಲಮನ್ನಾ ಮಾಡ್ತೀನಿ ಅಂತಾ ಹೇಳಿದ್ದೆ. ಒಂದು ಕಡೆ ಯಡಿಯೂರಪ್ಪ ರೈತರ ಸಾಲಮನ್ನಾ ಮಾಡ್ತೀನಿ ಅಂತಾ ಹೇಳಿ ಬಂದು ಟೋಪಿ ಹಾಕ್ತಾ ಇದೀರಾ ಅಂತಾ ನನ್ನ ವಿರುದ್ಧ ಆರೋಪ ಮಾಡುತ್ತಿದ್ದರು.  ಮತ್ತೊಂದು ಕಡೆ ನಮ್ಮ ಸ್ನೇಹಿತರು ಇದನ್ನು ಮಾಡೋಕೆ ಅಡ್ಡಿ ಪಡಿಸ್ತಿದ್ರು  ಎಂದು  ಮೈತ್ರಿ ಸರ್ಕಾರದ ವೇಳೆ ಕಾಂಗ್ರೆಸ್ ಹಸ್ತಕ್ಷೇಪದ ಬಗ್ಗೆ ಪ್ರಸ್ತಾಪಿಸಿ, ಕೈ ನಾಯಕರಿಗೆ ತಿವಿದಿದ್ದಾರೆ.

ಪಕ್ಕದ ರಾಜ್ಯಗಳನ್ನು ಮಾದರಿಯಾಗಿ ತಗೋಬೇಡಿ ತಮಿಳುನಾಡು 3 ರೂ ಸೆಸ್ ಕಮ್ಮಿ ಮಾಡಿರಬಹುದು ನಮ್ಮ ರಾಜ್ಯ ಬೇರೆ ರಾಜ್ಯಗಳಿಗೆ ಮಾದರಿ ಆಗಬೇಕು ಸರ್ಕಾರಕ್ಕೆ ಸಲಹೆ ಕೊಡುವ ನೆಪದಲ್ಲಿ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಮಾತಿಗೆ ಟಾಂಗ್ ನೀಡಿದ್ದಾರೆ.

2002 ರಲ್ಲಿ ಎನ್​ಡಿಎ ಸರ್ಕಾರದಲ್ಲಿ ಆಯಿಲ್ ಬಾಂಡ್ ಆರಂಭ ಆಯ್ತು. ನಂತರ ನಿರಂತರವಾಗಿ ನಡೆದುಕೊಂಡು ಬಂತು ಪ್ರಧಾನಿ ಮೋದಿಯವ್ರು ಮುಂದಿನ ಮಾರ್ಚ್ ವರೆಗೆ 20 ಸಾವಿರ ಕೋಟಿ ಕಟ್ಟಬೇಕು ಇಲ್ಲಿಯವರೆಗೆ ಆಯಿಲ್ ಬಾಂಡ್ 80 ಸಾವಿರ ಕೋಟಿ ಬಡ್ಡಿ ಕಟ್ಟಿದ್ದಾರೆ ಕಾರ್ಪೊರೇಟ್ ಕಂಪನಿಗಳಿಗೆ 27% ತೆರಿಗೆ ವಿನಾಯ್ತಿ ಕೊಟ್ರು ಅಂತಾರೆ ಇನ್ನು ಕೆಲವರು 40% ತೆರಿಗೆ ವಿನಾಯ್ತಿ ಕೊಟ್ಟರು ಅಂತಾರೆ ಕಾರ್ಪೊರೇಟ್ ಸಂಸ್ಥೆಗಳಿಗೆ 1 ಲಕ್ಷ ಕೋಟಿ ಲಾಭ ಕೊಟ್ಟಿದ್ದಾರೆ ಮೋದಿ ಯಾರು ಅವರಿಗೆ ಈ ಸಲಹೆ ಕೊಟ್ರೋ‌ ಗೊತ್ತಿಲ್ಲ ಇನ್ನೊಂದು ಕಡೆ ಬಡವರಿಂದ 3.9 ಲಕ್ಷ ಕೋಟಿ  ತೆರಿಗೆ ವಸೂಲಾಗಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ಸದನದಲ್ಲಿ ಬೆಲೆ ಏರಿಕೆಗೆ ಇಡ್ಲಿ, ದೋಸೆ ಉದಾಹರಣೆ; ಗೃಹ ಸಚಿವರಿಗೆ ಹೋಂ ವರ್ಕ್​ ಕೊಟ್ಟ ಸಿದ್ದರಾಮಯ್ಯ

ಇನ್ನು  ಸದನದಲ್ಲಿ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಗೆ ಕುಮಾರಸ್ವಾಮಿ ಟಾಂಗ್​ ನೀಡುತ್ತಿದ್ರೂ ಕಾಂಗ್ರೆಸ್ ಶಾಸಕರೂ ಮಾತ್ರ ಸುಮ್ಮನೇ ಕುಳಿತಿದ್ರೂ ಸದನದಲ್ಲಿ ಕಾಂಗ್ರೆಸ್ ಹಿರಿಯ ನಾಯಕರು ಗೈರಾಗಿದ್ರು, ಆದರೆ ಭಾಗಿಯಾಗಿದ್ದ ಶಾಸಕರು  ಕುಮಾರಸ್ವಾಮಿ ಮಾತಿಗೆ ಪ್ರತಿ ಮಾತನಾಡಿಲ್ಲ.
Published by:Sandhya M
First published: