Deve Gowda: "ಕಾಂಗ್ರೆಸ್‌ನಿಂದ ಕಹಿ ಅನುಭವ ಆಗಿದೆ, ಮತ್ತೆ ಸಹವಾಸವೇ ಬೇಡ" ಎಂದ ದೇವೇಗೌಡ! ಮಾಜಿ ಪ್ರಧಾನಿ Exclusive ಮಾತು

ಭಾರತದ ರಾಜಕೀಯದಲ್ಲಿ ಅತ್ಯಂತ ಹಿರಿಯ ಹಾಗೂ ಈಗಲೂ ಸಕ್ರಿಯವಾಗಿರುವ ರಾಜಕಾರಣಿ ಅಂದರೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಈ ಇಳಿ ವಯಸ್ಸಲ್ಲೂ ಪಕ್ಷ ಸಂಘಟನೆಗಾಗಿ ಓಡಾಡುವ ದೇವೇಗೌಡರು ರಾಜ್ಯ ಹಾಗೂ ದೇಶದ ರಾಜಕಾರಣದ ಬಗ್ಗೆ ಮಾತನಾಡಿದ್ದಾರೆ. ಕಾಂಗ್ರೆಸ್ ಜೊತೆ ಮೈತ್ರಿ ಬಗ್ಗೆ ಹೇಳಿದ್ದಾರೆ. ರಾಹುಲ್ ಗಾಂಧಿ ನಾಯಕತ್ವದ ಬಗ್ಗೆಯೂ ಅಭಿಪ್ರಾಯ ತಿಳಿಸಿದ್ದಾರೆ. News18 ವರದಿಗಾರ ಹರೀಶ್ ಉಪಾಧ್ಯ ಜೊತೆ ದೇವೇಗೌಡರ Exclusive ಸಂದರ್ಶನದ ಹೈಲೈಟ್ಸ್ ಇಲ್ಲಿದೆ...

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ

  • Share this:
ಪಂಚ ರಾಜ್ಯಗಳ  (5 States Election) ವಿಧಾನಸಭಾ ಚುನಾವಣೆ (Assembly Election) ಫಲಿತಾಂಶ (Result) ಬಂದಿದೆ. ನಾಲ್ಕು ರಾಜ್ಯಗಳಲ್ಲಿ ಬಿಜೆಪಿ (BJP), ಒಂದು ರಾಜ್ಯದಲ್ಲಿ ಆಮ್‌ ಆದ್ಮಿ ಪಕ್ಷ (AAP) ಭರ್ಜರಿ ಜಯಗಳಿಸಿದ್ದೂ ಆಗಿದೆ. ಕಾಂಗ್ರೆಸ್ (Congress) ಹೀನಾಯವಾಗಿ ಸೋತಿದ್ದು, ರಾಹುಲ್ ಗಾಂಧಿ (Rahul Gandhi) ನಾಯಕತ್ವದ ಕುರಿತು ‘ಕೈ’ ಹಿರಿಯ ನಾಯಕರೇ ಅಸಮಾಧಾನ ಹೊರಹಾಕಿದ್ದಾರೆ. ಹೀಗಾಗಿ ಮುಂದಿನ ಗುಜರಾತ್ (Gujarat), ಕರ್ನಾಟಕ (Karnataka) ಸೇರಿದಂತೆ ಕೆಲ ರಾಜ್ಯಗಳ ಚುನಾವಣೆಗಳು ಕಾಂಗ್ರೆಸ್ ಪಾಲಿಗೆ ಮಹತ್ವದ್ದಾಗಿದೆ. ಈ ಹೊತ್ತಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್, ಜೆಡಿಎಸ್ ಮೈತ್ರಿ (Alliance) ಆಗುತ್ತಾ ಎಂಬ ಚರ್ಚೆಯೂ ನಡೆಯುತ್ತಿದೆ. ಈ ಬಗ್ಗೆ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ (Former  PM) ಎಚ್‌.ಡಿ. ದೇವೇಗೌಡರು (H.D. Deve Gowda) ಮನ ಬಿಚ್ಚಿ ಮಾತನಾಡಿದ್ದಾರೆ. ಈ ಇಳಿ ವಯಸ್ಸಲ್ಲೂ ಪಕ್ಷ ಸಂಘಟನೆಗಾಗಿ ಓಡಾಡುವ ದೇವೇಗೌಡರು ರಾಜ್ಯ ಹಾಗೂ ದೇಶದ ರಾಜಕಾರಣದ ಬಗ್ಗೆ ಮಾತನಾಡಿದ್ದಾರೆ. ಕಾಂಗ್ರೆಸ್ ಜೊತೆ ಮೈತ್ರಿ ಬಗ್ಗೆ ಹೇಳಿದ್ದಾರೆ. ರಾಹುಲ್ ಗಾಂಧಿ ನಾಯಕತ್ವದ ಬಗ್ಗೆಯೂ ಅಭಿಪ್ರಾಯ ತಿಳಿಸಿದ್ದಾರೆ. News18 ವರದಿಗಾರ ಹರೀಶ್ ಉಪಾಧ್ಯ ಜೊತೆ ದೇವೇಗೌಡರ Exclusive ಸಂದರ್ಶನದ ಹೈಲೈಟ್ಸ್ ಇಲ್ಲಿದೆ...

 “ಕಾಂಗ್ರೆಸ್ ಜೊತೆ ಜೆಡಿಎಸ್ ಮೈತ್ರಿ ಇಲ್ಲ”

ಕಾಂಗ್ರೆಸ್ ಜೊತೆ ಜೆಡಿಎಸ್‌ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಇಲ್ಲ ಅಂತ ಎಚ್.ಡಿ. ದೇವೇಗೌಡ ತಿಳಿಸಿದ್ದಾರೆ. ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವ ವಿಚಾರಕ್ಕೆ ಕಿಡಿ ಕಾರಿದ ಅವರು, ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳಲು ಜೆಡಿಎಸ್ ಆಸಕ್ತಿ ಹೊಂದಿಲ್ಲ. ನಾವು ಪಕ್ಷವನ್ನು ಬಲಪಡಿಸಲು ಮತ್ತು ಸ್ವಂತವಾಗಿ ಅಧಿಕಾರಕ್ಕೆ ಬರಲು ಬಯಸುತ್ತೇವೆ. ಕಾಂಗ್ರೆಸ್ ನಿಂದ ನಮಗೆ ಕಹಿ ಅನುಭವವಾಗಿದೆ ಅಂತ ಹೇಳಿದ್ದಾರೆ.

“ಬಿಜೆಪಿ ವಿರುದ್ಧ ಪ್ರಾದೇಶಿಕ ಪಕ್ಷಗಳು ಒಟ್ಟಾಗಬೇಕು”

ಉತ್ತರ ಪ್ರದೇಶ ಚುನಾವಣೆ ಫಲಿತಾಂಶದ ಬಳಿಕ ಬಿಜೆಪಿಯನ್ನು ಎದುರಿಸಲು ಎಲ್ಲಾ ವಿರೋಧ ಪಕ್ಷಗಳು ಒಂದಾಗಬೇಕು ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಆದರೆ ಕಾಂಗ್ರೆಸ್‌ಗೆ ಈ ಬಗ್ಗೆ ಆಸಕ್ತಿ ಇದ್ದಂತಿಲ್ಲ. ಉಳಿದೆಲ್ಲ ಪ್ರಾದೇಶಿಕ ಜಾತ್ಯತೀತ ಪಕ್ಷಗಳು ಒಗ್ಗೂಡಿ ಮುನ್ನಡೆಯಬೇಕು.

"ಸ್ಟಾಲಿನ್, ಮಮತಾ, ಪವಾರ್ ಉತ್ತಮ ನಾಯಕರು"

ಸ್ಟಾಲಿನ್ ಬಹಳ ಪ್ರಬಲ ನಾಯಕ. ಮಮತಾ ಬ್ಯಾನರ್ಜಿ ಪ್ರಬಲ ನಾಯಕಿ. ಶರದ್ ಪವಾರ್ ಪ್ರಬಲ ನಾಯಕ. ನವೀನ್ ಪಟ್ನಾಯಕ್ ನಾಲ್ಕು ಬಾರಿ ಗೆದ್ದಿದ್ದಾರೆ. ನಾನು ಸಹ ಅವರೊಂದಿಗೆ ಹೋಗಬಹುದು. ಆದರೆ ಕಾಂಗ್ರೆಸ್‌ಗೆ ಆಸಕ್ತಿ ಇಲ್ಲದಿದ್ದರೆ, ಎಲ್ಲಾ 545 ಸ್ಥಾನಗಳಲ್ಲಿ ಸ್ವಂತವಾಗಿ ಸ್ಪರ್ಧಿಸಲಿ. ಯಾರು ತೊಂದರೆ ಕೊಡುತ್ತಾರೆ ಅಂತ ದೇವೇಗೌಡರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: Modi: 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ಬಗ್ಗೆ ಮೋದಿ ಮೆಚ್ಚುಗೆ! ಈ Movie ನೋಡ್ತಾರಾ ಪ್ರಧಾನಿ?

“ಮಮತಾ ಬ್ಯಾನರ್ಜಿ ಯಾಕೆ ಕಾಂಗ್ರೆಸ್ ಬಾಗಿಲಿಗೆ ಹೋಗುತ್ತಾರೆ?”

ನಾನು ಯಾರೊಂದಿಗೂ ಮಾತನಾಡಿಲ್ಲ. ನನಗೆ ಆಸಕ್ತಿಯಿಲ್ಲ. ಎರಡು ಬಾರಿ ನನ್ನ ಕೈಲಾದ ಪ್ರಯತ್ನ ಮಾಡಿ ವಿಫಲನಾಗಿದ್ದೇನೆ ಅಂತ ದೇವೇಗೌಡರು ಹೇಳಿದ್ದಾರೆ. ಕಾಂಗ್ರೆಸ್‌ಗೆ ಆಸಕ್ತಿಯಿಲ್ಲದಿದ್ದರೆ, ಮಮತಾ ಬ್ಯಾನರ್ಜಿ ಅವರು ಕಾಂಗ್ರೆಸ್‌ನ ಬಾಗಿಲಿಗೆ ಹೋಗುತ್ತಾರೆ ಎಂದು ನಾನು ಏಕೆ ನಿರೀಕ್ಷಿಸಬೇಕು? ಅಂತ ದೇವೇಗೌಡರು ಹೇಳಿದ್ದಾರೆ.

“ಕರ್ನಾಟಕದ ರಾಜಕಾರಣದಲ್ಲಿ ಮಾತ್ರ ನನಗೆ ಆಸಕ್ತಿ”

ಸದ್ಯ ನನಗೆ ಕರ್ನಾಟಕದ ರಾಜಕಾರಣದಲ್ಲಿ ಮಾತ್ರ ಆಸಕ್ತಿ ಇದೆ. ಕರ್ನಾಟಕದಲ್ಲಿ ಜೆಡಿಎಸ್ ಬಲಪಡಿಸುವುದು ನನ್ನ ಬದ್ಧತೆ. ರಾಷ್ಟ್ರಮಟ್ಟದಲ್ಲಿ ನಿಲುವು ತಳೆಯುವುದು ತುಂಬಾ ಕಷ್ಟ. ನಾನು ಸಂಸತ್ತಿನಲ್ಲಿ ಎಷ್ಟು ಸ್ಥಾನಗಳನ್ನು ಗೆಲ್ಲುತ್ತೇನೆ? ನನಗೆ ಸಾಕಷ್ಟು ಶಕ್ತಿ ಬಂದರೆ ಸಂಸತ್ತಿನಲ್ಲಿ ಕೆಲವು ಸ್ಥಾನಗಳನ್ನು ಗೆಲ್ಲಬಹುದು. ಇದು 2023 ರ ವಿಧಾನಸಭಾ ಚುನಾವಣೆಯನ್ನು ಅವಲಂಬಿಸಿರುತ್ತದೆ ಅಂತ ಅವರು ತಿಳಿಸಿದ್ರು.

“ಇವಿಎಂಗಳ ಬಗ್ಗೆ ಸೂಕ್ತ ನಿಲುವು ತಳೆಯಬೇಕು”

ಯುಪಿ ಚುನಾವಣೆಯ ನಂತರ ಬರುವ ಮತ್ತೊಂದು ಆರೋಪವೆಂದರೆ ಇವಿಎಂಗಳನ್ನು ಟ್ಯಾಂಪರಿಂಗ್ ಮಾಡಲಾಗಿದೆ. ಇದು ಇತರ ರಾಜಕೀಯ ಪಕ್ಷಗಳು ಈ ಹಿಂದೆ ಮಾತನಾಡಿರುವ ವಿಷಯ. ಪೇಪರ್ ಬ್ಯಾಲೆಟ್ ಗಳನ್ನು ವಾಪಸ್ ತರುವಂತೆ ಹಲವರು ಕೇಳಿಕೊಂಡಿದ್ದಾರೆ.

ಇದಕ್ಕೆ ಜೆಡಿಎಸ್ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಇದು ಕಳೆದ ಹಲವು ವರ್ಷಗಳಿಂದ ನಡೆದುಕೊಂಡು ಬರುತ್ತಿದೆ. ಎರಡು ರಾಷ್ಟ್ರೀಯ ಪಕ್ಷಗಳು ಕಠಿಣ ನಿಲುವು ತಳೆಯಬೇಕು, ಪ್ರಾದೇಶಿಕ ಪಕ್ಷಗಳು ಇದರಲ್ಲಿ ಏನೂ ಮಾಡಲು ಸಾಧ್ಯವಿಲ್ಲ. ಮತಯಂತ್ರ ಪದ್ಧತಿಗೆ ಮರಳುವಂತೆ ಜೆಡಿಎಸ್ ಪತ್ರ ಬರೆದಿದ್ದರೂ ಕಾಂಗ್ರೆಸ್ ಸೇರಿದಂತೆ ಸರ್ವಪಕ್ಷ ಸಭೆಯಲ್ಲಿ ಯಾರೂ ಬೆಂಬಲಿಸಲಿಲ್ಲ ಅಂತ ಅವರು ಬೇಸರ ವ್ಯಕ್ತಪಡಿಸಿದ್ರು.

ಇದನ್ನೂ ಓದಿ: Congress Crisis: ಇಂದು ಪ್ರಿಯಾಂಕಾ ಗಾಂಧಿ ರಾಜೀನಾಮೆ, ಕಾಂಗ್ರೆಸಿನಲ್ಲಿ ದೊಡ್ಡ ಬದಲಾವಣೆಯ ನಿರೀಕ್ಷೆ

“ರಾಹುಲ್ ಗಾಂಧಿ ನಾಯಕತ್ವದ ಬಗ್ಗೆ ಏನೂ ಹೇಳಲಾರೆ”

ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಚರ್ಚೆಯಾಗುತ್ತಿದೆ. ಆದರೆ ಅಂತಹ ಪ್ರಸ್ತಾಪವು ಕಾಂಗ್ರೆಸ್ ಅನ್ನು ಮತ್ತೆ ಅಧಿಕಾರಕ್ಕೆ ತರುತ್ತದೆ ಎಂದು ನಾನು ಭಾವಿಸುವುದಿಲ್ಲ. ಕಾಂಗ್ರೆಸ್‌ಗೆ ಗಾಂಧಿ ನಾಯಕತ್ವ ಅನಿವಾರ್ಯ ಎಂದೂ ನಾನು ಹೇಳುತ್ತಿಲ್ಲ. ಅದನ್ನು ನಾನು ಈಗ ಹೇಳಲಾರೆ ಅಂತ ದೇವೇಗೌಡರು ಹೇಳಿದ್ರು.
Published by:Annappa Achari
First published: