Chitradurga: ಬಿಜೆಪಿಯವರಿಗೆ ನಿದ್ರೆಯಲ್ಲೂ ಕಾಡ್ತಾರೆ ಸಿದ್ದು ಎಂದ ಮಾಜಿ ಸಚಿವ ಆಂಜನೇಯ

ಕೆಲವರಿಗೆ ನಿದ್ರೆಯಲ್ಲೂ ಸಿದ್ಧರಾಮಯ್ಯ ಕಾಡುತ್ತಾರೆ. ಮುಂದಿನ ಚುನಾವಣೆಯಲ್ಲಿ (Election) ಬಿಜೆಪಿಗೆ  (BJP) ಅಧಿಕಾರ‌ ಸಿಗುವುದಿಲ್ಲ ಎಂದು ಅವರಿಗೆ ಗೊತ್ತಿದೆ. ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರುವ ಭರವಸೆಯಿದೆ ಎಂದು ಚಿತ್ರದುರ್ಗದಲ್ಲಿ ಮಾಜಿ ಸಚಿವ ಹೆಚ್. ಆಂಜನೇಯ ಹೇಳಿದ್ದಾರೆ.

ಸಿದ್ದರಾಮಯ್ಯ

ಸಿದ್ದರಾಮಯ್ಯ

  • Share this:
ಚಿತ್ರದುರ್ಗ(ಜು.30): ಬಳ್ಳಾರಿ ಪಾದಯಾತ್ರೆ ಕಾಂಗ್ರೆಸ್‌ (Congress) ಆಡಳಿತಕ್ಕೆ ಬರುವ ಮುನ್ಸೂಚನೆ ನೀಡಿತ್ತು. ಈಗ ಸಿದ್ಧರಾಮಯ್ಯ (Siddaramaiah) ಅಮೃತ ಮಹೋತ್ಸ ಅಂಥದ್ದೇ ಮುನ್ಸೂಚನೆ ಕಾಣುತ್ತಿದೆ. ಕೆಲವರಿಗೆ ನಿದ್ರೆಯಲ್ಲೂ ಸಿದ್ಧರಾಮಯ್ಯ ಕಾಡುತ್ತಾರೆ. ಮುಂದಿನ ಚುನಾವಣೆಯಲ್ಲಿ (Election) ಬಿಜೆಪಿಗೆ  (BJP) ಅಧಿಕಾರ‌ ಸಿಗುವುದಿಲ್ಲ ಎಂದು ಅವರಿಗೆ ಗೊತ್ತಿದೆ. ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರುವ ಭರವಸೆಯಿದೆ ಎಂದು ಚಿತ್ರದುರ್ಗದಲ್ಲಿ ಮಾಜಿ ಸಚಿವ ಹೆಚ್. ಆಂಜನೇಯ ಹೇಳಿದ್ದಾರೆ. ಚಿತ್ರದುರ್ಗದ ಕಾಂಗ್ರೇಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದಾವಣಗೆರೆಯಲ್ಲಿ ಆ.3 ಕ್ಕೆ ನಡೆಯಲಿರುವ ಮಾಜಿ ಸಿಎಂ ಸಿದ್ಧರಾಮಯ್ಯನವರ ಜನ್ಮ ದಿನದ ಅಮೃತ ಮಹೋತ್ಸವ ಕಾರ್ಯಕ್ರಮದಿಂದ ಬಿಜೆಪಿಗೆ ನಡುಕ ಶುರು ಆಗಿದೆ ಎಂದಿದ್ದಾರೆ.

ಬಿಜೆಪಿ ಸರ್ಕಾರ ಹುಟ್ಟಿದ ಮಗುವಿನಿಂದ ಸಾಯುವ ಶವಕ್ಕೂ GST ಹಾಕಿ  ಪ್ರಧಾನಿ  ನುಡಿದಂತೆ ನಡೆಯದೆ ವಚನ ಭ್ರಷ್ಟರಾಗಿದ್ದಾರೆ ಎಂದು ಬಿಜೆಪಿ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು. ಇನ್ನೂಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಬರ್ತಡೇ ವೇಳೆ ಸಿದ್ಧರಾಮಯ್ಯ ಭಾಗಿಯಾಗಿದ್ದರು. ಅದಕ್ಕೆ ಕೆಲವರು ವಿರೋಧ ಮಾಡಿದ್ದರು. ಆದರೇ ರಾಜಕೀಯ ಬೇರೆ, ಶುಭ ಕೋರುವುದು ಬೇರೆ ಎಂದಿದ್ದರು.

ಹಾಗೆ ಸಿದ್ಧರಾಮಯ್ಯ‌ರ ಜನ್ಮದಿನ ಆಚರಣೆ ಬಗ್ಗೆ ಬಿಎಸ್ ವೈ ಪ್ರತಿಕ್ರಿಯೆ ನೀಡಿ ಭಾವನಾತ್ಮಕ ವಿಚಾರ ಹಿನ್ನೆಲೆ ಟೀಕೆ ಸಲ್ಲದು ಎಂದಿದ್ದಾರೆ. ಆದರೂ ಬಿಜೆಪಿಗರು ಟೀಕೆ ಮಾಡುತ್ತಲೇ ಇದ್ದಾರೆ. ಗಣಿಗಳ್ಳರ ವಿರುದ್ಧ ಬಳ್ಳಾರಿಗೆ ಪಾದಯಾತ್ರೆ ನಡೆದಿತ್ತು. ಬಳ್ಳಾರಿ ಪಾದಯಾತ್ರೆ ಕಾಂಗ್ರೆಸ್‌ ಆಡಳಿತಕ್ಕೆ ಬರುವ ಮುನ್ಸೂಚನೆ ನೀಡಿತ್ತು. ಈಗ ಸಿದ್ಧರಾಮಯ್ಯ ಅಮೃತ ಮಹೋತ್ಸವದಿಂದ ಅಂಥದ್ದೇ ಮುನ್ಸೂಚನೆ ಸಿಕ್ಕಿದೆ ಎಂದಿದ್ದಾರೆ.

ಇದನ್ನೂ ಓದಿ: Kodagu: ಹಿಂದೂ ಕಾರ್ಯಕರ್ತರ ಮೇಲೆ ರೌಡಿ ಶೀಟರ್ ಪ್ರಕರಣ! ಬೃಹತ್ ಪ್ರತಿಭಟನೆ

ಇನ್ನೂ ರಾಜ್ಯ ಹಾಗೂ ಕೇಂದ್ರದಲ್ಲಿ ಬೆಲೆ ನಿಯಂತ್ರಣ, ಬಡವರ ಕಷ್ಟ ಕೇಳುವಲ್ಲಿ ಬಿಜೆಪಿ ಸರ್ಕಾರ ವಿಫಲವಾಗಿದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಅಧಿಕಾರ‌ ಸಿಗದೆಂದು ಗೊತ್ತಿದೆ. ಹೀಗಾಗಿ, 40% ಕಮಿಷನ್ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಇಡಿ,‌ ಸಿಬಿಐ ದುರ್ಬಳಕೆ ಮಾಡಿಕೊಂಡು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ವಿರುದ್ಧ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದಿದ್ದಾರೆ.

ನಿದ್ರೆಯಲ್ಲೂ ಕಾಡ್ತಾರೆ ಸಿದ್ದರಾಮಯ್ಯ

ಡಬಲ್ ಇಂಜಿನ್ ಸರ್ಕಾರ ಸಂಪೂರ್ಣ ವಿಫಲ. ಕೂಸು ಹುಟ್ಟುವ ಮುನ್ನ ಕುಲಾಯಿ ಹೊಲಿಸುವುದಿಲ್ಲ, ಕೆಲವರಿಗೆ ನಿದ್ರೆಯಲ್ಲೂ ಸಿದ್ಧರಾಮಯ್ಯ ಕಾಡುತ್ತಾರೆ. ಶಾಸಕರು, ಜನಾದೇಶದ ಮೇರೆಗೆ ಹೈಕಮಾಂಡ್‌ನಿಂದ ಸಿಎಂ ಆಯ್ಕೆ ಆಗುತ್ತದೆ. ಪಕ್ಷದಲ್ಲಿ ಒಗ್ಗಟ್ಟಿದೆ. ಹೈಕಮಾಂಡ್ ಬಗ್ಗೆ ಗೌರವವಿದೆ, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಭರವಸೆಯಿದೆ. ಸಿದ್ಧರಾಮಯ್ಯ ಅಮೃತ‌ ಮಹೋತ್ಸವಕ್ಕೆ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದಿದ್ದಾರೆ.

ಇದನ್ನೂ ಓದಿ: Actor Death: ಚಿತ್ರರಂಗಕ್ಕೆ ಮತ್ತೊಂದು ಶಾಕ್, 37ನೇ ವಯಸ್ಸಲ್ಲೇ ಯುವನಟ ಸಾವು! ಕಾರಣ ಮಾತ್ರ ನಿಗೂಢ

ಜಾತಿವಾದಿ‌ ಸಿದ್ಧರಾಮಯ್ಯ-ಡಿಕೆಶಿಗೆ ಜನ ಸಿಎಂ ಮಾಡಲ್ಲ ಎಂದು ಈಶ್ವರಪ್ಪ ಹೇಳಿಕೆ ವಿಚಾರಕ್ಕೆ ಈಶ್ವರಪ್ಪನ ಕೊಳಕು ಮಾತಿಗೆ ನಾನು ಉತ್ತರಿಸಲ್ಲ ಎಂದು ತಿರುಗೇಟು ನೀಡಿದರು. ಇನ್ನು ರಾಜ್ಯದಲ್ಲಿ ದಲಿತ ಸಿಎಂ ಚರ್ಚೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, 2008ರಲ್ಲಿ ಖರ್ಗೆ ನೇತೃತ್ವದಲ್ಲಿ ನಾವು ಚುನಾವಣೆ ಮಾಡಿದ್ದೆವು. ಆಗ ಖರ್ಗೆ ಸಿಎಂ ಆಗುವ ಅವಕಾಶ ಇತ್ತು ಎಂದ ಅವರು, ದಲಿತ ಸಿಎಂ ಎಂದು ಘೋಷಿಸಿದರೆ‌ ಜನ ಮತ ಕೊಡುತ್ತಾರೇನ್ರೀ? ಎಂದು ಹತಾಶೆಯಿಂದ ಉತ್ತರಿಸಿ, ಹಿಂದೆಜಗಜೀವನ್ ರಾಮ್ ಪ್ರಧಾನಿ ಆಗುವ ಅವಕಾಶವನ್ನು ತಪ್ಪಿಸಲಾಯಿತು. ದಲಿತ ಸಿಎಂ ಎಂಬುದು ನಮ್ಮ ಪಕ್ಷದಲ್ಲಿ ಇಲ್ಲ ಎಂದರು. ಮಂಗಳೂರು ಹತ್ಯೆ ಪ್ರಕರಣಕ್ಕೆ ಪ್ರತಿಕ್ರಿಯೆ ನೀಡಿ, ಅಮಾಯಕರ ಜೀವ ಹೋಗಕೂಡದು. ಉಗ್ರವಾದಿತನ ಸರಿ ಅಲ್ಲ ಎಂದು ಹೇಳಿದ್ದಾರೆ.
Published by:Divya D
First published: