HOME » NEWS » State » GURUKULA TYPE OF EDUCATION GIVEN BY PRABODHINI GURUKULA SHALE IN CHIKKAMAGALURU SESR

ವೇದದಿಂದ ವಿಜ್ಞಾನದವರೆಗೆ ಪಂಚಮುಖಿ ಶಿಕ್ಷಣ: ಚಿಕ್ಕಮಗಳೂರಿನ ಪ್ರಭೋದಿನಿ ಗುರುಕುಲಗೆ ಅಂತಾರಾಷ್ಟ್ರೀಯ ಖ್ಯಾತಿ

ವೇದ, ಸಂಸ್ಕೃತ, ವಿಜ್ಞಾನ, ಕೃಷಿ, ಕಲಾ ಕೌಶಲ ಎನ್ನುವ ಪಂಚಮುಖಿ ಶಿಕ್ಷಣ ಪದ್ದತಿಯನ್ನು ಬೋಧಿಸುವ ಜೊತೆಗೆ ಆಧುನಿಕ ಶಿಕ್ಷಣವನ್ನು ನೀಡುತ್ತಿರುವುದು ಇಲ್ಲಿನ ವಿಶೇಷ.

news18-kannada
Updated:February 10, 2020, 6:10 PM IST
ವೇದದಿಂದ ವಿಜ್ಞಾನದವರೆಗೆ ಪಂಚಮುಖಿ ಶಿಕ್ಷಣ: ಚಿಕ್ಕಮಗಳೂರಿನ ಪ್ರಭೋದಿನಿ ಗುರುಕುಲಗೆ ಅಂತಾರಾಷ್ಟ್ರೀಯ ಖ್ಯಾತಿ
ವೇದ, ಸಂಸ್ಕೃತ, ವಿಜ್ಞಾನ, ಕೃಷಿ, ಕಲಾ ಕೌಶಲ ಎನ್ನುವ ಪಂಚಮುಖಿ ಶಿಕ್ಷಣ ಪದ್ದತಿಯನ್ನು ಬೋಧಿಸುವ ಜೊತೆಗೆ ಆಧುನಿಕ ಶಿಕ್ಷಣವನ್ನು ನೀಡುತ್ತಿರುವುದು ಇಲ್ಲಿನ ವಿಶೇಷ.
  • Share this:
ಚಿಕ್ಕಮಗಳೂರು: ಶಿಕ್ಷಣ ಅಂದ್ರೆ ಕೇವಲ ಪಠ್ಯಪುಸ್ತಕವನ್ನು ಅರೆದು ಕುಡಿಯುವ ಬದಲು ಜೀವನ ಮೌಲ್ಯಗಳ ಪಾಠಗಳನ್ನು ಮಕ್ಕಳಿಗೆ ತಿಳಿಸಿ ಹೇಳುವ ಕೆಲಸವಾಗಬೇಕು. ಉದ್ಯೋಗ ಹಿಡಿಯಲು ಮಾತ್ರ ಶಿಕ್ಷಣ ಉಪಯೋಗವಾಗುವ ಬದಲು ವ್ಯಕ್ತಿತ್ವ ನಿರ್ಮಾಣದ ಕೆಲಸ ಸಾಕಾರಗೊಳ್ಳಬೇಕು. ಈ ರೀತಿಯ ವಿಶಿಷ್ಟ ಕಲಿಕೆ ಕೇಂದ್ರವಾಗಿ ಇಲ್ಲಿನ ಗುರುಕುಲ ನಿರ್ಮಾಣವಾಗಿದೆ. 

ಇಲ್ಲಿನ ಕೊಪ್ಪ ತಾಲೂಕಿನ ಹರಿಹರಪುರದ ಪ್ರಭೋದಿನಿ ಗುರುಕುಲ ಶಾಲೆ ಈಗಿನ ಶಿಕ್ಷಣ ವ್ಯವಸ್ಥೆಗೆ ಸೆಡ್ಡು ಹೊಡೆಯುವಂತೆ ಇದೆ. ಶಿಕ್ಷಣ ಎಂದರೇ ವ್ಯಾಪಾರೀಕರಣ ಎನ್ನುವ ಈ ಸಂದರ್ಭದಲ್ಲಿ ಪೂರ್ವಜರ ಗುರುಕುಲ ಪದ್ಧತಿಯಂತೆ ಮಕ್ಕಳಿಗೆ ಕಲಿಕೆಯ ಮಾರ್ಗವನ್ನು ಹೇಳಿಕೊಡಲಾಗುತ್ತಿದೆ.



ಕಳೆದ 24 ವರ್ಷಗಳಿಂದ ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡುತ್ತಿರುವ ಈ ಗುರುಕುಲ, ವಿದ್ಯಾರ್ಥಿಗಳಿಗೆ ಕಲಿಕೆ ಮಾತ್ರವಲ್ಲದೇ ಬೌದ್ಧಿಕ, ಆಧ್ಯಾತ್ಮಿಕ ಸೇರಿದಂತೆ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಿದೆ.



24 ವರ್ಷಗಳ ಹಿಂದೆ ಸದ್ದಿಲ್ಲದೇ ಶುರುವಾದ ಈ ಗುರುಕುಲ ಇಂದು ರಾಜ್ಯ, ರಾಷ್ಟ್ರ ಸೇರಿದಂತೆ ಅಂತರಾಷ್ಟ್ರಮಟ್ಟದಲ್ಲೂ ಗುರುತಿಸಿಕೊಳ್ಳುವಂತಾಗಿದೆ.
ಈ ಗುರುಕುಲದಲ್ಲಿ ತರಗತಿಗಳಾಗಿ ವಿಚಾರಗಳನ್ನ ವಿದ್ಯಾರ್ಥಿಗಳಿಗೆ ಭೋದಿಸದೇ ಗಣಗಳಾಗಿ ವಿಂಗಡನೆ ಮಾಡಿ ವಿದ್ಯಾರ್ಥಿಗಳಿಗೆ ಜೀವನ ಶಿಕ್ಷಣವನ್ನ ಕಲಿಸಲಾಗ್ತಿದೆ.ವೇದ, ಸಂಸ್ಕೃತ, ವಿಜ್ಞಾನ, ಕೃಷಿ, ಕಲಾ ಕೌಶಲ ಎನ್ನುವ ಪಂಚಮುಖಿ ಶಿಕ್ಷಣ ಪದ್ದತಿಯನ್ನು ಬೋಧಿಸುವ ಜೊತೆಗೆ ಆಧುನಿಕ ಶಿಕ್ಷಣವನ್ನು ನೀಡುತ್ತಿರುವುದು ಇಲ್ಲಿನ ವಿಶೇಷ.



ಸದ್ಯ ಪ್ರಭೋದಿನಿ ಗುರುಕುಲಕ್ಕೆ 24 ಸಂವತ್ಸರಗಳು ತುಂಬಿದ್ದು,  ಕಳೆದೊಂದು ವರ್ಷದಿಂದ ಅರ್ಧಮಂಡಲೋತ್ಸವದ ಮೂಲಕ ಹತ್ತಾರು ಕಾರ್ಯಕ್ರಮಗಳನ್ನ ನಡೆಸಿಕೊಂಡು ಬರಲಾಗುತ್ತಿದೆ.

ಇದನ್ನು ಓದಿ: ವನ್ಯ ಜೀವಿಗಳ ಸ್ವರ್ಗ ಈ ಮುತ್ತೋಡಿ; ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ ಪ್ರವಾಸಿಗರ ಸಂಖ್ಯೆ

ಇಲ್ಲಿ ಕಲಿತಿರುವ ಮಕ್ಕಳು ಕೇವಲ ಉದ್ಯೋಗದಲ್ಲಿ ಮಾತ್ರವಲ್ಲದೇ ಸಮಾಜಮುಖಿ ಕೆಲಸದಲ್ಲಿ ತೊಡಗುವ ಮೂಲಕ ಹೆಸರು ಮಾಡಿದ್ದು, ಗುರುಕುಲಕ್ಕೂ ಹೆಸರು ತಂದಿದೆ. ವ್ಯಾಪರೀಕರಣದ ಆಧುನಿಕ ಶಿಕ್ಷಣದ ನಡುವೆಯೂ ನಶಿಸಿ ಹೋಗುತ್ತಿರುವ ಗುರುಕುಲ ಶಿಕ್ಷಣದಲ್ಲಿ ಪ್ರಾಚೀನ ಶಿಕ್ಷಣ, ಸಂಸ್ಕೃತಿಯನ್ನ ಬೋಧಿಸುತ್ತಿರುವ ಈ ಗುರುಕುಲ ಹೆಮ್ಮರವಾಗಿ ಬೆಳೆಯುತ್ತಿದ್ದು, ಹೆಚ್ಚಿನ ಜನರು ಕೂಡ ಇದರತ್ತ ವಾಲುತ್ತಿದ್ದಾರೆ.
Youtube Video
First published: February 10, 2020, 6:10 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories