• Home
  • »
  • News
  • »
  • state
  • »
  • Kodagu: ಪರಿಸರದ ಜೊತೆಯೇ ಮಕ್ಕಳಿಗೆ ಶಿಕ್ಷಣ; ಕೊಡಗಿನಲ್ಲಿ ಗುರುಕುಲ ಮಾದರಿಯ ಶಾಲೆ

Kodagu: ಪರಿಸರದ ಜೊತೆಯೇ ಮಕ್ಕಳಿಗೆ ಶಿಕ್ಷಣ; ಕೊಡಗಿನಲ್ಲಿ ಗುರುಕುಲ ಮಾದರಿಯ ಶಾಲೆ

ಶಾಲೆ

ಶಾಲೆ

70 ಎಕರೆ ಪ್ರದೇಶದ ತೋಟದೊಳಗೆ ಇರುವ ಶಾಲೆಯಲ್ಲಿ ಮರ ಗಿಡಗಳಿಂದ ಬೀಜಗಳನ್ನು ವಿದ್ಯಾರ್ಥಿಗಳಿಂದಲೇ ಸಂಗ್ರಹಿಸಿ ಅದರಲ್ಲಿ ಪರಿಸರ ವಿಜ್ಞಾನ ಕಳಿಸಲಾಗುತ್ತದೆ. ಅದೇ ಬೀಜಗಳನ್ನು ಲೆಕ್ಕ ಮಾಡಿಸುವ ಮೂಲಕ ಗಣಿತ ಬೋಧನೆ ಮಾಡಲಾಗುತ್ತದೆ.

  • Share this:

ಕೊಡಗು: ವಿದ್ಯಾರ್ಥಿಗಳು (Students) ಎಷ್ಟು ಅಂಕ ಗಳಿಸಿದರು ಎನ್ನುವುದೇ ಉತ್ತಮ ಶಿಕ್ಷಣ (Education) ಎನ್ನುವ ಮನಸ್ಥಿತಿ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿದೆ. ಆದರೆ ಈ ಶಾಲೆಯಲ್ಲಿ ವಿದ್ಯಾರ್ಥಿಗಳು (Students) ಎಷ್ಟು ಅಂಕಗಳನ್ನು ಪಡೆದರು ಎನ್ನುವುದಕ್ಕಿಂತ ಎಷ್ಟು ಜ್ಞಾನ ಸಂಪಾದಿಸಿದ್ದಾರೆ ಎನ್ನುವುದಕ್ಕೆ ಒತ್ತು ನೀಡಲಾಗುತ್ತದೆ. ಈ ಶಾಲೆಯಲ್ಲಿ ಅದಕ್ಕಾಗಿ ವಿದ್ಯಾರ್ಥಿಗಳಿಗೆ ನಾಲ್ಕು ಗೋಡೆಗಳ ಮಧ್ಯೆ ಪುಸ್ತಕ ಹಿಡಿದು ಪಾಠ (Teaching) ಮಾಡುವ ಬದಲಾಗಿ ಬಹುತೇಕ ಕೊಠಡಿಯ ಹೊರಗೆ ಚಟುವಟಿಕೆಗಳ ಮೂಲಕ ಬೋಧನೆ ಮಾಡಲಾಗುತ್ತಿದೆ. ಶಾಲಾ ಆವರಣವನ್ನೇ (School Ground) ತಮ್ಮ ಪ್ರಯೋಗಶಾಲೆಯನ್ನಾಗಿ ಮಾಡಿಕೊಳ್ಳಲಾಗಿದೆ. ಅದು ಕೊಡಗಿನ ಮಡಿಕೇರಿ ಸಮೀಪದ ಕಾಟಕೇರಿ ಬಳಿ ನಾಲ್ಕು ವರ್ಷಗಳಿಂದ ನಡೆಯುತ್ತಿರುವ ಹರ್ ಮಂದಿರ್ ಶಾಲೆ.


ಹಾಗಂತ ಇದೇನು ಲಕ್ಷಾಂತರ ರೂಪಾಯಿ ಡೊನೇಷನ್ ಸಂಗ್ರಹಿಸುತ್ತಿರುವ ಶಾಲೆ ಅಂದುಕೊಳ್ಳಬೇಡಿ. ಖಾಸಗಿ ಶಾಲೆ ಆದರೂ ಮಕ್ಕಳಿಗೆ ಮೌಲ್ಯಯುತ ಶಿಕ್ಷಣದ ಜೊತೆಗೆ ಸಂಸ್ಕೃತಿಯನ್ನು ಕಲಿಸಬೇಕು ಎನ್ನುವ ಹಂಬಲದಿಂದ ಖಾಸಗಿ ಕಂಪನಿಯೊಂದರ ಮಾಲೀಕ ಓಂಕಾರ್ ಸಿಂಗ್ ಪಸರೀಚ ಎಂಬುವರು ಬರೀ ಬಡವರ ಮಕ್ಕಳಿಗಷ್ಟೇ ಉಚಿತವಾಗಿ ಈ ಶಾಲೆಯಲ್ಲಿ ಇಂತಹ ವಿಶೇಷ ಆಲೋಚನೆಯೊಂದಿಗೆ ಕಲಿಸುತ್ತಿದ್ದಾರೆ.


ಪರಿಸರದ ಜೊತೆಯಲ್ಲಿಯೇ ಮಕ್ಕಳಿಗೆ ಶಿಕ್ಷಣ


70 ಎಕರೆ ಪ್ರದೇಶದ ತೋಟದೊಳಗೆ ಇರುವ ಶಾಲೆಯಲ್ಲಿ ಮರ ಗಿಡಗಳಿಂದ ಬೀಜಗಳನ್ನು ವಿದ್ಯಾರ್ಥಿಗಳಿಂದಲೇ ಸಂಗ್ರಹಿಸಿ ಅದರಲ್ಲಿ ಪರಿಸರ ವಿಜ್ಞಾನ ಕಳಿಸಲಾಗುತ್ತದೆ. ಅದೇ ಬೀಜಗಳನ್ನು ಲೆಕ್ಕ ಮಾಡಿಸುವ ಮೂಲಕ ಗಣಿತ ಬೋಧನೆ ಮಾಡಲಾಗುತ್ತದೆ. ಅಷ್ಟೇ ಏಕೆ ಕನ್ನಡ ಇಂಗ್ಲಿಷ್ ಭಾಷೆಗಳ ಸಂವಹನವನ್ನು ಕಳಿಸಲಾಗುತ್ತದೆ. ಅದಕ್ಕಿಂತ ಮುಖ್ಯವಾಗಿ ಗಾಂಧೀಜಿಯವರ ಚರಕದಿಂದ ಇಂದಿಗೂ ಈ ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ನೂಲು ನೇಯಿಸಲಾಗುತ್ತಿದೆ.


gurukul education in kodagu rsk mrq
ಶಾಲೆ


110 ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ


ಇಂತಹ ಅಪರೂಪದ ಪಾಠ ಪ್ರವಚನದ ಮೂಲಕ ಮಕ್ಕಳ ಜ್ಞಾನ ಮತ್ತು ಸಂಸ್ಕೃತಿಯನ್ನು ಬೆಳೆಸುವ ಕೆಲಸವನ್ನು ಶಾಲೆ ನಡೆಸಲಾಗುತ್ತಿದೆ. ನಾಲ್ಕು ವರ್ಷಗಳ ಹಿಂದೆ ಆರಂಭವಾದ ಶಿಕ್ಷಣ ಸಂಸ್ಥೆಯಲ್ಲಿ ಈಗ 110 ವಿದ್ಯಾರ್ಥಿಗಳು ಉಚಿತವಾಗಿ ಶಿಕ್ಷಣ ಪಡೆಯುತ್ತಿದ್ದಾರೆ.


ಇದನ್ನೂ ಓದಿ:  Dose Habba: ದೀಪಾವಳಿಗೆ ದೋಸೆಹಬ್ಬ! ಬೆಳ್ತಂಗಡಿಯಲ್ಲಿ ದೋಸೆ ಸವಿದ ಸಾವಿರಾರು ಜನ!


ದಕ್ಷಿಣ ಭಾರತದಲ್ಲೇ ಮೊದಲ ಕೇಂದ್ರ


ಬೋರ್ಡಿಂಗ್ ಶಾಲೆಯಾಗಿರುವುದರಿಂದ ಒಬ್ಬ ವಿದ್ಯಾರ್ಥಿಗೆ ಒಂದು ವರ್ಷಕ್ಕೆ 40 ಸಾವಿರ ವೆಚ್ಚವಾಗುತ್ತಿದ್ದು ಎಲ್ಲವನ್ನ ಕೂಡ ವಿದ್ಯಾಸಂಸ್ಥೆಯೆ ಭರಿಸುತ್ತಿದೆ. ನಾಲ್ಕೂ ದಿಕ್ಕಿನಲ್ಲೂ ಈ ರೀತಿಯ ಶಿಕ್ಷಣ ನೀಡುವ ಉದ್ದೇಶದಿಂದ ಆರಂಭವಾಗಿರೋ ಶಿಕ್ಷಣ ಸಂಸ್ಥೆ ದಕ್ಷಿಣ ಭಾರತದಲ್ಲೇ ಮೊದಲ ಕೇಂದ್ರವನ್ನ ಕೊಡಗಿನಲ್ಲಿ ತೆರೆದಿದೆ.


gurukul education in kodagu rsk mrq
ಶಾಲೆ


ನೇಚರ್ ವಾಕ್ ಮಾಡುವ ಮೂಲಕ ಪರಿಸರ ಅಧ್ಯಯನ ನಡೆಸಿದ್ರೆ, ಏಕಾಗ್ರತೆಗಾಗಿ ಚರಕದಿಂದ ನೂಲು ನೇಯುತ್ತಾರೆ, ಗಣಿತ ವಿಷಯಕ್ಕೆ ವಿವಿಧ ಧಾನ್ಯಗಳು, ಬೀಜಗಳಲ್ಲಿ ಪಾಠ ಮಾಡಿದ್ರೆ, ಇಂಗ್ಲಿಷ್ ಕಲಿಯಲು ನೃತ್ಯದ ಮೂಲಕ ಪಾಠ ಹೇಳಿ ಕೊಡಲಾಗುತ್ತಿದೆ‌.


ಗುರುಕುಲ‌ ಮಾದರಿಯ ಶಿಕ್ಷಣ


ಮಹಾತ್ಮ ಗಾಂಧಿಯವರ ತತ್ವವನ್ನ ಅಳವಡಿಸಿಕೊಂಡು ಗುರುಕುಲ‌ ಮಾದರಿಯ ಶಿಕ್ಷಣವನ್ನು ಕೊಡಬೇಕು ಎನ್ನುವುದು ಶಾಲೆಯ ಉದ್ದೇಶ. ಚಟುವಟಿಕೆ ಮೂಲಕವೇ ಪಾಠವನ್ನ ಹೇಳಿಕೊಡುವುದರಿಂದ ಬೇಗ ಅರಿವಾಗಲು ಸಾಧ್ಯವಾಗುತ್ತದೆ.


gurukul education in kodagu rsk mrq
ಶಾಲೆ


ಇದನ್ನೂ ಓದಿ:  Male Mahadeshwara Temple: ಮಲೆ ಮಹದೇಶ್ವರನಿಗೆ ಹಾಲರುವೆ ಸೇವೆ; ಬಾಲಕಿಯರು ಹೊತ್ತು ತಂದ ನೀರಲ್ಲಿ ಮಾದಪ್ಪನಿಗೆ ಅಭಿಷೇಕ


ಇಂಗ್ಲಿಷ್, ಗಣಿತ ಸಮಾಜ ಹೀಗೆ ಎಲ್ಲ ವಿಷಯಗಳನ್ನ ಚಟುವಟಿಕೆಗಳಲ್ಲೆ ಹೇಳಿಕೊಡುತ್ತಿರೋದು ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಭಾವ ಬೀರಿ ಬೇಗ ಅರ್ಥಮಾಡಿಕೊಳ್ಳಲು ಹಾಗೂ ಅವರ ಮನಸಿನ್ನಲಿ ಅಚ್ಚಳಿಯದೆ ಉಳಿಯಲು ಈ ಒಂದು ಶಿಕ್ಷಣ ಮಾದರಿ ಸಹಕಾರಿಯಾಗುತ್ತದೆ ಎನ್ನುತ್ತಿದ್ದಾರೆ ಶಿಕ್ಷಕಿಯರು.


gurukul education in kodagu rsk mrq
ಶಾಲೆ


ಒಟ್ಟಿನಲ್ಲಿ ವಿನೂತನ ಮಾದರಿಯ ಶಿಕ್ಷಣ ನೀಡಲು ಕೈ ಹಾಕಿದ ವಿದ್ಯಾಸಂಸ್ಥೆ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುತ್ತಿದ್ದು ವಿನೂತನ ಮಾದರಿ ಶಿಕ್ಷಣಕ್ಕೆ ತಮ್ಮ ಮಕ್ಕಳನ್ನೂ ಸೇರಿಸಲು ಪೋಷಕರು ಕೂಡ ಉತ್ಸುಕರಾಗಿರುವುದಂತು ಸತ್ಯ.

Published by:Mahmadrafik K
First published: