• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Karnataka Election 2023: ತಪ್ಪಿದ ಬಿಜೆಪಿ ಟಿಕೆಟ್, ಕಲಬುರಗಿ-ಯಾದಗಿರಿಯಲ್ಲಿ ಬಂಡಾಯ! ತೆನೆ ಹೊತ್ತ ಗುರುಪಾಟೀಲ್, ದೊಡ್ಡಪ್ಪಗೌಡ ಪಾಟೀಲ್

Karnataka Election 2023: ತಪ್ಪಿದ ಬಿಜೆಪಿ ಟಿಕೆಟ್, ಕಲಬುರಗಿ-ಯಾದಗಿರಿಯಲ್ಲಿ ಬಂಡಾಯ! ತೆನೆ ಹೊತ್ತ ಗುರುಪಾಟೀಲ್, ದೊಡ್ಡಪ್ಪಗೌಡ ಪಾಟೀಲ್

ಮಾಜಿ ಶಾಸಕರಿಗೆ ಜೆಡಿಎಸ್​ಗಾಳ!

ಮಾಜಿ ಶಾಸಕರಿಗೆ ಜೆಡಿಎಸ್​ಗಾಳ!

ಜೇವರ್ಗಿ ಜೆಡಿಎಸ್ ಅಭ್ಯರ್ಥಿಯಾಗಿ ದೊಡ್ಡಪ್ಪಗೌಡ ಪಾಟೀಲ್ ಅಖಾಡಕ್ಕೆ ಧುಮುಕಲಿದ್ದು, ಇಂದು ಸಂಜೆ ಬಿಡುಗಡೆಯಾದ ಪಟ್ಟಿಯಲ್ಲಿ ಜೆಡಿಎಸ್​ ಪಕ್ಷ ದೊಡ್ಡಪ್ಪಗೌಡ ಪಾಟೀಲ್ ಅವರಿಗೆ ಟಿಕೆಟ್ ಘೋಷಣೆ ಮಾಡಿದೆ.

 • News18 Kannada
 • 4-MIN READ
 • Last Updated :
 • Yadgir, India
 • Share this:

ಯಾದಗಿರಿ: ರಾಜ್ಯದಲ್ಲಿ ಪಕ್ಷಾಂತರ ಪರ್ವ ಜೋರಾಗಿದೆ. ವಿಧಾನಸಭೆ ಚುನಾವಣೆ (Karnataka Assembly Election) ಹೊತ್ತಿನಲ್ಲಿ ಟಿಕೆಟ್ ಸಿಗದ ಹಿನ್ನೆಲೆ ಅದೆ ರೀತಿ ಗೆಲ್ಲುವ ಲೆಕ್ಕಾಚಾರ ಅರಿತು ರಾಜಕೀಯ ನಾಯಕರು ಈಗ ಪಕ್ಷಾಂತರ ಪರ್ವ ಸುರು ಮಾಡಿಕೊಂಡಿದ್ದಾರೆ. ಕಲ್ಯಾಣ ಕರ್ನಾಟಕ (Kalyana Karnataka) ಭಾಗದಲ್ಲಿ ಕೂಡ ಪಕ್ಷಾಂತರ ರಾಜಕೀಯ ಬೆಳೆವಣಿಗೆ ನಡೆದಿದೆ. ಕೋಲಿ ಸಮಾಜದ (Koli Community) ಮುಖಂಡ ಬಾಬುರಾವ್ ಚಿಂಚನಸೂರ (Baburao Chinchansur ) ಅವರು ಬಿಜೆಪಿ (BJP) ತೊರೆದು ಕಾಂಗ್ರೆಸ್ (Congress) ಸೇರ್ಪಡೆಯಾಗಿದ್ದರು. ಚಿಂಚನಸೂರ ಅವರು ಈಗ ಗುರುಮಠಕಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ.


ಮಾಜಿ ಶಾಸಕರಿಗೆ ಜೆಡಿಎಸ್​ಗಾಳ!


ಕಲಬುರಗಿ ಜಿಲ್ಲೆಯ ಜೇವರ್ಗಿ ಕ್ಷೇತ್ರದ ಬಿಜೆಪಿ ಟಿಕೆಟ್ ವಂಚಿತ ದೊಡ್ಡಪ್ಪಗೌಡ ಪಾಟೀಲ್ ಅವರು ಬಿಜೆಪಿ ಟಿಕೆಟ್ ಕೈ ತಪ್ಪಿದ್ದ ಹಿನ್ನೆಲೆ ಅಸಮಾಧಾನಗೊಂಡಿದ್ದರು. ಬೆಂಬಲಿಗರ ಜೊತೆ ಸಭೆ ನಡೆಸಿ ಬೆಂಬಲಿಗರ ಅಭಿಪ್ರಾಯದಂತೆ ಇಂದು ಕಮಲ ತೊರೆದು ಜೆಡಿಎಸ್ ಸೇರ್ಪಡೆಯಾಗಿದ್ದಾರೆ. ಜೇವರ್ಗಿ ಜೆಡಿಎಸ್ ಅಭ್ಯರ್ಥಿಯಾಗಿ ಪಾಟೀಲ್ ಅಖಾಡಕ್ಕೆ ಧುಮುಕಲಿದ್ದು, ಇಂದು ಸಂಜೆ ಬಿಡುಗಡೆಯಾದ ಪಟ್ಟಿಯಲ್ಲಿ ಜೆಡಿಎಸ್​ ಪಕ್ಷ ದೊಡ್ಡಪ್ಪಗೌಡ ಪಾಟೀಲ್ ಅವರಿಗೆ ಟಿಕೆಟ್ ಘೋಷಣೆ ಮಾಡಿದೆ.


ಮಾಜಿ ಶಾಸಕರಿಗೆ ಜೆಡಿಎಸ್​ಗಾಳ!


ಇದನ್ನೂ ಓದಿ: JDS Candidates List 2023: ಹಾಸನದಲ್ಲಿ ಭವಾನಿ ರೇವಣ್ಣ ಕೈತಪ್ಪಿದ ಟಿಕೆಟ್! ಜೆಡಿಎಸ್‌ ಅಭ್ಯರ್ಥಿಗಳ 2ನೇ ಲಿಸ್ಟ್ ರಿಲೀಸ್


2008 ರಲ್ಲಿ ದೊಡ್ಡಪ್ಪಗೌಡ ಪಾಟೀಲ್ ಅವರು ಬಿಜೆಪಿ ಪಕ್ಷದಿಂದ ಸ್ಪರ್ಧೆ ಮಾಡಿ ಧರಂ ಸಿಂಗ್ ವಿರುದ್ಧ ಸ್ಪರ್ಧೆ ಮಾಡಿ ಗೆಲುವು ಸಾಧಿಸಿದರು. ಈಗ ಮತ್ತೆ 2023ರ ಚುನಾವಣೆಯಲ್ಲಿ ಸ್ಪರ್ಧೆಗೆ ಮುಂದಾಗಿದ್ದಾರೆ. ಈ ಬಗ್ಗೆ ನ್ಯೂಸ್ 18ಗೆ ದೊಡ್ಡಪ್ಪಗೌಡ ಪಾಟೀಲ್ ಮಾತನಾಡಿ, ಜೆಡಿಎಸ್ ಪಕ್ಷದ ತತ್ವ ಸಿದ್ದಾಂತಕ್ಕೆ ಬದ್ಧನಾಗಿ ಕ್ಷೇತ್ರದ ಜನರ ಅಭಿಪ್ರಾಯದಂತೆ ಎಚ್.ಡಿ ಕುಮಾರಸ್ವಾಮಿ ಅವರ ಅವರ ನೇತೃತ್ವದಲ್ಲಿ ಜೆಡಿಎಸ್ ಸೇರಿದ್ದೇನೆ. ಜೆಡಿಎಸ್ ಸರಕಾರ ಅಧಿಕಾರಕ್ಕೆ ಬಂದರೆ ಅನೇಕ ನೀರಾವರಿ ಯೋಜನೆ ಸೇರಿ ಜನಪರ ಯೋಜನೆ ಜಾರಿಗೆ ತರುವ ವಿಶ್ವಾಸವಿದೆ ಎಂದರು.


ಗುರು ಪಾಟೀಲ್ ಜೆಡಿಎಸ್ ಗೆ ಜಂಪ್!


ಯಾದಗಿರಿ ಜಿಲ್ಲೆಯ ಶಹಾಪುರ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ನಿರೀಕ್ಷೆಯಲ್ಲಿದ್ದ ಮಾಜಿ ಶಾಸಕ ಗುರುಲಿಂಗಪ್ಪಪಾಟೀಲ್ ಅವರಿಗೆ ಬಿಜೆಪಿ ಶಾಕ್ ನೀಡಿತ್ತು. ಬಿಜೆಪಿ ಪಕ್ಷವು ಅಮೀನ ರೆಡ್ಡಿ ಯಾಳಗಿಗೆ ಟಿಕೆಟ್ ಘೋಷಣೆ ಮಾಡಿತ್ತು. ಅಮೀನ ರೆಡ್ಡಿ ಯಾಳಗಿಗೆ ಟಿಕೆಟ್ ಘೋಷಣೆ ಮಾಡಿದ ನಂತರ ಶಹಾಪುರ ಬಿಜೆಪಿಯಲ್ಲಿ ಅಸಮಾಧಾನವಾಗಿತ್ತು.


ಬಿಜೆಪಿ ಟಿಕೆಟ್ ವಂಚಿತ ಗುರು ಪಾಟೀಲ್ ಶಿರವಾಳ ಅವರು ಅಸಮಾಧಾನಗೊಂಡು ಬೆಂಬಲಿಗರ ಹಾಗೂ ಕ್ಷೇತ್ರದ ಜನರ ಜೊತೆ ಸಭೆ ನಡೆಸಿದರು. ಕ್ಷೇತ್ರದ ಬೆಂಬಲಿಗರು ಮತ್ತೆ ಚುನಾವಣೆಗೆ ಸ್ಪರ್ಧೆ ಮಾಡಬೇಕೆಂದು ಒತ್ತಡ ಹಾಕಿದರು. ನಂತರ ಬೆಂಬಲಿಗರ ಒತ್ತಡಕ್ಕೆ ಮಣಿದು ಚುನಾವಣೆಗೆ ಸ್ಪರ್ಧೆ ಮಾಡುವ ಬಗ್ಗೆ ಪ್ರಕಟ ಮಾಡಿದರು. ಇಂದು ಗುರು ಪಾಟೀಲ್ ಶಿರವಾಳ ಅವರು ಬೆಂಗಳೂರುನಲ್ಲಿ ಎಚ್.ಡಿ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಜೆಡಿಎಸ್ ಸೇರ್ಪಡೆಯಾಗಿದ್ದಾರೆ. ಶಹಾಪುರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಗುರು ಪಾಟೀಲ್ ಸ್ಪರ್ಧೆ ಮಾಡಲಿದ್ದಾರೆ.


ಇದನ್ನೂ ಓದಿ: Bavani Revanna: ಭವಾನಿಗೆ ಟಿಕೆಟ್ ಘೋಷಿಸದ ಎಚ್‌ಡಿಕೆ! ಅತ್ತಿಗೆ-ಮೈದುನನ ಕದನದಲ್ಲಿ ಗೆದ್ದಿದ್ದು ಯಾರು?


ಗುರು ಪಾಟೀಲ್ ಅವರು 2013 ರ ವಿಧಾನಸಭೆ ಚುನಾವಣೆಯಲ್ಲಿ ಕೆಜೆಪಿಯಿಂದ ಸ್ಪರ್ಧೆ ಮಾಡಿ ಗೆಲುವು ಸಾಧಿಸಿದರು. ನಂತರ ಬಿಜೆಪಿ ಸೇರ್ಪಡೆಯಾಗಿದರು. ಕಳೆದ 2018ರ ಚುನಾವಣೆಯಲ್ಲಿ ಗುರು ಪಾಟೀಲ್ ಅವರು ಸೋತಿದ್ದರು. ಕಾಂಗ್ರೆಸ್ ನ ಶರಣಬಸ್ಸಪ್ಪಗೌಡ ದರ್ಶನಾಪುರ ವಿಜಯ ಸಾಧಿಸಿದರು.


top videos  ಈ ಬಗ್ಗೆ ನ್ಯೂಸ್ 18ಗೆ ಗುರು ಪಾಟೀಲ್ ಮಾತನಾಡಿ, ಶಹಾಪುರ ಕ್ಷೇತ್ರದ ಜನರ ಇಚ್ಛೆಯಂತೆ ಜೆಡಿಎಸ್ ಸೇರಿದ್ದೇನೆ. ಕ್ಷೇತ್ರದ ಜನರ ಮನೆಯ ಮಗನಾಗಿ ನಾನು ಕೆಲಸ ಮಾಡಲು ಬದ್ಧನಾಗಿದ್ದಾನೆ. ಶಹಾಪುರ ಕ್ಷೇತ್ರದ ಅಭಿವೃದ್ಧಿ ಮಾಡುವ ಕನಸು ಹೊತ್ತು ಮತ್ತೆ ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದೇನೆ. ಕ್ಷೇತ್ರದ ಜನರು ಈಗ ಬದಲಾವಣೆ ಬಯಸಿದ್ದಾರೆ. ಜನರ ಆಶೀರ್ವಾದದಿಂದ ಗೆಲ್ಲುವ ನಿರೀಕ್ಷೆಯಿದೆ ಎಂದು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಶಹಾಪುರ ಕ್ಷೇತ್ರವು ಕಾಂಗ್ರೆಸ್​​ನ ಭದ್ರಕೋಟೆಯಾಗಿದೆ. ಶಹಾಪುರ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಬಿಳಲಿದೆ. ಆದರೆ, ಮತದಾರರು ಯಾರಿಗೆ ಮತ ಹಾಕಿ ಗೆಲ್ಲಿಸುತ್ತಾರೆ ಫಲಿತಾಂಶ ನಂತರ ಗೊತ್ತಾಗಲಿದೆ.

  First published: