• Home
 • »
 • News
 • »
 • state
 • »
 • Gurumitkal JDS Candidate: ನಿನ್ನೆ ಜೆಡಿಎಸ್ ಅಭ್ಯರ್ಥಿ ಘೋಷಣೆ, ಇಂದು ಬದಲಾವಣೆ! ಗುರುಮಿಟ್ಕಲ್‌ನಲ್ಲಿ ತಂದೆ ಬದಲು ಮಗನಿಗೆ ಟಿಕೆಟ್

Gurumitkal JDS Candidate: ನಿನ್ನೆ ಜೆಡಿಎಸ್ ಅಭ್ಯರ್ಥಿ ಘೋಷಣೆ, ಇಂದು ಬದಲಾವಣೆ! ಗುರುಮಿಟ್ಕಲ್‌ನಲ್ಲಿ ತಂದೆ ಬದಲು ಮಗನಿಗೆ ಟಿಕೆಟ್

ಶಾಸಕ ನಾಗನಗೌಡ ಕಂದಕೂರ ಅವರ ಪುತ್ರ ಶರಣಗೌಡ ಕುಂದಕೂರ

ಶಾಸಕ ನಾಗನಗೌಡ ಕಂದಕೂರ ಅವರ ಪುತ್ರ ಶರಣಗೌಡ ಕುಂದಕೂರ

ಜೆಡಿಎಸ್‌ನ 93 ಅಭ್ಯರ್ಥಿಗಳ ಪಟ್ಟಿ ನಿನ್ನೆಯೇ ರಿಲೀಸ್ ಆಗಿದೆ. ಆದರೆ ಇಂದು ಒಂದು ಕ್ಷೇತ್ರದ ಅಭ್ಯರ್ಥಿಯನ್ನು ಬದಲಾಯಿಸಿ, ಮತ್ತೊಂದು ಪಟ್ಟಿ ರಿಲೀಸ್ ಮಾಡಲಾಗಿದೆ. ಯಾದಗಿರಿ ಜಿಲ್ಲೆಯ ಗುರು ಮಿಟಕಲ್ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯನ್ನು ಬದಲಾಯಿಸಲಾಗಿದೆ. ಈ ಕುರಿತಂತೆ ಜೆಡಿಎಸ್ ಇಂದು ಹೊಸ ಪ್ರಕಟಣೆ ಹೊರಡಿಸಿದೆ.

ಮುಂದೆ ಓದಿ ...
 • News18 Kannada
 • 4-MIN READ
 • Last Updated :
 • Karnataka, India
 • Share this:

ಯಾದಗಿರಿ: ಮುಂಬರುವ ವಿಧಾನಸಭಾ ಚುನಾವಣೆಗೆ (assembly elections) ಬಿಜೆಪಿ (BJP), ಕಾಂಗ್ರೆಸ್ (Congress) ಹಾಗೂ ಜೆಡಿಎಸ್ (JDS) ಪಕ್ಷಗಳು ಸಜ್ಜಾಗುತ್ತಿವೆ. ಅದರಲ್ಲೂ ಒಂದು ಹೆಜ್ಜೆ ಮುಂದೆ ಇಟ್ಟಿರುವ ಜೆಡಿಎಸ್ (JDS), ಈಗಾಗಲೇ 93 ಅಭ್ಯರ್ಥಿಗಳ ಪಟ್ಟಿಯನ್ನು (Candidates List) ರಿಲೀಸ್ ಮಾಡಿದೆ. ಎಚ್‌ಡಿ ಕುಮಾರಸ್ವಾಮಿ (HD Kumaraswamy), ನಿಖಿಲ್ ಕುಮಾರಸ್ವಾಮಿ (Nikhil Kumaraswamy), ಜಿಟಿ ದೇವೇಗೌಡ (GT Devegowda), ಅವರ ಪುತ್ರ ಹರೀಶ್ ಗೌಡ (Harish Gowda) ಸೇರಿದಂತೆ ಒಟ್ಟು 93 ಅಭ್ಯರ್ಥಿಗಳ ಪಟ್ಟಿ ನಿನ್ನೆಯೇ ರಿಲೀಸ್ ಆಗಿದೆ. ಆದರೆ ಇಂದು ಒಂದು ಕ್ಷೇತ್ರದ ಅಭ್ಯರ್ಥಿಯನ್ನು ಬದಲಾಯಿಸಿ, ಮತ್ತೊಂದು ಪಟ್ಟಿ ರಿಲೀಸ್ ಮಾಡಲಾಗಿದೆ. ಯಾದಗಿರಿ (Yadagiri) ಜಿಲ್ಲೆಯ ಗುರು ಮಿಟಕಲ್ (Guru Mitkal) ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯನ್ನು ಬದಲಾಯಿಸಲಾಗಿದೆ. ಈ ಕುರಿತಂತೆ ಜೆಡಿಎಸ್ ಇಂದು ಹೊಸ ಪ್ರಕಟಣೆ ಹೊರಡಿಸಿದೆ.


ಗುರು ಮಠಕಲ್ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಬದಲಾವಣೆ


ನಿನ್ನೆ 93 ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ, ಇಂದು ಗುರುಮಠಕಲ್ ಜೆಡಿಎಸ್ ಅಭ್ಯರ್ಥಿ ಹೆಸರು ಬದಲಾವಣೆ ಮಾಡಲಾಗಿದೆ. ನಿನ್ನೆ ಗುರುಮಠಕಲ್ ಕ್ಷೇತ್ರದಲ್ಲಿ ಹಾಲಿ ಶಾಸಕ ನಾಗನಗೌಡ ಕಂದಕೂರು ಅವರಿಗೆ ಜೆಡಿಎಸ್ ಟಿಕೆಟ್ ನೀಡುವುದಾಗಿ ಅಧಿಕೃತ ಘೋಷಣೆ ಹೊರಬಿದ್ದಿತ್ತು. ಆದರೆ ಇಂದು ಗುರು ಮಿಟಕಲ್ ಕ್ಷೇತ್ರದ ಅಭ್ಯರ್ಥಿಗಳ ಹೆಸರಲ್ಲಿ ಬದಲಾವಣೆ ಆಗಿದೆ.


ಜೆಡಿಎಸ್ ಹೊಸ ಪಟ್ಟಿ


ನಾಗನಗೌಡ ಕಂದಕೂರು ಬದಲಿಗೆ ಪುತ್ರನಿಗೆ ಟಿಕೆಟ್


ನಿನ್ನೆ ಶಾಸಕ ನಾಗನಗೌಡ ಕಂದಕೂರು ಅವರಿಗೆ ಟಿಕೆಟ್ ನೀಡುವುದಾಗಿ ಘೋಷಿಸಲಾಗಿತ್ತು. ಆದರೆ ಇಂದು ನಾಗನಗೌಡ ಕಂದಕೂರು ಬದಲಿಗೆ ಅವರ ಪುತ್ರ ಶರಣಗೌಡ ಕಂದಕೂರ ಅವರಿಗೆ ಜೆಡಿಎಸ್ ಅಭ್ಯರ್ಥಿಯಾಗಿ ಘೋಷಣೆ ಮಾಡಲಾಗಿದೆ.


ಶರಣಗೌಡ ಕಂದಕೂರು


ಇದನ್ನೂ ಓದಿ: JDS Candidates List: ಜೆಡಿಎಸ್ ಅಭ್ಯರ್ಥಿಗಳ ಲಿಸ್ಟ್‌ನಲ್ಲಿ ಹಾಸನ ಸ್ಪರ್ಧಿಗಳ ಹೆಸರೇ ಮಾಯ! ಮಗನಿಗೆ ಟಿಕೆಟ್ ಕೊಡಿಸುವಲ್ಲಿ ಜಿಟಿಡಿ ಸಕ್ಸಸ್


ವಯಸ್ಸಿನ ಕಾರಣದಿಂದ ನಾಗನಗೌಡ ಸ್ಪರ್ಧೆಗೆ ನಿರಾಕರಣೆ


ಶಾಸಕ ನಾಗನಗೌಡ ಕಂದಕೂರು ಅವರು ಚುನಾವಣೆ ಸ್ಪರ್ಧೆ ಮಾಡಲು ನಿರಾಕರಣೆ, 77 ವಯಸ್ಸಿನ ಶಾಸಕ ನಾಗನಗೌಡ ಕಂದಕೂರು, ಪುತ್ರನಿಗೆ ಟಿಕೆಟ್ ನೀಡಬೇಕೆಂದು ಜೆಡಿಎಸ್ ನಾಯಕರಿಗೆ ಕೇಳಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಶರಣಗೌಡ ಕಂದಕೂರು ಅವರನ್ನು 2023ರ ಚುನಾವಣೆಯ ಗುರುಮಠಕಲ್ ಜೆಡಿಎಸ್ ಅಭ್ಯರ್ಥಿಯಾಗಿ ಘೋಷಣೆ ಮಾಡಲಾಗಿದೆ. ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಅವರು ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ.


ಶಾಸಕ ನಾಗನಗೌಡ ಕಂದಕೂರು


ನಿನ್ನೆಯೇ ಜೆಡಿಎಸ್ ಪಟ್ಟಿ ರಿಲೀಸ್


ಎಲೆಕ್ಷನ್​ಗೆ ಭರ್ಜರಿ ತಯಾರಿ ನಡೆಸುತ್ತಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಬೆಂಗಳೂರಿನಲ್ಲಿ ಪಟ್ಟಿ ಬಿಡುಗಡೆ ಮಾಡಿದ್ದರು. ಮುನಿಸಿಕೊಂಡಿದ್ದ ಜಿಟಿಡಿಗೆ ಬಂಪರ್ ಲಾಟರಿ ಹೊಡೆದಿತ್ತು. ಅಪ್ಪ-ಮಗ ಇಬ್ಬರಿಗೂ ಜೆಡಿಎಸ್​ ಟಿಕೆಟ್  ನೀಡಲಾಗುತ್ತು. ಹುಣಸೂರಿಂದ ಹರೀಶ್ ಗೌಡ, ಚಾಮುಂಡೇಶ್ವರಿ ಕ್ಷೇತ್ರದಿಂದ ಜಿಟಿ ದೇವೇಗೌಡಗೆ ಟಿಕೆಟ್​ ನೀಡಲಾಗಿದೆ. ಮಗನಿಗೆ ಅಸೆಂಬ್ಲಿ ಎಲೆಕ್ಷನ್ ಟಿಕೆಟ್​ ಕೊಡಿಸುವಲ್ಲಿ ಜಿಟಿಡಿ ಸಕ್ಸಸ್​ ಆಗಿದ್ದಾರೆ.


ಮೊದಲ ಹಂತದಲ್ಲಿ 93 ಮಂದಿಗೆ ಟಿಕೆಟ್


ಮೊದಲ ಹಂತದಲ್ಲಿ 93 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ. ಬೆಂಗಳೂರಲ್ಲಿ 8 ಕ್ಷೇತ್ರಗಳಿಗೆ ಮಾತ್ರ ಅಭ್ಯರ್ಥಿಗಳ ಪ್ರಕಟ ಮಾಡಲಾಗಿದೆ. ರಾಮನಗರದಲ್ಲಿ ಮಗನಿಗಾಗಿ ಅನಿತಾ ಕುಮಾರಸ್ವಾಮಿ ಕ್ಷೇತ್ರ ತ್ಯಾಗ ಮಾಡಿದ್ದಾರೆ. ರಾಮನಗರದ ಟಿಕೆಟ್​ನಲ್ಲಿ ನಿಖಿಲ್​ ಕುಮಾರಸ್ವಾಮಿಗೆ ನೀಡೋದಾಗಿ ಹಿಂದೆ ಅನಿತಾ ಕುಮಾರಸ್ವಾಮಿ ಘೋಷಿಸಿದ್ರು. ಇದೀಗ ನಿನ್ನೆ ಅಧಿಕೃತವಾಗಿ ಪಟ್ಟಿಯಲ್ಲಿ ಪ್ರಕಟಿಸಲಾಗಿದೆ.


ಯಾರ್ಯಾರಿಗೆ ಜೆಡಿಎಸ್ ಟಿಕೆಟ್?


ಚನ್ನಪಟ್ಟಣ ಅಸೆಂಬ್ಲಿ ಕ್ಷೇತ್ರ- H.D.ಕುಮಾರಸ್ವಾಮಿ, ರಾಮನಗರ ಕ್ಷೇತ್ರ - ನಿಖಿಲ್ ಕುಮಾರಸ್ವಾಮಿ, ಹುಣಸೂರು ಕ್ಷೇತ್ರ - ಹರೀಶ್​ ಗೌಡ, ಜಿ.ಟಿ. ದೇವೇಗೌಡ ಮಗ ಹರೀಶ್ ಗೌಡಗೆ ಟಿಕೆಟ್, ಚಾಮುಂಡೇಶ್ವರಿ ಕ್ಷೇತ್ರ- ಜಿ.ಟಿ.ದೇವೇಗೌಡ, ನಾಗಮಂಗಲ ಕ್ಷೇತ್ರ- ಸುರೇಶ್ ಗೌಡ, ಶೃಂಗೇರಿ ಕ್ಷೇತ್ರ- ಸುಧಾಕರ್ ಶೆಟ್ಟಿ, ವರುಣಾ ವಿಧಾನಸಭೆ ಕ್ಷೇತ್ರ- ಅಭಿಷೇಕ್, ಬೆಂಗಳೂರು ದಕ್ಷಿಣ- ಪ್ರಭಾಕರ್ ರೆಡ್ಡಿ, ದೇವನಹಳ್ಳಿ- ನಿಸರ್ಗ ನಾರಾಯಣಸ್ವಾಮಿ, ಖಾನಾಪುರ- ನಾಸಿರ್​ ಬಾಪುಲ್​ಸಾಬ ಭಗವಾನ, ಬೈಲಹೊಂಗಲ ಕ್ಷೇತ್ರ- ಶಂಕರ ಮಾಡಲಗಿ, ಕೃಷ್ಣರಾಜ ವಿಧಾನಸಭೆ ಕ್ಷೇತ್ರ- ಮಲ್ಲೇಶ್, ಹನೂರು ಅಸೆಂಬ್ಲಿ ಕ್ಷೇತ್ರ- ಮಂಜುನಾಥ್, ಬೀದರ್ ದಕ್ಷಿಣ ಕ್ಷೇತ್ರ- ಬಂಡೆಪ್ಪ ಕಾಶೆಂಪೂರ, ದೇವರಹಿಪ್ಪರಗಿ ಕ್ಷೇತ್ರ - ರಾಜುಗೌಡ ಪಾಟೀಲ್, ಮಾನ್ವಿ ಕ್ಷೇತ್ರ - ರಾಜಾವೆಂಕಟಪ್ಪ ನಾಯಕಗೆ ಟಿಕೆಟ್ ಘೋಷಿಸಲಾಗಿದೆ.


ಇದನ್ನೂ ಓದಿ: Varthur Prakash : ವರ್ತೂರ್‌ ಪ್ರಕಾಶ್ ಹುಟ್ಟುಹಬ್ಬಕ್ಕೆ ಭರ್ಜರಿ ಬಾಡೂಟ! ಬಿರಿಯಾನಿಗಾಗಿ ಮುಗಿಬಿದ್ದವರಿಗೆ ಪೊಲೀಸರ ಲಾಠಿ ರುಚಿ!


ಇನ್ನು ಕೆ.ಆರ್.ನಗರ ಕ್ಷೇತ್ರ- ಸಾ.ರಾ.ಮಹೇಶ್, ಮದ್ದೂರು ಅಸೆಂಬ್ಲಿ ಕ್ಷೇತ್ರ- ಡಿ.ಸಿ.ತಮ್ಮಣ್ಣ, ಶ್ರೀರಂಗಪಟ್ಟಣ ಕ್ಷೇತ್ರ- ಡಾ.ರವೀಂದ್ರ ಶ್ರೀಕಂಠಯ್ಯ, ಮೇಲುಕೋಟೆ ಕ್ಷೇತ್ರ - ಸಿ.ಎಸ್.ಪುಟ್ಟರಾಜು, ಮಂಡ್ಯ ಅಸೆಂಬ್ಲಿ ಕ್ಷೇತ್ರ- ಎಂ.ಶ್ರೀನಿವಾಸ್, ರಾಜಾಜಿನಗರ ಕ್ಷೇತ್ರ- ಗಂಗಾಧರ್ ಮೂರ್ತಿ, ಮಳವಳ್ಳಿ ಕ್ಷೇತ್ರ- ಡಾ.ಕೆ.ಅನ್ನದಾನಿ, ಕೆ.ಆರ್.ಪೇಟೆ ಕ್ಷೇತ್ರ - ಹೆಚ್.ಟಿ.ಮಂಜುನಾಥ್, ಗಾಂಧಿನಗರ ಕ್ಷೇತ್ರ - ವಿ.ನಾರಾಯಣಸ್ವಾಮಿ, ಕೆಜಿಎಫ್​ ಅಸೆಂಬ್ಲಿ ಕ್ಷೇತ್ರ- ರಮೇಶ್​ಬಾಬು ಹಾಗೂ ಮೂಡಿಗೆರೆ ಕ್ಷೇತ್ರ- ಬಿ.ಬಿ.ನಿಂಗಯ್ಯ ಹೆಸರು ಫೈನಲ್ ಆಗಿದೆ.

Published by:Annappa Achari
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು