Chamarajanagar: ಅಂಬುಲೆನ್ಸ್‌ನಲ್ಲಿ ಆಕ್ಸಿಜನ್ ಕೊರತೆಯಿಂದ ಸಾವು ಆಗಿಲ್ಲ; ಜಿಲ್ಲಾಧಿಕಾರಿಗಳ ಸ್ಪಷ್ಟನೆ

ಅಂಬುಲೆನ್ಸ್ ನಲ್ಲಿ ಮೈಸೂರಿಗೆ ಸಾಗಿಸುವಾಗ ಚಿತ್ರದುರ್ಗ ಮೂಲದ ಯುವಕ ಅನಿಲ್ ಕುಮಾರ್ ಮೃತಪಟ್ಟಿದ್ದರು. ಅಂಬುಲೆನ್ಸ್‌ನಲ್ಲಿ ಆಕ್ಸಿಜನ್ ಕೊರತೆಯಿಂದ ಸಾವು ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆ ಜಿಲ್ಲಾಧಿಕಾರಿಗಳು ಮಾಧ್ಯಮ ಪ್ರಕಟನೆ ಹೊರಡಿಸುವ ಮೂಲಕ ಎಲ್ಲಾ ಅನುಮಾನಗಳಿಗೆ ತೆರೆ ಎಳಯುವ ಪ್ರಯತ್ನ ಮಾಡಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಅಂಬುಲೆನ್ಸ್​ನಲ್ಲಿ (Ambulance) ಆಕ್ಸಿಜನ್ ಕೊರತೆಯಿಂದ (Oxygen Shortage) ಅನಿಲ್ ಕುಮಾರ್ ಸಾವನ್ನಪ್ಪಿಲ್ಲ. ಯುವಕನ ಸಾವಿಗೆ ತೀವ್ರ ಹೃದಯಾಘಾತವೇ (Heart Attack) ಕಾರಣ. ಅಂಬುಲೆನ್ಸ್‌ ವಾಹನದ ಆಕ್ಸಿಜನ್ ಕೊರತೆ ಯುವಕನ ಸಾವಿಗೆ ಕಾರಣವಲ್ಲ ಎಂದು ಚಾಮರಾಜನಗರ (Chamarajanagara) ಜಿಲ್ಲಾಧಿಕಾರಿ ಚಾರುಲತಾ ಸೋಮಲ್ (DC Charulatha Somal) ಮಾಧ್ಯಮ‌ ಪ್ರಕಟಣೆ ಹೊರಡಿಸಿದ್ದಾರೆ. ರೋಗಿ (Patient) ಉಳಿಸಲು ಸರ್ವ ಪ್ರಯತ್ನ ನಡೆಸಲಾಗಿದೆ. ಕೊನೆಯದಾಗಿ ಇಸಿಜಿ (ECG) ಮಾಡಲಾಗಿದ್ದು, ರೋಗಿಯ ಹೃದಯ ಬಡಿತ (Patient Heartbeat) ಸಂಪೂರ್ಣ ಸ್ತಬ್ದವಾಗಿರುವುದು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ರೋಗಿಯ ಸಾವಿಗೆ ಹೃದಯಾಘಾತ ಎಂದು ತಿಳಿಸಿ ಸಂಬಂಧಿಕರಿಗೆ ಮೃತದೇಹ ಹಸ್ತಾಂತರಿಸಲಾಗಿದೆ.

  ಸೋಮವಾರ ಸಂಜೆ ಅಂಬುಲೆನ್ಸ್ ನಲ್ಲಿ ಮೈಸೂರಿಗೆ ಸಾಗಿಸುವಾಗ ಚಿತ್ರದುರ್ಗ ಮೂಲದ ಯುವಕ ಅನಿಲ್ ಕುಮಾರ್ ಮೃತಪಟ್ಟಿದ್ದರು. ಅಂಬುಲೆನ್ಸ್‌ನಲ್ಲಿ ಆಕ್ಸಿಜನ್ ಕೊರತೆಯಿಂದ ಸಾವು ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆ ಜಿಲ್ಲಾಧಿಕಾರಿಗಳು ಮಾಧ್ಯಮ ಪ್ರಕಟನೆ ಹೊರಡಿಸುವ ಮೂಲಕ ಎಲ್ಲಾ ಅನುಮಾನಗಳಿಗೆ ತೆರೆ ಎಳಯುವ ಪ್ರಯತ್ನ ಮಾಡಿದ್ದಾರೆ.

  ಈ ಘಟನೆ ಗುಂಡ್ಲುಪೇಟೆ ತಾಲೂಕು ಆಸ್ಪತ್ರೆಯಲ್ಲಿ (Gundlupet Taluka Hospital) ನಡೆದಿದೆ. ಗುಂಡ್ಲುಪೇಟೆ ಗೋಪಾಲಸ್ವಾಮಿ ಬೆಟ್ಟಕ್ಕೆ ಪತ್ನಿ ಜೊತೆ ಬಂದಿದ್ದ ಅನಿಲ್ ಕುಮಾರ್‌ ಬಂದಿದ್ರು. ಬೆಟ್ಟದಿಂದ ವಾಪಸ್ ಬರ್ತಿದ್ದಾಗ ಅನಿಲ್‌ಗೆ ಉಸಿರಾಟದ ತೊಂದರೆ ಉಂಟಾಗಿದೆ. ಅಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆ ತರುವ ಮಾರ್ಗ ಮಧ್ಯೆ ಅನಿಲ್ ಸಾವನ್ನಪ್ಪಿದ್ದರು.

  ಬಳ್ಳಾರಿ ವಿಮ್ಸ್  ದುರಂತದ ಬಗ್ಗೆ ಸಚಿವ ಸುಧಾಕರ್ ಸ್ಪಷ್ಟನೆ

  ಬಳ್ಳಾರಿಯ ವಿಮ್ಸ್​ ಆಸ್ಪತ್ರೆಯಲ್ಲಿ (Ballary VIMS) ಸಾವಾಗಿರೋದು ಇಬ್ಬರು ಮಾತ್ರ ಮತ್ತೊಬ್ಬರು ವೆಂಟಿಲೇಟರ್​ನಲ್ಲೇ ಇರಲಿಲ್ಲ ಎನ್ನುವ ಮಾಹಿತಿ ನೀಡಿದ್ದಾರೆ. ವಿದ್ಯುತ್ ಸಮಸ್ಯೆಯಿಂದ ಘಟನೆ ಆಗಿದ್ದರೆ ಉಳಿದವರಿಗೂ ಸಮಸ್ಯೆಯಾಗಬೇಕಿತ್ತು. ವೆಂಟಿಲೇಟರ್​ನಲ್ಲಿದ್ದ ಉಳಿದ ರೋಗಿಗಳಿಗೂ ಸಮಸ್ಯೆಯಾಗುತ್ತಿತ್ತು.

  ಇದನ್ನೂ ಓದಿ:  Serial Death: ಕಾಡಿನಲ್ಲಿದ್ದಾಗ ಎಲ್ಲವೂ ಸರಿಯಿತ್ತು, ನಾಡಿಗೆ ಬಂದಾಗ ಶುರುವಾಯ್ತು ಸರಣಿ ಸಾವು! ಆದಿವಾಸಿಗಳ ಗೋಳು ಕೇಳೋರ್ಯಾರು?

  ಅಂದು ಬೆಳಗ್ಗೆ 8.30ಕ್ಕೆ ಪವರ್ ಹೋಗಿ ಬೆಳಗ್ಗೆ 9.30ಕ್ಕೆ ಬಂದಿದೆ. ಈ ಬಗ್ಗೆ ವೈದ್ಯಾಧಿಕಾರಿಗಳು ದಾಖಲೆ ನೀಡಿದ್ದು, ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ವ್ಯಕ್ತಿಗೆ ಉಸಿರಾಟದ ಸಮಸ್ಯೆ ಇತ್ತು. ಮೆದುಳಿನಲ್ಲಿ ರಕ್ತಸ್ರಾವ ಆಗಿದೆ. ಬಿಪಿ ಕೂಡ ಹೆಚ್ಚಾಗಿದೆ. ರೋಗಿಯ ಸ್ಥಿತಿಯ ಸಂಬಂಧಿಕರೊಂದಿಗೆ ವೈದ್ಯಾಧಿಕಾರಿಗಳು ಮಾತನಾಡಿದ್ದಾರೆ ಎಂದು ಆರೋಗ್ಯ ಸಚಿವ ಸುಧಾಕರ್ (Health Minister  K Sudhakar) ಹೇಳಿದ್ದಾರೆ.

  Gundlupet man died by heart attack not shortage of oxygen said Chamarajanagara DC Charulatha Somal mrq
  ಆರೋಗ್ಯ ಸಚಿವ ಡಾ.ಕೆ.ಸುಧಾಕರ್


  ಹೃದಯಸ್ತಂಭನದಿಂದ ಸಾವು

  ಸೆ 14 ರಂದು 9. 45 ಕ್ಕೆ ಆ ವ್ಯಕ್ತಿ ಸಾವನ್ನಪ್ಪಿದ್ದಾರೆ. ಸಾವಿಗೆ ಕಾರಣದ ಬಗ್ಗೆ ನಾನು ಈಗಲೇ ಹೇಳುವುದಿಲ್ಲ. ಈಗಾಗಲೇ ಈ ಬಗ್ಗೆ ಉನ್ನತ ಮಟ್ಟದ ಸಮಿತಿ ತನಿಖೆ ನಡೆಯುತ್ತಿದೆ. 30 ವರ್ಷದ ಮಹಿಳೆ ಹಾವು ಕಚ್ಚಿದ್ದರಿಂದ ಸೆ 13 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಎಲ್ಲಾ ರೀತಿಯ ಚಿಕಿತ್ಸೆ ನೀಡಲಾಗಿದ್ದು, ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಹೃದಯಸ್ತಂಭನದಿಂದ ಮೃತಪಟ್ಟಿದ್ದಾರೆ.

  ರಸ್ತೆ ಇಲ್ಲ, ‘ಜೋಳಿಗೆ’ಯೇ ಆಸರೆ

  ಚಿಕ್ಕಮಗಳೂರು ಜಿಲ್ಲೆಯ ಗಂಟೆಮಕ್ಕಿ ಗ್ರಾಮಸ್ಥರ ಗೋಳು ಕೇಳೋರೇ ಇಲ್ವಾ ಎನ್ನುವಂತಾಗಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ವೃದ್ಧೆಯನ್ನ ಜೋಳಿಗೆಯಲ್ಲಿ ಕೂರಿಸಿ ಆಸ್ಪತ್ರೆಗೆ ಕರೆದೊಯ್ದ ಘಟನೆ ನಡೆದಿದೆ.

  ಇದನ್ನೂ ಓದಿ:  Waterfalls: ಮಹಾಮಳೆಗೆ ಜಲಪಾತದಂತೆ ಹರಿಯುತ್ತಿರುವ ಕೆರೆ, ಫಾಲ್ಸ್ ನೋಡಲು ಮುಗಿಬೀಳುತ್ತಿರುವ ಜನ!

  ವೆಂಕಮ್ಮಗೆ ಭೂ ಸ್ವಾಧೀನ ಕಾಯ್ದೆ ಅಡಿಯಲ್ಲಿ ಜಮೀನು ಮಂಜೂರಾಗಿತ್ತು. ಅಲ್ಲೇ ವೆಂಕಮ್ಮ ಮನೆ ಕಟ್ಟಿಸಿದ್ರು. ಆದ್ರೆ ಮನೆಗೆ ರಸ್ತೆ ಸಂಪರ್ಕವೂ ಇರಲಿಲ್ಲ. 2021ರಲ್ಲೇ ರಸ್ತೆ ಮಾಡಿಸಿಕೊಡಿ ಎಂದು ಸಚಿವ ಆರ್ ಆಶೋಕ್, ಜಿಲ್ಲಾಧಿಕಾರಿಗಳಿಗೆ ವೆಂಕಮ್ಮ ಮನವಿ ಮಾಡಿದ್ರು. ಆದ್ರೆ, ಸರ್ಕಾರವಾಗ್ಲಿ, ಜಿಲ್ಲಾಡಳಿತವಾಗ್ಲೀ ಸಮಸ್ಯೆ ಬಗೆಹರಿಸೋ ಗೋಜಿಗೆ ಹೋಗಿಲ್ಲ.
  Published by:Mahmadrafik K
  First published: