HOME » NEWS » State » GULBARGA UNIVERSITY FORMER CHANCELLOR PROF MELAKERI SUSPENDED LG

ಗುಲ್ಬರ್ಗಾ ವಿವಿಯ ಮಾಜಿ ಹಂಗಾಮಿ ಕುಲಪತಿ ಪ್ರೊ.ಎಸ್.ಪಿ.ಮೇಲಕೇರಿ ಅಮಾನತು

ಪ್ರೊ.ಮೇಲಕೇರಿ ಹಲ್ಲೆ ಮಾಡುತ್ತಿದ್ದ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದವು. ಈ ವೇಳೆ ಪ್ರೊ.ಮೇಲಕೇರಿ ಹಾಗೂ ಪ್ರೊ.ವಿದ್ಯಾಸಾಗರ್ ನಡುವೆ ಸಂಧಾನಕ್ಕೆ ಯತ್ನಿಸಲಾಗಿತ್ತು. ಆದರೆ ಹಲ್ಲೆಯಿಂದ ಜರ್ಝರಿತಗೊಂಡಿದ್ದ ಪ್ರೊ.ವಿದ್ಯಾಸಾಗರ್ ಸಂಧಾನಕ್ಕೆ ಒಪ್ಪದೆ, ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು.

news18-kannada
Updated:September 4, 2020, 2:51 PM IST
ಗುಲ್ಬರ್ಗಾ ವಿವಿಯ ಮಾಜಿ ಹಂಗಾಮಿ ಕುಲಪತಿ ಪ್ರೊ.ಎಸ್.ಪಿ.ಮೇಲಕೇರಿ ಅಮಾನತು
ಪ್ರೊ.ಮೇಲಕೇರಿ
  • Share this:
ಕಲಬುರ್ಗಿ (ಸೆ.04): ಸುಮಾರು ಒಂದು ವರ್ಷಗಳ ಕಾಲದಿಂದ ಹಂಗಾಮಿ ಕುಲಪತಿಗಳ ನೇತೃತ್ವದಲ್ಲಿಯೇ ಮುನ್ನಡೆದಿರೋ ಗುಲ್ಬರ್ಗಾ ವಿಶ್ವವಿದ್ಯಾಲಯ ಒಂದಲ್ಲ ಒಂದು ಕಾರಣಕ್ಕೆ ಚರ್ಚೆಗೆ ಗ್ರಾಸವಾಗುತ್ತಲೇ ಇದೆ. ಶೈಕ್ಷಣಿಕ ಚಟುವಟಿಕೆಗಳಿಗಿಂತೆ ಅನ್ಯ ವಿಷಯಗಳಿಂದಲೇ ತೀವ್ರ ಚರ್ಚೆಗೆ ಗ್ರಾಸವಾಗುತ್ತಿದೆ. ಇದೀಗ ಸಹ ಪ್ರಾಧ್ಯಾಪಕರೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಮಾಜಿ ಹಂಗಾಮಿ ಕುಲಪತಿ ಪ್ರೊ.ಎಸ್.ಪಿ.ಮೇಲಕೇರಿಯನ್ನು ಅಮಾನತು ಮಾಡಲಾಗಿದೆ. ಕಲಬುರ್ಗಿಯ ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ನಡೆದಿದ್ದ ಸಹ ಪ್ರಾಧ್ಯಾಪಕನ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಹಂಗಾಮಿ ಕುಲಪತಿ ಪ್ರೊ.ಎಸ್.ಪಿ.ಮೇಲಕೇರಿಯನ್ನು ಅಮಾನತು ಮಾಡಲಾಗಿದೆ. ಆಗಸ್ಟ್​​ 18 ರಂದು ವಿಶ್ವ ವಿದ್ಯಾಲಯ ಆವರಣದಲ್ಲಿಯೇ ಹಲ್ಲೆ ಘಟನೆ ನಡೆದಿತ್ತು. ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥರ ಚೇಂಬರ್ ನಲ್ಲಿಯೇ ನಡೆದಿದ್ದ ಘಟನೆ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಈ ಸಂಬಂಧ ಆಗಸ್ಟ್​​ 28 ರಂದು ವಿಶ್ವ ವಿದ್ಯಾಲಯದ ಹಂಗಾಮಿ ಕುಲಪತಿ ಪ್ರೊ.ಚಂದ್ರಕಾಂತ ಯಾತನೂರ ಅಧ್ಯಕ್ಷತೆಯಲ್ಲಿ ನಡೆದಿದ್ದ ಸಿಂಡಿಕೇಟ್ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ತನಿಖಾ ಸಮಿತಿ ನೀಡಿದ್ದ ವರದಿಯನ್ನು ಸಭೆಯಲ್ಲಿ ಚರ್ಚಿಸಿ ಅಮಾನತುಗೊಳಿಸೋ ಅಂತಿಮ ನಿರ್ಧಾರ ಕೈಗೊಳ್ಳಲಾಗಿತ್ತು. ಇದೀಗ ಕುಲಸಚಿವ ಪ್ರೊ.ಸೋಮಶೇಖರ್ ಅವರು ಪ್ರೊ.ಎಸ್.ಪಿ.ಮೇಲಕೇರಿ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.  

ಪ್ರೊ.ಎಸ್.ಪಿ.ಮೇಲಕೇರಿ ಸಂಬಂಧಿಯೊಬ್ಬರು ಗುಲ್ಬರ್ಗಾ ವಿಶ್ವವಿದ್ಯಾಲಯದ ಸಶ್ಯಶಾಸ್ತ್ರ ವಿಭಾಗದಲ್ಲಿ ಎಂ.ಫಿಲ್ ಮಾಡ್ತಿದ್ದರು. ಪೂರ್ಣಾವಧಿ ಎಂ.ಫಿಲ್ ಮಾಡೋ ಜೊತೆಗೆ ಬೇರೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಈ ವಿದ್ಯಾರ್ಥಿಗೆ ಶಿಷ್ಯ ವೇತನ ಮಂಜೂರಿಗೆ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಒಪ್ಪದ ವಿಭಾಗದ ಮುಖ್ಯಸ್ಥ ಪ್ರೊ.ಜಿ.ಎಂ.ವಿದ್ಯಾಸಾಗರ್ ಒಪ್ಪಿರಲಿಲ್ಲ ಎನ್ನಲಾಗಿದೆ. ಇದರಿಂದ ಕುಪಿತಗೊಂಡ ಪ್ರೊ.ಎಸ್.ಪಿ.ಮೇಲಕೇರಿ, ಸಶ್ಯಶಾಸ್ತ್ರ ವಿಭಾಗಕ್ಕೆ ತೆರಳಿ, ಮುಖ್ಯಸ್ಥ ಪ್ರೊ.ಜಿ.ಎಂ.ವಿದ್ಯಾಸಾಗರ್ ಮೇಲೆ ಹಲ್ಲೆ ಮಾಡಿದ್ದರು ಎಂಬ ಆರೋಪ ಕೇಳಿಬಂದಿತ್ತು.

Crime News: ಇಟ್ಟಿಗೆಗೂಡು ಕಾರ್ಖಾನೆಯಲ್ಲಿ ಮಲಗಿದ್ದವರ ಬರ್ಬರ ಹತ್ಯೆ; ಜೋಡಿಕೊಲೆಗೆ ಬೆಚ್ಚಿಬಿದ್ದ ಮಂಡ್ಯ ಜನ

ಪ್ರೊ.ಮೇಲಕೇರಿ ಹಲ್ಲೆ ಮಾಡುತ್ತಿದ್ದ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದವು. ಈ ವೇಳೆ ಪ್ರೊ.ಮೇಲಕೇರಿ ಹಾಗೂ ಪ್ರೊ.ವಿದ್ಯಾಸಾಗರ್ ನಡುವೆ ಸಂಧಾನಕ್ಕೆ ಯತ್ನಿಸಲಾಗಿತ್ತು. ಆದರೆ ಹಲ್ಲೆಯಿಂದ ಜರ್ಝರಿತಗೊಂಡಿದ್ದ ಪ್ರೊ.ವಿದ್ಯಾಸಾಗರ್ ಸಂಧಾನಕ್ಕೆ ಒಪ್ಪದೆ, ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ವಿಶ್ವವಿದ್ಯಾಲಯ ಠಾಣೆಯಲ್ಲಿ ಮೇಲಕೇರಿ ವಿರುದ್ಧ ಪ್ರಕರಣ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಹಂಗಾಮಿ ಕುಲಪತಿ ಪ್ರೊ.ಚಂದ್ರಕಾಂತ ಯಾತನೂರ ಅಧ್ಯಕ್ಷತೆಯಲ್ಲಿ ಸಿಂಡಿಕೇಟ್ ಸಭೆ ನಡೆದಿತ್ತು. ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಮೇಲಕೇರಿಯನ್ನು ಅಮಾನತುಗೊಳಿಸಲಾಗಿದೆ.

ಪ್ರೊ.ಎಸ್.ಪಿ.ಮೇಲಕೇರಿ ಗುಲ್ಬರ್ಗಾ ವಿ.ವಿ. ಹಂಗಾಮಿ ಕಲಪತಿಗಳಾಗಿದ್ದರು. ಮನೋವಿಜ್ಞಾನ ವಿಭಾಗದ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸಿದ್ದರು. ಸದ್ಯ ಪ್ರಾಧ್ಯಾಪಕರಾಗಿ ಸೇವೆ ಮುಂದುವರೆಸಿದ್ದರು. ಕೇವಲ ಆರು ತಿಂಗಳಲ್ಲಿ ನಿವೃತ್ತಿ ಹೊಂದಲಿದ್ದ ಪ್ರೊ.ಎಸ್.ಪಿ.ಮೇಲಕೇರಿ, ಇದೀಗ ಅಮಾನತು ಶಿಕ್ಷೆಗೆ ಗುರಿಯಾಗಿದ್ದಾರೆ.
Youtube Video

ಹಲ್ಲೆ ಪ್ರಕರಣ ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.  ಪ್ರೊ.ನಿರಂಜನ್ ಅವಧಿ ಮುಗಿದ ನಂತರ ಗುಲ್ಬರ್ಗಾ ವಿಶ್ವವಿದ್ಯಾಲಯಕ್ಕೆ ಪೂರ್ಣಾವಧಿ ಕುಲಪತಿಗಳು ಬಂದಿಲ್ಲ. ಕೇವಲ ಪ್ರಭಾರಿ ಕುಲಪತಿಗಳ ಮೇಲೆಯೇ ಮುನ್ನಡೆದಿದ್ದು, ವಿಶ್ವವಿದ್ಯಾಲಯದ ಮೇಲೆ ಯಾರ ಹತೋಟಿಯೂ ಇಲ್ಲದಂತಾಗಿದೆ ಎಂಬ ಮಾತು ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿಯೇ ಈ ರೀತಿಯ ಘಟನೆಗಳು ಸಂಭವಿಸುತ್ತಿವೆ ಎಂಬ ಮಾತೂ ಕೇಳಿಬಂದಿದೆ. ಶೈಕ್ಷಣಿಕ ಚಟುವಟಿಕೆಗಳ ಮೂಲಕ ಗಮನ ಸೆಳೆಯಬೇಕಿದ್ದ ವಿಶ್ವವಿದ್ಯಾಲಯವೊಂದು, ಕ್ಷುಲ್ಲಕ ಕಾರಣಗಳಿಂದಾಗಿ ರಾಜ್ಯದಲ್ಲಿ ಚರ್ಚೆಗೆ ಗ್ರಾಸವಾಗುತ್ತಿರೋದು ಆಕ್ರೋಶಕ್ಕೆ ಕಾರಣವಾಗಿದೆ. 
Published by: Latha CG
First published: September 4, 2020, 2:51 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories