ಕಥಾಸ್ಪರ್ಧೆಯಲ್ಲಿ ಶಿವರಾಮ ಅಸುಂಡಿ, ಪ್ರಭುಲಿಂಗ ನೀಲೂರೆ ಪ್ರಥಮ; 25 ಮಂದಿಗೆ ಗುಲ್ಬರ್ಗಾ ವಿವಿ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ

ಸೃಜನ, ಸೃಜನೇತರ, ಭಾಷಾಂತರ, ವಚನ ಸಾಹಿತ್ಯ, ಜಾನಪದ, ಕಲಾಕೃತಿಗಳ, ಜಾನಪದ ಕಲಾವಿದ ಸೇರಿ ವಿವಿಧ ವಿಭಾಗಗಳಲ್ಲಿ 25 ಜನರಿಗೆ ಪ್ರಶಸ್ತಿ ನೀಡಲಾಗುತ್ತಿದೆ. ನವೆಂಬರ್ 13 ರಂದು ಗುಲ್ಬರ್ಗಾ ವಿಶ್ವವಿದ್ಯಾಲಯದ ಮಹಾತ್ಮಾಗಾಂಧಿ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

Vijayasarthy SN | news18
Updated:November 8, 2019, 8:32 PM IST
ಕಥಾಸ್ಪರ್ಧೆಯಲ್ಲಿ ಶಿವರಾಮ ಅಸುಂಡಿ, ಪ್ರಭುಲಿಂಗ ನೀಲೂರೆ ಪ್ರಥಮ; 25 ಮಂದಿಗೆ ಗುಲ್ಬರ್ಗಾ ವಿವಿ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ
ಗುಲಬರ್ಗಾ ವಿವಿ ಪ್ರಸಾರಾಂಗ ನಿರ್ದೇಶಕ ಪ್ರೊ| ಹೆಚ್.ಟಿ. ಪೋತೆ
  • News18
  • Last Updated: November 8, 2019, 8:32 PM IST
  • Share this:
ಕಲಬುರಗಿ(ನ. 08): ಗುಲ್ಬರ್ಗಾ ವಿಶ್ವವಿದ್ಯಾಲಯ ವಿವಿಧ ಕ್ಷೇತ್ರಗಳಲ್ಲಿ ಕೊಡಮಾಡುವ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಗೊಂಡಿವೆ. ದಿವಂಗತ ಜಯತೀರ್ಥ ರಾಜಪುರೋಹಿತ ರಾಜ್ಯಮಟ್ಟದ ಕಥಾ ಸ್ಪರ್ಧೆಯ ಪ್ರಶಸ್ತಿ ಮತ್ತು ವಿವಿಧ ವಿಭಾಗಗಳ ಪ್ರಶಸ್ತಿಯನ್ನು ಪ್ರಸಾರಾಂಗದ ನಿರ್ದೇಶಕ ಪ್ರೊ| ಎಚ್.ಟಿ. ಪೋತೆ ಪ್ರಕಟಿಸಿದ್ದಾರೆ. ಗುಲ್ಬರ್ಗಾ ವಿಶ್ವವಿದ್ಯಾಲಯ ಅಸ್ತಿತ್ವಕ್ಕೆ ಬಂದ ನಂತರ ದಿವಂಗತ ಹಾ.ಮಾ. ನಾಯಕ್ ಕುಲಪತಿಗಳಿದ್ದ ವೇಳೆ ಹಿಂದುಳಿದ ಭಾಗದ ಲೇಖಕರನ್ನು ಪ್ರೋತ್ಸಾಹಿಸಲೆಂದು ರಾಜ್ಯೋತ್ಸವ ಪ್ರಶಸ್ತಿ ಆರಂಭಿಸಲಾಗಿತ್ತು.

ದಿವಂಗತ ಜಯತೀರ್ಥ ರಾಜಪುರೋಹಿತ ರಾಜ್ಯಮಟ್ಟದ ಕಥಾ ಸ್ಪರ್ಧೆಯಲ್ಲಿ ಶಿವರಾಮ ಅಸುಂಡಿ ಅವರ “ಹೆಣದ ಮೇವು” ಮತ್ತು ಪ್ರಭುಲಿಂಗ ನೀಲೂರೆ ಅವರ “ಒಳಿತು ಮಾಡು ಮನುಜ” ಕಥೆಗಳಿಗೆ ಪ್ರಥಮ ಬಹುಮಾನ ಸಿಕ್ಕಿದೆ.  ಪ್ರಶಸ್ತಿಯ ಚಿನ್ನದ ಪದಕ ಮತ್ತು 5 ಸಾವಿರ ರೂಪಾಯಿ ನಗದನ್ನು ಒಳಗೊಂಡಿದೆ. ಗಾಯತ್ರಿ ಸುಂದರೇಶ್ ಅವರ “ಸೊಪ್ಪೀರಮ್ಮನ ಸಮಾಧಿ ಸುತ್ತ” ಕಥೆ ದ್ವಿತೀಯ ಬಹುಮಾನ ಪಡೆದುಕೊಂಡಿದ್ದು, ಬೆಳ್ಳಿ ಪದಕ 3 ಸಾವಿರ ರೂಪಾಯಿ ನಗದನ್ನೊಳಗೊಂಡಿದೆ. ಮುದಿರಾಜ್ ಬಾಣದ್ ಅವರ “ಹೇನು ಕಥೆ” ತೃತೀಯ ಸ್ಥಾನ ಪಡೆದುಕೊಂಡಿದ್ದು, ಕಂಚಿನ ಪದಕ ಹಾಗೂ 2 ಸಾವಿರ ರೂಪಾಯಿ ನಗದನ್ನು ಒಳಗೊಂಡಿದೆ.

ಇದನ್ನೂ ಓದಿ: ಗಾಂಧಿ ಕುಟುಂಬಕ್ಕೆ ಮತ್ತೆ ಎಸ್​ಪಿಜಿ ಭದ್ರತೆ ನೀಡಿ, ಇಲ್ಲದಿದ್ದರೆ ಬೀದಿಗಿಳಿದು ಹೋರಾಟ; ಸಿದ್ದರಾಮಯ್ಯ ಎಚ್ಚರಿಕೆ

ಸೃಜನ, ಸೃಜನೇತರ, ಭಾಷಾಂತರ, ವಚನ ಸಾಹಿತ್ಯ, ಜಾನಪದ, ಕಲಾಕೃತಿಗಳ, ಜಾನಪದ ಕಲಾವಿದ ಸೇರಿ ವಿವಿಧ ವಿಭಾಗಗಳಲ್ಲಿ 25 ಜನರಿಗೆ ಪ್ರಶಸ್ತಿ ನೀಡಲಾಗುತ್ತಿದೆ. ನವೆಂಬರ್ 13 ರಂದು ಗುಲ್ಬರ್ಗಾ ವಿಶ್ವವಿದ್ಯಾಲಯದ ಮಹಾತ್ಮಾಗಾಂಧಿ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಭಾರತೀಯ ಭಾಷಾ ಸಂಸ್ಥೆಯ ಯೋಜನಾ ನಿರ್ದೇಶಕ ಪ್ರೊ| ಕೆ.ಆರ್. ದುರ್ಗಾದಾಸ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದು, ಕುಲಪತಿ ಪ್ರೊ| ಪರಿಮಳ ಅಂಬೇಕರ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪ್ರಸಾರಾಂಗದ ನಿರ್ದೇಶಕ ಪ್ರೊ| ಎಚ್.ಟಿ. ಪೋತೆ ತಿಳಿಸಿದ್ದಾರೆ.

ಸೃಜನ ವಿಭಾಗದಲ್ಲಿ ಚಿದಾನಂದ ಸಾಲಿ ಅವರ “ಮೂರನೇ ಕಣ್ಣು”, ಜಯದೇವಿ ಗಾಯಕವಾಡರ “ಬೋಧಿ ವೃಕ್ಷದ ಹಾಯಿಕುಗಳು”, ಬಸವರಾಜ ಡೋಣೂರು ಅವರ “ಕಂಗಳ ಬರ”, ಹನುಮಂತರಾವ್ ದೊಡ್ಡಮನಿ ಅವರ “ಬಿಸಿಲು ಬೆಳದಿಂಗಳು” ಕೃತಿಗಳು ಆಯ್ಕೆಯಾಗಿವೆ. ಅನುವಾದ ವಿಭಾಗದಲ್ಲಿ ಸೂರ್ಯಕಾಂತ ಸುಜ್ಯಾತ್ ಅವರ “ದೀಕ್ಷೆ”, ವಚನ ಸಾಹಿತ್ಯದಲ್ಲಿ ನಾಗಪ್ಪ ಗೋಗಿ ಅವರ “ಅಂಬಿಗರ ಚೌಡಯ್ಯ” ಮತ್ತು ಸೃಜನೇತರ ವಿಭಾಗದಲ್ಲಿ ನಾಲ್ಕು ಕೃತಿಗಳನ್ನು ಆಯ್ಕೆ ಮಾಡಲಾಗಿದೆ. ಮೂವರು ಕಲಾವಿದರ ಚಿತ್ರ ಕಲಾಕೃತಿಗಳೂ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿವೆ. ಪ್ರಶಸ್ತಿಯ ತಲಾ 5 ಸಾವಿರ ರೂಪಾಯಿ ನಗದು ಮತ್ತು ಫಲಕವನ್ನೊಳಗೊಂಡಿದೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published: November 8, 2019, 8:30 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading