ಮುಳ್ಳಂದಿ ಬೇಟೆಯಾಡಿ ಸುಟ್ಟು ತಿಂದು, ಟಿಕ್ ಟಾಕ್ ಮಾಡಿ ಪೊಲೀಸರಿಗೆ ಸಿಕ್ಕಿಬಿದ್ದ ಯುವಕರು

ಮುಳ್ಳು ಹಂದಿಯನ್ನು ವನ್ಯಜೀವಿ ಸಂರಕ್ಷಣಾ ಕಾಯ್ದೆ ಉಪ ನಿಯಮ-4ರ ಪ್ರಕಾರ ಸಂರಕ್ಷಿತ ಪ್ರಾಣಿ ಎಂದು ಗುರುತಿಸಲಾಗಿದೆ. ಅಳಿವಿನಂಚಿನಲ್ಲಿರೋ ಮುಳ್ಳು ಹಂದಿಯನ್ನು ಬೇಟಿಯಾಡುವುದು ಅಪರಾಧವಾಗಿದೆ. 

news18-kannada
Updated:March 2, 2020, 11:40 AM IST
ಮುಳ್ಳಂದಿ ಬೇಟೆಯಾಡಿ ಸುಟ್ಟು ತಿಂದು, ಟಿಕ್ ಟಾಕ್ ಮಾಡಿ ಪೊಲೀಸರಿಗೆ ಸಿಕ್ಕಿಬಿದ್ದ ಯುವಕರು
ವಿಡಿಯೋ ಮಾಡಿದ ಯುವಕರು
  • Share this:
ಕಲಬುರಗಿ(ಮಾ. 2): ಮುಳ್ಳು ಹಂದಿಯನ್ನು ಕೊಂದು ಸುಟ್ಟುಹಾಕಿದ ನಾಲ್ವರು ಯುವಕರು ಅದನ್ನು ಟಿಕ್​ಟಾಕ್​ನಲ್ಲಿ ವಿಡಿಯೋ ಮಾಡಿ ಹರಿಬಿಟ್ಟು ಪೊಲೀಸರ ಬಂಧನಕ್ಕೆ ಒಳಗಾಗಿದ್ದಾರೆ. ಜಿಲ್ಲೆಯ ಯಡ್ರಾಮಿ ತಾಲೂಕಿನ ಬಿರಾಳ ಹಿಸ್ಸಾ ಗ್ರಾಮದ ಮಂಜನುನಾಥ ಬಡಿಗೇರಾ, ಭಾಗಪ್ಪ, ಭೀಮಪ್ಪ ಹಾಗೂ ನಾಗೇಶ್ ಈ ಕೃತ್ಯ ಎಸಗಿದವರು.

ಸಿಂಧಗಿ ತಾಲೂಕಿನ ಹೊನ್ನಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ ಬರುವ ಕುರುಚಲು ಕಾಡಿನಲ್ಲಿ ಮುಳ್ಳು ಹಂದಿಯ ಬೇಟೆಯಾಡಿದ ಇವರು ಅದನ್ನು ಅಲ್ಲಿಯೇ ಸುಟ್ಟು ತಿಂದಿದ್ದಾರೆ. ಈ ಎಲ್ಲಾ ದೃಶ್ಯಗಳನ್ನು ಟಿಕ್​ ಟಾಕ್​ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಇದರ ಜೊತೆಗೆ ಹಂದಿಯನ್ನು ತಿನ್ನೋ ಇಚ್ಛೆಇದ್ದವರು ಬನ್ನಿ ಎಂದು ಮಂಜುನಾಥ ಎಂಬಾತ ಆಹ್ವಾನವನ್ನೂ ಮಾಡಿದ್ದಾನೆ.

ಈ ವಿಡಿಯೋವನ್ನು ಗಮನಿಸಿದ ಬೆಂಗಳೂರಿನ ಅರಣ್ಯ ಇಲಾಖೆ ಅಧಿಕಾರಿಗಳು ನಾಲ್ವರು ಆರೋಪಿಗಳ ಪತ್ತೆಗೆ ಸೂಚನೆ ನೀಡಿದ್ದಾರೆ. ಅದರಂತೆ ಕಲಬುರಗಿ ಉಪಅರಣ್ಯ ಸಂರಕ್ಷಣಾಧಿಕಾರಿ ಎಂ.ಎಂ. ವಾನತಿ ಆರೋಪಿಗಳ ಬಂಧನಕ್ಕೆ ಜಾಲಬೀಸಿ, ಮಂಜುನಾಥ್​​ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನುಳಿದ ಮೂವರು ಆರೋಪಿಗಳ ಬಂಧನಕ್ಕೆ ಕೂಡ ಬಲೆ ಬೀಸಿದ್ದಾರೆ.

ಇದನ್ನು ಓದಿ: ಬ್ಲೂ ವೇಲ್ ನಂತರ ಇದೀಗ ತಲೆ ಒಡೆಯೋ ಚಾಲೆಂಜ್ ಕ್ರೇಜ್; ಮಕ್ಕಳಿಗೆ ಮಾರಕವಾಗಲಿರುವ ಗೇಮಿಂಗ್ ಲೋಕ

ಮುಳ್ಳು ಹಂದಿಯನ್ನು ವನ್ಯಜೀವಿ ಸಂರಕ್ಷಣಾ ಕಾಯ್ದೆ ಉಪ ನಿಯಮ-4ರ ಪ್ರಕಾರ ಸಂರಕ್ಷಿತ ಪ್ರಾಣಿ ಎಂದು ಗುರುತಿಸಲಾಗಿದೆ. ಅಳಿವಿನಂಚಿನಲ್ಲಿರೋ ಮುಳ್ಳು ಹಂದಿಯನ್ನು ಬೇಟೆಯಾಡುವುದು ಅಪರಾಧವಾಗಿದೆ.
First published: March 2, 2020, 11:40 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading