ಕೆಪಿಸಿಸಿ ಅಧ್ಯಕ್ಷರ ಆಯ್ಕೆ ವಿಳಂಬ: ಡಿಕೆಶಿ ಭೇಟಿಯಾದ ಗುಲಾಂ ನಬಿ ಆಜಾದ್​​

ಅಧ್ಯಕ್ಷ ಆಯ್ಕೆಯಲ್ಲಿ ರಾಜ್ಯ ನಾಯಕರಲ್ಲಿ ಒಮ್ಮತ ಮೂಡದಿರುವ ಹಿನ್ನೆಲೆ ಆಯ್ಕೆ ಪ್ರಕ್ರಿಯೆ ವಿಳಂಬವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಗುಲಾಂ ನಬಿ ಆಜಾದ್​​ ನಾಯಕರೊಂದಿಗೆ ಪ್ರತ್ಯೇಕ ಮಾತುಕತೆ ನಡೆಸುತ್ತಿದ್ದಾರೆ.

news18-kannada
Updated:February 29, 2020, 1:07 PM IST
ಕೆಪಿಸಿಸಿ ಅಧ್ಯಕ್ಷರ ಆಯ್ಕೆ ವಿಳಂಬ: ಡಿಕೆಶಿ ಭೇಟಿಯಾದ ಗುಲಾಂ ನಬಿ ಆಜಾದ್​​
ಗುಲಾಂ ನಬಿ ಆಜಾದ್​- ಡಿಕೆ ಶಿವಕುಮಾರ್​
  • Share this:
ಬೆಂಗಳೂರು (ಫೆ.29): ಕೆಪಿಸಿಸಿ ಅಧ್ಯಕ್ಷರ ಆಯ್ಕೆಯಲ್ಲಿ ಹೈ ಕಮಾಂಡ್​​ ವಿಳಂಬ ಧೋರಣೆ ರಾಜ್ಯ ನಾಯಕರಲ್ಲಿ ಬೇಸರ ಮೂಡಿಸಿದೆ. ಈಗಾಗಲೇ ಈ ಕುರಿತು ಹೈ ಕಮಾಂಡ್​ ನಾಯಕರು ರಾಜ್ಯನಾಯಕರೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿದರೂ ಫಲಪ್ರದವಾಗಿಲ್ಲ. ಈ ಹಿನ್ನೆಲೆ ಮತ್ತೊಮ್ಮೆ ರಾಜ್ಯ ನಾಯಕರೊಂದಿಗೆ ಚರ್ಚೆ ನಡೆಸಲು ಎಐಸಿಸಿ ಪ್ರಧಾನ ಕಾರ್ಯದರ್ಶಿ ಗುಲಾಂ ನಬಿ ಆಜಾದ್​ ರಾಜ್ಯಕ್ಕೆ ಆಗಮಿಸಿದ್ದಾರೆ. 

ಅಧ್ಯಕ್ಷ ಆಯ್ಕೆಯಲ್ಲಿ ರಾಜ್ಯ ನಾಯಕರಲ್ಲಿ ಒಮ್ಮತ ಮೂಡದಿರುವ ಹಿನ್ನೆಲೆ ಆಯ್ಕೆ ಪ್ರಕ್ರಿಯೆ ವಿಳಂಬವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಗುಲಾಂ ನಬಿ ಆಜಾದ್​​ ನಾಯಕರೊಂದಿಗೆ ಪ್ರತ್ಯೇಕ ಮಾತುಕತೆ ನಡೆಸುತ್ತಿದ್ದಾರೆ.ಕೆಪಿಸಿಸಿ ಅಧ್ಯಕ್ಷ ಹುದ್ದೆ ಆಕಾಂಕ್ಷಿಯಾಗಿರುವ ಡಿಕೆ ಶಿವಕುಮಾರ್​ ಅವರನ್ನು ಭೇಟಿಯಾದ ಆಜಾದ್​ ಸುಮಾರು 20 ನಿಮಿಷಗಳ ಕಾಲ ಚರ್ಚೆ ನಡೆಸಿದ್ದಾರೆ. ಈ ವೇಳೆ ರಾಜ್ಯ ಕಾಂಗ್ರೆಸ್​ನ ಸದ್ಯದ ಪರಿಸ್ಥಿತಿ ಕುರಿತು ಕೂಡ ವಿವರಣೆ ಪಡೆದಿದ್ದಾರೆ. ಇದಾದ ಬಳಿಕ ಅವರು ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಚರ್ಚೆ ನಡೆಸಲಿದ್ದಾರೆ.

ಇದನ್ನು ಓದಿ:  ಮುಂದುವರೆದ ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಗೊಂದಲ; ದಿನೇಶ್​ ಗುಂಡೂರಾವ್​ ಜೊತೆ ಚರ್ಚೆ ನಡೆಸಿದ ಹೈ ಕಮಾಂಡ್​​

ದೆಹಲಿ ಚುನಾವಣೆ ಬಳಿಕ ಕೆಪಿಸಿಸಿ ಅಧ್ಯಕ್ಷರ ಆಯ್ಕೆಗೆ ಹೈ ಕಮಾಂಡ್​ ಮುಂದಾಗಲಿದೆ ಎನ್ನಲಾಗಿತ್ತು. ಆದರೆ, ನಾಯಕರ ನಡುವೆ ಮೂಡಿದ ಗೊಂದಲವನ್ನು ಬಗೆಹರಿಸಲು ನಾಯಕರು ವಿಫಲವಾದರು. ದೆಹಲಿಗೆ ದಿನೇಶ್​ ಗುಂಡೂರಾವ್​ ಅವರನ್ನು ಕೂಡ ಕರೆಸಿ ಮಾತುಕತೆ ನಡೆಸಿದರೂ ಪ್ರಯೋಜನವಾಗಲಿಲ್ಲ. ಈ ಹಿನ್ನೆಲೆ ಈಗ ಅಂತಿಮ ಕಸರತ್ತಿಗೆ ಮುಂದಾಗಿರುವ ಹೈ ಕಮಾಂಡ್​ ಗುಲಾಂ ನಬಿ ಆಜಾದ್​ ಅವರನ್ನು ರಾಜ್ಯಕ್ಕೆ ಕಳುಹಿಸಿದ್ದು, ಇನ್ನಾದರೂ ಈ ಗೊಂದಲಕ್ಕೆ ತೆರೆ ಬಿದ್ದು, ಶೀಘ್ರದಲ್ಲಿ ಅಧ್ಯಕ್ಷರ ನೇಮಕವಾಗಲಿದೆಯಾ ಕಾದು ನೋಡಬೇಕಿದೆ.
First published: February 29, 2020, 1:05 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading