ವಿದ್ಯಾಕಾಶಿ ಧಾರವಾಡದಲ್ಲಿ ಎಲ್ಲೆಂದರಲ್ಲಿ ಗುಲ್ ಮೊಹರ್

news18
Updated:May 26, 2018, 11:18 AM IST
ವಿದ್ಯಾಕಾಶಿ ಧಾರವಾಡದಲ್ಲಿ ಎಲ್ಲೆಂದರಲ್ಲಿ ಗುಲ್ ಮೊಹರ್
news18
Updated: May 26, 2018, 11:18 AM IST
- ಮಂಜುನಾಥ್ ಯಡಳ್ಳಿ, ನ್ಯೂಸ್ 18 ಕನ್ನಡ 

ಧಾರವಾಡ ( ಮೇ. 26) :  ಹೂ ಅಂದ್ರೆ ಯಾರಿಗೆ ತಾನೇ ಇಷ್ಟ ಆಗಲ್ಲಾ ಹೇಳಿ. ಅದರಲ್ಲೂ ಕೆಂಪು ಹೂ ಕಂಡರೆ ಎಲ್ಲರಿಗೂ ಎಲ್ಲಿದ ಪ್ರೀತಿ. ಇದರಲ್ಲಿ ಮಲೆನಾಡಿನಲ್ಲಿ ಕಂಡು ಬರುವ ಗುಲ್ ಮೊಹರ್ ಹೂವಿನ ಅಂದ ಚಂದ ಬನ್ನಿಸಲು ಸಾಧ್ಯವೇ ಇಲ್ಲ. ಇಂತಹ ಗುಲ್ ಮೊಹರ್ ಹೂ ಧಾರವಾಡದ ನಗರದಾಧ್ಯಂತ ಸ್ವಚ್ಚಂದವಾಗಿ ಅರಳಿದ್ದು, ಎಲ್ಲರ ಮನಸಿಗೆ ಮುದ ನೀಡುತ್ತಿವೆ.

ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಆವರಣದಲ್ಲಿ ಎಲ್ಲಿ ನೋಡಿದ್ರಲ್ಲಿ ಗುಲ್​ ಮೊಹರ್​ ಗಿಡಗಳೆ ಕಾಣುತ್ತವೆ. ಇವುಗಳನ್ನು ನೋಡಿದ್ರೆ ನೀಜಕ್ಕೂ ಪ್ರಕೃತಿ ಸೌಂದರ್ಯ ಹೆಚ್ಚಾದಂತೆ ಕಾಣುತ್ತಿವೆ. ಕೆವಲ ಬೇಸಿಗೆಯಲ್ಲಿ ಮಾತ್ರ ಕಾಣುವ ಈ ಹೂಗಳು ಈಗ ಮಳೆಗಾಲ ಆರಂಭಕ್ಕೂ ಮುನ್ನವೂ ಕಾಣುತ್ತವೆ.

ಧಾರವಾಡದ ಕೆಸಿಡಿ ರಸ್ತೆ, ಕರ್ನಾಟಕ ವಿಶ್ವವಿದ್ಯಾಲಯ, ಡಿಸಿ ಕಚೇರಿ ಮುಂಭಾಗ, ರೈಲ್ವೆ ಸ್ಟೇಶನ್​ ರಸ್ತೆಗಳಲ್ಲಿ ಈ ಗುಲ್ ಮೊಹರ್​ ಗಿಡಗಳು ತಮ್ಮ ಸೌಂದರ್ಯ ತೋರಿಸುತ್ತಿವೆ. ಬೇರೆ ಬೇರೆ ಊರುಗಳಿಂದ ಬರುವ ವಿದ್ಯಾರ್ಥಿಗಳು ಹಾಗೂ ಜನರು ಇವುಗಳನ್ನು ನೋಡಿದ್ರೆ ಸಾಕು ಧಾರವಾಡಕ್ಕೆ ಪ್ರಕೃತಿ ಸೌಂದರ್ಯಕ್ಕೆ ಮರಳಾಗುತ್ತಾರೆ.

ಎಷ್ಟೇ ನೋವಿದ್ದರೂ ಈ ಗುಲ್ ಮೋಹರ್ ಹೂ ನೋಡಿದರೇ ಸಾಕು ಮನಸ್ಸಿಗೆ ಖುಷಿ ತರುತ್ತದೆ. ಇವುಗಳಿಂದ ನಗರದಲ್ಲಿ ಪ್ರಕೃತಿ ಸೌದರ್ಯ ಹೆಚ್ಚಾಗಿದ್ದಲ್ಲದೇ, ಜನರ ಆರೋಗ್ಯದ ದೃಷ್ಟಿಯಿಂದಲೂ ಈ ಗಿಡಗಳು ಇರುವ ಜಾಗದಲ್ಲಿ ಬೆಳ್ಳಬೆಳ್ಳಿಗ್ಗೆ ವಾಕಿಂಗ್​ ಕೂಡ ಮಾಡುತ್ತಿದ್ದಾರೆ.

ಮಳೆರಾಯನ ಸಿಂಚನದಿಂದ ಅಕ್ಷರಶಃ ಧಾರವಾಡ ಮಲೆನಾಡಿನಂತೆ ಆಗಿರುವುದಕ್ಕೆ ಈ ಗುಲ್ ಮೊಹರ್ ಹೂ​ವೇ ಸಾಕ್ಷಿ. ನಿಜಕ್ಕೂ ಈ ಗಿಡಗಳಿಂದ ಪ್ರಕೃತಿ ಸೌಂದರ್ಯ ಹೆಚ್ಚಾಗಿ ಜನರನ್ನು ಉಲ್ಲಾಸ ಹಾಗೂ ಉತ್ಸಾಹದ ಕಡಲಲ್ಲಿ ತೇಲುವಂತೆ ಮಾಡಿದೆ.

 
First published:May 26, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...