ಗುಜರಾತ್​ ಸರ್ಕಾರದಿಂದ ಸುಳ್ಳು ಮಾಹಿತಿ; ಬಯಲು ಶೌಚ ಸಮಸ್ಯೆಯಿಂದ ಇನ್ನೂ ಬಳಲುತ್ತಿದೆ ಮೋದಿ ತವರು: ಸಿಎಜಿ ವರದಿ

news18
Updated:September 22, 2018, 11:19 AM IST
ಗುಜರಾತ್​ ಸರ್ಕಾರದಿಂದ ಸುಳ್ಳು ಮಾಹಿತಿ; ಬಯಲು ಶೌಚ ಸಮಸ್ಯೆಯಿಂದ ಇನ್ನೂ ಬಳಲುತ್ತಿದೆ ಮೋದಿ ತವರು: ಸಿಎಜಿ ವರದಿ
  • Advertorial
  • Last Updated: September 22, 2018, 11:19 AM IST
  • Share this:
ನ್ಯೂಸ್​ 18 ಕನ್ನಡ

ಗುಜರಾತ್​ (ಸೆ.22): ನಮ್ಮ ರಾಜ್ಯ ಬಯಲು ಶೌಚ ಮುಕ್ತವಾಗಿದೆ ಎಂದು ಈ ಹಿಂದೆ ಗುಜರಾತ್​ ಸರ್ಕಾರ ಹೇಳಿದ ವರದಿ ಸುಳ್ಳು ಎಂದು ಸಿಎಂಜಿ ತಿಳಿಸಿದೆ ಎಂದು ಪಿಟಿಐ ವರದಿ ಮಾಡಿದೆ.

ಎಂಟು ಜಿಲ್ಲೆಗಳಲ್ಲಿ ಈ ಬಗ್ಗೆ ಸಮೀಕ್ಷೆ ನಡೆಸಿದ ಸಿಎಜಿ ಅನೇಕ ಮನೆಗಳಲ್ಲಿ ಶೌಚಾಲಯವಿಲ್ಲದಿರುವುದು ಬೆಳಕಿಗೆ ಬಂದಿದೆ ಎಂದು ಈ ಕುರಿತ ವರದಿಯನ್ನು ಬುಧವಾರ ವಿಧಾನಸಭೆಯಲ್ಲಿ ಮಂಡಿಸಲಾಗುವುದು ಎಂದು ಕೂಡ ತಿಳಿಸಿದ್ದಾರೆ.

ಬನಸ್ಕಾಂತ, ದಾಹೊದ್​, ಡ್ಯಾಂಗ್​, ಛೋಟಾಡುಪುರ್​, ಪತನ್​, ಜಾಮ್ನಗರ್​, ಜುನಾಗಡ್​ ಮತ್ತು ವಲ್ಸಾದ್​ ಜಿಲ್ಲೆಗಳಲ್ಲಿ ಈ ಸಮೀಕ್ಷೆ ಮಾಡಲಾಗಿದೆ.

ಕಳೆದ ಫೆ.11ರಂದು ಲೋಕಸಭೆಗೆ ಮಾಹಿತಿ ನೀಡಿದ  ಕೇಂದ್ರ ಸರ್ಕಾರ ಗುಜರಾತ್​ ಸೇರಿದಂತೆ 11 ಜಿಲ್ಲೆಗಳು ಸ್ವಚ್ಛ ಭಾರತ್​ ಮಿಷನ್​ ಅಡಿಯಲ್ಲಿ ಅವು ಬಯಲು ಶೌಚ ಮುಕ್ತವಾಗಿದೆ ಎಂದು ಘೋಷಣೆ ಮಾಡಿತು.

ಆದರೆ , 2014 -17 ರ ಅವಧಿಯಲ್ಲಿ 8 ಜಿಲ್ಲಾ ಪಂಚಾಯತ್​ಗಳಲ್ಲಿ ಸಮೀಕ್ಷೆ ನಡೆಸಿದಾಗ 120 ಪರೀಕ್ಷಾ ಗ್ರಾಮ ಪಂಚಾಯತಿಗಳು ಒದಗಿಸಿದ ಮಾಹಿತಿಯ ಪ್ರಕಾರ ಶೇ.29ರಷ್ಟು ಕುಟುಂಬಗಳು ಶೌಚಾಲಯವನ್ನು ಹೊಂದಿಲ್ಲ ಎಂದು ತಿಳಿಸಿದೆ. ಗುಜರಾತ್​ ಸರ್ಕಾರಕ್ಕೆ ಎಲ್ಲಾ ಜಿಲ್ಲೆಗಳು ಬಯಲು ಮುಕ್ತ ಶೌಚಾವಾಗಿಲ್ಲ ಎಂಬುದು ಇನ್ನು ಸರಿಯಾಗಿ ಕಾಣಿಸುತ್ತಿಲ್ಲ ಎಂದು ಅದು ತಿಳಿಸಿದೆ.

2012ರಲ್ಲಿ ಪ್ರಾಥಮಿಕ ಸಮೀಕ್ಷೆ ನಡೆಸಿದ ಅಧಿಕಾರಿಗಳು ಆಡಳಿತಾಧಿಕಾರಿಗಳು ಎಲ್ಲಾ ಜಿಲ್ಲೆಗಳು ಬಯಲು ಶೌಚ ಮುಕ್ತವಾಗಿದೆ ಎಂದು ಘೋಷಿಸಿಕೊಂಡಿತು. ಈ ಸಮೀಕ್ಷೆಯನ್ನು ನಂತರ ಪರಿಷ್ಕರಿಸಿಲ್ಲ ಎಂದು ತಿಳಿಸಿದೆ.ಮಾರ್ಚ್​ನಲ್ಲಿ ಈ ಬಗ್ಗೆ ತಿಳಿಸಿದ ಗುಜರಾತ್​ ಸರ್ಕಾರ ನಮ್ಮ ರಾಜ್ಯ ಬಯಲು ಶೌಚ ಮುಕ್ತವಾಗಿದೆ ಎಂದು ಘೋಷಿಸಿಕೊಂಡಿತು. ಆದರೆ ಶೌಚವನ್ನು ಬಳಸಲು ಅನೇಕರಿಗೆ ತಿಳಿದಿಲ್ಲ. ನೀರಿನ ಅಭಾವ,  ಹಾಗೂ ಪೈಪ್​ ಲೈನ್​ ಸಂಪರ್ಕವನ್ನು ಕಲ್ಪಿಸಿಲ್ಲ ಎಂದು ವರದಿ ತಿಳಿಸಿದೆ.

ಅಷ್ಟೇ ಅಲ್ಲದೇ ಮುಖ್ಯಮಂತ್ರಿ ಅಮೃತಂ ಮತ್ತು ಮುಖ್ಯಮಂತ್ರಿ ಅಮೃತ ವತ್ಸಲಯ

ಆರೋಗ್ಯ ಯೋಜನೆಯನ್ನು ಜಾರಿಗೆ ತರುವಲ್ಲಿಯೂ ಕೂಡ ಗುಜರಾತ್​ ಸರ್ಕಾರ ಅನೇಕ ಸಮಸ್ಯೆಯನ್ನು ಎದುರಿಸುತ್ತಿದೆ ಎಂದು ಕೂಡ ಸಿಎಜಿ ತಿಳಿಸಿದೆ.
First published:September 22, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ