• Home
  • »
  • News
  • »
  • state
  • »
  • Pampa Sarovara: ಅಂಜನಾದ್ರಿ ಆಯ್ತು, ಈಗ ಪಂಪಾ ಸರೋವರದ ಸರದಿ; ಹೊಸ ವಿವಾದ ಸೃಷ್ಟಿಸಿದ ಗುಜರಾತ ಸರ್ಕಾರ

Pampa Sarovara: ಅಂಜನಾದ್ರಿ ಆಯ್ತು, ಈಗ ಪಂಪಾ ಸರೋವರದ ಸರದಿ; ಹೊಸ ವಿವಾದ ಸೃಷ್ಟಿಸಿದ ಗುಜರಾತ ಸರ್ಕಾರ

ಪಂಪಾ ಸರೋವರ

ಪಂಪಾ ಸರೋವರ

ಗುಜರಾತ ರಾಜ್ಯದ ಡೆಂಗ ಜಿಲ್ಲೆಯಲ್ಲಿ ಹರಿಯುವ ಪೂರ್ಣಾ ನದಿಯ ದಕ್ಷಿಣದಲ್ಲಿರುವುದು ಪಂಪಾ ಸರೋವರ. ಇಲ್ಲಿಯೇ ರಾಮ ಶಬರಿಯನ್ನು ಭೇಟಿಯಾದ ಎಂದು ಉಲ್ಲೇಖಿಸಿ ಅಲ್ಲಿಯ ಸರಕಾರದ ಪ್ರವಾಸೋದ್ಯಮ ಇಲಾಖೆಯ ವೆಬ್ ಸೈಟ್ ನಲ್ಲಿ ಬರೆದುಕೊಂಡಿದೆ.

  • Share this:

ಕೊಪ್ಪಳ: ಕೊಪ್ಪಳ (Koppal) ಜಿಲ್ಲೆಯಲ್ಲಿ ರಾಮಾಯಣದ (Ramayana) ಐತಿಹ್ಯ ಹೊಂದಿರುವ ಪವಿತ್ರ ಧಾರ್ಮಿಕ ಕೇಂದ್ರಗಳ ಮೇಲೆ ದೇಶದ ಜನರ ಕಣ್ಣು ಬಿದ್ದಂತೆ ಕಾಣಿಸುತ್ತಿದೆ. ಇಲ್ಲಿಯವರೆಗೂ ಆಂಜನೇಯನ (Lord Anjaneya) ಜನ್ಮ ಸ್ಥಳ ಅಂಜನಾದ್ರಿಯಯ (Anjanadri) ಬಗ್ಗೆ ವಿವಾದವಿತ್ತು. ಮೂರು ರಾಜ್ಯದಲ್ಲಿ ಈ ವಿವಾದವಿರುವಾಗಲೇ ಈಗ ಕಿಷ್ಕಂಧಾ ಪ್ರದೇಶದ (Kishikinda) ಪಂಪಾ ಸರೋವರ ನಮ್ಮಲ್ಲಿದೆ ಎಂಬ ವಿವಾದ ಉಂಟಾಗಿದೆ. ಗುಜರಾತ ಸರಕಾರ (Gujarat Government) ಪ್ರವಾಸೋದ್ಯಮ ಇಲಾಖೆ ವೆಬ್ ಸೈಟ್ ನಲ್ಲಿ ಪಂಪಾ ಸರೋವರ ಬಗ್ಗೆ ಉಲ್ಲೇಖಿಸಿ ಪ್ರಚಾರ ಮಾಡುತ್ತಿದ್ದಾರೆ. ಹಂಪಿ ವಿರುಪಾಕ್ಷೇಶ್ವರ ದೇವಸ್ಥಾನದ (Virupakeshwara Temple Hampi) ಪಕ್ಕದ ತುಂಗಭದ್ರಾ ನದಿಯ (Tungabhadra Rivers) ಇನ್ನೊಂದು ದಡ ದಕ್ಷಿಣದಲ್ಲಿರುವ ಪುಣ್ಯ ಕ್ಷೇತ್ರವೇ ಪಂಪಾ ಸರೋವರ (Pampa Sarovara) ಎಂಬ ಪ್ರತೀತಿ ಇದೆ.


ಇದೇ ಸ್ಥಳದಲ್ಲಿ ಶ್ರೀರಾಮ ಚಂದ್ರ ಶಬರಿಯನ್ನು ಭೇಟಿಯಾದ ಎಂಬ ನಂಬಿಕೆ ಇದೆ. ಶಬರಿ ಶ್ರೀರಾಮ, ಲಕ್ಷ್ಮಣರಿಗೆ ಹಣ್ಣು ನೀಡಿದಳು. ಈ ಸಂದರ್ಭದಲ್ಲಿ ವಾನರ ಸೇನೆ ಪರಿಚಯವಾಯಿತು. ಶ್ರೀರಾಮಚಂದ್ರ ಹಾಗು ಹನುಮಂತನಿಗೆ ಇಲ್ಲಿಯೇ ಪರಿಚಯವಾಯಿತು ಎಂಬ ಅನೇಕ ಕಥೆಗಳಿವೆ.


ಪಂಪಾ ಸರೋವರ ಪಕ್ಕದಲ್ಲಿಯೇ ಶಬರಿ ಗುಹೆ


ಈ ಎಲ್ಲಾ ಕಥೆಗಳಿಗೆ ಪುರಾವೆ ಎಂಬಂತೆ ಇಲ್ಲಿಯೇ ಆಂಜನೇಯನ ಜನ್ಮ ಸ್ಥಳ ಅಂಜನಾದ್ರಿ ಇದೆ. ತುಂಗಭದ್ರಾ ನದಿಯ ದಕ್ಷಿಣಕ್ಕೆ ಪಂಪಾ ಸರೋವರ ಇದೆ. ಪಂಪಾ ಸರೋವರ ಪಕ್ಕದಲ್ಲಿ ಶಬರಿ ಗುಹೆ‌ ಇದೆ. ಶಬರಿ ಗುಹೆಯ ಎದುರು ವಾಲಿ ಕಿಲ್ಲೆ ಇದೆ. ಈ ಎಲ್ಲವೂ ಹಿಂದಿನಿಂದಲೂ ಇಲ್ಲಿರುವುದು. ಇವುಗಳಿಂದಾಗಿಯೇ ಇದು ಕಿಷ್ಕಂಧಾ ಪ್ರದೇಶ. ಇದೇ ಅಂಜನಾದ್ರಿ. ಇದೇ ಪಂಪಾ ಸರೋವರ ಎಂದು ನಂಬಿಕೊಂಡು ಬರಲಾಗಿದೆ.


Gujarat Government creates Controversy over Pampa Sarovar
ಪಂಪಾ ಸರೋವರ


ಇದನ್ನೂ ಓದಿ:  Anjanadri Hill: ಅಂಜನಾದ್ರಿ ಬೆಟ್ಟಕ್ಕೆ 430 ಮೀಟರ್ ರೋಪ್ ವೇ ನಿರ್ಮಿಸಲು ಸಿಎಂ ಬೊಮ್ಮಾಯಿ ಸೂಚನೆ


ಈ ಪ್ರದೇಶಕ್ಕೆ ಮೊದಲಿನಿಂದ ಗುಜರಾತ ಸೇರಿದಂತೆ ಉತ್ತರ ಭಾರತದ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಈ ಮಧ್ಯೆ ಕಳೆದ ವರ್ಷ ತಿರುಮಲ ತಿರುಪತಿ ದೇವಸ್ಥಾನ ಸಮಿತಿ ಟಿಟಿಡಿಯೂ ಆಕಾಶಗಂಗಾ ಪ್ರದೇಶವೇ ಅಂಜನಾದ್ರಿ ಆಂಜನೇಯ ಇಲ್ಲಿಯೇ ಹುಟ್ಟಿದ್ದು ಎಂದು ಹೇಳಿ ವಿವಾದ ಸೃಷ್ಠಿಸಲಾಗಿತ್ತು.


ಆಂಜನೇಯನ ಜನ್ಮಸ್ಥಳದ ಬಗ್ಗೆ ವಿವಾದ


ಈ ಮಧ್ಯೆ ಮಹಾರಾಷ್ಟ್ರದಲ್ಲಿಯ ನಾಸಿಕ ಬಳಿ ಅಂಜನೇರಿಯೇ ಆಂಜ‌ನೇಯನ ಜನ್ಮ ಸ್ಥಳ ಎಂಬ ವಿವಾದ ಆರಂಭವಾಯಿತು. ಈ ಮಧ್ಯೆ ಗೋವಾದಲ್ಲಿಯ ಅಂಜದೀವ್ ಬೆಟ್ಟವೇ ಆಂಜನೇಯನ ಜನ್ಮ ಸ್ಥಳ ಎಂಬ ಇನ್ನೊಂದು ವಿವಾದ ಉಂಟಾಗಿತ್ತು. ಈ ವಿವಾದವಿರುವಾಗಲೇ ಈಗ ಗುಜರಾತ ಸರಕಾರ ಪಂಪಾ ಸರೋವರದ ಬಗ್ಗೆ ವಿವಾದ ಸೃಷ್ಠಿಸಿದೆ.


ಗುಜರಾತ ರಾಜ್ಯದ ಡೆಂಗ ಜಿಲ್ಲೆಯಲ್ಲಿ ಹರಿಯುವ ಪೂರ್ಣಾ ನದಿಯ ದಕ್ಷಿಣದಲ್ಲಿರುವುದು ಪಂಪಾ ಸರೋವರ. ಇಲ್ಲಿಯೇ ರಾಮ ಶಬರಿಯನ್ನು ಭೇಟಿಯಾದ ಎಂದು ಉಲ್ಲೇಖಿಸಿ ಅಲ್ಲಿಯ ಸರಕಾರದ ಪ್ರವಾಸೋದ್ಯಮ ಇಲಾಖೆಯ ವೆಬ್ ಸೈಟ್ ನಲ್ಲಿ ಬರೆದುಕೊಂಡಿದೆ. ಆದರೆ ಕರ್ನಾಟಕದಲ್ಲಿ ಪಂಪಾ ಸರೋವರವೇ ಮೂಲ ಸರೋವರ ಎಂಬ ಅನೇಕ ಐತಿಹ್ಯಗಳು ಇಲ್ಲಿವೆ.


Gujarat Government creates Controversy over Pampa Sarovar
ಗುಜರಾತ ಪ್ರವಾಸೋದ್ಯಮ ಜಾಲತಾಣದಲ್ಲಿರುವ ಪಂಪಾ ಸರೋಪರ


ಪವಿತ್ರ ಪಂಚ ಸರೋವರಗಳು


ಹಿಂದು ಪುರಾಣದಲ್ಲಿ ಐದು ಸರೋವರಗಳು ಪವಿತ್ರ ಎಂದು ಹೇಳಲಾಗಿದೆ. ಪಂಚ ಸರೋವರಗಳಲ್ಲಿ ಪಂಪಾ ಸರೋವರವೂ ಒಂದು. ಮಾನಸ ಸರೋವರ, ನಾರಾಯಣ ಸರೋವರ, ಬಿಂದು ಸರೋವರ. ಪುಷ್ಕರ ಸರೋವರಗಳೆಂದು ಹೇಳಲಾಗಿದೆ.


ಇದನ್ನೂ ಓದಿ:  PM Modi ಪತ್ನಿ ಭೇಟಿ ಬಳಿಕ ಎಲ್ಲವೂ ಬದಲಾಯ್ತು.. ಈಗ ಅಂಜನಾದ್ರಿಯೂ ಅಯೋಧ್ಯೆ ಮಾದರಿ ಆಗಲಿದೆಯಂತೆ


ಕರ್ನಾಟಕ ಸರ್ಕಾರ ಉತ್ತರ ನೀಡುತ್ತಾ?


ಪಂಪಾ ಸರೋವರದಲ್ಲಿ ಪಾರ್ವತಿಯು ನೃತ್ಯ ಮೂಲಕ‌ ಶಿವನ ಮೇಲಿನ ಪ್ರೀತಿಯನ್ನು ತೋರಿಸಿದಳು ಎಂಬ ಪ್ರತೀತಿ ಇದೆ‌. ಪುರಾಣ ಪ್ರಸಿದ್ದ ಪಂಪಾ ಸರೋವರದ ಬಗ್ಗೆ ದೇಶದ ಜನರಲ್ಲಿ ಭಕ್ತಿ ಭಾವವಿದೆ. ಇತ್ತೀಚಿನ ದಿನಗಳಲ್ಲಿ ಕೊಪ್ಪಳ ಹಾಗೂ ವಿಜಯನಗರ ಜಿಲ್ಲೆಯಲ್ಲಿಯ ಕಿಷ್ಕಂಧಾ ಪ್ರದೇಶವು ದೇಶ ವಿದೇಶದಲ್ಲಿ ಖ್ಯಾತಿ ಹೊಂದುತ್ತಿದ್ದಂತೆ. ಬೇರೆ ಬೇರೆ ರಾಜ್ಯಗಳು ಕಿಷ್ಕಂದಾ ಪ್ರದೇಶ, ಆಂಜನೇಯನ ಜನ್ಮ ಸ್ಥಳ, ಶಿವನ ಪುಣ್ಯ ಕ್ಷೇತ್ರದ ಬಗ್ಗೆ ವಿವಾದ ಸೃಷ್ಠಿಸುತ್ತಿವೆ ಇದಕ್ಕೆ ರಾಜ್ಯ ಸರಕಾರ ತಕ್ಕ ಉತ್ತರ ನೀಡಬೇಕಾಗಿದೆ.

Published by:Mahmadrafik K
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು