ಗುಜರಾತಿನಲ್ಲಿ (Gujarat Election 2022) ಆಡಳಿತ ವಿರೋಧಿ ಅಲೆ ನಡುವೆಯೂ ಬಿಜೆಪಿ (BJP) ಪ್ರಚಂಡ ಗೆಲುವಿನತ್ತ ಹೆಜ್ಜೆ ಇಡುತ್ತಿದೆ. ಆದ್ರೆ ಈ ಗೆಲುವ ಸಂಭ್ರಮಿಸುವ ಸಂದರ್ಭದಲ್ಲಿ ರಾಜ್ಯ ಬಿಜೆಪಿ ನಾಯಕರಿಗೆ (Karnataka BJP Leaders) ಹೊಸ ನಡುಕ ಶುರುವಾಗಿದೆ. ಈ ಬಾರಿ ಆಡಳಿತ ವಿರೋಧಿ ಮೆಟ್ಟಿ ನಿಲ್ಲಲು ಗುಜರಾತಿನಲ್ಲಿ ಹಲವು ಬದಲಾವಣೆಗಳನ್ನು ಬಿಜೆಪಿ ಮಾಡಿತ್ತು. ಆ ಬದಲಾವಣೆಗಳೇ ಇಂದಿನ ಗೆಲುವಿಗೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಹೀಗಾಗಿ ಗುಜರಾತ್ನಲ್ಲಿ ಪ್ರಯೋಗಿಸಿದ ಅಸ್ತ್ರಗಳನ್ನೇ ಕರ್ನಾಟಕದಲ್ಲಿ (Karnataka Assembly Election 2023) ಪ್ರಯೋಗಿಸುವ ಸಾಧ್ಯತೆಗಳಿವೆ. ಒಂದು ಬಿಜೆಪಿ ಹೈಕಮಾಂಡ್ ಈ ಪ್ರಯೋಗಕ್ಕೆ ಮುಂದಾದ್ರೆ ಒಂದಿಷ್ಟು ಹಿರಿ ತಲೆಗಳಿಗೆ ಟಿಕೆಟ್ ತಪ್ಪಿಸುವ ಸಾಧ್ಯತೆಗಳಿವೆ.
ಗುಜರಾತ್ ಮತ್ತು ಹಿಮಾಚಲ ಪ್ರದೇಶದ ಫಲಿತಾಂಶ ಪ್ರಕಟವಾಗುತ್ತಿದೆ. ಗುಜರಾತಿನಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರದ ಗದ್ದುಗೆ ಏರೋದು ಬಹುತೇಕ ಫಿಕ್ಸ್ ಆಗಿದೆ. ಆದ್ರೆ ಈ ಗೆಲುವಿಗೆ ಕಾರಣವಾಗಿರುವ ವಿಷಯ ರಾಜ್ಯ ಬಿಜೆಪಿಯ ಹಿರಿಯ ನಾಯಕರನ್ನು ನಿದ್ದೆಗೆಡುವಂತೆ ಮಾಡುತ್ತಿದೆ.
ಏನು ಆ ಬದಲಾವಣೆ?
ಗುಜರಾತ್ ಚುನಾವಣೆಯಲ್ಲಿ ಈ ಬಾರಿ ಹೊಸಬರಿಗೆ ಟಿಕೆಟ್ ನೀಡಲಾಗಿತ್ತು. ಆಡಳಿತ ವಿರೋಧಿ ಅಲೆ ಮೆಟ್ಟಿ ನಿಲ್ಲಲು ಮಾಜಿ ಸಿಎಂ ವಿಜಯ್ ರೂಪಾನಿ ಸೇರಿದಂತೆ ಅನೇಕ ನಾಯಕರಿಗೆ ಟಿಕೆಟ್ ನಿರಾಕರಿಸಿ ಹೊಸ ಮುಖಗಳಿಗೆ ಮಣೆ ಹಾಕಲಾಗಿತ್ತು. ಸದ್ಯದ ಮೇಲ್ನೋಟದಲ್ಲಿ ಹೊಸ ಮುಖಗಳಿಗೆ ಮಣೆ ಹಾಕಿರೋದು ಸಕ್ಸಸ್ ಆದಂತೆ ಕಾಣಿಸುತ್ತಿದೆ.
ಕರ್ನಾಟಕದಲ್ಲೂ ಗುಜರಾತ್ ಟಿಕೆಟ್ ಮಾದರಿ ಅನುಸರಿಸೋ ಲೆಕ್ಕಚಾರಗಳ ಚರ್ಚೆಗಳು ಆರಂಭಗೊಂಡಿವೆ. ಒಂದು ವೇಳೆ ರಾಜ್ಯದಲ್ಲಿಯೂ ಗುಜರಾತ್ ಮಾದರಿ ಅನುಸರಿಸಿದರೆ ಸುಮಾರು ಮೂರು ಡಜನ್ಗೂ ಅಧಿಕ ಹಾಲಿ ಶಾಸಕರು ಟಿಕೆಟ್ ಕಳೆದುಕೊಳ್ಳುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಯಾರಿಗೆಲ್ಲಾ ಟಿಕೆಟ್ ಕಳೆದುಕೊಳ್ಳುವ ಭಯ?
ಜಗದೀಶ್ ಶೆಟ್ಟರ್: ಹುಬ್ಬಳ್ಳಿ ದಾರವಾಢ ಸೆಂಟ್ರಲ್, ಕೆ.ಎಸ್.ಈಶ್ವರಪ್ಪ: ಶಿವಮೊಗ್ಗ, ಜಿ.ಹೆಚ್.ತಿಪ್ಪಾರೆಡ್ಡಿ: ಚಿತ್ರದುರ್ಗ, ಎಸ್ ಸುರೇಶ್ ಕುಮಾರ್: ರಾಜಾಜಿನಗರ
ಸಿ.ಸಿ.ಪಾಟೀಲ್: ನರಗುಂದ , ಕಳಕಪ್ಪ ಬಂಡಿ: ರೋಣ, ಶ್ರೀಮಂತ ಪಾಟೀಲ್: ಕಾಗವಾಡ, ಕೆ.ಜೆ.ಬೋಪಯ್ಯ: ಮಡಿಕೇರಿ, ಲಾಲಜಿ ಮೆಂಡನ್: ಕಾಪು, ಎಸ್ ಅಂಗಾರ:ಸುಳ್ಯ, ಎಸ್ ಎ ರವೀಂದ್ರನಾಥ್ ಎಂ.ಪಿ: ದಾವಣಗೆರೆ ಉತ್ತರ, ಎಂ.ಪಿ ಕುಮಾರಸ್ವಾಮಿ: ಮೂಡಿಗೆರೆ , ಡಿ.ಎಸ್.ಸುರೇಶ್: ತರೀಕೆರೆ
ಎರಡೂ ರಾಜ್ಯಗಳಲ್ಲಿ ಗೆದ್ದು, ಕರ್ನಾಟಕಕ್ಕೆ ಎಂಟ್ರಿ ಕೊಡಲು ಬಿಜೆಪಿ ತಯಾರಿ ನಡೆಸಿತ್ತು. ಆದ್ರೆ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಮುನ್ನಡೆ ಕಾಯ್ದುಕೊಳ್ಳುತ್ತಿದೆ. ಹಾಗಾಗಿ ಅಲ್ಪ ಸಂತೋಷದಲ್ಲಿ ಬಿಜೆಪಿ ನಾಯಕರಿದ್ದಾರೆ. ಇತ್ತ ಮುಳುಗುತ್ತಿರುವ ಹಡಗು ಎಂದು ಬಿಂಬಿತವಾಗಿರುವ ಕಾಂಗ್ರೆಸ್ಗೆ ಹಿಮಾಚಲ ಪ್ರದೇಶದ ಫಲಿತಾಂಶ ನಿಟ್ಟುಸಿರು ಬಿಡುವಂತೆ ಮಾಡಿದೆ.
ಗೋಪಾಲಯ್ಯ ಹೇಳಿಕೆ
ಎರಡೂ ರಾಜ್ಯಗಳ ಚುನಾವಣಾ ಫಲಿತಾಂಶದ ಕುರಿತು ಸಚಿವ ಗೋಪಾಲಯ್ಯ ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ್ದಾರೆ. ಗುಜರಾತಿನಲ್ಲಿ ಫಲಿತಾಂಶ ಏನು ಬರುತ್ತೆ ಅಂತ ಇಡೀ ದೇಶದ ಜನರಿಗೆ ಮೊದಲೇ ಗೊತ್ತಿತ್ತು. ಮೋದಿ ನಾಯಕತ್ವದಲ್ಲಿ ಹಿಂದೆ ಬಂದಿರುವುದಕ್ಕಿಂತ ಹೆಚ್ಚು ಸೀಟ್ ಈಗ ಬರುತ್ತಿವೆ. ಇದನ್ನೇ ಚುನಾವಣಾ ಸಮೀಕ್ಷೆಯೂ ಹೇಳಿತ್ತು ಎಂದರು.
ಇದನ್ನೂ ಓದಿ: Gujarat Election Result 2022: ಮೊರ್ಬಿ ದುರಂತದಲ್ಲಿ ಹಲವರ ಪ್ರಾಣ ಕಾಪಾಡಿದ್ದ ಕಾಂತಿಲಾಲ್ಗೆ ಭಾರೀ ಮುನ್ನಡೆ!
ಕರ್ನಾಟಕದಲ್ಲಿಯೂ ಬಿಜೆಪಿ ಗೆಲ್ಲುತ್ತೆ
ಇಂದು ನಿರೀಕ್ಷೆಗೂ ಮೀರಿ ಜನರು ಬಿಜೆಪಿಗೆ ಮತ ನೀಡಿದ್ದಾರೆ. 2023ರ ಕರ್ನಾಟಕ ಚುನಾವಣೆಯಲ್ಲೂ ಅದೇ ಆಗುತ್ತೆ. ಮೋದಿಯವರ ನಾಯಕತ್ವ ನಂಬಿ ಮತ ನೀಡಿದ್ದಾರೆ ಎಂದು ಪ್ರಧಾನಿಗಳನ್ನು ಹೊಗಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ