New Year Rules: ಹೊಸ ವರ್ಷ ಹಿನ್ನೆಲೆ ಪಬ್ ಅಂಡ್ ರೆಸ್ಟೋರೆಂಟ್ (Pub And Restaurants), ಪಿಜಿ ಮಾಲೀಕರಿಗೆ (PG Owners) ಪೊಲೀಸರು ಮಾರ್ಗಸೂಚಿ ಹೊರಡಿಸಿದ್ದಾರೆ. ಆಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪಿಜಿ ಮತ್ತು ಪಬ್, ಕ್ಲಬ್, ರೆಸ್ಟೋರೆಂಟ್ ಮಾಲೀಕರ ಜೊತೆ ಪೊಲೀಸ್ ಇನ್ಸ್ಪೆಕ್ಟರ್ (Police Inspector) ನೇತೃತ್ವದಲ್ಲಿ ಸಭೆ ನಡೆಲಾಗಿದೆ. ಸಭೆಯಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತ ಕ್ರಮಗಳ ಮಾಹಿತಿ ನೀಡಲಾಗಿದೆ. ಠಾಣಾ ಮಟ್ಟದಲ್ಲಿ ಸಭೆ ನಡೆಸಿ ಹಲವು ಅಂಶಗಳ ನಿರ್ದೇಶನ ಪಾಲಿಸುವಂತೆ ಸೂಚನೆ ನೀಡಲಾಗಿದೆ. ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳುವಂತೆ ಸೂಚಿಸಿದ್ದು, ತಪ್ಪಿದಲ್ಲಿ ಕರ್ನಾಟಕ ಸಾರ್ವಜನಿಕ ಸುರಕ್ಷತೆ ಕಾಯ್ದೆ 2018ರ ಅಡಿ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ.
ಪಿಜಿ ಮಾಲೀಕರು ಪಾಲಿಸಬೇಕಾದ ಸೂಚನೆಗಳು
1.ಪಿಜಿಗಳಲ್ಲಿ ಖಾಯಂ ಆಗಿ ಸೆಕ್ಯೂರಿಟಿ ಗಾರ್ಡ್ಗಳನ್ನು ನಿಯೋಜಿಸತಕ್ಕದ್ದು.
2.ದಿನಾಂಕ 31/12/2022ರಂದು ಹೊಸ ವರ್ಷದ ಪ್ರಯುಕ್ತ ಆ ವೇಳೆಗೆ ಪಿಜಿಯಿಂದ ಕ್ಯಾಬ್ನಲ್ಲಿ ಹೊರಗಡೆ ಹೋಗುವವರ ಮತ್ತು ಒಳಗಡೆ ಬರುವವರ ಮಾಹಿತಿ ಹಾಗೂ ಕ್ಯಾಬ್ ಅಥವಾ ವಾಹನಗಳ ಮಾಹಿತಿ ಸಂಗ್ರಹಿಸುವುದು.
3.ಪಿಜಿಯಲ್ಲಿರುವವರ ಆಗಮನ ಮತ್ತು ನಿರ್ಗಮನದ ಬಗ್ಗೆ ನಿಖರವಾದ ಸಮಯ ಮಾಹಿತಿ ಸಂಗ್ರಹಿಸುವುದು.
4.ತಮ್ಮ ಪಿಜಿಗಳ ಟೆರೇಸ್ ಮೇಲೆ ಹೊಸ ವರ್ಷದ ಪಾರ್ಟಿ ಮಾಡಿ ಕುಡಿಯುವರರ ಮಾಹಿತಿ ಸಂಗ್ರಹಿಸುವುದು.
5.ದಿನಾಂಕ 31/12/2022ರಂದು ಹೊಸ ವರ್ಷದ ಪ್ರಯುಕ್ತ ಹೊಸಬರು ಮತ್ತು ಅಪರಿಚಿತರನ್ನು ಪಿಜಿಯೊಳಗೆ ಸೇರಿಸಿಕೊಳ್ಳಬಾರದು.
6.ಪಿಜಿ ಮಾಲೀಕರು ದಿನಾಂಕ 31/12/2022ರಂದು ಸ್ಥಳದಲ್ಲಿಯೇ ಇರಬೇಕು.
7.ದಿನಾಂಕ 31/12/2022ರಂದು ಪಿಜಿಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳುವುದು.
8.ಮಹಿಳಾ ಪಿಜಿಗಳಿಗೆ ಶುಭಕೋರಲು ಆ ವೇಳೆಯಲ್ಲಿ ಬರುವ ಪುರುಷರಿಗೆ ಅವಕಾಶ ನೀಡಬಾರದು.
9.ಪಿಜಿಗಳ ಮುಂಭಾಗದ ರಸ್ತೆಗಳಲ್ಲಿ ಹೊಸ ವರ್ಷದ ಪ್ರಯುಕ್ತ ಕೇಕ್ಗಳನ್ನು ಕಟ್ ಮಾಡಬಾರದು.
10.ಪಿಜಿಗಳಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದಲ್ಲಿ ಪರವಾನಿಗೆ ರದ್ದುಪಡಿಸಲು ಬಿಬಿಎಂಪಿಗೆ ವರದಿ ಸಲ್ಲಿಸಲಾಗುವುದು.
11.ಪಿಜಿಗಳಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದಲ್ಲಿ ಅದಕ್ಕೆ ನೀವೇ ನೇರ ಹೊಣೆ ಆಗಿರುತ್ತೀರಿ.
12.ಯಾವುದೇ ವಿಶೇಷತೆ ಕಂಡು ಬಂದರೇ ಕೂಡಲೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡುವುದು.
ರೆಸ್ಟೋರೆಂಟ್ ಮತ್ತು ಪಬ್ಗಳಿಗೆ ನೀಡಿರುವ ಸೂಚನೆಗಳು
1.ಕಾರ್ಯಕ್ರಮ ನಡೆಯುವ ಸ್ಥಳಗಳಲ್ಲಿ ಪಬ್, ಬಾರ್ ಆಂಡ್ ರೆಸ್ಟೋರೆಂಟ್ಗಳಲ್ಲಿ ಸೂಕ್ತ ಬೆಳಕಿನ ವ್ಯವಸ್ಥೆ ಮಾಡಿಕೊಳ್ಳುವುದು.
2.ಕಾರ್ಯಕ್ರಮ ಸ್ಥಳಗಳಲ್ಲಿ ಉತ್ತಮ ಗುಣಮಟ್ಟದ ಸಿಸಿಟಿವಿ ಕ್ಯಾಮೆರಾ ಅಳವಡಿಸಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳುವುದು.
3.ಗ್ರಾಹಕರ ಬ್ಯಾಗ್ ಚೆಕ್ ಮಾಡಿ, ಸ್ಪೋಟಕ, ಮಾದಕ ದ್ರವ್ಯ, ಗಾಂಜಾ ಸೇರಿದಂತೆ ಅಪಾಯಕಾರಿ ವಸ್ತುಗಳು ಇಲ್ಲದಿರೋದನ್ನು ಖಚಿತಪಡಿಸಿಕೊಳ್ಳುವುದು.
4.ಗ್ರಾಹಕರ ಆಗಮನ ಮತ್ತು ನಿರ್ಗಮನಕ್ಕೆ ಪ್ರತ್ಯೇಕ ದ್ವಾರ ರಚಿಸಬೇಕು. ಪ್ರವೇಶ ದ್ವಾರದಲ್ಲಿ ಹೆಚ್ಹೆಚ್ಎಂಡಿ ಮೂಲಕ ಪರಿಶೀಲಿಸುವುದು.
5.ಬಾರ್ & ರೆಸ್ಟೋರೆಂಟ್ಗಳಲ್ಲಿ 18 ವರ್ಷಕ್ಕಿಂತ ಒಳಗಿನವರಿಗೆ ಪ್ರವೇಶ ನೀಡಬಾರದು.
6.ಹೆಚ್ಚಾಗಿ ಮದ್ಯಪಾನ ಮಾಡಿದವರಿಗೆ ಸುಧಾರಿಸಿಕೊಳ್ಳಲು ಐಸ್ಲ್ಯಾಂಡ್ ಸ್ಥಳ ಆಯೋಜಿಸುವುದು.
7.ಮಹಿಳಾ ಗ್ರಾಹಕರು ಅತಿಯಾಗಿ ಮದ್ಯ ಸೇವಿಸಿ ತಮ್ಮ ಸಮತೋಲನ ಕಳೆದುಕೊಳ್ಳುವ ಸಂಭವ ಇರುತ್ತದೆ. ಆದ್ದರಿಂದ ಮಹಿಳಾ ಗ್ರಾಹಕರ ಭದ್ರತೆ ಮತ್ತು ಸುರಕ್ಷತೆಗಾಗಿ ಮಹಿಳಾ ಬೌನ್ಸರ್ಗಳನ್ನು ನೇಮಿಸಿಕೊಳ್ಳತಕ್ಕದ್ದು.
8.ಅತಿಯಾಗಿ ಮದ್ಯ ಸೇವಿಸಿ ಅನುಚಿತವಾಗಿ ವರ್ತಿಸಿದ ಮಹಿಳೆಯರನ್ನು ಮಹಿಳಾ ಬೌನ್ಸರ್ಗಳ ಮೂಲಕ ಅವರ ವಾಸಸ್ಥಾನಕ್ಕೆ ತಲುಪಿಸೋದು. ಈ ಸಮಯದಲ್ಲಿ ಮಹಿಳಾ ಗ್ರಾಹಕರು ಪ್ರಯಾಣಿಸುವ ವಾಹನದ ಸಂಖ್ಯೆ ಮತ್ತು ಚಾಲಕನ ಫೋಟೋ ಸಂಗ್ರಹಿಸಿಕೊಳ್ಳುವುದು.
9.ಕಾರ್ಯಕ್ರಮದ ಸ್ಥಳದಲ್ಲಿ ಯಾವುದೇ ರೀತಿಯ ಅಕ್ರಮ/ಅನೈತಿಕ ಚಟುವಟಿಕೆಗಳು, ಮಹಿಳೆ ಮೇಲೆ ದೌರ್ಜನ್ಯ ಮತ್ತು ಇತರೆ ಅಪರಾಧಗಳು ಜರುಗದಂತೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವುದು.
10.ಮದ್ಯದಂಗಡಿ ಒಳಗೆ, ಹೊರಗೆ ಮತ್ತು ಸುತ್ತಲಿನ ಪರಿಸರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರವಹಿಸುವುದು. ಮದ್ಯದಂಗಡಿ ಪರಿಸರದಲ್ಲಿ ಅಪರಾಧ ನಡೆದಲ್ಲಿ ಮಾಲೀಕರ ವಿರುದ್ಧ ಸೂಕ್ತ ಕ್ರಮ ಜರುಗಿಸುವುದು.
11.ಕಾರ್ಯಕ್ರಮ ಆಯೋಜನೆಗೆ ಪೊಲೀಸ್ ಇಲಾಖೆಯಿಂದ ಅನುಮತಿ ಪತ್ರ ಪಡೆದುಕೊಳ್ಳುವುದು.
ಇದನ್ನೂ ಓದಿ: New Year Celebrations: ಈ ವರ್ಷ ದಾಖಲೆ ಬರೆಯುತ್ತಾ ಬೆಂಗಳೂರು? ಪೊಲೀಸರಿಗೆ ಹೊಸ ಟಾಸ್ಕ್, ಮಾರ್ಷಲ್ಸ್ ಕಣ್ಗಾವಲು
12.ಮದ್ಯದಂಗಡಿ, ಬಾರ್, ರೆಸ್ಟೋರೆಂಟ್ಗಳಲ್ಲಿ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡೋದು ಮತ್ತು ಸಂಚಾರಿ ಪೊಲೀಸರ ಅನುಮತಿ ಪಡೆಯೋದು.
13.ಕಾರ್ಯಕ್ರಮದಲ್ಲಿ ಧ್ವನಿವರ್ಧಕ ಬಳಕೆ ಪೊಲೀಸ್ ಇಲಾಖೆಯಿಂದ ಅನುಮತಿ ಪಡೆಯೋದು.
14.ಕಾರ್ಯಕ್ರಮ ಆಯೋಜಕರೇ ತಮ್ಮ ಗ್ರಾಹಕರ ರಕ್ಷಣೆ ಬಗ್ಗೆ ಎಚ್ಚರಿಕೆ ತೆಗೆದುಕೊಳ್ಳುವುದು.
15.ಕೋವಿಡ್-19 ಸಂಬಂಧಪಟ್ಟಂತೆ ಹೊರಡಿಸಲಾದ ಮಾರ್ಗಸೂಚಿಗಳನ್ನು ಪಾಲನೆ ಮಾಡೋದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ