HOME » NEWS » State » GUEST LECTURERS REQUESTED SEERS TO DEMAND GOVT TO PROVIDE JOB SECURITY GNR

ಕೊರೋನಾದಿಂದ ಬೀದಿಗೆ ಬಿದ್ದ ಅತಿಥಿ ಉಪನ್ಯಾಸಕರ ಬದುಕು; ಕ್ಯಾರೇ ಎನ್ನದ ಸರ್ಕಾರ

ರಾಜ್ಯದ ಪ್ರಮುಖ ಎಲ್ಲಾ ಮಠ ಮಾನ್ಯಗಳಗೆ ಭೇಟಿ ಕೊಟ್ಟು ಸ್ವಾಮಿಜಿಗಳ ಮೂಲಕ ಸರ್ಕಾರಕ್ಕೆ ತಮ್ಮ ನೋವನ್ನು ತಲುಪಿಸುವಲ್ಲಿ ಅಥಿತಿ ಉಪನ್ಯಾಸಕರು ನಿರತರಾಗಿದ್ದಾರೆ. ಎಷ್ಟೇ ಗೋಗೆರೆದು ಕೇಳಿಕೊಂಡರೂ ಸರ್ಕಾರ ತಮ್ಮ ಸಮಸ್ಯೆಗೆ ಸ್ಪಂದಿಸುತಿಲ್ಲ.

news18-kannada
Updated:September 7, 2020, 7:22 AM IST
ಕೊರೋನಾದಿಂದ ಬೀದಿಗೆ ಬಿದ್ದ ಅತಿಥಿ ಉಪನ್ಯಾಸಕರ ಬದುಕು; ಕ್ಯಾರೇ ಎನ್ನದ ಸರ್ಕಾರ
ಸಾಂದರ್ಭಿಕ ಚಿತ್ರ
  • Share this:
ತುಮಕೂರು(ಸೆ.07): ಲಾಕ್​​ಡೌನ್ ವೇಳೆ ಸರ್ಕಾರ ಕೆಲ ವರ್ಗದ ಜನರಿಗೆ ಪರಿಹಾರ ಘೋಷಣೆ ಮಾಡಿತ್ತು. ಆದರೆ ಅಥಿತಿ ಉಪನ್ಯಾಸಕರನ್ನು ಕಣೆಗಣಿಸಿತ್ತು. ಪರಿಣಾಮ ಅಥಿತಿ ಉಪನ್ಯಾಸಕರ ಜೀವನ ದುಸ್ತರವಾಗಿದೆ. ಸರ್ಕಾರಕ್ಕೆ ಎಷ್ಟೇ ಮನವಿ ಸಲ್ಲಿಸಿದ್ರೂ ಸಹಾಯ ಹಸ್ತ ಚಾಚಿಲ್ಲ. ಇದರಿಂದ ನೊಂದ ಅಥಿತಿ ಉಪನ್ಯಾಸಕರು ರಾಜ್ಯಾದ್ಯಂತ ಸ್ವಾಮಿಗಳ ಮೊರೆ ಹೋಗಿದ್ದಾರೆ. ನಾವು ಭವಿಷ್ಯತ್ತಿನ ದೇಶದ ಪ್ರಜೆಗಳನ್ನು ಸೃಷ್ಟಿಸುವವರು. ಎಮ್ಮೆ ಚರ್ಮದ ಸರ್ಕಾರಕ್ಕೆ ತಮ್ಮ ಅಳಲು ಕೇಳೋದಿಲ್ಲ. ಕೊರೋನಾ ಸೋಂಕು ಕಾಣಿಸಿಕೊಂಡಾಗಿಂದ ನಮಗೆ ಕೆಲಸ ಇಲ್ಲ. ಸಂಬಳ ಇಲ್ಲದೇ ಒಂದೊತ್ತಿನ ಊಟಕ್ಕೂ ಪರದಾಡುವಂತಾಗಿದೆ. ಸೇವಾ ಭದ್ರತೆ ಮೊದಲೇ ಇಲ್ಲ. ಇದರಿಂದ ನಾವು ಬೀದಿಪಾಲಾಗುತ್ತಿದ್ದೇವೆ ಹೀಗೆ ಒಂದೇ ಸಮನೆ ತಮ್ಮ ಅಳಲನ್ನು ತೋಡಿಕೊಳ್ಳುತ್ತಾರೆ ಅಥಿತಿ ಉಪನ್ಯಾಸಕರು.

ರಾಜ್ಯದಲ್ಲಿ ಸುಮಾರು 11 ಸಾವಿರ ಅಥಿತಿ ಉಪನ್ಯಾಸಕರು ಇದ್ದಾರೆ. ಇವರೆಲ್ಲರೂ ಸೇರಿ ಲಾಕ್​​ಡೌನ್ ವೇಳೆಯ ಸಂಬಳ ನಿಡುವಂತೆ ಸರ್ಕಾರಕ್ಕೆ ಮನವಿ ಮಾಡಿ ಸುಸ್ತಾಗಿದ್ದಾರೆ. ಅದರೆ ಸರ್ಕಾರ ಇವರ ಮನವಿಗೆ ಸ್ಪಂದಿಸಿಲ್ಲ. ಇದರಿಂದ ಬೇಸತ್ತ ಅಥಿತಿ ಉಪನ್ಯಾಸಕರು ಈಗ ರಾಜ್ಯಾದ್ಯಂತ ಇರುವ ಪ್ರಮುಖ ಸ್ವಾಮಿಜಿಗಳ ಮೊರೆ ಹೋಗಿದ್ದಾರೆ. ಆದಿಚುಂಚನಗಿರಿ ಸ್ವಾಮಿಜಿ, ಸಿದ್ದಗಂಗಾ ಶ್ರೀಗಳನ್ನು ಈಗಾಗಲೇ ಭೇಟಿ ಮಾಡಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಸರ್ಕಾರಕ್ಕೆ ನೀವಾದರೂ ಹೇಳಿ ಎಂದು ಬಿನ್ನವಿಸಿಕೊಂಡಿದ್ದಾರೆ. ಆದಿಚುಂಚನಗಿರಿಯ ಪ್ರಸನ್ನಾ ನಂದ ಸ್ವಾಮೀಜಿ ಹಾಗೂ ಸಿದ್ದಗಂಗ ಮಠದ ಸಿದ್ದಲಿಂಗಸ್ವಾಮಿಜಿಗಳು ಅಥಿತಿ ಉಪನ್ಯಾಸಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಕೊರೋನಾ ವೇಳೆಯ ಸಂಬಳ ಸೇರಿದಂತೆ ಪಶ್ಚಿಮ ಬಂಗಾಳದ ಸರ್ಕಾರ ನೀಡಿದಂತೆ ಸೇವಾ ಭದ್ರತೆ ಕೊಡುವಂತೆ ಸರ್ಕಾರಕ್ಕೆ ಒತ್ತಡ ತರುತ್ತೇವೆ ಎಂದು ಸ್ವಾಮಿಜಿಗಳು ಭರವಸೆ ಕೊಟ್ಟಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಕನ್ಹಯ್ಯ ಕುಮಾರ್ ಪೌರತ್ವ ರದ್ದುಗೊಳಿಸಿ ಎಂದು ಅರ್ಜಿ ಸಲ್ಲಿಸಿದ್ದ ವ್ಯಕ್ತಿಗೆ 25 ಸಾವಿರ ದಂಡ ವಿಧಿಸಿದ ಹೈಕೋರ್ಟ್‌

ರಾಜ್ಯದ ಪ್ರಮುಖ ಎಲ್ಲಾ ಮಠ ಮಾನ್ಯಗಳಗೆ ಭೇಟಿ ಕೊಟ್ಟು ಸ್ವಾಮಿಜಿಗಳ ಮೂಲಕ ಸರ್ಕಾರಕ್ಕೆ ತಮ್ಮ ನೋವನ್ನು ತಲುಪಿಸುವಲ್ಲಿ ಅಥಿತಿ ಉಪನ್ಯಾಸಕರು ನಿರತರಾಗಿದ್ದಾರೆ. ಎಷ್ಟೇ ಗೋಗೆರೆದು ಕೇಳಿಕೊಂಡರೂ ಸರ್ಕಾರ ತಮ್ಮ ಸಮಸ್ಯೆಗೆ ಸ್ಪಂದಿಸುತಿಲ್ಲ.  ಸ್ವಾಮಿಜಿಗಳ ಮಾತನ್ನಾದರೂ ಕೇಳಿ ತಮಗೆ ನೆರವಿಗೆ ಬರುತ್ತಾ ಎಂಬ ಆಶಾ ಭಾವನೆಯಿಂದ ಅಥಿತಿ ಉಪನ್ಯಾಸಕರು ಕಾಯುತಿದ್ದಾರೆ.
Published by: Ganesh Nachikethu
First published: September 7, 2020, 7:22 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading