Amul vs Nandini ಮಧ್ಯೆ ಸ್ಪರ್ಧೆ ತಂದವರು ಯಾರು? ಯಾರಿಗೆ ಲಾಭ, ಯಾರಿಗೆ ನಷ್ಟ?

ನಂದಿನಿ V/S ಅಮೂಲ್​

ನಂದಿನಿ V/S ಅಮೂಲ್​

ನಂದಿನಿ ಬ್ರ್ಯಾಂಡ್‌ನೊಂದಿಗೆ ಅಮುಲ್ ಯಾವುದೇ ಪೈಪೋಟಿ ನಡೆಸುತ್ತಿಲ್ಲ ಎಂಬ ಆಶ್ವಾಸನೆಯನ್ನು ನೀಡಿದರು.

  • Share this:

ಭಾರತದಲ್ಲಿ ಕ್ಷೀರ ಸಹಕಾರಿ ಸಂಘಟಗಳು ಬಲವರ್ಧನೆಗೊಳ್ಳಲು ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟ (GCMMF) ಮತ್ತು ಕರ್ನಾಟಕ ಹಾಲು ಒಕ್ಕೂಟ (KMF) ಜೊತೆಯಾಗಿ ಕಾರ್ಯನಿರ್ವಹಿಸಬೇಕು ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಮಂಡ್ಯದಲ್ಲಿ ಕರೆನೀಡಿದ್ದರು. ತದ ನಂತರ ಏಪ್ರಿಲ್ 5 ರಂದು ಗುಜರಾತ್‌ನ GCMMF ವ್ಯವಸ್ಥಾಪಕ ನಿರ್ದೇಶಕ ಜಯನ್ ಮೆಹ್ತಾ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಮಾತ್ರ ಅಮುಲ್ ಹಾಲು ಹಾಗೂ ಮೊಸರನ್ನು ಕರ್ನಾಟಕದಲ್ಲಿ ಲಭ್ಯವಾಗುವಂತೆ ಮಾರಾಟ ಮಾಡಲಾಗುತ್ತದೆ ಎಂಬ ಹೇಳಿಕೆ ನೀಡಿದರು. ನಂದಿನಿ ಬ್ರ್ಯಾಂಡ್‌ನೊಂದಿಗೆ ಅಮುಲ್ ಯಾವುದೇ ಪೈಪೋಟಿ ನಡೆಸುತ್ತಿಲ್ಲ ಎಂಬ ಆಶ್ವಾಸನೆಯನ್ನು ನೀಡಿದರು.


ನಂದಿನಿ ಹಾಗೂ ಅಮುಲ್ ವಿಲೀನ ಸಂದೇಹ ಸೃಷ್ಟಿ


ಇದೆಲ್ಲಾ ಬೆಳವಣಿಗೆಗಳು ರಾಜಕೀಯವಾಗಿ ರಂಗು ಪಡೆದು ಇನ್ನು ಮುಂದೆ ಅಮುಲ್ ಹಾಗೂ ನಂದಿನಿ ವಿಲೀನಗೊಳ್ಳಲಿದೆ ಎಂಬ ಸಂದೇಹವನ್ನು ಹುಟ್ಟುಹಾಕಿತು ಇದರೊಂದಿಗೆ ಅಮುಲ್ ಅನ್ನು ನಿಷೇಧಿಸುವ ಅಭಿಯಾನಗಳು ಸಾಮಾಜಿಕ ತಾಣಗಳಲ್ಲಿ ಜೋರಾದವು. ಕೆಎಮ್‌ಎಫ್ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳಲಿದೆ ಎಂಬ ಭಯವನ್ನು ಉಂಟುಮಾಡಿತು.


ರಾಜಕೀಯವಾಗಿ ರಂಗು ಪಡೆದ ಬ್ರ್ಯಾಂಡ್ ಸಂಘರ್ಷ


ಒಟ್ಟಿನಲ್ಲಿ ಈ ಎರಡು ಬ್ರ್ಯಾಂಡ್‌ಗಳನ್ನು ಒಂದು ವಿವಾದಗಳನ್ನು ಸೃಷ್ಟಿಸಿಕೊಳ್ಳಲೆಂದೇ ಬಳಸಿಕೊಳ್ಳಲಾಯಿತು. ಅಂತೆಯೇ ಬಿಜೆಪಿ ನೇತೃತ್ವದ ಕರ್ನಾಟಕ ಸರಕಾರದ ಸಹಾಯದಿಂದ ಕೇಂದ್ರದ ಬಿಜೆಪಿಯು ಎರಡು ಒಕ್ಕೂಟಗಳನ್ನು ವಿಲೀನಗೊಳಿಸಲು ಮತ್ತು KMF ನ ಜನಪ್ರಿಯ ನಂದಿನಿ ಬ್ರ್ಯಾಂಡ್ ಅನ್ನು "ನಾಶ" ಮಾಡಲು ರಹಸ್ಯವಾಗಿ ಯೋಜಿಸುತ್ತಿದೆ ಎಂಬ ಚುನಾವಣಾ ಪೂರ್ವನಿರೂಪಣೆಗೂ ಈ ಘಟನೆ ಸಾಕ್ಷಿಯಾಯಿತು.


ಇದನ್ನೂ ಓದಿ: ಮುಂದುವರಿದ ಪಕ್ಷಾಂತರ ಪರ್ವ; ಇಂದು ಸಿಎಂ ನಾಮಪತ್ರ ಸಲ್ಲಿಕೆ


ಕರ್ನಾಟಕದ ವಿರೋಧ ಪಕ್ಷಗಳಿಗೆ, ಆಡಳಿತಾರೂಢ ಬಿಜೆಪಿ ವಿರುದ್ಧ ವಾಕ್ಸಮರಗಳನ್ನು ಹರಿಸಲು ಹಾಗೂ ಕನ್ನಡಿಗರ ಸಂಘಟನೆಗಳ ಭಾವನೆಗಳನ್ನು ಕೆರಳಿಸಲು ಸೂಕ್ತ ವೇದಿಕೆಯನ್ನು ಒದಗಿಸಿಕೊಟ್ಟಿತು. ಅಂತೆಯೇ ಕೆಎಂಎಫ್‌ಗೆ ಹಾಲು ಪೂರೈಸುವ ಕರ್ನಾಟಕದ 26 ಲಕ್ಷ ಹೈನುಗಾರರಲ್ಲಿ ಸರಕಾರದ ಬಗ್ಗೆ ಎತ್ತಿಕೊಡುವಲ್ಲಿ ಈ ಹೇಳಿಕೆಗಳು ಕಾರಣವಾದವು.


ನಂದಿನಿ ಬ್ರ್ಯಾಂಡ್ ಕನ್ನಡಿಗರ ಹೆಮ್ಮಯ ಬ್ರ್ಯಾಂಡ್


ಇದರ ಹಿಂದಿರುವ ಕಾಣದ ಕೈಗಳು ಕರ್ನಾಟಕದ ಹಲವು ಭಾಗಗಳಲ್ಲಿ ಅಮುಲ್ ವಿರುದ್ಧ ದನಿಎತ್ತುವಂತೆ ಪ್ರೇರೇಪಿಸಿದವು. ನಂದಿನಿ ಹಾಲು ಇನ್ನು ಮುಂದೆ ಕರ್ನಾಟಕದಲ್ಲಿ ದೊರೆಯುವುದೇ ಇಲ್ಲ ಎಂಬಂತಹ ರೀತಿಯಲ್ಲಿ ಪ್ರತಿಭಟನೆಗಳು ಭುಗಿಲೆದ್ದವು ಅಂತೆಯೇ ಕರ್ನಾಟಕ ರಕ್ಷಣಾ ವೇದಿಕೆಯ ಕೋಮುವಾದವು ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿಯುವಂತಹ ಹುನ್ನಾರ ಮಾಡಿದವು.


ಗುಜರಾತ್‌ನ GCMMF (Rs 72,000 ಕೋಟಿ) ನಂತರ ಕರ್ನಾಟಕದ ಕೆಎಮ್‌ಎಫ್ ವಾರ್ಷಿಕ 25,000 ಕೋಟಿ ರೂ.ಗಳ ವಹಿವಾಟು ಹೊಂದಿರುವ ಭಾರತದ ಎರಡನೇ ಅತಿದೊಡ್ಡ ಹಾಲು ಸಹಕಾರಿ ಸಂಸ್ಥೆಯಾಗಿದೆ ಅಂತೆಯೇ ಕನ್ನಡಿಗರ ಮನದಲ್ಲಿ ಇದು ಹೆಮ್ಮೆಯ ಸ್ಥಾನವನ್ನು ಪಡೆದುಕೊಂಡಿದೆ. ಕೆಎಮ್‌ಎಫ್ ಕರ್ನಾಟಕದಲ್ಲಿ ಮಾತ್ರವಲ್ಲದೆ ನೆರೆಯ ಮಹಾರಾಷ್ಟ್ರ, ಗೋವಾ, ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲೂ ಬೇಡಿಕೆ ಸೃಷ್ಟಿಸಿರುವ ಬ್ರ್ಯಾಂಡ್ ಎಂದೆನಿಸಿದೆ.


ಇದನ್ನೂ ಓದಿ: ಸಂಜೆಯವರೆಗೆ ಕಾದು ನೋಡೋಣ; ಹೈಕಮಾಂಡ್​ಗೆ ಮತ್ತೊಂದು ಗಡುವು ನೀಡಿದ ಮಾಜಿ ಸಿಎಂ


ನಂದಿನಿ ಅಮುಲ್ ಭಾರತದ ಶ್ವೇತಕ್ರಾಂತಿಗೆ ಕೊಡುಗೆ ನೀಡಿದ ಸಂಸ್ಥೆಗಳು


ಅಮುಲ್ ಹಾಗೂ ನಂದಿನಿ ಭಾರತದ ಶ್ವೇತಕ್ರಾಂತಿಗೆ ಕೊಡುಗೆ ನೀಡಿದ ಎರಡು ಅವಿಚ್ಛಿನ್ನ ಬ್ರ್ಯಾಂಡ್‌ಗಳಾಗಿದ್ದು, ದೇಶದಲ್ಲಿ ಆಗಿದ್ದ ಡೈರಿ ಕೊರತೆಯನ್ನು ನೀಗಿಸಲು ಹಾಗೂ ಹಾಲು ಉತ್ಪಾದನೆಯಲ್ಲಿ ದೇಶವನ್ನು ಜಾಗತಿಕ ನಾಯಕನಾಗಿ ಪರಿವರ್ತಿಸಲು ಡಾ ವರ್ಗೀಸ್ ಕುರಿಯನ್ ನೇತೃತ್ವದಲ್ಲಿ ಎರಡೂ ಬ್ರ್ಯಾಂಡ್‌ಗಳು ಒಂದಾಗಿ ಕಾರ್ಯನಿರ್ವಹಿಸಿದವು ಹಾಗೂ ಎರಡೂ ಸಹಕಾರಿ ಒಕ್ಕೂಟಗಳು ಇಂದು ಯಶಸ್ಸಿನ ಹೊಸ್ತಿಲಲ್ಲಿ ನಿಂತಿವೆ. ಎರಡೂ ಬ್ರ್ಯಾಂಡ್‌ಗಳ ನಡುವಿನ ಸ್ಪರ್ಧೆಯು ಇದುವರೆಗೆ ಆರೋಗ್ಯಕರವಾಗಿಯೇ ಇದ್ದು ಸಮತೋಲನವನ್ನು ಕಾಯ್ದುಕೊಂಡಿದೆ.


ವಿಲೀನ ಅಥವಾ ಮೈತ್ರಿಗೆ ಅನುಮತಿ ನೀಡುವುದಿಲ್ಲ


ಯಾವುದು ಮೇಲೆ ಯಾವುದು ಕೆಳಗೆ ಎಂಬ ತಾರತಮ್ಯಕ್ಕೆ ಒಳಗಾಗದೆಯೇ ಪೈಪೋಟಿಗೆ ಕಟ್ಟುಬೀಳದೆಯೇ ದೇಶದ ಕ್ಷೀರ ಉತ್ಪಾದನೆಯನ್ನೇ ಉದ್ದೇಶವಾಗಿರಿಸಿಕೊಂಡು ಮುಂದುವರಿದುಕೊಂಡು ಬಂದಿವೆ. ಈ ನಿಟ್ಟಿನಲ್ಲಿಯೇ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಎರಡೂ ಬ್ರ್ಯಾಂಡ್‌ಗಳ ಮೈತ್ರಿ ಅಥವಾ ವಿಲೀನಕ್ಕೆ ಕೇಂದ್ರವೇ ಹಸ್ತಕ್ಷೇಪ ನಡೆಸಿದರೂ ಅದಕ್ಕೆ ಅನುಮತಿಸುವುದಿಲ್ಲ ಎಂದು ಸ್ಪಷ್ಟವಾಗಿ ನಿರಾಕರಿಸಿದ್ದಾರೆ.




ಒಟ್ಟಿನಲ್ಲಿ ಇದನ್ನು ರಾಷ್ಟ್ರಮಟ್ಟದಲ್ಲಿ ಸುದ್ದಿಯನ್ನಾಗಿರಿಸಿರುವ ಕೆಲವೊಂದು ಕಾಣದ ಕೈಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಎರಡರ ಮಧ್ಯೆ ಪೈಪೋಟಿ ಸೃಷ್ಟಿಸಿವೆ. ಅಂತೆಯೇ ಚುನಾವಣೆ ಮುಗಿದ ನಂತರ ಈ ವಿವಾದಗಳು ತಮ್ಮಷ್ಟಕ್ಕೆ ತೆರೆಮರೆ ಸೇರಿಕೊಳ್ಳಲಿದೆ.

top videos
    First published: