• Home
  • »
  • News
  • »
  • state
  • »
  • Karnataka Politics: ಜೆಡಿಎಸ್‌ಗೆ ವಾಪಸ್ ಹೋಗಲ್ಲ, ನನ್ನ ಫೇಸ್ ಮಾಡೋ ಧೈರ್ಯ ಕುಮಾರಸ್ವಾಮಿಗಿಲ್ಲ: ಗುಬ್ಬಿ ಶ್ರೀನಿವಾಸ್​ ಹೀಗಂದಿದ್ದೇಕೆ?

Karnataka Politics: ಜೆಡಿಎಸ್‌ಗೆ ವಾಪಸ್ ಹೋಗಲ್ಲ, ನನ್ನ ಫೇಸ್ ಮಾಡೋ ಧೈರ್ಯ ಕುಮಾರಸ್ವಾಮಿಗಿಲ್ಲ: ಗುಬ್ಬಿ ಶ್ರೀನಿವಾಸ್​ ಹೀಗಂದಿದ್ದೇಕೆ?

ಗುಬ್ಬಿ ಶಾಸಕ ಎಸ್​. ಆರ್​ ಶ್ರೀನಿವಾಸ್

ಗುಬ್ಬಿ ಶಾಸಕ ಎಸ್​. ಆರ್​ ಶ್ರೀನಿವಾಸ್

ಹೌದು ಸಾ. ರಾ ಮಹೇಶ್ ತಮ್ಮ ಮನೆಗೆ ಭೇಟಿ ನೀಡಿದ ವಿಚಾರವಾಗಿ ಪ್ರತಿಕ್ರಿಯಿಸಿದ ಗುಬ್ಬಿ ಶಾಸಕ ಎಸ್ ಆರ್ ಶ್ರೀನಿವಾಸ್ ನಾನು ಮತ್ತೆ ಜೆಡಿಎಸ್‌ಗೆ ವಾಪಸ್ ಹೋಗಲ್ಲ, ನನ್ನ ಫೇಸ್ ಮಾಡೋ ಧೈರ್ಯ ಕುಮಾರಸ್ವಾಮಿಗಿಲ್ಲ, ಸಾ.ರಾ ಮಹೇಶ್ ಮನೆಗೆ ಭೇಟಿ ನೀಡಿದ್ದು ಸ್ನೇಹ ಪೂರ್ವಕವಾಗಿಯಷ್ಟೇ ಎಂದಿದ್ದಾರೆ.

ಮುಂದೆ ಓದಿ ...
  • Share this:

ತುಮಕೂರು(ನ.10): ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Elections) ಸಮೀಪಿಸುತ್ತದೆ. ಹೀಗಿರುವಾಗ ಎಲ್ಲಾ ಪಕ್ಷಗಳು ಗೆಲ್ಲಲು ರಣತಂತ್ರ ಹೆಣೆಯುತ್ತಿವೆ. ಈ ನಿಟ್ಟಿನಲ್ಲಿ ಜೆಡಿಎಸ್​ ಕೂಡಾ ಸಜ್ಜಾಗಿದ್ದು, ಸದ್ಯ ಪಕ್ಷ ಬಿಟ್ಟು ಹೋಗುತ್ತಿರುವ ಶಾಸಕರನ್ನು ಮರಳಿ ಕರೆತರುವ ಪ್ರಯತ್ನ ಮಾಡುತ್ತಿದೆ. ಈಗಾಗಲೇ ಜಿ. ಟಿ. ದೇವೇಗೌಡ (GT Devegowda) ಹಾಗೂ ಗುಬ್ಬಿ ಶಾಸಕ ಎಸ್ ಆರ್ ಶ್ರೀನಿವಾಸ್ (Gubbi MLA SR Srinivas) ಮನೆಗೆ ಜೆಡಿಎಸ್ ನಾಯಕ ಸಾ ರಾ ಮಹೇಶ್ ಭೇಟಿ ನೀಡಿದ್ದಾರೆ. ಈ ಹಿಂದೆ ರಾಜ್ಯ ಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ್ದ ಹಿನ್ನೆಲೆಯಲ್ಲಿ ಎಸ್ ಆರ್ ಶ್ರೀನಿವಾಸ್ ಅವರನ್ನು ಅಮಾನತು ಮಾಡಲಾಗಿತ್ತು ಎಂಬುವುದು ಉಲ್ಲೇಖನೀಯ. ಆದರೀಗ ಈ ಬಗ್ಗೆ ಪ್ರತಿಕ್ರಿಯಿಸಿರುವ ಶ್ರೀನಿವಾಸ್ ಜೆಡಿಎಸ್‌ಗೆ ವಾಪಸ್ ಹೋಗಲ್ಲ, ನನ್ನ ಫೇಸ್ ಮಾಡೋ ಧೈರ್ಯ ಕುಮಾರಸ್ವಾಮಿಗಿಲ್ಲ ಎಂಬ ಹೇಳಿಕೆ ನೀಡಿದ್ದಾರೆ.


ಹೌದು ಸಾ. ರಾ ಮಹೇಶ್ ತಮ್ಮ ಮನೆಗೆ ಭೇಟಿ ನೀಡಿದ ವಿಚಾರವಾಗಿ ಪ್ರತಿಕ್ರಿಯಿಸಿದ ಗುಬ್ಬಿ ಶಾಸಕ ಎಸ್ ಆರ್ ಶ್ರೀನಿವಾಸ್ ನಾನು ಮತ್ತೆ ಜೆಡಿಎಸ್‌ಗೆ ವಾಪಸ್ ಹೋಗಲ್ಲ, ನನ್ನ ಫೇಸ್ ಮಾಡೋ ಧೈರ್ಯ ಕುಮಾರಸ್ವಾಮಿಗಿಲ್ಲ, ಸಾ.ರಾ ಮಹೇಶ್ ಮನೆಗೆ ಭೇಟಿ ನೀಡಿದ್ದು ಸ್ನೇಹ ಪೂರ್ವಕವಾಗಿಯಷ್ಟೇ ಎಂದಿದ್ದಾರೆ.


ಇದನ್ನೂ ಓದಿ: BMTC ಪ್ರಯಾಣಿಕರಿಗೆ ಶಾಕಿಂಗ್​ ನ್ಯೂಸ್​; ಶೇ.35ರಷ್ಟು ಬಿಎಂಟಿಸಿ ಬಸ್ ಪ್ರಯಾಣ ದರ ಏರಿಕೆ ಸಾಧ್ಯತೆ


ತಮ್ಮನ್ನು ಉಚ್ಛಾಟಿಸಿದ ಬಗ್ಗೆಯೂ ಮಾತನಾಡಿದ ಶ್ರೀನಿವಾಸ್ ನನ್ನ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ. ಅದು ಮುಗಿದು ಹೋದ ಕತೆ, ಪಕ್ಷಕ್ಕೆ ವಾಪಸ್ ಬರಲು ನಾನು ಜಿಟಿ ದೇವೇಗೌಡ ಅಥವಾ ಶಿವರಾಮೇಗೌಡ ಅಲ್ಲ, ನಾನು ವಾಸಣ್ಣ. ನಾನು ದುಷ್ಯಂತ್ ಅಲ್ಲ, ನಮ್ಮ ಅಪ್ಪನ ಮಾತೇ ಕೇಳಲ್ಲ ಎಂದಿದ್ದಾರೆ.


ಅಲ್ಲದೇ ತಮ್ಮ ನಿರ್ಧಾರ ಬದಲಾಯಿಸುವುದಿಲ್ಲ ಎಂಬುವುದನ್ನು ಸ್ಪಷ್ಟಪಡಿಸಿದ ಶ್ರೀನಿವಾಸ್ ನನಗೇನು ತೋಚುತ್ತೊ ಅದನ್ನೇ ಮಾಡುತ್ತೇನೆ. ಅವರು ಹೇಳಿದ ಹಾಗೇ ಅಥವಾ ಇವರು ಹೇಳಿದ ಹಾಗೆ ಕೇಳುವುದಿಲ್ಲ. ಅವರು ಹೇಳಿದ್ರು ಅಂತ ಇನ್ನೊಬ್ಬರಿಗೆ ತೊಂದರೆ ಕೊಡಲ್ಲ ಎಂದಿದ್ದಾರೆ.


ಇದನ್ನೂ ಓದಿ: Basavaraj Bommai: ‘ನೂಪುರ್ ಶರ್ಮಾ ಹೇಳಿಕೆ ಖಂಡಿಸಿ ಪ್ರತಿಭಟನೆ; ಶೂಟ್ ಆನ್​ ಸೈಟ್ ಆರ್ಡರ್ ಕೊಡೋ ಅಗತ್ಯವಿಲ್ಲ‘


ಅಲ್ಲದೇ ಅನ್ನದಾನಿ, ಸಾ.ರಾ ಮಹೇಶ್ ಸೇರಿದಂತೆ ಅಲ್ಲಿ ಇರುವ ಎಲ್ಲಾ ಶಾಸಕರಿಗೂ ನಾನು ಜೆಡಿಎಸ್​ನಲ್ಲಿ ಉಳಿಬೇಕು ಅಂತ ಆಸೆಯಿದೆ. ಆದರೆ ನಮ್ಮ ಲೀಡರ್​ ಹಾಗಿಲ್ಲ. ಅವರು ನಮ್ಮ ಮನೆ ಬಳಿ ಬರೋಲ್ಲ. ನನ್ನ ಫೇಸ್ ಮಾಡೋ ಧೈರ್ಯ ಕುಮಾರಸ್ವಾಮಿಗಿಲ್ಲ. ನಾನು ಇವತ್ತೊಂದು, ನಾಳೆಯೊಂದು ಮಾತನಾಡುವ ವ್ಯಕ್ತಿಯಲ್ಲ. ನನ್ನದೇ ವ್ಯಕ್ತಿತ್ವ ಇಟ್ಟುಕೊಂಡಿರುವ ರಾಜಕಾರಣಿ ಎಂದು ಎಚ್​ಡಿಕೆಗೆ ಟಾಂಗ್ ನೀಡಿದ್ದಾರೆ.

Published by:Precilla Olivia Dias
First published: