ತುಮಕೂರು: ಗುಬ್ಬಿ ಶಾಸಕ (Gubbi MLA) ಶ್ರೀನಿವಾಸ್ ಅವರಿಗೆ ಜೆಡಿಎಸ್ (JDS) ವರಿಷ್ಠರು ಮತ್ತೆ ಗಾಳ ಹಾಕಿದ್ದಾರೆ. ಮರಳಿ ಗೂಡು ಸೇರಲು ಜೆಡಿಎಸ್ ಉಚ್ಚಾಟಿತ ಶಾಸಕರಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ (CM Ibrahim) ಆಫರ್ ನೀಡಿದ್ದಾರೆ. ವಿಧಾನಸಭಾ ಚುನಾವಣೆ ಕಾವು ಹೆಚ್ಚಾಗುತ್ತಿದ್ದಂತೆ ಎಸ್.ಆರ್ ಶ್ರೀನಿವಾಸ್ (SR Srinivas) ಅವರ ಮೇಲೆ ಕಾಳಜಿ ಪಾಲಿಟಿಕ್ಸ್ ಶುರುವಾಗಿದೆ. ಈ ಬಗ್ಗೆ ಇಂದು ಮಾತನಾಡಿದ್ದ ಇಬ್ರಾಹಿಂ ಅವರು, ನಮಗೆ ಯಾರ ಬಗ್ಗೆ ದ್ವೇಷವಿಲ್ಲ. ಒಂದು ಕಾಲದಲ್ಲಿ ನಮ್ಮ ಜೊತೆ ಚೆನ್ನಾಗಿದ್ದರು. ಚೌತಿಯಲ್ಲಿ ಚಂದ್ರನನ್ನು (Moon) ನೋಡಿದಕ್ಕೆ ಕೃಷ್ಣನಿಗೂ (Krishna) ಅಪವಾದ ಬಂತು. ಅದರಂತೆ ದೇವರು ಅವರಿಗೆ ಒಳ್ಳೆ ಬುದ್ದಿ ಕೊಡಲಿ, ಚಿಂತೆ ಮಾಡಿ. ಶ್ರೀನಿವಾಸ್ ಅವರ ಮಗ ಒಳ್ಳೆಯವನು, ಧರ್ಮಪತ್ನಿ ಒಳ್ಳೆಯವರು. ಮನೆಯಲ್ಲಿ ಕುಳಿತು ಒಮ್ಮೆ ಯೋಚನೆ ಮಾಡಲಿ ಎಂದು ಗುಬ್ಬಿ ವಾಸಣ್ಣ ಜೆಡಿಎಸ್ಗೆ ಮರಳಿ ಬರುವಂತೆ ಆಫರ್ ಕೊಟ್ಟಿದ್ದರು.
ನಾನು ಹಿಂದೆ ತಿರುಗಿ ನೋಡದಷ್ಟು ಮುಂದೆ ಹೋಗಿದ್ದೆನೆ
ಜೆಡಿಎಸ್ ರಾಜ್ಯಾಧ್ಯಕ್ಷರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಜೆಡಿಎಸ್ ಉಚ್ಚಾಟಿತ ಶಾಸಕ ಎಸ್.ಆರ್ ಶ್ರೀನಿವಾಸ್ ಅವರು, ನಾನು ಕಾಂಗ್ರೆಸ್ ಸೇರುವುದು ಖಚಿತ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದಲೇ ಸ್ಪರ್ಧೆ ಖಚಿತ.
ಇದನ್ನೂ ಓದಿ: Haveri: ಮಸೀದಿ ಮೇಲೆ ಕಲ್ಲು, ಸಿಎಂ ತವರು ಜಿಲ್ಲೆ ಧಗಧಗ! ಈಗ ಹೇಗಿದೆ ಪರಿಸ್ಥಿತಿ?
ದೇವೇಗೌಡರ ಕುಟುಂಬ ನನ್ನ ಮೇಲೆ ಇಟ್ಟಿರುವ ಪ್ರೀತಿಗೆ ಋಣಿಯಾಗಿರುತ್ತೇನೆ. ಆದರೆ ನಾನು ಹಿಂದೆ ತಿರುಗಿ ನೋಡದಷ್ಟು ಮುಂದೆ ಹೋಗಿದ್ದೆನೆ. ಈ ಹಂತದಲ್ಲಿ ಬೇರೆ ಯಾವ ರೀತಿಯಲ್ಲೂ ನಿರ್ಧಾರ ಮಾಡಲು ಆಗೋದಿಲ್ಲ. ಇದೆಲ್ಲಾ ಮುಗಿದಂತ ಕಥೆ ಎಂದರು.
ಮಾರ್ಚ್ 17ರಂದು ಸಿದ್ದರಾಮಯ್ಯರನ್ನು ಭೇಟಿ ಮಾಡ್ತೀನಿ
ಅಲ್ಲದೆ, ಅಂದು ನಾನು ಪಕ್ಷದಿಂದ ಹೋಗುತ್ತೇನೆ ಎಂದು ಹೊರಟಿರಲಿಲ್ಲ, ಎಲ್ಲಾ ಅವರೇ ಮಾಡಿದ್ದರು. ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರು ಪ್ಲಾನ್ ಮಾಡಿ ಮಾಡಿದ್ದರು, ನಮ್ಮನ್ನು ಅತಂತ್ರ ಮಾಡುವಂತ ಪ್ಲಾನ್ ರೂಪಿಸಿದ್ದಾರೆ. ನಾನು ಕಾಂಗ್ರೆಸ್ಗೆ ಹೋಗುವುದು ನಿಶ್ಚಿತ, ನಮ್ಮ ಕಾರ್ಯಕರ್ತರೆಲ್ಲಾ ನಿರ್ಧಾರ ಮಾಡಿದ್ದಾರೆ. ನಾನು ನಿರ್ಧಾರ ಮಾಡಿದ್ದಿನಿ, ಕಾಂಗ್ರೆಸ್ಗೆ ಹೋಗುತ್ತೇನೆ.
ನೂರಕ್ಕೆ ನೂರು ನಾನು ಕಾಂಗ್ರೆಸ್ ಪಕ್ಷದಿಂದಲೇ ಸ್ಪರ್ಧೆ ಮಾಡುತ್ತೇನೆ. ಈ ತಿಂಗಳ 22ರ ಬಳಿಕ ಶಾಸಕ ಸ್ಥಾನಕ್ಕೆ ನಾನು ರಾಜೀನಾಮೆ ನೀಡುತ್ತೇನೆ. ಕಾಂಗ್ರೆಸ್ ನಾಯಕರಾದ ಸುರ್ಜೇವಾಲಾ ಅವರು ನನಗೆ ಕರೆ ಮಾಡಿ ಹೇಳಿದ್ದಾರೆ. ಮಾರ್ಚ್ 17ರಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನ ಭೇಟಿ ಮಾಡಲಿದ್ದೇನೆ. ಈಗಾಗಲೇ ತುಮಕೂರು ಜಿಲ್ಲೆಯ ಎಲ್ಲಾ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿ ಚರ್ಚೆ ಮಾಡಿದ್ದೇನೆ. ನಾನು ಕಾಂಗ್ರೆಸ್ ನಿಂದಲೇ ಸ್ಪರ್ಧೆ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: Karnataka Election 2023: HDKಗೆ ಟಕ್ಕರ್ ಕೊಡಲು DK ಬ್ರದರ್ಸ್ ರಣತಂತ್ರ; ರಾಮನಗರದಿಂದ ಸುರೇಶ್ ಸ್ಪರ್ಧೆಗೆ ವೇದಿಕೆ ಸಿದ್ಧ!
ರೈತ ಹೋರಾಟಗಾರ್ತಿಗೆ ಖಾಕಿ ತರಾಟೆ
ನಡುರಸ್ತೆಯಲ್ಲಿ ರೈತ ಹೋರಾಟಗಾರ್ತಿ ಹಾಗೂ ಸರ್ಕಲ್ ಇನ್ಸ್ಪೆಕ್ಟರ್ ನಡುವೆ ವಾಗ್ವಾದ ನಡೆದ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗದಲ್ಲಿ ನಡೆದಿದೆ. ರೈತ ಮಹಿಳೆ ರಸ್ತೆ ಬಂದ್ ಮಾಡಿ ಪ್ರತಿಭಟನೆಗೆ ಮುಂದಾಗಿದ್ದರು. ತಾನು ಚುನಾವಣಾ ಪ್ರಚಾರಕ್ಕೆ ತೆರಳಿದಾಗ ಹಲ್ಲೆ ಮಾಡಲಾಗಿದೆ ಎಂದು ಆರೋಪಿಸಿದ್ದರು. ಹೆಣ್ಣುಮಕ್ಕಳಿಗೆ ರಕ್ಷಣೆ ಇಲ್ಲ ಎಂದು ಶಾಸಕ ಹಾಗೂ ಪೊಲೀಸರ ವಿರುದ್ಧ ಧಿಕ್ಕಾರ ಕೂಗಿದ್ದರು. ಇದರಿಂದ ರಸ್ತೆ ಕೆಲ ಕಾಲ ಟ್ರಾಫಿಕ್ ಜಾಮ್ ಆಯ್ತು. ಮಹಿಳೆ ನಡೆಯಿಂದ ಕೆರಳಿದ ಪಿಐ ಹೊಸಗೇರಪ್ಪರವ್ರು ರೈತ ಹೋರಾಟಗಾರ್ತಿ ರೂಪಾ ಶ್ರೀನಿವಾಸ್ ನಾಯಕ್ರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ