HOME » NEWS » State » GT DEVEGOWDA SAYS DCM LAXMAN SAVADI WILL DEFINITELY WIN IN MLC ELECTION SESR

ಪರಿಷತ್​ ಚುನಾವಣೆಯಲ್ಲಿ ಡಿಸಿಎಂ ಲಕ್ಷ್ಮಣ ಸವದಿ ಗೆಲುವು ನಿಶ್ಚಿತ; ಜೆಡಿಎಸ್​ ನಾಯಕ ಜಿಟಿ ದೇವೇಗೌಡ ವಿಶ್ವಾಸ

ಚುನಾವಣೆಯಲ್ಲಿ ಸವದಿ ಸೋಲಿಸುವುದನ್ನು ಜನ ಒಪ್ಪುವುದಿಲ್ಲ. ಈ ಹಿನ್ನೆಲೆ ಅವರು ಗೆಲುವು ಸುಲಭವಾಗಲಿದೆ. ಅಲ್ಲದೇ, ಅವರಿಗೆ ಬಹುಮತ ಕೂಡ ಇದೆ ಎನ್ನುವ ಮೂಲಕ ಜಿಟಿಡಿ ಪಕ್ಷದ ನಾಯಕರಿಗೆ ಶಾಕ್​ ನೀಡಿದ್ದಾರೆ. 

news18-kannada
Updated:February 10, 2020, 1:32 PM IST
ಪರಿಷತ್​ ಚುನಾವಣೆಯಲ್ಲಿ ಡಿಸಿಎಂ ಲಕ್ಷ್ಮಣ ಸವದಿ ಗೆಲುವು ನಿಶ್ಚಿತ; ಜೆಡಿಎಸ್​ ನಾಯಕ ಜಿಟಿ ದೇವೇಗೌಡ ವಿಶ್ವಾಸ
ಜಿ.ಟಿ. ದೇವೇಗೌಡ
  • Share this:
ಬೆಂಗಳೂರು (ಫೆ.10): ವಿಧಾನ ಪರಿಷತ್​ ಚುನಾವಣೆಯಲ್ಲಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಗೆದ್ದೆ ಗೆಲ್ಲುತ್ತಾರೆ ಎಂಬ ವಿಶ್ವಾಸವನ್ನು ಜೆಡಿಎಸ್​ ನಾಯಕ, ಮಾಜಿ ಸಚಿವ ಜಿಟಿ ದೇವೇಗೌಡ ವ್ಯಕ್ತಪಡಿಸಿದ್ದಾರೆ. 

ನ್ಯೂಸ್​ 18 ಕನ್ನಡದೊಂದಿಗೆ ಮಾತನಾಡಿದ ಅವರು, ಚುನಾವಣೆಯಲ್ಲಿ ಸವದಿ ಸೋಲಿಸುವುದನ್ನು ಜನ ಒಪ್ಪುವುದಿಲ್ಲ. ಈ ಹಿನ್ನೆಲೆ ಅವರು ಗೆಲುವು ಸುಲಭವಾಗಲಿದೆ. ಅಲ್ಲದೇ, ಅವರಿಗೆ ಬಹುಮತ ಕೂಡ ಇದೆ ಎನ್ನುವ ಮೂಲಕ ಪಕ್ಷದ ನಾಯಕರಿಗೆ ಶಾಕ್​ ನೀಡಿದ್ದಾರೆ.

ಮೈತ್ರಿ ಸರ್ಕಾರ ಪತನವಾದ ಬಳಿಕ ಸದಾ ಬಿಜೆಪಿ ನಾಯಕರ ಜೊತೆ ಗುರುತಿಸಿಕೊಳ್ಳುತ್ತಿರುವ ಜಿಟಿ ದೇವೇಗೌಡ, ಅವರ ಪರವಾಗಿಯೇ ಹೇಳಿಕೆ ನೀಡುತ್ತಿದ್ದಾರೆ. ಮೈಸೂರು ದಸರಾ ಕಾರ್ಯಕ್ರಮದಲ್ಲಿಯೂ ಯಡಿಯೂರಪ್ಪ ಜೊತೆ ವೇದಿಕೆ ಹಂಚಿಕೊಂಡ ಅವರು, ಬಿಜೆಪಿ ಸೇರಲಿದ್ದಾರೆ ಎಂಬ ಅನುಮಾನ ಮೂಡಿತ್ತು. ಆದರೆ, ತಾವು ಯಾವುದೇ ಪಕ್ಷ ಸೇರಲ್ಲ. ಜೆಡಿಎಸ್​ನಲ್ಲಿಯೇ ಇರುತ್ತೇನೆ ಎಂದಿದ್ದ ಅವರು, ಪಕ್ಷದ ನಾಯಕರೊಂದಿಗೂ ಕೂಡ ಅಂತರ ಕಾಯ್ದುಗೊಂಡು ಬಂದಿದ್ದಾರೆ.

ಇದನ್ನು ಓದಿ: ಕೊನೆಗೂ ಈಡೇರಿದ ರಮೇಶ್​​ ಜಾರಕಿಹೊಳಿ ಪಟ್ಟು; ಜಲ ಸಂಪನ್ಮೂಲ ಖಾತೆ ಪಡೆಯುವಲ್ಲಿ ಯಶಸ್ವಿ

ಇದೇ ವೇಳೆ ಮೈತ್ರಿ ಅಭ್ಯರ್ಥಿ ಹಾಕಿರುವ ಕುರಿತು ಯಾವುದೇ ಮಾಹಿತಿ ಇಲ್ಲ. ಪರಿಷತ್​ ಚುನಾವಣೆಯಲ್ಲಿ ಕಾಂಗ್ರೆಸ್​ ಜೊತೆ ಯಾವುದೇ ಮೈತ್ರಿ ಮಾಡಿಕೊಂಡಿಲ್ಲ. ಅಷ್ಟೇ ಅಲ್ಲದೇ ಈ ಕುರಿತು ದೇವೇಗೌಡ ಅವರೇ ಸ್ಪಷ್ಟನೆ ನೀಡಿದ್ದಾರೆ ಎಂದರು.

ಇನ್ನು ಕಾಂಗ್ರೆಸ್​​ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಮೈತ್ರಿ ಸರ್ಕಾರ ಸೋಲಿಗೆ ಕಾಂಗ್ರೆಸ್​ನವರೇ ಕಾರಣ. ಅವರ ಒಳತಂತ್ರದಿಂದ ಸರ್ಕಾರ ಪತನವಾಯಿತು ಎಂದರು ಹರಿಹಾಯ್ದರು.

ಕಾಂಗ್ರೆಸ್​ನ ರಿಜ್ವಾನ್ ಅರ್ಷದ್ ರಾಜೀನಾಮೆಯಿಂದ ತೆರವಾಗಿರುವ ಒಂದು ಪರಿಷತ್​ ಸ್ಥಾನಕ್ಕೆ ನಡೆಯುತ್ತಿರುವ ಚುನಾವಣೆಯಲ್ಲಿ ಬಿಜೆಪಿಯ ಲಕ್ಷ್ಮಣ ಸವದಿ ಮತ್ತು ಕಾಂಗ್ರೆಸ್-ಜೆಡಿಎಸ್ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಬಿ.ಆರ್. ಅನಿಲ್ ಕುಮಾರ್  ಕಣದಲ್ಲಿದ್ಧಾರೆ. ಮೂರನೇ ಅಭ್ಯರ್ಥಿ ಪದ್ಮರಾಜನ್ ಅವರ ನಾಮಪತ್ರ ತಿರಸ್ಕೃತಗೊಂಡಿದೆ.  ಫೆ.17ರಂದು ಗೌಪ್ಯ ಮತದಾನದ ಮೂಲಕ ಪರಿಷತ್​ ಚುನಾವಣೆ ನಡೆಯಲಿದೆ.
Youtube Video
First published: February 10, 2020, 1:31 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories