ಹುಣಸೂರಿನಲ್ಲಿ ವಿಶ್ವನಾಥ್ ಸೋಲಿಗೆ ಯೋಗೀಶ್ವರ್ ಕಾರಣ : ಜಿಟಿ ದೇವೇಗೌಡ

ವಿಶ್ವನಾಥ್​ 5 ಕೋಟಿ ಆಮಿಷ ತೋರಿ ಒಕ್ಕಲಿಗರನ್ನು ಓಲೈಸಬಹುದು ಎಂದು ಕೊಂಡರು. ದುಡ್ಡು, ಸೀತೆ, ಕುಕ್ಕರ್​ ಹಂಚಿ ಗೆಲ್ಲುತ್ತೇನೆ ಎಂದು ಭರವಸೆ ವ್ಯಕ್ತಪಡಿಸಿದರು. ಆದರೆ, ಇದೆಲ್ಲಾ ಹುಣಸೂರಿನಲ್ಲಿ ನಡೆಯುವುದಿಲ್ಲ. ಅದು ಅವರಿಗೆ ಗೊತ್ತಿಲ್ಲ

Seema.R | news18-kannada
Updated:December 11, 2019, 1:27 PM IST
ಹುಣಸೂರಿನಲ್ಲಿ ವಿಶ್ವನಾಥ್ ಸೋಲಿಗೆ ಯೋಗೀಶ್ವರ್ ಕಾರಣ : ಜಿಟಿ ದೇವೇಗೌಡ
ಜಿ.ಟಿ. ದೇವೇಗೌಡ
  • Share this:
ಮೈಸೂರು (ಡಿ.11): ಹುಣಸೂರಿನಲ್ಲಿ ಬಿಜೆಪಿ ಅಭ್ಯರ್ಥಿ ವಿಶ್ವನಾಥ್​ ಸೋಲಿಗೆ ಸಿಪಿ ಯೋಗೀಶ್ವರ್​ ಕಾರಣ. ಸಮುದಾಯದ ನಾಯಕರನ್ನು ಟೀಕಿಸಿದ ಕಾರಣ ಒಕ್ಕಲಿಗರು ವಿಶ್ವನಾಥ್​ ವಿರುದ್ಧ ತಿರುಗಿ ಬಿದ್ದರು ಎಂದು ಜೆಡಿಎಸ್​ ನಾಯಕ ಜಿಟಿ ದೇವೇಗೌಡ ತಿಳಿಸಿದ್ದಾರೆ. 

ನನ್ನ ಸೋಲಿಗೆ ಜಿಟಿ ದೇವೇಗೌಡ, ಕುಮಾರಸ್ವಾಮಿ, ದೇವೇಗೌಡ ಎಂದು ವಿಶ್ವನಾಥ್​ ಆರೋಪಿಸುತ್ತಾರೆ. ಆದರೆ, ಇದು ಸುಳ್ಳು. ಅವರ ಸುಳ್ಳಿಗೆ ಅವರ ಪಕ್ಷದ ನಾಯಕರು ಹಾಗೂ ವಿಶ್ವನಾಥ್​​ ಹುಂಬತನ ಕಾರಣ ಎಂದು ಹರಿಹಾಯ್ದರು.

ವಿಶ್ವನಾಥ್​ 5 ಕೋಟಿ ಆಮಿಷ ತೋರಿ ಒಕ್ಕಲಿಗರನ್ನು ಓಲೈಸಬಹುದು ಎಂದು ಕೊಂಡರು. ದುಡ್ಡು, ಸೀತೆ, ಕುಕ್ಕರ್​ ಹಂಚಿ ಗೆಲ್ಲುತ್ತೇನೆ ಎಂದು ಭರವಸೆ ವ್ಯಕ್ತಪಡಿಸಿದರು. ಆದರೆ, ಇದೆಲ್ಲಾ ಹುಣಸೂರಿನಲ್ಲಿ ನಡೆಯುವುದಿಲ್ಲ. ಅದು ಅವರಿಗೆ ಗೊತ್ತಿಲ್ಲ ಎನ್ನಿಸುತ್ತದೆ ಎಂದು ತಿರುಗೇಟು ನೀಡಿದರು.

ಈ ಬಾರಿ ಚುನಾವಣೆಯಲ್ಲಿ ತಟಸ್ಥನಾಗಿರುತ್ತೇನೆ ಎಂದು ನಾನು ದೇವೇಗೌಡರ ಸಮ್ಮುಖದಲ್ಲಿಯೇ ಹೇಳಿದೆ,. ಹಾಗಾಗಿ ಈ ಚುನಾವಣೆಯಲ್ಲಿ ಯಾರ ಪರವಾಗಿಯೂ ನಾನು ಕೆಲಸ ಮಾಡಿಲ್ಲ. ಇನ್ನು ನನ್ನ ಮಗ ಹರೀಶ್​ ಗೌಡ ಮಂಜುನಾಥ್​ ಬೆನ್ನಿಗೆ ನಿಂತಿದ್ದ ಎಂದರು. ಅದು ಅವನ ಸ್ವ ಇಚ್ಛೆ. ಆತ ಯಾವ ಪಕ್ಷಕ್ಕೂ ಸದಸ್ಯನಲ್ಲ ಎಂದರು.

ಇದನ್ನು ಓದಿ: ಬಿಜೆಪಿ ಸಂಸದೀಯ ಸಭೆಯಲ್ಲಿ ಸಿಎಂ ಬಿಎಸ್​ವೈಗೆ ಎದ್ದು ನಿಂತು ಗೌರವ ಸಲ್ಲಿಸಿದ ಪ್ರಧಾನಿ ಮೋದಿ

ಹುಣಸೂರಿನಲ್ಲಿ ಕಾಂಗ್ರೆಸ್​ ಗೆಲ್ಲುತ್ತದೆ ಎಂದು ನಾನು ಮೊದಲೇ ಹೇಳಿದ್ದೆ. ಈ ಹಿಂದೆ ಪುರಭವನದಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿ ಆಗುತ್ತಾರೆ ಎಂದು ಹೇಳಿದ್ದೆ. ಕುಮಾರ ಪರ್ವದಲ್ಲಿ ಕುಮಾರಸ್ವಾಮಿ ಸಿಎಂ ಆಗುತ್ತಾರೆ ಎಂದು ಭವಿಷ್ಯ ಹೇಳಿದ್ದೆ. ನಾನು ಹೇಳಿದಂತೆ ನಡೆದಿದೆ. ದೈವಶಕ್ತಿಯಿಂದ ನಾನು ಹೇಳಿದ್ದೆಲ್ಲ ನಡೆದಿದೆ ಎಂದರು.
First published: December 11, 2019, 1:27 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading