ಮೈಸೂರು: ಜೆಡಿಎಸ್ (JDS) ತೊರೆಯಲು ಸಿದ್ಧರಾಗಿದ್ದ ಮಾಜಿ ಸಚಿವ ಜಿ.ಟಿ.ದೇವೇಗೌಡರನ್ನು (Former Minister GT Deve Gowda) ಉಳಿಸಿಕೊಳ್ಳಲು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು (Former PM HD Deve Gowda) ಯಶಸ್ವಿಯಾಗಿದ್ದರು. ಇಷ್ಟು ದಿನ ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿದ್ದ ಜಿಟಿ ದೇವೇಗೌಡರು ಕ್ಷೇತ್ರದಲ್ಲಿ ಮಿಂಚಿನ ಓಟ ನಡೆಸಿದ್ದಾರೆ. ಕಳೆದ ಬಾರಿ ವಿಧಾನಸಭಾ ಚುನಾವಣೆ ವೇಳೆ ಚಾಮುಂಡೇಶ್ವರಿ (Chamundeshwari Constituency) ಕಣ ಹೈವೋಲ್ಟೇಜ್ ಕ್ಷೇತ್ರವಾಗಿತ್ತು. ಕಾರಣ ಮಾಜಿ ಸಿಎಂ ಸಿದ್ದರಾಮಯ್ಯ (Former CM Siddaramaiah) ಅವರ ಸ್ಪರ್ಧೆ. ತಮ್ಮ ವರುಣಾ ಕ್ಷೇತ್ರವನ್ನ ಪುತ್ರ ಯತೀಂದ್ರಗೆ (Yatheendra Siddaramaiah) ಬಿಟ್ಟುಕೊಟ್ಟಿದ್ದ ಸಿದ್ದರಾಮಯ್ಯನವರು ಚಾಮುಂಡೇಶ್ವರಿ ಮತ್ತು ಬಾದಾಮಿಯಿಂದ ಸ್ಪರ್ಧೆ ಮಾಡಿದ್ದರು. ಚಾಮುಂಡೇಶ್ವರಿಯಲ್ಲಿ ಜಿಟಿ ದೇವೇಗೌಡರ ವಿರುದ್ಧ ಸೋತಿದ್ದ ಸಿದ್ದರಾಮಯ್ಯ, ಬಾದಾಮಿಯಲ್ಲಿ ಶ್ರೀರಾಮುಲು (Sriramulu) ವಿರುದ್ಧ ಕಡಿಮೆ ಅಂತರದಲ್ಲಿ ಗೆಲುವು ದಾಖಲಿಸಿದ್ದರು.
ಚಾಮುಂಡೇಶ್ವರಿಯಲ್ಲಿ ಸೋತರೂ ಕಳೆದ ಎರಡು ತಿಂಗಳ ಹಿಂದೆ ಸಿದ್ದರಾಮಯ್ಯ ಕ್ಷೇತ್ರದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಮೂಲಕ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದರು. ಈ ಮೂಲಕ ಚಾಮುಂಡೇಶ್ವರಿ ಕ್ಷೇತ್ರವನ್ನು ಕಾಂಗ್ರೆಸ್ ತೆಕ್ಕೆಗೆ ತೆಗೆದುಕೊಳ್ಳಲು ಸಿದ್ದರಾಮಯ್ಯ ರಣತಂತ್ರ ರಚಿಸಿದ್ದರು.
ತಮ್ಮ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸಕ್ರಿಯರಾಗಿರೋದನ್ನು ಗಮನಿಸಿದ ಜಿಟಿ ದೇವೇಗೌಡರು, ದಳಪತಿಗಳ ಹುಟ್ಟುಹಬ್ಬ ಆಚರಣೆ ನೆಪದಲ್ಲಿ ಶಕ್ತಿ ಪ್ರದರ್ಶನ ಮಾಡಿದ್ದಾರೆ.
ಜಂಟಿ ಹುಟ್ಟುಹಬ್ಬ ಆಯೋಜನೆ
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪುತ್ರ ಹರೀಶ್ ಗೌಡ ಮತ್ತು ಹೆಚ್ಡಿಕೆ ಪುತ್ರ ನಿಖಿಲ್ ಕುಮಾರಸ್ವಾಮಿ ಹುಟ್ಟುಹಬ್ಬವನ್ನು ಜಂಟಿಯಾಗಿ ಆಯೋಜನೆ ಮಾಡಿ ಬೃಹತ್ ಸಮಾವೇಶವನ್ನು ಆಯೋಜಿಸಿದ್ದರು. ಈ ಸಮಾವೇಶಕ್ಕೆ ಸಾವಿರಾರು ಜನರನ್ನು ಸೇರಿಸುವ ಮೂಲಕ ಪಕ್ಷ ಸಂಘಟನೆಯಲ್ಲಿ ತೊಡಗಿದ್ದ ಸಿದ್ದರಾಮಯ್ಯವರಿಗೆ ತಿರುಗೇಟು ನೀಡಿದ್ದಾರೆ.
ಸಂದೇಶ ರವಾನಿಸಿದ ಜಿಟಿ ದೇವೇಗೌಡ
ಈ ಹಿಂದೆ ಸಿದ್ದರಾಮಯ್ಯನವರು ಅಸಮಾಧಾನಿತ ಜೆಡಿಎಸ್ ಸ್ಥಳೀಯ ನಾಯಕರನ್ನು ಕಾಂಗ್ರೆಸ್ಗೆ ಸೇರ್ಪಡೆ ಮಾಡಿಕೊಂಡಿದ್ದರು. ಇದೀಗ ಸಮಾವೇಶ ಮೂಲಕ ಜೆಡಿಎಸ್ ಸಂಘಟನೆಯಲ್ಲಿ ಹಿಂದುಳಿದಿಲ್ಲ. ಯಾರೇ ಜೆಡಿಎಸ್ ತೊರೆದರೂ ಪಕ್ಷಕ್ಕೆ ನಷ್ಟವಿಲ್ಲ. ಜೆಡಿಎಸ್ ಕ್ಷೇತ್ರದಲ್ಲಿ ಪ್ರಬಲವಾಗಿದೆ ಎಂಬ ಸಂದೇಶವನ್ನು ರವಾನಿಸಿದ್ದಾರೆ.
ಕಾಂಗ್ರೆಸ್ ಪತಾಕೆ ಹಾರಿಸಲು ಸಿದ್ದರಾಮಯ್ಯ ಪಣ
ಇನ್ನು ಸೋತ ಕ್ಷೇತ್ರದಲ್ಲಿ ಕಾಂಗ್ರೆಸ್ ಪತಾಕೆ ಹಾರಿಸಲು ಸಿದ್ದರಾಮಯ್ಯ ಪಣ ತೊಟ್ಟಂತೆ ಕಾಣಿಸುತ್ತಿದೆ. 2022ರಲ್ಲಿ ಜಿಟಿ ದೇವೇಗೌಡರನ್ನೇ ಸೆಳೆಯಲು ಸಿದ್ದರಾಮಯ್ಯ ಮುಂದಾಗಿದ್ದರು. ಇಬ್ಬರು ಜೊತೆಯಾಗಿಯೇ ವೇದಿಕೆ ಹಂಚಿಕೊಂಡಿದ್ದರು.
ಇದನ್ನೂ ಓದಿ: Karnataka Elections: ಸಿಎಂ ಬೊಮ್ಮಾಯಿ ವಿರುದ್ಧ ಸ್ಪರ್ಧೆ ಮಾಡ್ತಾರಾ ವಿನಯ್ ಕುಲಕರ್ಣಿ?
ಹೆದರಿಸೋಕೆ ಬಂದರೆ ತೊಡೆ ತಟ್ಟೋದು ನನಗೆ ಗೊತ್ತಿದೆ
ರಾಜ್ಯ ವಿಧಾನಸಭಾ ಚುನಾವಣೆ (Karnataka Politics 2023) ಹತ್ತಿರವಾಗುತ್ತಿದ್ದಂತೆ ನಾಯಕರ ನಡುವಿನ ವಾಗ್ದಾಳಿ ಜೋರಾಗಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಅವರು ತಮ್ಮ ಎದುರಾಳಿಗಳಿಗೆ ಎಚ್ಚರಿಕೆ ಕೊಟ್ಟು ತಿರುಗೇಟು ನೀಡಿದ್ದಾರೆ.
ವಿಜಯನಗರ ಜಿಲ್ಲೆ (Vijayapura) ಹೂವಿನಹಡಗಲಿ (Huvinahadagali) ತಾಲೂಕಿನ ಮೈಲಾರದಲ್ಲಿ ಮಾತನಾಡಿದ ಮಾಜಿ ಸಿ.ಎಂ.ಸಿದ್ದರಾಮಯ್ಯ ಅವರು, ಅಧಿಕಾರ ಬರುತ್ತೆ ಹೋಗುತ್ತದೆ. ನನ್ನ ರಾಜಕೀಯ ಜೀವನದಲ್ಲಿ 13 ಚುನಾವಣೆ ಎದುರಿಸಿದ್ದೇನೆ, 5 ಚುನಾವಣೆ ಸೋತಿದ್ದೇನೆ. ಆದರೆ ಸೋತು ಮನೆಯಲ್ಲಿ ಕುಳಿತಿರಲಿಲ್ಲ, ಸಾಮಾಜಿಕ ನ್ಯಾಯಕ್ಕಾಗಿ (Social Justice) ಹೋರಾಡಿದ್ದೀನಿ.
ಯಾರಿಗೂ ಹೆದರುವ ಗಿರಾಕಿ ನಾನು ಅಲ್ಲ. ಸುಮ್ಮ ಸುಮ್ಮನೆ ಹೆದರಿಸೋಕೆ ಬಂದರೆ ತೊಡೆ ತಟ್ಟೋದು ನನಗೆ ಗೊತ್ತಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಕಾರ್ಯಕರ್ತರನ್ನ ಗದರಿದ ಸಿದ್ದರಾಮಯ್ಯ
ಹಾವೇರಿ ಮೀಸಲು ಕ್ಷೇತ್ರದ ಟಿಕೆಟ್ ಈರಪ್ಪ ಲಮಾಣಿ ಅವರಿಗೆ ಟಿಕೆಟ್ ಕೊಡುವಂತೆ ಅಭಿಮಾನಿಗಳು ಒತ್ತಾಯ ಮಾಡುತ್ತಿದ್ದಾರೆ. ಆದೆ ಇಲ್ಲಿ ನಾನು ಟಿಕೆಟ್ ಕೊಡಲು ಬಂದಿದ್ದಾನಾ? ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ರದ್ದು ಮಾಡಿ ಮಠದ ಕಾರ್ಯಕ್ರಮಕ್ಕೆ ಇಲ್ಲಿಗೆ ಬಂದಿದ್ದೇನೆ ಎಂದು ಕಾರ್ಯಕರ್ತರನ್ನು ಗದರಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ