• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • GT Devegowda on Siddaramaiah: ಸಿದ್ದರಾಮಯ್ಯ ನನ್ನಷ್ಟು ಗಟ್ಟಿ ಇಲ್ಲವೇ ಇಲ್ಲ; ಜಿಟಿ ದೇವೇಗೌಡ ಖಡಕ್‌ ಮಾತು

GT Devegowda on Siddaramaiah: ಸಿದ್ದರಾಮಯ್ಯ ನನ್ನಷ್ಟು ಗಟ್ಟಿ ಇಲ್ಲವೇ ಇಲ್ಲ; ಜಿಟಿ ದೇವೇಗೌಡ ಖಡಕ್‌ ಮಾತು

ಶಾಸಕ ಜಿ.ಟಿ.ದೇವೇಗೌಡ

ಶಾಸಕ ಜಿ.ಟಿ.ದೇವೇಗೌಡ

ನಾನು ಗೆಲ್ಲಲಿ ಸೋಲಲಿ ನನ್ನ ಜಾಯಿಮಾನದಲ್ಲಿಯೇ ಯಾರ ಜೊತೆಗೂ ನಾನು ಹೊಂದಾಣಿಕೆ ಮಾಡಿಲ್ಲ ಎಂದ ಜಿಟಿ ದೇವೇಗೌಡ, ಈ ಸಿದ್ದೇಗೌಡನ ಬಗ್ಗೆ ಸಿದ್ದರಾಮಯ್ಯಗೆ ನಾನು ಹೇಳಿದ್ದೆ. ನಾನು ಹೇಳಿದ್ದೆಲ್ಲ ಅವರು ಮರೆತು ಹೋಗಿದ್ದಾರೆ, ನನಗೆ ಹೋದ ಚುನಾವಣೆಯೇ ಕಷ್ಟ ಆಗಲಿಲ್ಲ. ಇನ್ನು ಈಗ ಕಷ್ಟ ಆಗುತ್ತಾ? ಎಂದು ಪ್ರಶ್ನಿಸಿದರು.

ಮುಂದೆ ಓದಿ ...
  • Share this:

ಮೈಸೂರು: ಸಿದ್ದರಾಮಯ್ಯಗೆ (Siddaramaiah) ಚಾಮುಂಡೇಶ್ವರಿ (Chamundeshwari) ರಾಜಕಾರಣವೇ ಗೊತ್ತಿಲ್ಲ, ನನ್ನಷ್ಟು ಗಟ್ಟಿ ಸಿದ್ದರಾಮಯ್ಯ ಅಲ್ಲವೇ ಅಲ್ಲ ಎಂದು ಮಾಜಿ ಸಚಿವ ಜಿಟಿ ದೇವೇಗೌಡ (G T Deve gowda) ಹೇಳಿದ್ದಾರೆ. ಮೈಸೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ರೀತಿ ಅಧಿಕಾರಕ್ಕಾಗಿ ಯಾರ್ ಯಾರ ಮನೆ ಬಾಗಿಲಿಗೂ ಹೋದವನಲ್ಲ ಎಂದು ವ್ಯಂಗ್ಯವಾಡಿದರು.


ಸಾರ್ವತ್ರಿಕ ಚುನಾವಣೆ ಮುಗಿಯುತ್ತಿದ್ದಂತೆ ಸಿದ್ದರಾಮಯ್ಯ ವಿರುದ್ಧ ಸಿಡಿದ ಜಿಟಿ.ದೇವೇಗೌಡ ತಾಲ್ಲೂಕು ಬೋರ್ಡ್, ಎಪಿಎಂಸಿ, ಡೈರಿಯಲ್ಲಿ ಅಪ್ಪ ಮಕ್ಕಳು ಸೋತವರೆ. ಅಂತಹವರನ್ನು ಕರ್ಕೊಂಡು ಬಂದು ನನ್ನ ವಿರುದ್ಧ ನಿಲ್ಲಿಸಿದ್ದಾರೆ. ಸಿದ್ದರಾಮಯ್ಯ ಬರಿ ದ್ವೇಷಕ್ಕೆ ರಾಜಕಾರಣ ಮಾಡಿದ್ರು. ಅಷ್ಟೂ ಇದ್ರೆ ಅವರಿಗಾಗಿ ಸರ್ವಸ್ವ ತ್ಯಾಗ ಮಾಡಿದ ಮರಿಗೌಡನಿಗೆ ಟಿಕೆಟ್ ಕೊಡಬೇಕಿತ್ತು. ಒಕ್ಕಲಿಗರಲ್ಲೇ ಕೊಡುವುದಿದ್ದರೆ ಸತ್ಯಪ್ಪ ಮಗ ಅರುಣ್, ನರಸೇಗೌಡ, ಕೃಷ್ಣಸಾಗರ್ ಇದ್ರು. ಇವರಿಗೆ ಕೊಟ್ಟಿದ್ರೆ ಗೌರವಯುತವಾಗಿ ಸೋಲುತ್ತಿದ್ರು ಎಂದು ಹೇಳಿದರು.


ಇದನ್ನೂ ಓದಿ: Bhupesh Baghel: ಕರ್ನಾಟಕದ ಚುನಾವಣಾ ಫಲಿತಾಂಶದ ದಿನ ಬಿಜೆಪಿ ತಕ್ಕ ಪಾಠ ಕಲಿಯಲಿದೆ: ಛತ್ತೀಸ್‌ಗಡ ಸಿಎಂ


ಅವನನ್ನು ನನ್ನ ಮನೆ ಬಾಗಿಲಿಗೆ ಸೇರ್ಸಲ್ಲ


ಸಿದ್ದೇಗೌಡ (Siddegowda) ಜಿಟಿ ದೇವೇಗೌಡ ಜೊತೆ ಹೊಂದಾಣಿಕೆ ಮಾಡಿದ್ದಾರೆಂಬ ಕಾಂಗ್ರೆಸ್‌ ಕಾರ್ಯಕರ್ತರ ಆರೋಪಕ್ಕೆ ನಿನ್ನೆ ಬೇಸರ ವ್ಯಕ್ತ ಪಡಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಬಗ್ಗೆಯೂ ಮಾತನಾಡಿದ ಜಿಟಿ ದೇವೇಗೌಡ, ಮಾವಿನಹಳ್ಳಿ ಸಿದ್ದೇಗೌಡ ಅವರ ಊರಲ್ಲೇ ಎಷ್ಟು ವೋಟ್ ತಗೋತಾನೆ ನೋಡೊಣ ಬನ್ನಿ. ಸಿದ್ದೇಗೌಡನನ್ನು ನಾನು ಯಾಕೆ ಬುಕ್ ಮಾಡಲಿ? ನಾನು ಸಿದ್ದೇಗೌಡನ‌ ಜೊತೆ ಸೇರೋದು ಬಿಡಿ, ಅವನನ್ನು ನನ್ನ ಮನೆ ಬಾಗಿಲಿಗೆ ಸೇರ್ಸಲ್ಲ ಎಂದರು.


ಇನ್ನು, ನಾನು ಗೆಲ್ಲಲಿ ಸೋಲಲಿ ನನ್ನ ಜಾಯಿಮಾನದಲ್ಲಿಯೇ ಯಾರ ಜೊತೆಗೂ ನಾನು ಹೊಂದಾಣಿಕೆ ಮಾಡಿಲ್ಲ ಎಂದ ಜಿಟಿ ದೇವೇಗೌಡ, ಈ ಸಿದ್ದೇಗೌಡನ ಬಗ್ಗೆ ಸಿದ್ದರಾಮಯ್ಯಗೆ ನಾನು ಹೇಳಿದ್ದೆ. ನಾನು ಹೇಳಿದ್ದೆಲ್ಲ ಅವರು ಮರೆತು ಹೋಗಿದ್ದಾರೆ, ನನಗೆ ಹೋದ ಚುನಾವಣೆಯೇ ಕಷ್ಟ ಆಗಲಿಲ್ಲ. ಇನ್ನು ಈಗ ಕಷ್ಟ ಆಗುತ್ತಾ? ಮಾವಿನಹಳ್ಳಿ ಸಿದ್ದೇಗೌಡ ಬುಕ್ ಮಾಡೊದಲ್ಲ, ಜೀವಮಾನದಲ್ಲಿ ಮಾತನಾಡಿಸಲ್ಲ. ನನ್ನ ಬಿಟ್ಟು ಹೋದ ಐದು ಜನರನ್ನೂ ನಾನು ಹತ್ತಿರ ಸೇರಿಸಲ್ಲ ಎಂದು ಕಿಡಿಕಾರಿದರು.


ಇದನ್ನೂ ಓದಿ: GM Siddeshwara: ಪತ್ನಿ ಮತ ಹಾಕೋದನ್ನು ಮೆಲ್ಲನೆ ಇಣುಕಿ ನೋಡಿದ ದಾವಣಗೆರೆ ಸಂಸದ ಜಿಎಂ ಸಿದ್ದೇಶ್ವರ್‌!


ಈ ಬಾರಿಯ ಚುನಾವಣೆಯಲ್ಲಿ ಚಾಮುಂಡೇಶ್ವರಿ ದೇವಿಯ ಆಶಿರ್ವಾದದಿಂದ ಗೆಲ್ಲುತ್ತೇನೆ ಎಂದ ಜಿಟಿ ದೇವೇಗೌಡ, ಪ್ರಚಾರದ ವೇಳೆ ಎಲ್ಲಾ ಕಾರ್ಯಕರ್ತರು ನನಗೆ ಅದ್ದೂರಿ ಸ್ವಾಗತ ಕೊಟ್ಟಿದ್ರು. ಜನರು ಭಾರೀ ಉತ್ಸಾಹದಿಂದ, ಪ್ರೀತಿಯಿಂದ ಜಿಟಿ ದೇವೇಗೌಡರನ್ನು ಗೆಲ್ಲಿಸುವ ಮನಸ್ಸು ಮಾಡಿದ್ದಾರೆ ಎಂದು ಹೇಳಿದರು.'ನಮಗೆ ಜನರೇ ಹಣ ತಂದು ಕೊಟ್ಟರು'


ಇನ್ನು ಕೆಲ ಎಕ್ಸಿಟ್ ಪೋಲ್‌ಗಳು ಅತಂತ್ರ ಫಲಿತಾಂಶದ ಬಗ್ಗೆ ಭವಿಷ್ಯ ನುಡಿಯುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ದೇವೇಗೌಡ, ಇನ್ನು ಒಂದೇ ದಿನ ಬಾಕಿ ಇರೋದು ಜನರ ತೀರ್ಪು ಬರಲಿ ನೋಡೋಣ. ಬಿಜೆಪಿಗೆ ಕೇಂದ್ರದಿಂದ ಹಣ ಬರುತ್ತೆ ಖರ್ಚು ಮಾಡಿದ್ದಾರೆ. ಕಾಂಗ್ರೆಸ್‌ನವರು ಅವರವರೇ ಸೇರಿ ದುಡ್ಡು ಹಾಕಿ ಚುನಾವಣೆ ಎದುರಿಸಿದ್ದಾರೆ. ಆದರೆ ಜೆಡಿಎಸ್‌ಗೆ ಜನರೇ ತಂದು ಕೊಟ್ಟು ಚುನಾವಣೆ ಮಾಡಿಸಿದ್ದಾರೆ. ಎಚ್‌ಡಿ ದೇವೇಗೌಡ, ಕುಮಾರಸ್ವಾಮಿ ಪಕ್ಷ ಉಳಿಬೇಕು ಅಂತ ಜನರು ಚುನಾವಣೆ ಮಾಡಿಸಿದ್ದಾರೆ ಎಂದು ಹೇಳಿದರು.

top videos
    First published: