ಕ್ಷೇತ್ರದ ಅಭಿವೃದ್ಧಿ ನನ್ನ ಆದ್ಯತೆ; ರಾಜ್ಯ ರಾಜಕಾರಣದ ಬಗ್ಗೆ ತಲೆಕೆಡಿಸಿಕೊಂಡಿಲ್ಲ; ಜಿಟಿ ದೇವೇಗೌಡ

ಹುಣಸೂರು ಕ್ಷೇತ್ರದ ಉಪಚುನಾವಣೆ ವಿಚಾರದಲ್ಲಿ ತಮ್ಮ ಮಗ ಸ್ಪರ್ಧಿಸುವುದಿಲ್ಲ. ಅಲ್ಲದೇ ಟಿಕೆಟ್ ಕೊಡಿ ಎಂದು ಯಾರ ಬಳಿಯೂ ಹೋಗಿಲ್ಲ. ಯಾರೂ ನಮಗೆ ಸ್ಪರ್ಧಿಸಿ ಎಂದು ಕೇಳಿಲ್ಲ. ಈ ಚುನಾವಣೆಯಲ್ಲಿ ನಾನು ತಟಸ್ಥನಾಗಿರುತ್ತೇನೆ

Seema.R | news18-kannada
Updated:November 5, 2019, 12:49 PM IST
ಕ್ಷೇತ್ರದ ಅಭಿವೃದ್ಧಿ ನನ್ನ ಆದ್ಯತೆ; ರಾಜ್ಯ ರಾಜಕಾರಣದ ಬಗ್ಗೆ ತಲೆಕೆಡಿಸಿಕೊಂಡಿಲ್ಲ; ಜಿಟಿ ದೇವೇಗೌಡ
ಜಿಟಿ ದೇವೇಗೌಡ
  • Share this:
ಮೈಸೂರು (ನ.05): ನನ್ನ ಕ್ಷೇತ್ರದ ಅಭಿವೃದ್ಧಿಯೇ ನನ್ನ ಮೊದಲ ಆದ್ಯತೆಯಾಗಿದ್ದು, ಇದೇ ಉದ್ದೇಶದಿಂದ ನಾನು ರಾಜ್ಯ ರಾಜಕಾರಣದ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ನನ್ನ ಕ್ಷೇತ್ರದ ಕಡೆ ಮಾತ್ರ ನನ್ನ ಗಮನ ಕೇಂದ್ರಿಕರಿಸುತ್ತಿದ್ದೇನೆ ಎಂದು ಜಿಟಿ ದೇವೇಗೌಡ ಸ್ಪಷ್ಟಪಡಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಬಿಜೆಪಿ ನಾಯಕರ ಜೊತೆ ಹೆಚ್ಚು ಕಾಣಿಸಿಕೊಳ್ಳುತ್ತಿರುವ ಅವರು, ಮಗನ ರಾಜಕೀಯ ಭವಿಷ್ಯದ ಹಿನ್ನೆಲೆ ಬಿಜೆಪಿ ಸೇರುವ ಸಾಧ್ಯತೆಗಳಿವೆ. ಅಲ್ಲದೇ ಇವರ ಜೊತೆ ಅನೇಕರು ಕೂಡ ಪಕ್ಷ ಬಿಡಲಿದ್ದಾರೆ ಎಂಬ ಸುದ್ದಿಹರಡಿತ್ತು. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿರುವ ಅವರು, ನಾನು ಯಾವ ಜೆಡಿಎಸ್ ಶಾಸಕರ ಜೊತೆಯೂ ಮಾತನಾಡಿಲ್ಲ. ಯಾರನ್ನು ಎಲ್ಲಿಗೂ ಕರೆದುಕೊಂಡು ಹೋಗಿಲ್ಲ. ಯಾರನ್ನು ಪಕ್ಷ ಕಟ್ಟುತ್ತೇನೆ ಬನ್ನಿ ಎಂದು ಕರೆದಿಲ್ಲ ಎಂದು ತಿಳಿಸಿದರು.

ಜೆಡಿಎಸ್ ಶಾಸಕರಾದ ಪುಟ್ಟರಾಜು, ಮಹದೇವ ಬಂದು ನನ್ನ ಜೊತೆ ಮಾತನಾಡಿದರು. ಪಕ್ಷದಲ್ಲಿನ ಕೆಲವು ಚಟುವಟಿಕೆಗಳಿಂದ ನಮಗೂ ನೋವಾಗಿದೆ. ಮುಂದೆ ಸರಿಯಾಗುತ್ತೇ ದುಡುಕುವುದು ಬೇಡ ಅಂದರು. ನನ್ನ ಜನರು ಕ್ಷೇತ್ರ ಬಿಟ್ಟು ಹೋಗದಂತೆ ಹೇಳಿದ್ದಾರೆ. ಆದ್ದರಿಂದ ನಾನು ಕ್ಷೇತ್ರದಲ್ಲೇ ಇದ್ದೇನೆ ಎಂದರು.

ನಾನು ನನ್ನ ಕ್ಷೇತ್ರದ ಜನರ ನಿಲುವಿಗೆ ಬದ್ಧನಾಗಿದ್ದೇನೆ ಚಾಮುಂಡೇಶ್ವರಿ ಕ್ಷೇತ್ರ ರಿಂಗ್ ರೋಡ್ ಸುತ್ತ ಇದೆ. ಸಾಕಷ್ಟು ಸಮಸ್ಯೆ ಇದೆ. ಅದು ಇನ್ನು ಪರಿಹಾರ ಆಗಿಲ್ಲ. ಆ ಜನರಿಗೆ ರಸ್ತೆ ಕುಡಿಯೋ‌ ನೀರು ಒದಗಿಸುವ ಕೆಲಸ ಇದೆ. ಬಿಎಸ್​ ಯಡಿಯೂರಪ್ಪ ಸರ್ಕಾರ ಚೆನ್ನಾಗಿ ನಡೆಯುತ್ತಿದೆ. ಸೋಮಣ್ಣ ಒಳ್ಳೆ ದಸರಾ ಮಾಡಿದ್ದಾರೆ. ನನ್ನ ಕ್ಷೇತ್ರದ ಅಭಿವೃದ್ಧಿಗೆ ನಾನು ಮನವಿ ಮಾಡಿದ್ದೇನೆ ಅಷ್ಟೇ.

ಕುಮಾರಸ್ವಾಮಿ ಬಿಜೆಪಿ ಬಗ್ಗೆ ಮೃಧು ಧೋರಣೆ ತಾಳುತ್ತಿರುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಈ ಕುರಿತು ಅವರಿಗೆ ಮಾತ್ರ ಗೊತ್ತಾಗುತ್ತೆ. ಎಚ್.​​ಡಿ.ಕುಮಾರಸ್ವಾಮಿ ಉಳಿಸುತ್ತೇವೆ ಎಂದಿದ್ದಾರೆ. ನಮಗೂ ಸಹಾ ಅದೇ ಬೇಕಾಗಿರುವುದು ಎಂದು ಪರೋಕ್ಷವಾಗಿ ಬಿಜೆಪಿ ಪರವಹಿಸಿದರು.

ಹುಣಸೂರು ಕ್ಷೇತ್ರದ ಉಪಚುನಾವಣೆ ವಿಚಾರದಲ್ಲಿ ತಮ್ಮ ಮಗ ಸ್ಪರ್ಧಿಸುವುದಿಲ್ಲ. ಅಲ್ಲದೇ ಟಿಕೆಟ್ ಕೊಡಿ ಎಂದು ಯಾರ ಬಳಿಯೂ ಹೋಗಿಲ್ಲ. ಯಾರೂ ನಮಗೆ ಸ್ಪರ್ಧಿಸಿ ಎಂದು ಕೇಳಿಲ್ಲ. ಈ ಚುನಾವಣೆಯಲ್ಲಿ ನಾನು ತಟಸ್ಥನಾಗಿರುತ್ತೇನೆ ಎಂದರು

 
First published:November 5, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ