GT Devegowda: ಪಕ್ಷ ಬಿಡುವ ಮೊದಲೇ ಜಿಟಿಡಿಗೆ ಶಾಕ್ ನೀಡಿದ ಜೆಡಿಎಸ್

ಇದೀಗ ಎಲ್ಲಾ ಬೆಳವಣಿಗೆಗಳ ನಡುವೆ ಜೆಡಿಎಸ್​ ವೆಬ್​ಸೈಟ್​ನಿಂದ ಜಿ.ಟಿ.ದೇವೇಗೌಡರ ಹೆಸರನ್ನು ಹೊರಗಿಡಲಾಗಿದೆ. ಹಳೆ ಮೈಸೂರು ಭಾಗದ ಪ್ರಭಾವಿ ನಾಯಕರಾಗಿದ್ದರೂ ಜಿಟಿಡಿ ಅವರ ಫೋಟೋ ಮತ್ತು ಹೆಸರನ್ನ ಪಕ್ಷದ ಎಲ್ಲಾ ಪೋಸ್ಟರ್ ನಿಂದಲೂ ತೆಗೆಯಲಾಗುತ್ತಿದೆ.

ಶಾಸಕ ಜಿ.ಟಿ.ದೇವೇಗೌಡ

ಶಾಸಕ ಜಿ.ಟಿ.ದೇವೇಗೌಡ

  • Share this:
ಮಾಜಿ ಸಚಿವ ಜಿ.ಟಿ.ದೇವೇಗೌಡ (Former Minister GT Devegowda) ಅವರ ರಾಜಕೀಯ ನಡೆ ಇನ್ನೂ ನಿಗೂಢವಾಗಿದೆ. ಈಗಾಗಲೇ ಜೆಡಿಎಸ್​ನಿಂದ (JDS) ಹೊರ ಬಂದಿರುವ ಶಾಸಕ ಜಿ.ಟಿ.ದೇವೇಗೌಡರು ಮುಂದೆ ಯಾವ ಪಕ್ಷ ಸೇರ್ತಾರೆ ಅನ್ನೋದು ಮಾತ್ರ ಸಸ್ಪೆನ್ಸ್ ಆಗಿದೆ. ಕಾಂಗ್ರೆಸ್ (Congress) ಮತ್ತು ಬಿಜೆಪಿ (BJP) ನಾಯಕರ ಜೊತೆ ಗುರುತಿಸಿಕೊಳ್ಳುತ್ತಿರುವ ಜಿ.ಟಿ.ದೇವೇಗೌಡರು, ಪಕ್ಷ ಸೇರ್ಪಡೆಗೂ ಮುನ್ನ ಪುತ್ರ ಹರೀಶ್ (GT Devegowda Son Harish) ಟಿಕೆಟ್ ಕೇಳುತ್ತಿದ್ದಾರೆ ಎಂದು ಹೇಳಲಾಗಿದೆ. ಟಿಕೆಟ್ ಜೊತೆ ಎರಡೂ ಪಕ್ಷಗಳ ಮುಂದೆ ಕೆಲ ಬೇಡಿಕೆಗಳನ್ನು ಇರಿಸಿದ್ದಾರೆ ಎನ್ನಲಾಗಿದೆ. ಯಾವ ಪಕ್ಷ ಬೇಡಿಕೆ ಒಪ್ಪುತ್ತೋ ಅದರ ಜೊತೆ ಹೋಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ  ಜೆಡಿಎಸ್ ಶಾಸಕರಾಗಿದ್ದರೂ (JDS MLA) ಪಕ್ಷದ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ.

ಇದೀಗ ಎಲ್ಲಾ ಬೆಳವಣಿಗೆಗಳ ನಡುವೆ ಜೆಡಿಎಸ್​ ವೆಬ್​ಸೈಟ್​ನಿಂದ ಜಿ.ಟಿ.ದೇವೇಗೌಡರ ಹೆಸರನ್ನು ಹೊರಗಿಡಲಾಗಿದೆ. ಹಳೆ ಮೈಸೂರು ಭಾಗದ ಪ್ರಭಾವಿ ನಾಯಕರಾಗಿದ್ದರೂ ಜಿಟಿಡಿ ಅವರ ಫೋಟೋ ಮತ್ತು ಹೆಸರನ್ನ ಪಕ್ಷದ ಎಲ್ಲಾ ಪೋಸ್ಟರ್ ನಿಂದಲೂ ತೆಗೆಯಲಾಗುತ್ತಿದೆ.

ಜೆಡಿಎಸ್ ವೆಬ್​ಸೈಟ್​​ನಲ್ಲಿ ಜಿಟಿಡಿ ಹೆಸರಿಲ್ಲ

ರಾಜ್ಯದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಹೊರತಾಗಿ ಮೂರನೇ ಅಧಿಕೃತ ಪ್ರಾದೇಶಿಕ ಪಕ್ಷವಾಗಿ ಜೆಡಿಎಸ್ ಗುರುತಿಸಿಕೊಂಡಿದೆ. https://jds.ind.in/ ಹೆಸರಿನಲ್ಲಿ ಪಕ್ಷ ಸಂಘಟನೆಯ ಅಧಿಕೃತ ವೆಬ್​ಸೈಟ್ ರಚನೆ ಮಾಡಲಾಗಿದೆ. ಈ ವೆಬ್​ಸೈಟ್​​ನಲ್ಲಿ ಪಕ್ಷದ ಶಾಸಕರು, ವಿಧಾನ ಪರಿಷತ್ ಸದಸ್ಯರ ಹೆಸರು ಹಾಗೂ ಕಚೇರಿ ವಿಳಾಸದ ಜತೆಗೆ ದೂರವಾಣಿ ಸಂಖ್ಯೆಯನ್ನು ಒಳಗೊಂಡ ಮಾಹಿತಿ ನೀಡಲಾಗಿದೆ.

GT Deve gowda name remove in jds website mrq
ಜೆಡಿಎಸ್ ವೆಬ್​ಸೈಟ್


ಇದನ್ನೂ ಓದಿ:  Vijayapura: ಕಾಂಗ್ರೆಸ್ ಕಚೇರಿಗೆ ಸಾವರ್ಕರ್ ಫೋಟೋ ಅಂಟಿಸಿದ ಬಿಜೆಪಿ ಮುಖಂಡ; ಯತ್ನಾಳ್​ ಸವಾಲು ಹಾಕಿದ್ದು ಯಾರಿಗೆ?

ಪಕ್ಷದ ಜಾಹೀರಾತುಗಳಿಂದಲೂ ಫೋಟೋ ಔಟ್

ಸದರಿ ವೆಬ್​ಸೈಟ್ ನಲ್ಲಿ ಜೆಡಿಎಸ್ ಹಿರಿಯ ಶಾಸಕರಾಗಿರುವ ಜಿ.ಟಿ.ದೇವೇಗೌಡರ ಕುರಿತ ಸಣ್ಣ ಮಾಹಿತಿಯೂ ಇಲ್ಲ. ಮೈಸೂರಿನ ಶಾಸಕ ಸಾ.ರಾ.ಮಹೇಶ್, ಅಶ್ವಿನ್ ಕುಮಾರ್, ಕೆ.ಮಹದೇವು ಅವರ ಸಂಪೂರ್ಣ ಮಾಹಿತಿ ಈ ವೆಬ್​ಸೈಟ್​​ನಲ್ಲಿದೆ. ಈಗಾಗಲೇ ಮೈಸೂರು ಭಾಗದ ಜೆಡಿಎಸ್ ಮುಖಂಡರ ಜಾಹೀರಾತು ಫಲಕದಲ್ಲಿ ಜಿಟಿಡಿ ಅವರ ಫೋಟೋ ತೆಗೆಯಲಾಗಿದೆ.

ದಳಪತಿಗಳ ವಿರುದ್ಧ ಜಿಟಿಡಿ ವಾಗ್ದಾಳಿ

ಜೆಡಿಎಸ್ ನಿಂದ ಅಂತರ ಕಾಯ್ದುಕೊಂಡಿರುವ ಜಿ.ಟಿ.ದೇವೇಗೌಡರು ಸಮಯ ಸಿಕ್ಕಾಗೆಲ್ಲ ದಳಪತಿಗಳ ವಿರುದ್ಧ ಅಸಮಾಧಾನ ಹೊರ ಹಾಕುತ್ತಿರುತ್ತಾರೆ. ಸಂಪುಟ ಹಂಚಿಕೆ ವೇಳೆ ಉದ್ದೇಶಪೂರ್ವಕವಾಗಿಯೇ ತಮಗೆ ಉನ್ನತ ಶಿಕ್ಷಣ ಇಲಾಖೆ ನೀಡಲಾಗಿತ್ತು ಎಂದು ಆರೋಪಿಸಿದ್ದರು. ಮತ್ತೊಂದು ಕಡೆ ದಳಪತಿಗಳು ಜಿಟಿಡಿ ಅವರ ಹೆಸರು ಹೇಳದೇ ವಾಗ್ದಾಳಿ ನಡೆಸಿದ್ದುಂಟು.

GT Deve gowda name remove in jds website mrq
ಜೆಡಿಎಸ್ ವೆಬ್​ಸೈಟ್


ನಾನು ಹಿರಿಯರ ಜೊತೆ ರಾಜಕೀಯ ಮಾಡಿದ್ದೇನೆ. 50 ವರ್ಷಗಳಿಂದ ರಾಜಕಾರಣದಲ್ಲಿ ಇದ್ದೇನೆ. ಇವತ್ತಿನ ಪರಿಸ್ಥಿತಿಯಲ್ಲಿ ರಾಜಕಾರಣ ಸಾಧ್ಯವಿಲ್ಲ. ನಾನು ಮಂತ್ರಿ ಆಗಿ ಆಯ್ತು, ರಾಜಕೀಯ ಸಾಕು. ನಾನು ಸಾಕಷ್ಟು ನೊಂದಿದ್ದೇನೆ ಎಂದು ಹೇಳಿ ಜಿ.ಟಿ.ದೇವೇಗೌಡರು ಚುನಾವಣಾ ರಾಜಕೀಯ ನಿವೃತ್ತಿಯನ್ನು 2019 ಆಗಸ್ಟ್ 4ರಂದು ಘೋಷಿಸಿದ್ದರು.

ಮಗ ಹರೀಶ್​ ಟಿಕೆಟ್​ ವಿಚಾರವಾಗಿ ಡೀಲ್​

ಕಾಂಗ್ರೆಸ್​ ಸೇರಲು ರೆಡಿಯಾಗಿ ನಿಂತಿರೋ ಜಿ.ಟಿ ದೇವೇಗೌಡರು, ಮಗನ ಟಿಕೆಟ್ ವಿಚಾರದಲ್ಲಿರೋ ಗೊಂದಲ ಪರಿಹರಿಸಿಕೊಳ್ಳಲು ಕಾಯ್ತಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ್ದ ಅವರು, ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಇಬ್ಬರಿಗೂ ನಾನು ಸ್ಪಷ್ಟವಾಗಿ ಹೇಳಿದ್ದೇನೆ. ನನ್ನ ಮಗನಿಗೆ ಟಿಕೆಟ್ ಕೊಡುವ ವಿಚಾರದಲ್ಲಿ ನಿರ್ಧಾರ ತಿಳಿಸಿ, ನಂತರ ನನ್ನ ತೀರ್ಮಾನ ಹೇಳುತ್ತೇನೆ ಅಂತ ತಿಳಿಸಿದ್ದೇನೆ. ನನ್ನ ಮಗ ಹರೀಶ್ ಗೌಡ‌ ವಿಚಾರದಲ್ಲಿ ಕಾಂಗ್ರೆಸ್ ತೀರ್ಮಾನದ ಬಳಿಕ ಉಳಿದ ಮಾತುಕತೆ ನಡೆಸುತ್ತೇನೆ ಎಂದು ಹೇಳಿದ್ದರು.

GT Deve gowda name remove in jds website mrq
ಜೆಡಿಎಸ್ ವೆಬ್​ಸೈಟ್


ಇದನ್ನೂ ಓದಿ:  Hijab Row: ಸಡಿಲಗೊಳ್ಳದ ಹಿಜಾಬ್ ಹಠ, ಶಿಕ್ಷಣ ಸಂಸ್ಥೆಗಳಿಗೆ ಗುಡ್ ​ಬೈ; 145 ಮಕ್ಕಳು ಹೊರಟ್ಟಿದ್ದೆಲ್ಲಿಗೆ?

ಟಿಕೆಟ್​ಗಾಗಿ ಮೂರು ಕ್ಷೇತ್ರಗಳ ಆಯ್ಕೆ

ನನ್ನ ಮಗನಿಗೆ ಯಾವ ಕ್ಷೇತ್ರದಲ್ಲಿ ಟಿಕೆಟ್​ ಕೊಡ್ತಾರೆ ಎಂದು ನೋಡಿಕೊಂಡು ನನ್ನ ನಿರ್ಧಾರ ಮಾಡೋದಾಗಿ ಹೇಳಿದ ಜಿಟಿಡಿ, ನಾವು ಹುಣಸೂರು ಕ್ಷೇತ್ರಕ್ಕೆ ಮೊದಲ ಆದ್ಯತೆ ನೀಡಲಿದ್ದು, ಕೆ.ಆರ್. ನಗರ ಎರಡನೇ ಆದ್ಯತೆ, ನಂತರ ಚಾಮರಾಜನಗರ ಕ್ಷೇತ್ರ ಮೂರನೇ ಆದ್ಯತೆಯಾಗಿದೆ. ಈ ಮೂರರಲ್ಲಿ ಯಾವುದಾದರೂ ಒಂದು ಕ್ಷೇತ್ರದಲ್ಲಿ ನನ್ನ ಮಗನಿಗೆ ಟಿಕೆಟ್ ನೀಡಲಿ. ನಾನು ಚಾಮುಂಡೇಶ್ವರಿ ಕ್ಷೇತ್ರದಲ್ಲೇ ಸ್ಪರ್ಧೆ ಮಾಡುತ್ತೇನೆ ಎಂದು ಹೇಳಿದರು.
Published by:Mahmadrafik K
First published: