ಬೆಳಗಾವಿಯಲ್ಲಿ ಎಮ್ಮೆ ಓಡಿಸುವ ಸ್ಪರ್ಧೆಯಲ್ಲೂ ಕನ್ನಡ, ಕೇಸರಿ ಬಾವುಟ ವಿಚಾರಕ್ಕೆ ಗಲಾಟೆ, ರಾದ್ಧಾಂತ

ದೀಪಾವಳಿ ಹಬ್ಬದ ನಿಮಿತ್ತ ಬೆಳಗಾವಿಯಲ್ಲಿ ನಡೆಯುವ ಎಮ್ಮೆಗಳ ಓಟ ಎಲ್ಲರನ್ನು ಸೆಳೆಯುತ್ತದೆ. ಆದರೆ ಈ ಸಂಭ್ರಮದ ಮಧ್ಯೆ ಕನ್ನಡ, ಕೇಸರಿ ಧ್ವಜ ಹಾರಾಟ ವಿಚಾರವಾಗಿ ನಡೆದ ಗಲಾಟೆಯಲ್ಲಿ ಕಲ್ಲು ತೂರಾಟವಾಗಿ, ಓರ್ವ ವ್ಯಕ್ತಿಗೆ ಗಾಯವಾಗಿದೆ. | Group clash in Belagavi due to Kannada and saffron flag issue during buffalo race.


Updated:November 8, 2018, 9:01 PM IST
ಬೆಳಗಾವಿಯಲ್ಲಿ ಎಮ್ಮೆ ಓಡಿಸುವ ಸ್ಪರ್ಧೆಯಲ್ಲೂ ಕನ್ನಡ, ಕೇಸರಿ ಬಾವುಟ ವಿಚಾರಕ್ಕೆ ಗಲಾಟೆ, ರಾದ್ಧಾಂತ
ಕಲ್ಲು ತೂರಾಟ ನಡೆಸಿದ ಯುವಕರು

Updated: November 8, 2018, 9:01 PM IST
- ಚಂದ್ರಕಾಂತ ಸುಗಂಧಿ, ನ್ಯೂಸ್18 ಕನ್ನಡ

ಬೆಳಗಾವಿ(ನ. 08): ಭಾಷೆ ವಿಚಾರವಾಗಿ ಸದಾ ಸೂಕ್ಷ್ಮವಾಗಿರುವ ಬೆಳಗಾವಿಯಲ್ಲಿ ಹಬ್ಬದ ಸಂತಸ ಸವಿಯಲೂ ಭಾಷೆ ಅಡ್ಡಿಯಾಗಿದೆ. ದೀಪಾವಳಿ ಹಬ್ಬದ ನಿಮಿತ್ತ ನಡೆದ ಎಮ್ಮೆ ಓಡಿಸುವ ಸ್ಪರ್ಧೆಯಲ್ಲಿ ಕನ್ನಡ ಮತ್ತು ಮರಾಠಿಗರ ಗುಂಪುಟಗಳ ನಡುವೆ ಮಾರಾಮಾರಿಯಾದ ಘಟನೆ ಇಂದು ಗುರುವಾರ ಸಂಭವಿಸಿದೆ. ಕಲ್ಲು ತೂರಾಟದಲ್ಲಿ ಕೆಲ ಮಂದಿಗೆ ಗಾಯಗಳಾಗಿದ್ದು, ನಗರದಲ್ಲಿ ಒಂದಷ್ಟು ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತ.

ಸರ್ದಾರ್ ಹೈಸ್ಕೂಲ್ ಮೈದಾನದಲ್ಲಿ ಗವಳಿ ಸಮಾಜದಿಂದ ಆಯೋಜಿಸಲಾಗಿದ್ದ ಎಮ್ಮೆ ಓಡಿಸುವ ಸ್ಪರ್ಧೆಯನ್ನು ನೋಡಲು ಸಾವಿರಾರು ಜನರು ಜಮಾಯಿಸಿದ್ದರು. ಈ ವೇಳೆಯಲ್ಲಿ ಕನ್ನಡ ಧ್ವಜ, ಭಗವಾಧ್ವಜ ಹಾರಾಟ ಸಂಬಂಧ ಎರಡು ಗುಂಪುಗಳ ನಡುವೆ ಗಲಾಟೆ ಆರಂಭವಾಗಿದೆ. ಅಷ್ಟಕ್ಕೂ ಈ ಇಷ್ಟೊಂದು ಗಲಾಟೆಗೆ ಕಾರಣವಾಗಿದ್ದು ಒಂದು ಚಿಕ್ಕ ವಿಚಾರಕ್ಕೆ. ಒಂದು ಗುಂಪು ಕನ್ನಡ ಬಾವುಟ ಹಾರಾಟ ನಡೆಸುತ್ತಿದ್ದರೆ, ಮತ್ತೊಂದು ಗುಂಪು ಕೇಸರಿ ಧ್ವಜ ಹಾರಿಸುತ್ತಿತ್ತು. ಧ್ವಜ ಹಾರಾಟದಲ್ಲಿ ಪರಸ್ಪರ ತಾಕಿದ್ದರಿಂದ ಯುವಕರು ಆಕ್ರೋಶಗೊಂಡು ಪರಸ್ಪರ ವಾಗ್ದಾದ ನಡೆಸಿ, ಗಲಾಟೆ ಮಾಡಿಕೊಂಡಿದ್ದಾರೆ. ಈ ವೇಳೆ, ಯುವಕರ ಒಂದು ಗುಂಪು ಓರ್ವ ವ್ಯಕ್ತಿಯನ್ನು ತೀವ್ರವಾಗಿ ಥಳಿಸಿದೆ. ಆಕ್ರೋಶಗೊಂಡ ಮತ್ತೊಂದು ಗುಂಪು ಪ್ರತಿಯಾಗಿ ಕಲ್ಲು ತೂರಾಟ ನಡೆಸಿದೆ.

ಗಲಾಟೆ ಸಂದರ್ಭದಲ್ಲಿ ಮೈದಾನದಲ್ಲಿ ಸಂಪೂರ್ಣವಾಗಿ ಧೂಳು ಆವರಿಸಿದ್ದು, ಯಾರು ಯಾರಿಗೆ ಹಲ್ಲೆ ಮಾಡಿದ್ರು ಎಂಬುದು ಯಾರಿಗೂ ತಿಳಿದಿಲ್ಲ. ಈ ಘಟನೆಯಲ್ಲಿ ಓರ್ವ ವ್ಯಕ್ತಿಗೆ ಗಾಯವಾಗಿದೆ. ಆತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಪ್ರತಿ ವರ್ಷ ನಡೆಯುವ ಎಮ್ಮೆ ಓಡಿಸುವ ಈ ಸರ್ಧೆ ವೇಳೆಯಲ್ಲಿ ಕೇವಲ ನಾಲ್ಕು ಜನ ಪೊಲೀಸರನ್ನು ಮಾತ್ರ ನಿಯೋಜನೆ ಮಾಡಲಾಗಿತ್ತು. ಪೊಲೀಸರು ಗುಂಪು ಚದುರಿಸಿಲು ಲಘು ಲಾಠಿ ಪ್ರಹಾರ ನಡೆಸಿದರೂ ಯಾವುದೇ ಪ್ರಯೋಜವಾಗಿಲ್ಲ. ಘಟನೆ ನಡೆದ ಬಳಿಕ ಬೆಳಗಾವಿಯ ಮಾರ್ಕೆಟ್ ಉಪವಿಭಾದ ಎಸಿಪಿ ಸೇರಿ ಅನೇಕ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಈ ಸಂಬಂಧ ಖಡೇಬಜಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ಓರ್ವನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಈ ದುರ್ಘಟನೆಗೂ ಮುನ್ನ ನೂರಾರು ಜನರು ಎಮ್ಮೆ ಓಡಿಸುವ ವಿಶೇಷ ಆಚರಣೆಯಲ್ಲಿ ಪಾಲ್ಗೊಂಡು ಖುಷಿ ಅನುಭವಿಸಿದರು. ಗವಳಿ ಸಮಾಜ ನೂರಾರು ಜನರು ಎಮ್ಮೆಗಳಿಗೆ ಶೃಂಗಾರ ಮಾಡಿ ಅವುಗಳನ್ನು ಓಡಿಸಿ ಆನಂದಿಸಿದ್ರು. ಬೈಕ್​ಗಳಿಗೆ ಕಪ್ಪು ಬಾವುಟ ಕಟ್ಟಿ ತೋರಿಸಿ ಎಮ್ಮೆಗಳಿಗೆ ಓಡಿದ್ರು. ಇದನ್ನು ನೋಡಲು ಸಾವಿರಾರು ಜನ ನೆರೆದಿದ್ರು. ಸ್ಥಳಕ್ಕೆ ಆಗಮಿಸಿದ ಶಾಸಕ ಅನಿಲ್ ಬೆನಕೆ ಗವಳಿ ಸಮಾಜದ ಮುಖಂಡರಿಗೆ ಸನ್ಮಾನಿಸಿ ಓಟ ವೀಕ್ಷಣೆ ಮಾಡಿ ಸಂತಸಪಟ್ಟರು.
First published:November 8, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ