ಮೈಸೂರು-ಕೊಡಗು ಕ್ಷೇತ್ರದಲ್ಲಿ ಒಕ್ಕಲಿಗರು ಕೈ ಹಿಡಿಯುವ ಅಭ್ಯರ್ಥಿಯೇ ಮುಂದಿನ ಸಂಸದ!

ಮೈಸೂರು ಕ್ಷೇತ್ರದಲ್ಲಿ ಇಬ್ಬರು ಅಭ್ಯರ್ಥಿಗಳ ನಡುವೆ ತೀವ್ರ ಹಣಾಹಣೆ ನಡೆದಿದೆಯಾದರೂ ಸಿ.ಎಚ್.ವಿಜಯಶಂಕರ್ ಗೆದ್ದರೆ ಸುಮಾರು 1 ಲಕ್ಷ ಮತಗಳ ಅಂತರದಲ್ಲಿ ಗೆಲ್ಲಲಿದ್ದಾರೆ. ಪ್ರತಾಪ್​ ಸಿಂಹ ಗೆದ್ದರೆ ಸುಮಾರು 50 ಸಾವಿರ ಮತಗಳ ಅಂತರದಿಂದ ಗೆಲುವು ದಾಖಲಿಸಲಿದ್ದಾರೆ ಎಂಬುದು ಕ್ಷೇತ್ರದ ರಾಜಕೀಯ ತಜ್ಞರ ಅಭಿಮತವಾಗಿದೆ.

HR Ramesh | news18
Updated:April 17, 2019, 2:54 PM IST
ಮೈಸೂರು-ಕೊಡಗು ಕ್ಷೇತ್ರದಲ್ಲಿ ಒಕ್ಕಲಿಗರು ಕೈ ಹಿಡಿಯುವ ಅಭ್ಯರ್ಥಿಯೇ ಮುಂದಿನ ಸಂಸದ!
ಕಾಂಗ್ರೆಸ್ ಅಭ್ಯರ್ಥಿ ಸಿ.ಎಚ್.ವಿಜಯಶಂಕರ್ ಮತ್ತು ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ
HR Ramesh | news18
Updated: April 17, 2019, 2:54 PM IST
ಇಬ್ಬರ ನಡುವಿನ ರನ್ನಿಂಗ್​ ರೇಸ್​ನಲ್ಲಿ ಒಬ್ಬ ಸ್ಪರ್ಧಿ ಆರಂಭದಲ್ಲಿಯೇ ತನ್ನ ಗುರಿಯ ಅರ್ಧ ದೂರ ಕ್ರಮಿಸಿಬಿಟ್ಟಿದ್ದರು. ಮತ್ತೊಬ್ಬ ಸ್ಪರ್ಧಿ ಇನ್ನೂ ಓಟವನ್ನೇ ಆರಂಭಿಸಿರಲಿಲ್ಲ. ಹೀಗಿರುವಾಗ ಸ್ಪರ್ಧೆಯಲ್ಲಿ ಯಾರು ಗೆಲ್ಲುತ್ತಾರೆ ಎಂದು ಊಹಿಸುವುದು ಕಷ್ಟವೇನಲ್ಲ. ಆದರೆ, ಮೊದಲ ಸ್ಪರ್ಧಿ ಇನ್ನೇನು ಗುರಿ ಮುಟ್ಟಬೇಕು ಎನ್ನುವಷ್ಟರಲ್ಲಿ ಎರಡನೇ ಸ್ಪರ್ಧಿ ಆತನ ಸರಿಸಮನಾಗಿ, ಅಥವಾ ಆತನಿಗಿಂತಲೂ ಒಂದು ಹೆಜ್ಜೆ ಮುಂದೆ ಎನ್ನುವಂತೆ ಓಡಲು ಆರಂಭಿಸಿದ್ದ. ಪರಿಸ್ಥಿತಿ ಹೀಗಿರುವಾಗ ಗುರಿಯನ್ನು ಯಾರು ಮೊದಲು ಮುಟ್ಟಿ, ಗೆಲ್ಲುತ್ತಾರೆ ಎಂದು ಹೇಳುವುದು ತುಸು ಹೆಚ್ಚೇ ಕಷ್ಟ. ಇಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಚಿತ್ರಣ ಇರುವುದು ಕೂಡ ಹೀಗೆಯೇ.

ಆರಂಭದಲ್ಲಿ ಬಿಜೆಪಿ ಅಭ್ಯರ್ಥಿ ಪ್ರತಾಪ್​ ಸಿಂಹ ವಿರುದ್ಧ ಮೈತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್​ನಿಂದ ಕುರುಬ ಸಮುದಾಯದ ಸಿ.ಎಚ್. ವಿಜಯಶಂಕರ್ ಅವರನ್ನು ಕಣಕ್ಕೆ ಇಳಿಸಿದಾಗ ಬಿಜೆಪಿ ಗೆಲುವು ನಿರಾಯಾಸ ಎಂದೇ ಹೇಳಲಾಗುತ್ತಿತ್ತು. ಮೈಸೂರಿನಲ್ಲಿ ಕಾಂಗ್ರೆಸ್​ಗೆ ಮತ್ತೆ ಸೋಲು ಖಚಿತ ಎಂದೇ ವ್ಯಾಖ್ಯಾನಿಸಲಾಗುತ್ತಿತ್ತು. ಇಂತಹ ಸನ್ನಿವೇಶದಲ್ಲಿ  ಕ್ಷೇತ್ರದಲ್ಲಿ ತೀವ್ರ ಪೈಪೋಟಿಯ ಸ್ಪರ್ಧೆ ಏರ್ಪಡುವಂತೆ ಮಾಡಿದ್ದು, ನಾಲ್ಕು ದಿನಗಳ ಹಿಂದೆ ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ಮತ್ತು ಜಿ.ಟಿ.ದೇವೇಗೌಡ ಅವರು ಒಟ್ಟಿಗೆ ನಡೆಸಿದ ಪ್ರಚಾರ ಮತ್ತು ದೇವೇಗೌಡರು ನಡೆಸಿದ ಸಮಾವೇಶ ಕ್ಷೇತ್ರದ ರಾಜಕೀಯ ಚಿತ್ರಣವನ್ನೇ ಬದಲಿಸಿಬಿಟ್ಟಿದೆ.

ಮೈಸೂರು- ಕೊಡಗು ಲೋಕಸಭಾ ವ್ಯಾಪ್ತಿಯಲ್ಲಿ ಎಂಟು ವಿಧಾನಸಭಾ ಕ್ಷೇತ್ರಗಳಿದ್ದು, ನಾಲ್ಕರಲ್ಲಿ ಜೆಡಿಎಸ್​, ಮೂರರಲ್ಲಿ ಬಿಜೆಪಿ ಹಾಗೂ ಒಂದು ಕ್ಷೇತ್ರದಲ್ಲಿ ಕಾಂಗ್ರೆಸ್​ ಶಾಸಕರು ಇದ್ದಾರೆ. ಒಟ್ಟಾರೆ 18 ಲಕ್ಷ ಮತದಾರರು ಕ್ಷೇತ್ರದಲ್ಲಿದ್ದು, ಇವರದಲ್ಲಿ ಸುಮಾರು 5 ಲಕ್ಷ ಒಕ್ಕಲಿಗ ಮತದಾರರು ಇದ್ದಾರೆ. 1.70 ಲಕ್ಷ ಕುರುಬರು, ಸರಿಸುಮಾರು ಇಷ್ಟೇ ಪ್ರಮಾಣದಲ್ಲಿ ಲಿಂಗಾಯತ, ಮುಸ್ಲಿಮರು, ಪರಿಶಿಷ್ಟ ವರ್ಗ ಮತ್ತು ಜಾತಿಯಿಂದ ತಲಾ 2 ಲಕ್ಷ ಹಾಗೂ ಬ್ರಾಹ್ಮಣರು 1 ಲಕ್ಷ ಮತದಾರರು ಇದ್ದಾರೆ. ಇವರಲ್ಲಿ ಒಕ್ಕಲಿಗರು ಯಾರ ಕೈಹಿಡಿಯಲಿದ್ದಾರೆ ಅವರು ಮಾತ್ರ ಈ ಕ್ಷೇತ್ರದ ಮುಂದಿನ ಸಂಸದರಾಗಲು ಸಾಧ್ಯ.

ಒಕ್ಕಲಿಗ ಸಮುದಾಯಕ್ಕೆ ಸೇರಿರುವ ಪ್ರತಾಪ್​ ಸಿಂಹ ಇದೇ ಕಾರಣದಿಂದ ಕುರುಬ ಸಮುದಾಯಕ್ಕೆ ಸೇರಿದ ಸಿ.ಎಚ್​.ವಿಜಯಶಂಕರ್ ಅವರಿಗಿಂತ ಸ್ಪರ್ಧೆಯ ಆರಂಭದಲ್ಲಿ ಮುಂದಿದ್ದರು. ಅಲ್ಲದೇ, ಮೈತ್ರಿ ನಾಯಕರ ನಡುವಿನ ಅಸಮಾಧಾನದಿಂದಾಗಿ ಒಕ್ಕಲಿಗ ಪ್ರಭಾವಿ ಮುಖಂಡ ಸಚಿವ ಜಿ.ಟಿ.ದೇವೇಗೌಡ ಮೈತ್ರಿ ಅಭ್ಯರ್ಥಿ ಪರ ಯಾವುದೇ ಪ್ರಚಾರ ನಡೆಸದೆ ಸುಮ್ಮನಿದ್ದರು. ಆದರೆ, ಯಾವಾಗ ಸಿದ್ದರಾಮಯ್ಯ ಅವರು ಕಾಂಗ್ರೆಸ್​-ಜೆಡಿಎಸ್​ ಜಂಟಿ ಸಮಾವೇಶದಲ್ಲಿ "ಇಲ್ಲಿ ಮೈತ್ರಿ ಅಭ್ಯರ್ಥಿ ಸೋತರೆ ಸರ್ಕಾರ ಉಳಿಯುತ್ತಾ?" ಎಂದು ಸರ್ಕಾರ ಬಿದ್ದುಹೋದರೆ ಒಕ್ಕಲಿಗರಾದ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಪದವಿಯನ್ನೇ ಕಳೆದುಕೊಳ್ಳಬೇಕಾಗುತ್ತದೆ ಎಂಬ ಅರ್ಥದಲ್ಲಿ ಹೇಳಿದ ಮಾತು ಜಿಲ್ಲೆಯ ಒಕ್ಕಲಿಗ ಮತಗಳ ಮೇಲೆ ಭಾರೀ ಪ್ರಭಾವವನ್ನೇ ಬೀರಿದೆ. ಅಲ್ಲದೇ ದೇವೇಗೌಡ ಅವರು ಮೈಸೂರಿನಲ್ಲಿ ಪ್ರಚಾರ ನಡೆಸಿದ್ದು, ವಿಜಯಶಂಕರ್ ಅವರ ಸ್ಪರ್ಧೆಯನ್ನು ಮತ್ತಷ್ಟು ಸದೃಢ ಮಾಡಿತು. ಅಲ್ಲದೇ ದೇವೇಗೌಡರ ಸಂಬಂಧಿಗಳು ಮತ್ತು ಆಪ್ತರ ಮನೆ ಮೇಲೆ ನಡೆಯುತ್ತಿರುವ ಸರಣಿ ಐಟಿ ದಾಳಿಗೆ ಬಿಜೆಪಿಯೇ ಕಾರಣ ಎಂಬ ಭಾವನೆ ಒಕ್ಕಲಿಗರಲ್ಲಿ ಮೂಡಿದ್ದು, ದೇವೇಗೌಡ ಕುಟುಂಬದ ಮೇಲೆ ಅನುಕಂಪ ಮೂಡುವಂತೆ ಮಾಡಿದೆ. ಹೀಗಾಗಿ ಜೆಡಿಎಸ್​ ಸರ್ಕಾರ ಇರಬೇಕಾದರೆ ಮೈತ್ರಿ ಅಭ್ಯರ್ಥಿ ಗೆಲ್ಲಬೇಕು ಎಂಬ ನಿರ್ಧಾರಕ್ಕೆ ಜಿಲ್ಲೆಯ ಒಕ್ಕಲಿಗರು ಬಂದಿದ್ದಾರೆ ಎನ್ನಲಾಗುತ್ತಿದೆ. ಇನ್ನು ಹಾಲಿ ಸಂಸದರಾಗಿರುವ ಪ್ರತಾಪ್​ ಸಿಂಹ ಕಳೆದ ಐದು ವರ್ಷಗಳಲ್ಲಿ ಬಿಜೆಪಿ ಸ್ಥಳೀಯ ಕಾರ್ಯಕರ್ತರೊಂದಿಗೆ ಉತ್ತಮ ಸಂಬಂಧ ಉಳಿಸಿಕೊಂಡಿಲ್ಲ. ಇದು ಕೂಡ ವಿಜಯಶಂಕರ್​ ಅವರ ಗೆಲುವಿಗೆ ಕಾರಣವಾಗಬಹುದು ಎಂದು ಅಂದಾಜಿಸಲಾಗಿದೆ.

ಆದರೂ, ಒಕ್ಕಲಿಗರು ಪ್ರತಾಪ್​ ಸಿಂಹ ಅವರನ್ನು ಕಡೆಗಣಿಸಿ ಕುರುಬ ಸಮುದಾಯದ ಸಿ.ಎಚ್.ವಿಜಯಶಂಕರ್ ಅವರಿಗೆ ಮತ ಹಾಕಲಿದ್ದಾರಾ ಎನ್ನುವ ಪ್ರಶ್ನೆ ಕೂಡ ಮೂಡುತ್ತದೆ. ದೇವೇಗೌಡರು, ಜಿ.ಟಿ.ದೇವೇಗೌಡರ ಕಾರಣದಿಂದ ಎಲ್ಲ ಒಕ್ಕಲಿಗರು ವಿಜಯಶಂಕರ್​ಗೆ ಮತ ಹಾಕುತ್ತಾರೆ ಎಂದು ನಿಖರವಾಗಿ ಹೇಳಲಾಗುವುದಿಲ್ಲ. ಅರ್ಧದಷ್ಟಯ ಒಕ್ಕಲಿಗರ ಮೇಲೆ ಇದರ ಪರಿಣಾಮ ಬೀರಿದೆ ಎಂದು ಹೇಳಬಹುದೇ ಹೊರತು ಪೂರ್ತಿ ಪ್ರಮಾಣದಲ್ಲಿ ಅವರು ಮೈತ್ರಿ ಅಭ್ಯರ್ಥಿ ಕಡೆ ವಾಲಿದ್ದಾರೆ ಎನ್ನಲಾಗದು. ಈ ಉಳಿದ ಮತಗಳು ಯಾರಿಗೆ ಬೀಳಲಿವೆ ಎಂಬುದರ ಮೇಲೆ ಫಲಿತಾಂಶ ನಿಂತಿದೆ.

ಇನ್ನು ಜಿಲ್ಲೆಯಲ್ಲಿ ಹಾಲಿ ಸಂಸದರ ವಿರುದ್ಧ ಬಿಜೆಪಿ ಸ್ಥಳೀಯ ನಾಯಕರಲ್ಲಿ ಅಸಮಾಧಾನಗಳು ಇದ್ದರೂ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿ ಎಂಬ ಆಶಯದಲ್ಲಿ ಮತ ನೀಡಿ ಎಂದು ಪಕ್ಷದ ನಾಯಕರು ಪ್ರಚಾರ ಮಾಡುತ್ತಿರುವುದು ಬಿಜೆಪಿ ಮತಬ್ಯಾಂಕ್ ತಮ್ಮಲ್ಲೇ ಉಳಿಯುವಂತೆ ನೋಡಿಕೊಂಡಿದ್ದಾರೆ. ಇನ್ನು ಕೊಡಗಿನ ಎರಡು ತಾಲೂಕು ಮತ್ತು ಕೃಷ್ಣರಾಜ ಸೇರಿದಂತೆ ಹಲವು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿ ನಿಸ್ಸಂದೇಹವಾಗಿ  ಅತಿಹೆಚ್ಚು ಮತಗಳ ಅಂತರ ಪಡೆದುಕೊಳ್ಳಲಿದ್ದಾರೆ. ಇನ್ನು ಪ್ರಧಾನಿ ಮೋದಿ ಅವರು ಮೈಸೂರಿನಲ್ಲಿ ಪ್ರಚಾರ ನಡೆಸಿರುವುದು ಕ್ಷೇತ್ರದ ಮತದಾರರು ಮತ್ತು ಈ ವರ್ಷ ಹೊಸದಾಗಿ ಮತ ಚಲಾಯಿಸುತ್ತಿರುವ 30 ಸಾವಿರ ಯುವ ಮತದಾರರ ಮೇಲೆ ಪ್ರಭಾವ ಬೀರಿದೆ. ಇದು ಬಿಜೆಪಿ ಅಭ್ಯರ್ಥಿ ಗೆಲುವಿಗೆ ಹೊಸ ಹುರುಪನ್ನು ತುಂಬಿದೆ.
Loading...

ಒಟ್ಟಿನಲ್ಲಿ ಮೈಸೂರು ಕ್ಷೇತ್ರದಲ್ಲಿ ಇಬ್ಬರು ಅಭ್ಯರ್ಥಿಗಳ ನಡುವೆ ತೀವ್ರ ಹಣಾಹಣೆ ನಡೆದಿದೆಯಾದರೂ ಸಿ.ಎಚ್.ವಿಜಯಶಂಕರ್ ಗೆದ್ದರೆ ಸುಮಾರು 1 ಲಕ್ಷ ಮತಗಳ ಅಂತರದಲ್ಲಿ ಗೆಲ್ಲಲಿದ್ದಾರೆ. ಪ್ರತಾಪ್​ ಸಿಂಹ ಗೆದ್ದರೆ ಸುಮಾರು 50 ಸಾವಿರ ಮತಗಳ ಅಂತರದಿಂದ ಗೆಲುವು ದಾಖಲಿಸಲಿದ್ದಾರೆ ಎಂಬುದು ಕ್ಷೇತ್ರದ ರಾಜಕೀಯ ತಜ್ಞರ ಅಭಿಮತವಾಗಿದೆ.

ಮತದಾನಕ್ಕೆ ಇನ್ನು 30 ಗಂಟೆಗಳಷ್ಟೇ ಬಾಕಿ ಉಳಿದಿದ್ದು, ಮೈಸೂರು-ಕೊಡಗು ಕ್ಷೇತ್ರದ ಮುಂದಿನ ಸಂಸದ ಯಾರು ಎಂಬುದನ್ನು ತಿಳಿಯಲು ಮೇ 23 ರವರೆಗೆ ಕಾಯಬೇಕಿದೆ.

  • ರಮೇಶ್ ಹಂಡ್ರಂಗಿ


 

ಇದನ್ನು ಓದಿ: ಚುನಾವಣಾ ಸಮೀಕ್ಷೆ; ಚಾಮರಾಜ ನಗರದಲ್ಲಿ ಕೈ ಕಮಲದ ನಡುವಿನ ಸ್ಟ್ರೈಟ್ ಫೈಟ್​ನಲ್ಲಿ ಗೆಲ್ಲೋರ್ಯಾರು?

ಇದನ್ನು ಓದಿ: ಹಾಸನ ಚುನಾವಣಾ ಸಮೀಕ್ಷೆ; ಜೆಡಿಎಸ್​ ಭದ್ರಕೋಟೆಯಲ್ಲಿ ಕಮಲ ಅರಳಲು ಇವೆ ಹಲವು ಅಡೆ-ತಡೆ!

ಇದನ್ನು ಓದಿ: ಚುನಾವಣಾ ಸಮೀಕ್ಷೆ; ಕೋಲಾರ ಲೋಕಸಭೆಯಲ್ಲಿ ಮೊದಲ ಬಾರಿಗೆ ಅರಳುವ ತವಕದಲ್ಲಿ ಕಮಲ..!
First published:April 16, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626