ದಸರಾ ಸಂಭ್ರಮದಲ್ಲೂ ಕೇಳಿಬಂತು #MeToo; ಓಪನ್​ಸ್ಟ್ರೀಟ್​ ಫೆಸ್ಟಿವಲ್​ನಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ

Seema.R | news18
Updated:October 17, 2018, 2:36 PM IST
ದಸರಾ ಸಂಭ್ರಮದಲ್ಲೂ ಕೇಳಿಬಂತು #MeToo; ಓಪನ್​ಸ್ಟ್ರೀಟ್​ ಫೆಸ್ಟಿವಲ್​ನಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ
  • Advertorial
  • Last Updated: October 17, 2018, 2:36 PM IST
  • Share this:
ನ್ಯೂಸ್​ 18 ಕನ್ನಡ

ಮೈಸೂರು (ಅ.17): ವಿಶ್ವವಿಖ್ಯಾತ ದಸರಾ ಹಬ್ಬವನ್ನು ಕಣ್ತುಂಬಿಕೊಳ್ಳಲು ಅರಮನೆ ನಗರಿಗೆ ಜನಸಾಗರವೇ ಹರಿದು ಬರುತ್ತದೆ. ಅದರಲ್ಲಿಯೂ ಯುವ ದಸರಾ, ಓಪನ್​ ಸ್ಟ್ರೀಟ್​ ಫೆಸ್ಟಿವಲ್​ಗಳು ಯುವ ಜನರ ಪ್ರಮುಖ ಆಕರ್ಷಣೆ. ಆದರೆ ಈ ಬಾರಿಯ ಓಪನ್​ ಸ್ಟ್ರೀಟ್​ ಫೆಸ್ಟಿವಲ್​ ಹಲವರು ಲೈಂಗಿಕ ಕಿರುಕಳ, ದೌರ್ಜನ್ಯ ಪ್ರಕರಣಗಳಿಗೆ ಸಾಕ್ಷಿಯಾಗಿದೆ.

ದೇಶದಲ್ಲಿ #MeToo ಅಭಿಯಾನ ಜೋರಾಗುತ್ತಿರುವ ಸಮಯದಲ್ಲೇ ಸಾಮಾಜಿಕ ಜಾಲತಾಣದಲ್ಲಿ ದಸರಾದಲ್ಲಿ ನಡೆದಿರುವ ಲೈಂಗಿಕ ದೌರ್ಜನ್ಯ ಪ್ರಕರಣಗಳು ಸದ್ದು ಮಾಡುತ್ತಿವೆ.

ಕೃಷ್ಣರಾಜ ಬುಲೇವಾರ್ಡ್​ ನಲ್ಲಿ ಸೋಮವಾರ ಜರುಗಿದ ಓಪನ್​ ಸ್ಟ್ರೀಟ್​ ಫೆಸ್ಟಿವಲ್​ , ಸ್ಥಳೀಯರು, ಪ್ರವಾಸಿಗರಿಂದ ಕಿಕ್ಕಿರಿದಿತ್ತು.  ಸಾಂಸ್ಕೃತಿಕ  ಕಾರ್ಯಕ್ರಮಗಳು ನಡೆಯುವ ಈ ಹಬ್ಬದಲ್ಲಿ ಯುವ ಸಮೂಹವೇ ಅತ್ಯಾಧಿಕ ಸಂಖ್ಯೆಯಲ್ಲಿ ಭಾಗಿಯಾಗಿದ್ದರು.

ಈ ವೇಳೆ ಯುವಕರ ಗುಂಪೊಂದು ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಹಿಳೆ #MeToo ಅಭಿಯಾನದಡಿ ಅಲ್ಲಿ ತನಗೆ ಆದ ಘಟನೆ ವಿವರಿಸಿದ್ದಾರೆ.

'ಇದು ನಿಜಕ್ಕೂ ಹಿಂಸೆ ಮತ್ತು ಅಸಹ್ಯಕರವಾಗಿದೆ. ಕೆಲವು ಯುವಕರು ಕುಡಿದು ನಮ್ಮ ಮೇಲೆ ಬಿಡುವ ಪ್ರಯತ್ನ ನಡೆಸಿದರು. ಈ ವೇಳೆ ಒಬ್ಬಳು ಯುವತಿ ಧ್ವನಿ ಎತ್ತಿದ ಬಳಿಕ ಅವರು ಹೊರ ಹೋದರು. ಆದರೆ ಮೈಸೂರಿನ ಹುಡುಗರು ಯುವತಿಯರ ಬೆಂಬಲಕ್ಕೆ ಬರಲಿಲ್ಲ. ಅವರು ನಿಜಕ್ಕೂ ಲಾಯಕ್ಕಿಲ್ಲ' ಎಂದು ಮಹಿಳೆಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಗುಂಪುಗಳಲ್ಲಿ ಕೆಲವು ಪುಂಡರು ಯುವತಿಯನ್ನು ಉದ್ಧೇಶಪೂರ್ವಕವಾಗಿ ಅವರನ್ನು ಸ್ಪರ್ಶಿಸಲು ಮುಂದಾಗುತ್ತಾರೆ. ಬಳಿಕ ಕ್ಷಮೆ ಕೇಳಿದಾಗ ನಾವು ಅವರನ್ನು ಆರೋಪಿಸಲು ಸಾಧ್ಯವಾಗುವುದಿಲ್ಲ ಎಂದು ಮತ್ತೊಬ್ಬ ಮಹಿಳೆ ಪೋಸ್ಟ್​ ಮಾಡಿದ್ದಾರೆ.ದಸರಾ ವೀಕ್ಷಣೆಗೆ ಬಂದ ವಿದೇಶ ಪ್ರವಾಸಿಗರ ವಿರುದ್ಧ ಕೆಲವು ಯುವಕರು ಅಸಭ್ಯವಾಗಿ ವರ್ತಿಸಿದರು. ವಿದೇಶಿಗರ ಜೊತೆಯಲ್ಲಿದ್ದ ನನಗೆ ಕನ್ನಡ ಬರುವುದಿಲ್ಲ ಎಂದು ತಿಳಿದು ವಿದೇಶಿಗರನ್ನು ಅವಹೇಳನಕಾರಿಯಾಗಿ ಅವರು ನಿಂದಿಸುತ್ತಿದ್ದರು ಎಂದು ಮತ್ತೊಬ್ಬರು ತಿಳಿಸಿದ್ದಾರೆ.,

ಈ ಬಗ್ಗೆ ಪ್ರತಿಕ್ರಿಯಿಸಿರುವ ಮೈಸೂರು ಪೊಲೀಸ್​ ಕಮಿಷನರ್​ ಈ ರೀತಿಯ  ದೌರ್ಜನ್ಯದ ಪ್ರಕರಣ ಕುರಿತು ಯಾವುದೇ ದೂರು ಇಲ್ಲಿಯವರೆಗೂ ದಾಖಲಾಗಿಲ್ಲ. ಅಲ್ಲದೇ ಈ ಸ್ಥಳಗಳ ಸಿಸಿಟಿವಿಯನ್ನು ಪರಿಶೀಲನೆ ನಡೆಸುತ್ತೇನೆ ಎಂದರು.

ಸಿಸಿಟಿವಿಯಲ್ಲಿ ಈ ಬಗ್ಗೆ ಯಾವುದಾದರೂ ಮಾಹಿತಿ ದಾಖಲಾಗಿದೆಯಾ ಎಂಬ ಬಗ್ಗೆ ನಾವು ಗಮನಿಸುತ್ತಿದ್ದು, ಇಲ್ಲಿಯವರೆಗೂ ನಾವು ಪಡೆದಿರುವ ಯಾವುದೇ ದೃಶ್ಯಾವಳಿಯಲ್ಲಿ ಆ ರೀತಿ ಪ್ರಕರಣ ದಾಖಲಾಗಿಲ್ಲ. ಆದರೂ ಆರೋಪಿಗಳ ಪತ್ತೆಗೆ ನಾವು ಮುಂದಾಗಿದ್ದೇವೆ ಎಂದು ಪೊಲೀಸರು ತಿಳಿಸಿದರು.

ಲೈಂಗಿಕ ದೌರ್ಜನ್ಯದ ಕುರಿತು ಈವರೆಗೆ ನಾಲ್ಕು ಟ್ವೀಟ್​ ಮಾಡಲಾಗಿದೆ ಎಂದು ಬರೆದಿದ್ದಾರೆ, ಕಾರ್ಯಕ್ರಮದಲ್ಲಿ ನಡೆದ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.

ದಸರಾ ಸಂಭ್ರಮದಲ್ಲಿ ನಡೆದ ಈ ಅಹಿತಕರ ಘಟನೆ ಬೆಂಗಳೂರಿನ ಹೊಸ ವರ್ಷದ ಕರಾಳ ಘಟನೆಯನ್ನು ನೆನೆಪಿಗೆ ತರುವಂತೆ ಮಾಡಿದೆ. ನೂರಾರು ಪೊಲೀಸರ ಎದುರಿಗೆ ಕೆಲವು ಹುಡಗರು ಹೊಸ ವರ್ಷ ಸಂಭ್ರಮದಲ್ಲಿದ್ದ ಮಹಿಳೆ, ಯುವತಿಯರೊಂದಿಗೆ ಅಸಭ್ಯವಾಗಿ ವರ್ತಿಸಿ ದೇಶದಾದ್ಯಂತ ಸುದ್ದಿಯಾಗಿತ್ತು.
First published:October 17, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ