ಲಾಕ್‌ಡೌನ್‌ ನೆಪದಲ್ಲಿ ಜನರನ್ನು ಸುಲಿಗೆ ಮಾಡುತ್ತಿದ್ದ ದಿನಸಿ ಅಂಗಡಿಗಳು ಸೀಜ್; ಜನಪರ ನಿಂತ ಮೈಸೂರಿನ ಜಿಲ್ಲಾಡಳಿತ

ಅಗತ್ಯ ವಸ್ತುಗಳ ಬೆಲೆ ಸ್ಥಿರವಾಗಿದೆ. ಆದರೆ, ಜಿಲ್ಲೆಯಲ್ಲಿ ಈಶ್ವರಿ ಅಂಡ್ ಕಂಪನಿ, ಲಕ್ಷ್ಮೀ ಭಂಡಾರ್ ಸೇರಿದಂತೆ ಕೆಲ ಅಂಗಡಿಗಳು ಕಳೆದ ಒಂದು ವಾರದಿಂದ ಅಗತ್ಯ ವಸ್ತುಗಳನ್ನು ಅಧಿಕ ಬೆಲೆಗೆ ಮಾರಾಟ ಮಾಡುತ್ತಾ ಜನರನ್ನು ಸುಲಿಗೆ ಮಾಡುತ್ತಿದೆ.

news18-kannada
Updated:April 3, 2020, 3:00 PM IST
ಲಾಕ್‌ಡೌನ್‌ ನೆಪದಲ್ಲಿ ಜನರನ್ನು ಸುಲಿಗೆ ಮಾಡುತ್ತಿದ್ದ ದಿನಸಿ ಅಂಗಡಿಗಳು ಸೀಜ್; ಜನಪರ ನಿಂತ ಮೈಸೂರಿನ ಜಿಲ್ಲಾಡಳಿತ
ಪ್ರಾತಿನಿಧಿಕ ಚಿತ್ರ.
  • Share this:
ಮೈಸೂರು (ಏಪ್ರಿಲ್ 03); ಕೊರೋನಾ ವೈರಸ್ ಸಮಾಜದಲ್ಲಿ ಹರಡದಂತೆ ಎಚ್ಚರಿಕೆ ವಹಿಸುವ ನಿಟ್ಟಿನಲ್ಲಿ 21ದಿನಗಳ ಲಾಕ್‌ಡೌನ್ ಘೋಷಿಸಲಾಗಿದೆ. ಆದರೆ, ಮೈಸೂರಿನಲ್ಲಿ ಇದನ್ನೇ ತಮ್ಮ ಲಾಭಕ್ಕೆ ಬಳಸಿಕೊಂಡು ಅಗತ್ಯ ವಸ್ತುಗಳನ್ನು ಅಧಿಕ ಬೆಲೆಗೆ ಮಾರಾಟ ಮಾಡುವ ಮೂಲಕ ಜನರನ್ನು ಸುಲಿಗೆ ಮಾಡುತ್ತಿದ್ದ ಅನೇಕ ದಿನಸಿ ಅಂಗಡಿಗಳನ್ನು ಜಿಲ್ಲಾಡಳಿತ ಇಂದು ಸೀಜ್ ಮಾಡಿದೆ.

ಅಗತ್ಯ ವಸ್ತುಗಳ ಬೆಲೆ ಸ್ಥಿರವಾಗಿದೆ. ಆದರೆ, ಜಿಲ್ಲೆಯಲ್ಲಿ ಈಶ್ವರಿ ಅಂಡ್ ಕಂಪನಿ, ಲಕ್ಷ್ಮೀ ಭಂಡಾರ್ ಸೇರಿದಂತೆ ಕೆಲ ಅಂಗಡಿಗಳು ಕಳೆದ ಒಂದು ವಾರದಿಂದ ಅಗತ್ಯ ವಸ್ತುಗಳನ್ನು ಅಧಿಕ ಬೆಲೆಗೆ ಮಾರಾಟ ಮಾಡುತ್ತಿವೆ. ಬೆಳೆ, ಅಕ್ಕಿ, ಅಡಿಗೆ ತೈಲ ಸೇರಿದಂತೆ ಅಗತ್ಯ ವಸ್ತುಗಳನ್ನು ನಗದಿತ ಬೆಲೆಗಿಂತ ಎರಡು ಪಟ್ಟು ಹೆಚ್ಚು ಬೆಲೆಗೆ ಮಾರಾಟ ಮಾಡುವ ಮೂಲಕ ಜನರನ್ನು ಸುಲಿಗೆ ಮಾಡುತ್ತಿದ್ದವು.

ಈ ಕುರಿತ ನಿಖರ ಮಾಹಿತಿ ಪಡೆದ ಜಿಲ್ಲಾಡಳಿತ ಎಲ್ಲಾ ತಾಲೂಕು ಆಡಳಿತಕ್ಕೂ ಸೂಚನೆ ನೀಡಿದೆ. ಈ ಸೂಚನೆ ಮೇರೆಗೆ ಅಧಿಕ ಬೆಲೆಗೆ ದಿನಸಿ ವಸ್ತುಗಳ ಮಾರಾಟಕ್ಕೆ ಮುಂದಾಗಿದ್ದ ಅಂಗಡಿಗಳ ಮೇಲೆ ಒಮ್ಮೆಲೆ ದಾಳಿ ನಡೆಸಿರುವ ಅಧಿಕಾರಿಗಳು ಜನರನ್ನು ಸುಲಿಗೆ ಮಾಡುತ್ತಿದ್ದ ಅನೇಕ ಅಂಗಡಿಗಳನ್ನು ಜಪ್ತಿ ಮಾಡಿದ್ದಾರೆ.

ಇದನ್ನೂ ಓದಿ : ಏ. 14ರ ನಂತರ ಮುಂದೇನು? ಯಾರ್ಯಾರಿಗೆ ವಿನಾಯಿತಿ? ಏನಿರಲಿದೆ ಹೊಸ ನಿಯಮ?

 
First published: April 3, 2020, 3:00 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading