• Home
  • »
  • News
  • »
  • state
  • »
  • Grocery Store: ಮಾಲೀಕನ ಮಗಳ ಸಾಧನೆ ಕಥೆ ನನಸಾಯ್ತು ಪೈಲಟ್ ಆಗುವ ಕನಸು

Grocery Store: ಮಾಲೀಕನ ಮಗಳ ಸಾಧನೆ ಕಥೆ ನನಸಾಯ್ತು ಪೈಲಟ್ ಆಗುವ ಕನಸು

Achievement of grocery store owner s daughter Dream of becoming a pilot come true

Achievement of grocery store owner s daughter Dream of becoming a pilot come true

ಹಲವಾರು ಜನರಿಗೆ ವಿಮಾನದಲ್ಲಿ ಪ್ರಯಾಣಿಸುವುದೇ ಒಂದು ದೊಡ್ಡ ಕನಸು, ಅಂತಹದರಲ್ಲಿ ಅದರಲ್ಲೇ ಕೆಲಸ ಸಿಕ್ಕರೆ ಹೇಗಿರುತ್ತದೆ. ಈ ಅದ್ಭುತ ಅನುಭವವನ್ನು ಹೇಳಲು ಸಾಧ್ಯವೇ ಇಲ್ಲ. ಇಂತಹದೊಂದು ಆಸೆಯನ್ನು ಬೆಳೆಸಿದ ಕಿರಾಣಿ ಅಂಗಡಿಯ ಮಾಲೀಕ ಅಜೀಜ್ ಹಿರಾನಿ ಅವರ ಪುತ್ರಿ ಅಫ್ರಿನಾ. ಕೊನೆಗೂ ಆಕಾಶದಲ್ಲಿ ಹಾರುವ ಆಸೆ ನನಸಾಯಿತು.

ಮುಂದೆ ಓದಿ ...
  • Share this:

ಹಲವಾರು ಜನರಿಗೆ ವಿಮಾನದಲ್ಲಿ(Airplane) ಪ್ರಯಾಣಿಸುವುದೇ (Travel) ಒಂದು ದೊಡ್ಡ ಕನಸು, ಅಂತಹದರಲ್ಲಿ ಅದರಲ್ಲೇ ಕೆಲಸ (Job) ಸಿಕ್ಕರೆ ಹೇಗಿರುತ್ತದೆ. ಈ ಅದ್ಭುತ ಅನುಭವವನ್ನು (Experience) ಹೇಳಲು ಸಾಧ್ಯವೇ ಇಲ್ಲ. ಇಂತಹದೊಂದು ಆಸೆಯನ್ನು(Desire) ಬೆಳೆಸಿದ ಕಿರಾಣಿ ಅಂಗಡಿಯ (Grocery Store) ಮಾಲೀಕ ಅಜೀಜ್ ಹಿರಾನಿ ಅವರ ಪುತ್ರಿ ಅಫ್ರಿನಾ. ಕೊನೆಗೂ ಆಕಾಶದಲ್ಲಿ ಹಾರುವ ಆಸೆ (Pilot ) ನನಸಾಯಿತು. ಇಲ್ಲಿದೆ ನೊಡಿ ಆಫ್ರಿನಾನ ನನಸಿನ ಕಥೆ.


ನನಸಾಯ್ತು ಪೈಲಟ್‌ ಆಗುವ ಕನಸು


ಬಾಲ್ಯದಲ್ಲಿಯೇ ಪೈಲಟ್‌ ಆಗಬೇಕು, ಆಕಾಶದಲ್ಲಿ ಹಾರಬೇಕು ಎಂದು ಕನಸು ಹೊತ್ತಿದ್ದ ಇಂದರವೆಲ್ಲಿ ಮಂಡಲ ಕೇಂದ್ರದ ಕಿರಾಣಿ ಅಂಗಡಿಯ ಮಾಲೀಕ ಅಜೀಜ್ ಹಿರಾನಿ ಅವರ ಪುತ್ರಿ ಅಫ್ರಿನಾಳ ಹೆಬ್ಬಯಕೆ ಕೈಗೂಡಿದೆ. ಓದಿಗೆ ತಕ್ಕ ಪ್ರತಿಫಲ ಕೊನೆಗೂ ಸಿಕ್ಕಿದೆ. ಸದ್ಯದಲ್ಲಿಯೇ ಇಂಡಿಗೋ ವಿಮಾನದಲ್ಲಿ ಪೈಲಟ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ ಅಫ್ರಿನ್.‌


ಕೆಲವು ವಾರಗಳ ಹಿಂದೆ ಇಂಡಿಗೋ ಏರ್‌ಲೈನ್ಸ್‌ನಲ್ಲಿ ಉದ್ಯೋಗವನ್ನು ಪಡೆದ ನಂತರ ಭಾವಪರವಶರಾದ ಆಫ್ರಿನ್, ವಾಣಿಜ್ಯ ಪೈಲಟ್ ಆಗುವುದು ಬಾಲ್ಯದಿಂದಲೂ ತನ್ನ ಮಹತ್ವಾಕಾಂಕ್ಷೆಯಾಗಿತ್ತು ಎಂದು ಹೇಳಿದರು.


ಸಾಂದರ್ಭಿಕ ಚಿತ್ರ


"ಬೇರೆಯವರಿಗೆ ಮಾದರಿಯಾಗಲು ಬಯಸಿದ್ದೆ"


“ನಾನು ಈ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲು ಮತ್ತು ಇತರ ಹುಡುಗಿಯರಿಗೆ ಮಾದರಿಯಾಗಲು ಬಯಸುತ್ತಿದ್ದೆ. ಹಾಗಾಗಿ, ಹೈದರಾಬಾದ್‌ನಲ್ಲಿ ಇಂಟರ್‌ಮೀಡಿಯೇಟ್‌ ಮುಗಿಸಿ ಆದಿಲಾಬಾದ್‌ನಲ್ಲಿ ಶಾಲಾ ಶಿಕ್ಷಣ ಮುಗಿಸಿದ ನಂತರ ಖಾಸಗಿ ಕಾಲೇಜಿನಲ್ಲಿ ಏರೋನಾಟಿಕಲ್ ಎಂಜಿನಿಯರಿಂಗ್ ಆಯ್ಕೆ ಮಾಡಿಕೊಂಡೆ.


ನಾನು ಎರಡು ವರ್ಷಗಳ ಕಾಲ ಆಸ್ಟ್ರೇಲಿಯಾದಲ್ಲಿ ಪೈಲಟ್ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ ಮತ್ತು ಅಂತಿಮವಾಗಿ ವಿಮಾನದಲ್ಲಿ ಸವಾರಿ ಮಾಡುವ ನನ್ನ ಕನಸನ್ನು ನನಸಾಗಿಸಿದೆ" ಎಂದು ಆಫ್ರಿನ್ ಸುದ್ದಿ ಮಾಧ್ಯಮಗಳೊಂದಿಗೆ ತನ್ನ ಖುಷಿಯನ್ನು ಹಂಚಿಕೊಂಡರು.


ಇದನ್ನೂ ಓದಿ: Bengaluru Traffic: ಬೆಂಗಳೂರು ಟ್ರಾಫಿಕ್ ಸಮಸ್ಯೆ ಪರಿಹಾರಕ್ಕೆ ಹೊಸ ಪ್ಲಾನ್


ಆಸ್ಟ್ರೇಲಿಯಾದಲ್ಲಿ ಪೈಲಟ್ ತರಬೇತಿ


ಆಗಸ್ಟ್‌ನಲ್ಲಿ, 2018 ರಿಂದ 2020 ರವರೆಗೆ ಆಸ್ಟ್ರೇಲಿಯಾದಲ್ಲಿ ಪೈಲಟ್ ತರಬೇತಿಯಲ್ಲಿ ಉತ್ತಮ ಸಾಧನೆ ಮಾಡಿದ ನಂತರ 28 ವರ್ಷ ವಯಸ್ಸಿನ ಅಫ್ರಿನ್ ಖಾಸಗಿ ಏರ್‌ಲೈನ್ಸ್‌ನ ಮೊದಲ ಕ್ಯಾಪ್ಟನ್ ಪೈಲಟ್ ಆಗಿ ನೇಮಕಗೊಂಡಿದ್ದಾರೆ.


ಏರೋನಾಟಿಕಲ್ ಎಂಜಿನಿಯರಿಂಗ್‌ನಲ್ಲಿ ಉತ್ತಮ ವಿದ್ಯಾರ್ಥಿಯಾಗಿದ್ದ ಅಫ್ರಿನ್‌ಳನ್ನು ಈ ತರಬೇತಿಗೆ ಆಯ್ಕೆ ಮಾಡಲಾಗಿತ್ತು. ಆದಾಗ್ಯೂ, ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ನೇಮಕಾತಿ ಪ್ರಕ್ರಿಯೆಗಳು ವಿಳಂಬವಾದ್ದರಿಂದ ವಿಮಾನದ ಕಾಕ್‌ಪಿಟ್‌ಗೆ ಕಾಲಿಡಲು ಅವಳು ಎರಡು ವರ್ಷಗಳ ಕಾಲ ಕಾಯಬೇಕಾಯಿತು.


ಪ್ರಸ್ತುತ ಎಲ್ಲಾ ಅಡೆತಡೆಗಳು ಮುಗಿದಿದ್ದು ಅಫ್ರಿನ್‌ ವಿಮಾನ ಹಾರಿಸುವುದೊಂದೆ ಬಾಕಿ ಇದೆ.


ಹೆತ್ತವರ ಬೆಂಬಲವೇ ಸಾಧನೆಗೆ ಕಾರಣ


"ವಿಮಾನವನ್ನು ಹಾರಿಸಲು ಕಾಯುತ್ತಿರುವಾಗ ಮತ್ತು ವಿದೇಶದಲ್ಲಿ ಕಠಿಣ ತರಬೇತಿಯನ್ನು ಪೂರ್ಣಗೊಳಿಸಿದ ನಂತರವೂ ಮನೆಯಲ್ಲಿ ಸುಮ್ಮನೆ ಕುಳಿತುಕೊಳ್ಳಲು ನಾನು ಸ್ವಲ್ಪ ಹೆದರುತ್ತಿದ್ದೆ. ವಿಮಾನವನ್ನು ನಿರ್ವಹಿಸಲು ಮತ್ತು ಸಿಬ್ಬಂದಿಯನ್ನು ಮುನ್ನಡೆಸಲು ಭಾವಪರವಶಳಾಗಿದ್ದೇನೆ" ಎಂದು ಅವರು ಹೇಳಿದರು.


ಹೆತ್ತವರಾದ ಅಜೀಜ್ ಮತ್ತು ನವೀನ ಇಬ್ಬರ ಪ್ರೋತ್ಸಾಹ ಮತ್ತು ಬೆಂಬಲವೇ ತನ್ನ ಯಶಸ್ಸಿಗೆ ಕಾರಣ ಎಂದು ಅವರು ಹೇಳಿದರು.


ಆದಿಲಾಬಾದ್‌ನ ಎರಡನೇ ಮಹಿಳಾ ಪೈಲಟ್


ಪ್ರಾಸಂಗಿಕವಾಗಿ, ಅಫ್ರಿನ್ ತೆಲಂಗಾಣ ರಾಜ್ಯದ ಅದಿಲಾಬಾದ್ ಜಿಲ್ಲೆಯಿಂದ ವಾಣಿಜ್ಯ ಪೈಲಟ್ ಆದ ಎರಡನೇ ಮಹಿಳೆ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಆದಿಲಾಬಾದ್ ಜಿಲ್ಲೆಯ ಸ್ವಾತಿ ಈಗಾಗಲೇ ಪೈಲಟ್‌ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.


ಸ್ವಾತಿ ನನ್ನ ಮಗಳಿಗೆ ಸ್ಫೂರ್ತಿಯ ಮೂಲವಾಗಿದ್ದಾರೆ ಎಂದು ಅಜೀಜ್ ನೆನಪಿಸಿಕೊಂಡರು. ಹೆಣ್ಣು ಮಕ್ಕಳು ತಮಗೆ ಹೆಚ್ಚು ಇಷ್ಟವಾದ ಕ್ಷೇತ್ರವನ್ನು ಆಯ್ದುಕೊಂಡು ಅದರಲ್ಲಿ ಯಶಸ್ಸು ಪಡೆಯಲು ಶ್ರಮಿಸಬೇಕು ಎಂದು ಸಲಹೆ ನೀಡಿದರು.


ಇದನ್ನೂ ಓದಿ: APJ Abdul Kalam: ವಿಶ್ವ ವಿದ್ಯಾರ್ಥಿಗಳ ದಿನವನ್ನು ಕಲಾಂ ಅವರ ಜನ್ಮದಿನದಂದು ಏಕೆ ಆಚರಿಸಲಾಗುತ್ತದೆ? ಕಾರಣ ಇಲ್ಲಿದೆ


ಉದ್ಯೋಗಿಗಳನ್ನು ಪ್ಲೈಟ್‌ನಲ್ಲಿ ಓಡಾಡಿಸಿದ ತಂದೆ


ತನ್ನ ಮಗಳ ಸಾಧನೆಯಿಂದ ಸಂತೋಷಗೊಂಡ ಅಜೀಜ್ ತನ್ನ ಎಲ್ಲಾ ಉದ್ಯೋಗಿಗಳಿಗೆ ವಿಮಾನದಲ್ಲಿ ಕರೆದುಕೊಂಡು ಹೋಗುವ ಭರವಸೆ ನೀಡಿದ್ದರು.


ಅದರಂತೆ ಸೆಪ್ಟೆಂಬರ್ 17 ರಂದು ತಿರುಮಲ ತಿರುಪತಿ ದೇವಸ್ಥಾನಕ್ಕೆ ತನ್ನ 15 ಬುಡಕಟ್ಟು ಉದ್ಯೋಗಿಗಳಿಗೆ ವಿಮಾನ ಪ್ರಯಾಣವನ್ನು ಪ್ರಾಯೋಜಿಸುವ ಪ್ರತಿಜ್ಞೆಯನ್ನು ಪೂರೈಸಿದರು. ಅವರು ಹೈದರಾಬಾದ್‌ನಿಂದ ವಿಮಾನವನ್ನು ಏರ್ಪಡಿಸಿದ್ದರು.


ವಿಮಾನದಲ್ಲಿ ಪ್ರಯಾಣಿಸುವುದು ಎಲ್ಲರ ಬಯಕೆ. ಇದು ಜೀವಮಾನದ ಅನುಭವ"ಎಂದು ಇಂದರವೆಲ್ಲಿ ಮಂಡಲದ ಮಲ್ಲಾಪುರ ಗ್ರಾಮದ ನೌಕರರಲ್ಲೊಬ್ಬರಾದ ಮೆಸ್ರಂ ಲಕ್ಷ್ಮಣ್ ಸಂತಸ ವ್ಯಕ್ತಪಡಿಸಿದರು. ಇನ್ನು ಕೆಲವರು ಇದೊಂದು ರೋಮಾಂಚನಕಾರಿ ಅನುಭವ ಮತ್ತು ನಮ್ಮ ಜೀವನದಲ್ಲಿ ಸ್ಮರಣೀಯ ಘಟನೆ ಎಂದು ಉದ್ಯೋಗದಾತ ಮತ್ತು ಅಫ್ರಿನ್‌ಳನ್ನು ಹಾಡಿ ಹೊಗಳಿದರು.

Published by:Harshith AS
First published: