• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Pay and Parking: ಇನ್ಮುಂದೆ ರೋಡ್​​ ಸೈಡಲ್ಲೂ ವಾಹನ ನಿಲ್ಲಿಸೋದಕ್ಕೆ ಹಣ ಕಟ್ಟಲೇಬೇಕು! ಏನಿದು ಹೊಸ ರೂಲ್ಸ್?

Pay and Parking: ಇನ್ಮುಂದೆ ರೋಡ್​​ ಸೈಡಲ್ಲೂ ವಾಹನ ನಿಲ್ಲಿಸೋದಕ್ಕೆ ಹಣ ಕಟ್ಟಲೇಬೇಕು! ಏನಿದು ಹೊಸ ರೂಲ್ಸ್?

ಬೆಂಗಳೂರಿನಲ್ಲಿ ಪೇ & ಪಾರ್ಕಿಂಗ್​

ಬೆಂಗಳೂರಿನಲ್ಲಿ ಪೇ & ಪಾರ್ಕಿಂಗ್​

ಮಹಾನಗರ ಬೆಂಗಳೂರಲ್ಲಿ ಟ್ರಾಫಿಕ್ ಸಮಸ್ಯೆ ಮಿತಿ ಮೀರುತ್ತಿದ್ದು, ಇದಕ್ಕೆ ಅಂಕುಶ ಹಾಕುವ ನಿಟ್ಟಿನಲ್ಲಿ ಸರ್ಕಾರ ಪೇ & ಪಾರ್ಕಿಂಗ್ ನೀತಿಯನ್ನು ಜಾರಿಗೊಳಿಸಲು ಅನುಮೋದನೆ ನೀಡಿದೆ. 2020ರಲ್ಲಿ ಪೇ & ಪಾರ್ಕಿಂಗ್ ನೀತಿಯನ್ನು ರೂಪುಗೊಳಿಸಿದ್ದು, ಹಲವು ಬಾರಿ ಜಾರಿಗೊಳಿಸಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಆದರೀಗ ಬೆಳೆಯುತ್ತಿರುವ ಬೆಂಗಳೂರಿನ ಸಂಚಾರ ದಟ್ಟಣೆ ಗಮನದಲ್ಲಿಟ್ಟುಕೊಂಡು ಈಗ ಅಂತಿಮವಾಗಿ ನೀತಿಯನ್ನು ಜಾರಿಗೆ ತರಲಾಗಿದೆ.

ಮುಂದೆ ಓದಿ ...
  • Share this:

ಮಹಾನಗರ ಬೆಂಗಳೂರಲ್ಲಿ ಟ್ರಾಫಿಕ್ ಸಮಸ್ಯೆ (Traffic Problem) ಮಿತಿ ಮೀರುತ್ತಿದ್ದು, ಇದಕ್ಕೆ ಅಂಕುಶ ಹಾಕುವ ನಿಟ್ಟಿನಲ್ಲಿ ಸರ್ಕಾರ ಪೇ & ಪಾರ್ಕಿಂಗ್ (Pay & Parking) ನೀತಿಯನ್ನು ಜಾರಿಗೊಳಿಸಲು ಅನುಮೋದನೆ ನೀಡಿದೆ. 2020ರಲ್ಲಿ ಪೇ & ಪಾರ್ಕಿಂಗ್ ನೀತಿಯನ್ನು ರೂಪುಗೊಳಿಸಿದ್ದು, ಹಲವು ಬಾರಿ ಜಾರಿಗೊಳಿಸಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಆದರೀಗ ಬೆಳೆಯುತ್ತಿರುವ ಬೆಂಗಳೂರಿನ (Bengaluru) ಸಂಚಾರ ದಟ್ಟಣೆ ಗಮನದಲ್ಲಿಟ್ಟುಕೊಂಡು ಈಗ ಅಂತಿಮವಾಗಿ ನೀತಿಯನ್ನು ಜಾರಿಗೆ ತರಲಾಗಿದೆ. ಇತ್ತೀಚೆಗಷ್ಟೇ ಹಿರಿಯ ಅಧಿಕಾರಿಗಳು ಸಮಾಲೋಚನೆ ನಡೆಸಿ ಪೇ & ಪಾರ್ಕಿಂಗ್ ನೀತಿ ಜಾರಿ ಮಾಡುವ ಬಗ್ಗೆ ಸರ್ಕಾರಕ್ಕೆ ಅಂತಿಮ ವರದಿ ಸಲ್ಲಿಸಿತ್ತು. ಇದೀಗ ಇದಕ್ಕೆ ಸರ್ಕಾರ ಅನುಮೋದನೆ ನೀಡಿದ್ದು, ಶೀಘ್ರವೇ ಪೇ & ಪಾರ್ಕಿಂಗ್ 2020 ನೀತಿ ಜಾರಿಯಾಗಲಿದೆ. ಈ ಮೂಲಕ ಬಿಬಿಎಂಪಿ (BBMP) ವಾರ್ಷಿಕವಾಗಿ 300 ಕೋಟಿ ಆದಾಯದ (Income) ನಿರೀಕ್ಷೆಯಲ್ಲಿದೆ.


ವಾರ್ಷಿಕ 300 ಕೋಟಿ ರೂಪಾಯಿ ಆದಾಯ ಸಂಗ್ರಹ ಗುರಿ!
ನಗರ ಭೂ ಸಾರಿಗೆ ನಿರ್ದೇಶನಾಲಯದಿಂದ ಸಿದ್ಧಪಡಿಸಿದ್ದ ಪಾರ್ಕಿಂಗ್ ಪಾಲಿಸಿ 2.0ಗೆ ಸರ್ಕಾರದಿಂದ ಅನುಮೋದನೆ ದೊರೆತಿದೆ. ಇನ್ನು ಮುಂದೆ ರಸ್ತೆಗಳಲ್ಲಿ ನಿಲ್ಲಿಸುವ ಎಲ್ಲಾ ವಾಹನಗಳಿಗೆ ಹಣಪಾವತಿ ಮಾಡಬೇಕಾಗುತ್ತದೆ. ರಾಜಧಾನಿಯಲ್ಲಿ ಟ್ರಾಫಿಕ್ ಜಾಮ್ ಮತ್ತು ವಾಯುಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಈ ನೀತಿ ಜಾರಿಗೆ ತರಲಾಗುತ್ತಿದೆ.


ಬೆಂಗಳೂರಿಗೆ ಹೊಸ ಪಾರ್ಕಿಂಗ್ ಪಾಲಿಸಿ!
2020ರಲ್ಲೇ ಬಿಬಿಎಂಪಿ ವ್ಯಾಪ್ತಿಗೆ ಒಳಗೊಂಡಂತೆ ಹೊಸ ಪಾರ್ಕಿಂಗ್ ಪಾಲಿಸಿ ಜಾರಿಗೊಳಿಸಲು ಪ್ರಸ್ತಾವನೆ ಸರ್ಕಾರದ ಮುಂದಿಡಲಾಗಿತ್ತು. ಆದರೀಗ ಎಲ್ಲಾ ಹಂತಗಳು ದಾಟಿ ನೀತಿ ಜಾರಿಯಾಗಿದೆ. ಡಲ್ಟ್ ಮಾಹಿತಿ ಪ್ರಕಾರ 2020ರಲ್ಲಿ ನಗರದಲ್ಲಿ 75 ಲಕ್ಷಕ್ಕೂ ಅಧಿಕ ವಾಹನಗಳಿವೆ. ವಾರ್ಷಿಕ 10 ಲಕ್ಷ ವಾಹನಗಳ ಸರಾಸರಿ ಹೆಚ್ಚಳವನ್ನು ನಿರೀಕ್ಷಿಸಲಾಗಿದ್ದು, ಪ್ರಸ್ತುತ 1 ಕೋಟಿ ವಾಹನಗಳು ಇರುವುದಾಗಿ ಅಂದಾಜಿಸಲಾಗಿದೆ.


ಇದನ್ನೂ ಓದಿ: ನಂಬಿದ್ರೆ ನಂಬಿ, 600 ಕಿಲೋ ಮೀಟರ್​ ಮೈಲೇಜ್​ ನೀಡುತ್ತೆ ಸ್ಕೋಡಾ ವಿಷನ್​ 7ಎಸ್​ ಕಾರು!


ಪಾರ್ಕಿಂಗ್ ಸಂಬಂಧ ಶೀಘ್ರದಲ್ಲೇ ಟೆಂಡರ್!
ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾತನಾಡಿ, ಪೇ & ಪಾರ್ಕಿಂಗ್ 2020 ನೀತಿಗೆ ಸರ್ಕಾರ ಒಪ್ಪಿಗೆ ನೀಡಿದೆ. ಮಾರುಕಟ್ಟೆ ಪ್ರದೇಶ, ರಸ್ತೆಯ ಮಾದರಿ ಸೇರಿ ವಿವಿಧೆಡೆ ಪಾರ್ಕಿಂಗ್ಗೆ ಬಗೆಬಗೆಯ ದರವಿದ್ದು, ಶೀಘ್ರವೇ ಟೆಂಡರ್ ಕರೆಯಲಾಗುತ್ತದೆ. ಈ ಯೋಜನೆ ಅಡಿಯಲ್ಲೇ 85 ಸ್ಮಾರ್ಟ್ ಪಾರ್ಕಿಂಗ್ ಸ್ಥಳಗಳು ಒಳಗೊಳ್ಳಲಿವೆ ಅಂದ್ರು.


ಇನ್ನುಮುಂದೆ ಪ್ರತ್ಯೇಕ ವಾಹನ ನಿಲುಗಡೆ ಸ್ಥಳ ಇಲ್ಲದವರು ವಾಹನ ಖರೀದಿಗೆ ಹಿಂದೇಟು ಹಾಕಲಿದ್ದಾರೆ. ಜತೆಗೆ, ಸಾರ್ವಜನಿಕ ಸಾರಿಗೆಗಳಾದ ಬಿಎಂಟಿಸಿ, ಮೆಟ್ರೋ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗುವ ನಿರೀಕ್ಷೆಯಿದೆ.


ಪೇ & ಪಾರ್ಕಿಂಗ್ ನೀತಿಯಿಂದ ವಾರ್ಷಿಕ 300 ಕೋಟಿ ರೂ. ಆದಾಯ !!
ವಾಹನಗಳಿಗೆ ಶುಲ್ಕ ವಿಧಿಸುವ ನಿಯಮ ಜಾರಿಗೊಳಿಸಿದರೆ ವಾರ್ಷಿಕ 300 ಕೋಟಿ ರೂ. ಆದಾಯ ಬರಲಿದೆ. ಹೀಗಾಗಿ, ಸಾರ್ವಜನಿಕ ಸ್ಥಳ ಅಥವಾ ಬೀದಿಗಳಲ್ಲಿ ಕಾರು ನಿಲುಗಡೆ ಮಾಡುವವರಿಗೆ ವಾರ್ಷಿಕ 1 ಸಾವಿರ ರೂ.ಗಳಿಂದ 5 ಸಾವಿರ ರೂ.ವರೆಗೆ ಶುಲ್ಕ ವಿಧಿಸಲು ಚಿಂತಿಸಲಾಗಿದೆ.


ಪೇ & ಪಾರ್ಕಿಂಗ್ ಪಾಲಿಸಿಯ ಹೈಲೇಟ್ಸ್ !!
ನಗರದಲ್ಲಿ ವ್ಯವಸ್ಥಿತ ಪಾರ್ಕಿಂಗ್ ಯೋಜನೆ
ಉಚಿತ ಪಾರ್ಕಿಂಗ್​​ದ ಪಾವತಿಸುವ ಪಾರ್ಕಿಂಗ್
ಸರ್ಕಾರಿ ಪಾರ್ಕಿಂಗ್ ಸ್ಥಳ ನಿರ್ವಹಣೆಯನ್ನು ಖಾಸಗಿ ಸಂಸ್ಥೆಗೆ ವಹಿಸುವುದು
ಎಲ್ಲೆಂದರಲ್ಲಿ ವಾಹನ ನಿಲ್ಲಿಸುವುದನ್ನು ಪರಿಣಾಮಕಾರಿಯಾಗಿ ತಡೆಗಟ್ಟುವುದು
ಪಾರ್ಕಿಂಗ್ ನಿರ್ವಹಣೆ ಮತ್ತು ಹಣ ಪಾವತಿಗೆ ಸ್ಮಾರ್ಟ್ ಪಾರ್ಕಿಂಗ್ ಆ್ಯಪ್ ಅಭಿವೃದ್ಧಿ


ಇದನ್ನೂ ಓದಿ: ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಕಾರು ಅಪಘಾತ, ಪ್ರಾಣಾಪಾಯದಿಂದ ಪಾರು!


ಪೇ & ಪಾರ್ಕಿಂಗ್ ದರ ನಿಗದಿ ಹೇಗೆ?
• ಸಣ್ಣ ಕಾರುಗಳಿಗೆ ವರ್ಷಕ್ಕೆ ₹ 1000
• ಮಧ್ಯಮ ಗಾತ್ರ ಕಾರುಗಳಿಗೆ ವರ್ಷಕ್ಕೆ ₹3000 - ₹4000
• MUV, SUV ಕಾರುಗಳಿಗೆ ವರ್ಷಕ್ಕೆ ₹5000
• ಸ್ಥಳಕ್ಕೆ ತಕ್ಕಂತೆ ಪಾರ್ಕಿಂಗ್ ದರ ಬದಲಾವಣೆ
• P&P ಮೀಸಲು ಜಾಗದ ನಿಲುಗಡೆಗೆ
• ₹25 ರೂಪಾಯಿಯಿಂದ ₹75 ವರೆಗೆ ದರ ನಿಗದಿ
• ಸ್ಥಳ/ಏರಿಯಾಗೆ ಅನುಗುಣವಾಗಿ ಗಂಟೆಗೆ ಮೇಲಿನ ದರ ನಿಗದಿ

top videos


    ಕೊನೆಗೂ ಕಳೆದ ಎರಡು ವರ್ಷಗಳಿಂದ ಭಾರಿ ಚರ್ಚೆಗೆ ಕಾರಣವಾಗಿದ್ದ ಪೇ & ಪಾರ್ಕಿಂಗ್ ಪಾಲಿಸಿ ಈಗ ಜಾರಿಗೆ ಸರ್ಕಾರ ಅನುಮೋದನೆ ನೀಡಿದೆ. ಕೆಲವೇ ದಿನಗಳಲ್ಲಿ ನೀತಿ ಜಾರಿಯಾಗಲಿದ್ದು, ಜನರು ಇನ್ಮುಂದೆ ಬೇಕಾಬಿಟ್ಟಿ ವಾಹನಗಳ ಖರೀದಿ ಮಾಡುವುದು ಹಾಗೂ ಎಲ್ಲೆಂದರಲ್ಲಿ ಪಾರ್ಕಿಂಗ್ ಮಾಡುವುದಕ್ಕೆ ತಡೆ ಬೀಳಲಿದೆ.

    First published: