ವಾರೇ ಮೇರೆ ಮುರುಗಾ... ಕೋಳಿ ಅಂಕಕ್ಕೆ ಸಿಕ್ತು Green Signal! ಈಗ Fighter ಹುಂಜಗಳಿಗೆ ಫುಲ್ ಡಿಮ್ಯಾಂಡ್

ಕೋಳಿಗಳನ್ನು ವಾರಕ್ಕೆ ಮೂರು ಬಾರಿ ಈಜಾಡಿಸುವುದು, ಹಂದಿ ಮಾಂಸದ ಎಣ್ಣೆ ತಿನ್ನಲು ಕೊಡುವುದು, ಹಲ್ಲಿಗಳನ್ನು ತಿನ್ನಲು ಕೊಡಲಾಗುತ್ತದೆ. ಹೀಗೆ ಕೋಳಿಗಳನ್ನು ದಷ್ಟ-ಪುಷ್ಟವಾಗಿ ತಯಾರು ಮಾಡಿದ ಬಳಿಕವೇ ಕೋಳಿಗಳನ್ನು ಕಾದಾಟದ ಅಂಕಕ್ಕೆ ಕರೆ ತರಲಾಗುತ್ತದೆ.

ಕೋಳಿ ಕಾಳಗದ ಸಂಗ್ರಹ ಚಿತ್ರ

ಕೋಳಿ ಕಾಳಗದ ಸಂಗ್ರಹ ಚಿತ್ರ

  • Share this:
ತುಳುನಾಡಿನ (Tulunadu) ಮನೋರಂಜನಾ ಕ್ರೀಡೆಗಳಲ್ಲಿ ಒಂದಾದ ಕೋಳಿ ಅಂಕಕ್ಕೆ (Hens Fight) ನ್ಯಾಯಾಲಯ (Court) ಷರತ್ತು ಬದ್ಧ ಅನುಮತಿ (Permission)  ನೀಡಿದೆ. ಇದರಿಂದ ಸಾಂಪ್ರದಾಯಿಕ ಕ್ರೀಡಾ ಪ್ರೇಮಿಗಳು, ಕೋಳಿ ಕಾಳಗದ ಅಭಿಮಾನಿಗಳು ಸಂತಸಗೊಂಡಿದ್ದಾರೆ. ಕೋರ್ಟ್‌ ಅನುಮತಿ ನೀಡಿರುವ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯಲ್ಲಿ ಕೋಳಿ ಅಂಕಗಳು ನಡೆಯುವ ಸಂಖ್ಯೆ ಹೆಚ್ಚಾಗಿದೆ. ಕೋಳಿ ಅಂಕ ಹೆಚ್ಚಾದಂತೆ ಫೈಟರ್ (Fighter) ಕೋಳಿಗಳಿಗೆ ಭರ್ಜರಿ ಬೇಡಿಕೆ (Demand) ಬಂದಿದೆ. ಸ್ಥಳೀಯ ಹಾಗೂ ಸೇಲಂ (Selam) ಕೋಳಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಗೆ ಆಗಮಿಸುತ್ತಿದ್ದು, ಈ ಕೋಳಿಗಳಿಗೆ ಕಾಳಗಕ್ಕಾಗಿ ಸ್ಪೆಷಲ್ ತರಬೇತಿಯನ್ನೂ (Special Training) ನೀಡಲಾಗುತ್ತದೆ.

ಕೋಳಿ ಅಂಕಕ್ಕೆ ಸಿಕ್ಕಿತು ಷರತ್ತು ಬದ್ಧ ಅನುಮತಿ

ಕರಾವಳಿ ಭಾಗದ ಕೃಷಿಕರ ಪ್ರಮುಖ ಮನೋರಂಜನಾ ಕ್ರೀಡೆಗಳಲ್ಲಿ ಕಂಬಳ ಮತ್ತು ಕೋಳಿ ಅಂಕಕ್ಕೆ ತನ್ನದೇ ಆದ ಮಹತ್ವವಿದೆ. ಎರಡೂ ಕ್ರೀಡೆಗಳಲ್ಲಿ ಪ್ರಾಣಿಗಳಿಗೆ ಹಿಂಸೆ ಹಾಗೂ ಜೂಜಾಟವಾಗುತ್ತಿದೆ ಎನ್ನುವ ಕಾರಣಕ್ಕಾಗಿ ಎರಡೂ ಕ್ರೀಡೆಗಳಿಗೂ ರಾಜ್ಯದಲ್ಲಿ ನಿಶೇಧವನ್ನೂ ಹೇರಲಾಗಿತ್ತು.

ಬಳಿಕ ನಡೆದ ವಿದ್ಯಾಮಾನಗಳಲ್ಲಿ ಕಂಬಳ ಕ್ರೀಡೆಗೆ ಹಲವು ರೀತಿಯ ಷರತ್ತುಗಳನ್ನು ಹಾಕುವ ಮೂಲಕ ಅನುಮತಿಯನ್ನು ನ್ಯಾಯಾಲಯ ನೀಡಿದ್ದು, ಕೋಳಿ ಅಂಕಕ್ಕೂ ಇದೇ ರೀತಿಯ ಷರತ್ತುಗಳ ಮೂಲಕ ಗ್ರೀನ್ ಸಿಗ್ನಲ್ ನೀಡಲಾಗಿದೆ.

ಊರು ಕೋಳಿ, ಸೇಲಂ ಕೋಳಿಗಳ ನಡುವೆ ಕಾದಾಟ

ಕೋಳಿ ಅಂಕಕ್ಕೆ ಅನುಮತಿ ದೊರೆತ ಬಳಿಕ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೋಳಿ ಅಂಕಗಳ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರಮುಖವಾಗಿ ಊರಿನ ಕೋಳಿ ಹಾಗೂ ಸೇಲಂ ಕೋಳಿಗಳನ್ನು ಕೋಳಿ ಅಂಕದಲ್ಲಿ ಕಾದಾಟಕ್ಕೆ ಬಳಸಲಾಗುತ್ತಿದ್ದು, ಕೋಳಿ ಅಂಕಕ್ಕೆ ಬರುವ ಮೊದಲು ಕೋಳಿಗಳಿಗೆ ಹಲವು ರೀತಿಯ ತರಭೇತಿಗಳನ್ನೂ ನೀಡಲಾಗುತ್ತದೆ.

ಇದನ್ನೂ ಓದಿ: Travel Tips: ಬೆಂಗಳೂರಿನ ಸುತ್ತ ಇರೋ ಈ ಸ್ಥಳಗಳಿಗೆ ಸೈಕಲ್ ನಲ್ಲಿ ಹೋದ್ರೆ ಮಜಾ, ಟ್ರೈ ಮಾಡಿ

ಕೋಳಿಗಳಿಗೆ ನಿತ್ಯ ಈಜು, ಮಾಂಸದ ಊಟ!

ಖರೀದಿ ಮಾಡಿದ ಕೋಳಿಗಳನ್ನು ವಾರಕ್ಕೆ ಮೂರು ಬಾರಿ ಈಜಾಡಿಸುವುದು, ಹಂದಿ ಮಾಂಸದ ಎಣ್ಣೆ ತಿನ್ನಲು ಕೊಡುವುದು, ಹಲ್ಲಿಗಳನ್ನು ತಿನ್ನಲು ಕೊಡುವುದು ಹೀಗೆ ಕೋಳಿಗಳನ್ನು ದಷ್ಟ-ಪುಷ್ಟವಾಗಿ ತಯಾರು ಮಾಡಿದ ಬಳಿಕವೇ ಕೋಳಿಗಳನ್ನು ಕಾದಾಟದ ಅಂಕಕ್ಕೆ ಕರೆ ತರಲಾಗುತ್ತದೆ.

ಕೋಳಿಗಳ ಮೇಲೆ ಲಕ್ಷ-ಲಕ್ಷ ಜೂಜು

10 ರಿಂದ 30 ಸಾವಿರದ ವರೆಗಿನ ಫೈಟರ್ ಕೋಳಿಗಳೂ ಕೋಳಿ ಅಂಕದಲ್ಲಿ ಕಾದಾಟಕ್ಕೆ ಬರುತ್ತಿದ್ದು, ಇವುಗಳ ಮೇಲೆ ಲಕ್ಷಕ್ಕೂ ಮಿಕ್ಕಿದ ಜೂಜನ್ನೂ ಕಟ್ಟಲಾಗುತ್ತದೆ. ಕುಪ್ಪುಳ, ಮೈರ, ಕಾವ, ಕೆಮ್ಮರ, ಬಿಳಿ ಕೋಳಿ, ನೀಲ ಕೋಳಿ ಹೀಗೆ ಹಲವು ತರಹದ ಕೋಳಿಗಳನ್ನು ಕೋಳಿ ಅಂಕದಲ್ಲಿ ಕಾದಾಟಕ್ಕೆ ಬಿಡಲಾಗುತ್ತಿದ್ದು, ಕೋಳಿಗಳ ಕಾದಾಟವನ್ನು ವೀಕ್ಷಿಸಲು ನೂರಾರು ಮಂದಿ ಸೇರುತ್ತಾರೆ.

ಕೋಳಿ ಕಾಲಿಗೆ ಕತ್ತಿ ಕಟ್ಟದಂತೆ ಕೋರ್ಟ್ ಆದೇಶ

ನ್ಯಾಯಾಲಯದ ಷರತ್ತಿನ ಪ್ರಕಾರ ಕೋಳಿ ಅಂಕದಲ್ಲಿ ಕಾದಾಟ ನಡೆಸುವ ಕೋಳಿಗಳ ಕಾಲಿಗೆ ಕತ್ತಿಯನ್ನು ಕಟ್ಟುವಂತಿಲ್ಲ, ಜೂಜಾಟ ನಡೆಸುವಂತಿಲ್ಲ ಎನ್ನುವ ಅಂಶಗಳ ಉಲ್ಲೇಖವಿದ್ದರೂ, ಬಹುತೇಕ ಕೋಳಿ ಅಂಕಗಳಲ್ಲಿ ಇವೆರಡು ಇಲ್ಲದೆ ಕೋಳಿ ಅಂಕಗಳು ನಡೆಯುವುದೇ ಇಲ್ಲ.

ಹೆಚ್ಚಾಗಿ ದೈವ ಸ್ಥಾನಗಳ ಜಾತ್ರೆ ಸಂದರ್ಭದಲ್ಲಿ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಈ ಕೋಳಿ ಅಂಕಗಳು ಆರಂಭವಾಗುತ್ತಿದ್ದು, ಹಿಂದೆ ಕೃಷಿಕರು ಮನೋರಂಜನಾ ಕ್ರೀಡೆಯಾಗಿ ಕೋಳಿ ಅಂಕವನ್ನು ನೋಡುತ್ತಿದ್ದರು. ಆದರೆ ಕಾಲ ಕ್ರಮೇಣ ಕೋಳಿ ಅಂಕಕ್ಕೂ ಜೂಜಿನ ಅಮಲು ಅಂಟಿಕೊಂಡ ಬಳಿಕ ಕೋಳಿ ಅಂಕ ಜನಾಕರ್ಷಣೆಯ ಪ್ರಮುಖ ಕ್ರೀಡೆಯಾಗಿಯೂ ಬದಲಾಗಿದೆ.

ಇದನ್ನೂ ಓದಿ: Bird flu: ಕುಕ್ಕುಟೋದ್ಯಮದ ಮೇಲೆ ಹಕ್ಕಿ ಜ್ವರದ ಕರಿ ನೆರಳು! ಕರ್ನಾಟಕ ಎಷ್ಟು ಸೇಫ್​? ಏನ್ ಹೇಳ್ತಾರೆ ತಜ್ಞರು?

ಜಿಲ್ಲೆಯಲ್ಲಿ ಹೆಚ್ಚಿನ ಕಡೆಗಳಲ್ಲಿ ದೈವಾರಾಧನೆ ಇರುವ ಕಡೆಗಳಲ್ಲಿ ಸ್ಥಳಿಯ ಆಡಳಿತವು ಈ ಕೋಳಿ ಅಂಕಕ್ಕೆ ಅನುಮತಿಯನ್ನೂ ನೀಡುತ್ತಿದ್ದು, ಉಳಿದ ಕಡೆಗಳಲ್ಲಿ ಇದಕ್ಕೆ ಅವಕಾಶವಿರಲಿಲ್ಲ.

ಆದರೆ ನ್ಯಾಯಾಲಯದ ತೀರ್ಪಿನ ಬಳಿಕ ಕೋಳಿ ಅಂಕಗಳು ಪ್ರತಿದಿನ ಒಂದಲ್ಲ ಒಂದು ಕಡೆಗಳಲ್ಲಿ ನಡೆಯುತ್ತಿದ್ದು, ಇದನ್ನೇ ಒಂದು ಕಸುಬಾಗಿ ಆಯ್ದುಕೊಂಡವರೂ ನೂರಾರು ಜನರಿದ್ದಾರೆ.
Published by:Annappa Achari
First published: