HOME » NEWS » State » GREEN JURISPRUDENCE ASKS REPORT ABOUT SAND MAFIA OF KRISHNA AND TUNGA BHADRA RIVERS LG

ಕೃಷ್ಣಾ, ತುಂಗಭದ್ರಾ ನದಿಗಳಲ್ಲಿ ಅಕ್ರಮ ಮರಳು ದಂಧೆ; ವರದಿ ಕೇಳಿದ ಹಸಿರು ನ್ಯಾಯಾಧೀಕರಣ

2006ರಲ್ಲಿ ಹಸಿರು ನ್ಯಾಯಾಧೀಕರಣವು ಮರಳನ್ನು ಹಿಟಾಚಿಯಂಥ ಯಂತ್ರಗಳಿಂದ ತೆಗೆಯಬಾರದು, ಟಿಪ್ಪರ್ ಗಳಲ್ಲಿ ನಿಗದಿತ ಪ್ರಮಾಣದ ಮರಳು ಸಾಗಾಟ ಮಾಡಬೇಕು ಸೇರಿದಂತೆ ವಿವಿಧ ರೀತಿಯಲ್ಲಿ ಪರಿಸರಕ್ಕೆ ಹಾನಿಯಾಗಂದಂತಹ ಕ್ರಮಕೈಗೊಳ್ಳಲು ಸೂಚಿಸಿದೆ.

news18-kannada
Updated:September 13, 2020, 10:35 AM IST
ಕೃಷ್ಣಾ, ತುಂಗಭದ್ರಾ ನದಿಗಳಲ್ಲಿ ಅಕ್ರಮ ಮರಳು ದಂಧೆ; ವರದಿ ಕೇಳಿದ ಹಸಿರು ನ್ಯಾಯಾಧೀಕರಣ
ಮರಳು ಮಾಫಿಯಾ
  • Share this:
ರಾಯಚೂರು(ಸೆ.13): ಕೃಷ್ಣಾ ಹಾಗೂ ತುಂಗಭದ್ರಾ ನದಿಯ ಒಡಲಲ್ಲಿ ವ್ಯಾಪಕವಾಗಿ ಮರಳು ಸಾಗಾಟ ನಡೆಯುತ್ತಿದೆ. ಕೃಷ್ಣಾ ನದಿಯಲ್ಲಿ ದೇವದುರ್ಗಾ ತಾಲೂಕಿನಲ್ಲಿ 18 ಕಡೆ ಮರಳು ಗಣಿಗಾರಿಕೆಗಾಗಿ ಗುತ್ತಿಗೆ ನೀಡಲಾಗಿದೆ. ಗುತ್ತಿಗೆದಾರರು ನಿಯಮ ಪಾಲನೆ ಮಾಡದೆ ನದಿಯ ಮರಳನ್ನು ಸಾಗಾಟ ಮಾಡುತ್ತಿದ್ದಾರೆ. ಇದರಿಂದ ಪರಿಸರ ಹಾನಿಯ ಜೊತೆಗೆ ಸರಕಾರಕ್ಕೆ ರಾಜಧನದಲ್ಲಿಯೂ ಮೋಸವಾಗಿದೆ. ಈ ಹಿನ್ನಲೆಯಲ್ಲಿ ಚೆನೈನಲ್ಲಿರುವ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಚಾಟಿ ಬೀಸಿದ್ದು, ನವೆಂಬರ್ 11ರೊಳಗಾಗಿ ವರದಿ ನೀಡಲು ಐದು ಜನ ಹಿರಿಯ ಅಧಿಕಾರಿಗಳ ಸಮಿತಿ ಸೂಚಿಸಿದೆ. ಕೃಷ್ಣಾ ನದಿಯಲ್ಲಿ ನಡೆಯುತ್ತಿರುವ ಮರಳು ದಂಧೆಯ ಬಗ್ಗೆ ಇಂಡಿಯ ಮಾಜಿ ಶಾಸಕರು ಆಗಿರುವ ಡಾ ಸಾರ್ವಭೌಮ ಬಾಗಲಿಯವರು ಹಸಿರು ನ್ಯಾಯಾಧೀಕರಣಕ್ಕೆ ವಿಚಾರಣೆಗಾಗಿ ಅರ್ಜಿ ಸಲ್ಲಿಸಿದ್ದರು.

ಅರ್ಜಿಯ ವಿಚಾರಣೆಯನ್ನು ಸೆಪ್ಟೆಂಬರ್ 8ರಂದು ಆರಂಭಿಸಿದ ನ್ಯಾಯಾಧೀಕರಣವು ದೇವದುರ್ಗಾ ತಾಲೂಕು ವ್ಯಾಪ್ತಿಯಲ್ಲಿ ನಡೆಯುತ್ತಿರುವ ಮರಳು ಗಣಿಗಾರಿಕೆ, ಇಲ್ಲಿ ನಿಯಮ ಉಲ್ಲಂಘನೆ ಆರೋಪ ಹಾಗೂ ಇತ್ತೀಚಿಗೆ ಜೋಳದಹೆಡಿಗಿ ಗ್ರಾಮದಲ್ಲಿ ನೀರು ತರಲು ಹೋಗಿ ಮರಳಿಗಾಗಿ ತೆಗೆದಿರುವ ಗುಂಡಿಯಲ್ಲಿ ಬಿದ್ದು ಶ್ರೀದೇವಿ ಎಂಬ ಬಾಲಕಿ ಸಾವನ್ನಪ್ಪಿದ ಘಟನೆ, ಈ ಎಲ್ಲಾ ವಿವರಗಳನ್ನು ಪರಿಶೀಲಿಸಿ ನವೆಂಬರ್ 11 ರೊಳಗಾಗಿ ನ್ಯಾಯಾಧೀಕರಣಕ್ಕೆ ವರದಿ ನೀಡಲು ಸೂಚಿಸಿದೆ.

ಶಾಲೆಗೆ ಬಣ್ಣ ಬಳಿದು ಚಂದದ ರೂಪ ಕೊಟ್ಟ ಯುವಕರ ತಂಡ; ಮಕ್ಕಳನ್ನು ಸೆಳೆಯಲು ಉತ್ತಮ ಚಿಂತನೆ

ದೇವದುರ್ಗಾ ತಾಲೂಕು ವ್ಯಾಪ್ತಿಯ ಕೃಷ್ಣಾ ನದಿಯಲ್ಲಿ 18 ಕಡೆ ಮರಳು ಸಾಗಾಟ ಮಾಡಲು ಆನಂದ ದೊಡ್ಡಮನಿ ಹಾಗೂ ಪಿ ಎಲ್ ಕಾಂಬ್ಳೇ ಎಂಬುವವರಿಗೆ ಗುತ್ತಿಗೆ ನೀಡಲಾಗಿದೆ. 2006ರಲ್ಲಿ ಹಸಿರು ನ್ಯಾಯಾಧೀಕರಣವು ಮರಳನ್ನು ಹಿಟಾಚಿಯಂಥ ಯಂತ್ರಗಳಿಂದ ತೆಗೆಯಬಾರದು, ಟಿಪ್ಪರ್ ಗಳಲ್ಲಿ ನಿಗದಿತ ಪ್ರಮಾಣದ ಮರಳು ಸಾಗಾಟ ಮಾಡಬೇಕು ಸೇರಿದಂತೆ ವಿವಿಧ ರೀತಿಯಲ್ಲಿ ಪರಿಸರಕ್ಕೆ ಹಾನಿಯಾಗಂದಂತಹ ಕ್ರಮಕೈಗೊಳ್ಳಲು ಸೂಚಿಸಿದೆ. ಆದರೆ  ಗುತ್ತಿಗೆದಾರರು ಈ ನಿಯಮ ಉಲ್ಲಂಘಿಸಿ ಗಣಿಗಾರಿಕೆ ಮಾಡುತ್ತಿರುವ ಬಗ್ಗೆ ನ್ಯಾಯಾಧೀಕರಣಕ್ಕೆ ಸಾಕ್ಷಿಗಳೊಂದಿಗೆ ಮನವಿ ಸಲ್ಲಿಸಿದೆ.

ಈ ಹಿನ್ನಲೆಯಲ್ಲಿ ನ್ಯಾಯಾಧೀಕರಣವು ತನಿಖೆಗೆ ಸೂಚಿಸಿದ್ದು, ಮೊದಲ ಗೆಲುವು ಎಂದು ಸಾಮಾಜಿಕ ಕಾರ್ಯಕರ್ತ ಶರಣಪ್ಪರಡ್ಡಿ ಹಾಗೂ ಶ್ರೀರಾಮಸೇನೆಯ ರಾಜ್ಯಾಧ್ಯಕ್ಷ ಅಂದೋಲಾ ಶ್ರೀ ಸಿದ್ದಲಿಂಗಸ್ವಾಮಿಗಳು ಹೇಳಿದ್ದಾರೆ. ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಬೇಕು, ಆದರೆ ಮರಳು ದಂಧೆಗೆ ಈಗಿನ ಜಿಲ್ಲಾಧಿಕಾರಿ ವೆಂಕಟೇಶ ಕುಮಾರ, ಲಿಂಗಸಗೂರು ಡಿವಾಯ್ಎಸ್ಪಿ ಎಸ್ ಎಸ್ ಹುಲ್ಲೂರು ಹಾಗು ದೇವದುರ್ಗಾ ತಹಸೀಲ್ದಾರ ಮಧುರಾಜ ಯಾಳಗಿ ಸಾಥ್ ನೀಡುತ್ತಿದ್ದಾರೆ.  ಈ ಮೂವರು ಕಲಬುರಗಿ ಜಿಲ್ಲೆಯಲ್ಲಿದ್ದಾಗ ಭೀಮಾ ನದಿಯಲ್ಲಿ ಅಕ್ರಮ ಮರಳು ಸಾಗಾಟಕ್ಕೆ ಸಹಕಾರ ನೀಡಿದ್ದರು. ಈಗ ಅಲ್ಲಿ ಮರಳು ಸಾಗಾಟ ನಿಂತಿದ್ದರಿಂದ ಅವರು ರಾಯಚೂರಿಗೆ ಬಂದಿದ್ದಾ.ರೆ ಅವರನ್ನು ಗುತ್ತಿಗೆದಾರರೇ ಕರೆದುಕೊಂಡು ಬಂದಿದ್ದಾರೆ. ಅವರೊಂದಿಗೆ ರಾಯಚೂರು ಜಿಲ್ಲೆಯ ಹಿರಿಯ ಭೂವಿಜ್ಞಾನ ಇಲಾಖೆಯ ಅಧಿಕಾರಿ ವಿಶ್ವನಾಥ ಸಹ ಸಹಕಾರ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಮಧ್ಯೆ ಅಕ್ರಮ ಮರಳು ದಂಧೆಯ ವಿರುದ್ದ ಗುತ್ತಿಗೆದಾರ ಆನಂದ ದೊಡ್ಡಮನಿ ಹಾಗೂ ಪಿ ಎಲ್ ಕಾಂಬ್ಳೆ, ಹಿರಿಯ ಭೂ ವಿಜ್ಞಾನಿ ವಿಶ್ವನಾಥ ವಿರುದ್ದ ದೇವದುರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಸಂದರ್ಭದಲ್ಲಿ ಗುತ್ತಿಗೆದಾರರು ಜಾಮೀನು ಪಡೆದಿದ್ದು, ವಿಶ್ವನಾಥ ತಡೆಯಾಜ್ಞೆ ತಂದಿದ್ದಾರೆ. ಅಕ್ರಮ ಮರಳು ದಂಧೆ ಪ್ರಶ್ನಿಸಿದ್ದಕ್ಕೆ ಸಾಮಾಜಿಕ ಕಾರ್ಯಕರ್ತರ ಮೇಲೆ ಅಟ್ರಾಸಿಟಿ ಕೇಸ್ ದಾಖಲಿಸಲಾಗುತ್ತಿದೆ. ಅಲ್ಲದೇ ದೇವದುರ್ಗಾ ಪೊಲೀಸರು ಥರ್ಡ್ ಡಿಗ್ರಿ ಟ್ರಿಟ್ಮೆಂಟ್ ನೀಡುತ್ತಿದ್ದಾರೆ ಎಂದು ದೂರು ದಾರ ಶರಣಪ್ಪರಡ್ಡಿ ಆರೋಪಿಸಿದ್ದಾರೆ. ಮರಳು ದಂಧೆಯ ಬಗ್ಗೆ ಈಗ ಹಸಿರು ನ್ಯಾಯಾಧೀಕರಣ ಈಗ ಚಾಟಿ ಬೀಸುತ್ತಿದೆ. ಇದರಿಂದ ಅಕ್ರಮ ತಡೆ ಬೀಳಬಹುದು ಎಂದು ಆಂದೋಲಾಶ್ರೀ ಹಾಗೂ ಶರಣಪ್ಪ ರೆಡ್ಡಿ ಹೇಳಿದ್ದಾರೆ.
Published by: Latha CG
First published: September 13, 2020, 10:35 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories