ಹಸಿರು ಪಟಾಕಿಗೆ ಮುಗಿಬಿದ್ದ ಬೆಂಗಳೂರಿಗರು; ದುಬಾರಿಯಾದರೂ ಭರ್ಜರಿ ವ್ಯಾಪಾರ

Deepavali Festival - ಕೋವಿಡ್ ಹಿನ್ನೆಲೆಯಲ್ಲಿ ಪಟಾಕಿಯನ್ನೇ ನಿಷೇಧಿಸಬೇಕೆಂದಿದ್ದ ರಾಜ್ಯ ಸರ್ಕಾರ ಕೊನೆಯ ಕ್ಷಣದಲ್ಲಿ ಹಸಿರು ಪಟಾಕಿಗೆ ಹಸಿರು ನಿಶಾನೆ ನೀಡಿದೆ. ಬೆಲೆ ಹೆಚ್ಚಾದರೂ ಬೆಂಗಳೂರಿನಲ್ಲಿ ಗ್ರೀನ್ ಪಟಾಕಿಗಳ ಭರ್ಜರಿ ವ್ಯಾಪಾರ ಆಗುತ್ತಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು(ನ. 13): ಕೊರೋನಾ ಇರುವಾಗ ಈ ಸಲದ ದೀಪಾವಳಿ ಹಬ್ಬದಂದು ಪಟಾಕಿ ಹೊಡೆಯೋಕೆ ಆಗುತ್ತೋ ಇಲ್ಲವೋ ಎಂದು ಯೋಚನೆ ಮಾಡುತ್ತಿದ್ದವರಿಗೆ ಹಸಿರು ಪಟಾಕಿ ಹಾರಿಸುವ ಅವಕಾಶ ಸಿಕ್ಕಿದೆ. ಹಸಿರು ಪಟಾಕಿಗೆ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಅದು ಮಾರುಕಟ್ಟೆಗೆ ಎಂಟ್ರಿ ಕೊಟ್ಟಾಗಿದೆ. ಇದನ್ನೇ ಕಾಯುತ್ತಾ ಇದ್ದವರಂತೆ ಜನ ಕೂಡಾ ಹಸಿರು ಪಟಾಕಿಗಳನ್ನು ಉತ್ಸಾಹದಿಂದ ಕೊಳ್ಳುತ್ತಿದ್ದಾರೆ.

ಮಾಲಿನ್ಯ ಕಡಿಮೆ, ಸಂಭ್ರಮ ಜೋರು: ನಕ್ಷತ್ರ ಕಡ್ಡಿ, ಮತಾಪು, ಹೂವಿನಕುಂಡ, ಲಕ್ಷ್ಮಿ ಪಟಾಕಿ ಎಲ್ಲವೂ ಇವೆ. ‌ಆದ್ರೆ ಯಾವುದೂ ಹೆಚ್ಚು ಹಾನಿ ಮಾಡಲ್ಲ. ನೋಡೋಕೆ ಮಾಮೂಲಿ ಪಟಾಕಿಗಳ ರೀತಿಯೇ ಇರುವ ಈ ಹಸಿರು ಪಟಾಕಿಗಳು ಬೆಂಗಳೂರಿನ ಕೆಲ ಮೈದಾನಗಳಲ್ಲಿ ಮಾರಾಟವಾಗುತ್ತಿವೆ. ಕೊನೆ ಕ್ಷಣದವರೆಗೂ ಇವುಗಳ ವ್ಯಾಪಾರಕ್ಕೆ ಅನುಮತಿ ಸಿಗುತ್ತೋ ಇಲ್ವೋ ಎಂದುಕೊಂಡಿದ್ದ ವ್ಯಾಪಾರಿಗಳು ಕೊನೆ ಕ್ಷಣದ ವ್ಯಾಪಾರವನ್ನ ಚೆನ್ನಾಗೇ ಮಾಡ್ತಿದ್ದಾರೆ. ನಿನ್ನೆ ಬೆಳಗ್ಗಿನವರೆಗೂ ಹಸಿರು ಪಟಾಕಿ ಮಾರಾಟದ ಬಗ್ಗೆ ಯಾರಿಗೂ ಕ್ಲಾರಿಟಿ ಇರ್ಲಿಲ್ಲ. ಆದ್ರೆ ಸರ್ಕಾರ ಈ ಕುರಿತು ಸ್ಪಷ್ಟ ಆದೇಶ ಹೊರಡಿಸಿದ ಮೇಲೆ ವಹಿವಾಟು ಆರಂಭವಾಗಿದೆ.

ಇದನ್ನೂ ಓದಿ: ಬಸವ ನಾಡಿನ ವಿಜ್ಞಾನಿಗೆ ಅಮೆರಿಕದ ಗೌರವ; ಡಾ. ಶ್ರೀನಿವಾಸ ಕುಲಕರ್ಣಿ ಸಾಧನೆ ಏನು ಗೊತ್ತಾ?

ಇಷ್ಟೆಲ್ಲಾ ಮಾಹಿತಿ ನೀಡಿ ಹಸಿರು ಪಟಾಕಿ ಸಿಡಿಸಲು ಸರ್ಕಾರ ಹಸಿರು ನಿಶಾನೆ ನೀಡಿದೆ. ಹಸಿರು ಪಟಾಕಿ ಅಂದ್ರೆ ಸಾಮಾನ್ಯ ಪಟಾಕಿಗಿಂತ ಕಡಿಮೆ ಮಾಲಿನ್ಯ ಮಾಡುವ ಪಟಾಕಿ. CSIR ಮತ್ತು NEERI ಸಂಶೋಧನಾ ಸಂಸ್ಥೆಗಳು ಜಂಟಿಯಾಗಿ ಹಸಿರು ಪಟಾಕಿ ಅಭಿವೃದ್ದಿಪಡಿಸಿವೆ. ಸುಪ್ರೀಂಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ 2018 ರಲ್ಲಿ ಹಸಿರು ಪಟಾಕಿ ಅಭಿವೃದ್ದಿ ಮಾಡಲಾಯಿತು. ಲಿಥಿಯಂ, ಲೆಡ್ (ಸೀಸ), ಆರ್ಸೆನಿಕ್ ಮತ್ತು ಬೇರಿಯಂನಂಥ ಹಾನಿಕಾರಕ ಕಮಿಕಲ್​ಗಳನ್ನು ಹಸಿರು ಪಟಾಕಿಯಲ್ಲಿ ಬಳಸುವುದಿಲ್ಲ. ಇದು ಕಡಿಮೆ ಹೊಗೆ ಹರಡುತ್ತವೆ. ಸಾಮಾನ್ಯಕ್ಕಿಂತ ಶೇ. 30 ರಷ್ಟು ಮಾತ್ರ ಮಾಲಿನ್ಯ ಮಾಡುತ್ತವೆ.‌ ಹಸಿರು ಪಟಾಕಿಗಳು ಧೂಳೆಬ್ಬಿಸುವುದಿಲ್ಲ, ಇವನ್ನು ಗುರುತಿಸುವುದು ಸಲೀಸಾಗುವಂತೆ ಕ್ಯೂ ಆರ್ ಕೋಡ್ ಹಾಕಲಾಗಿರುತ್ತೆ. ಹಸಿರು ಪಟಾಕಿಗಳಿಗೆ ಮಾಮೂಲಿ ಪಟಾಕಿಗಳಿಗಿಂತ 30-40% ನಷ್ಟು ಬೆಲೆ ಹೆಚ್ಚಿದೆ. ಆದರೆ ಈಗಾಗಲೇ ಕೊರೋನಾ ಹಾವಳಿಯಿಂದ ಡಲ್ ಆಗಿರೋ ಹಬ್ಬದ ಸಂಭ್ರಮಕ್ಕೆ ಈ ಪಟಾಕಿಗಳಿಂದಾಗಿ ಸ್ವಲ್ಪವಾದರೂ ಬಣ್ಣ ಬೆಳಕು ತುಂಬಲಿ ಎನ್ನುವ ಆಶಯ ಜನರದ್ದು.‌ ಪರಿಸರಕ್ಕೆ ಇದರಿಂದ ಕಡಿಮೆ ಹಾನಿ ಆಗುವುದರ ಬಗ್ಗೆ ಜನರಿಗೆ ಒಳ್ಳೆ ಅಭಿಪ್ರಾಯವಿದೆ.

ಇದನ್ನೂ ಓದಿ: ರಾಜ್ಯಾದ್ಯಂತ ದೀಪಾವಳಿ ಸಂಭ್ರಮ; ಕೋವಿಡ್ ಭಯವಿಲ್ಲದೆ ಮಾರುಕಟ್ಟೆಗಳಲ್ಲಿ ಜನಜಂಗುಳಿ; ಹೂ ದುಬಾರಿ

ಕೊರೋನಾಗೆ ಸಂಬಂಧಿಸಿದಂತೆ ಮಾಸ್ಕ್, ಸಾಮಾಜಿಕ ಅಂತರದ ನಿಯಮ ಪಾಲನೆ ಮಾಡುವುದರ ಜೊತೆಗೆ ಪಟಾಕಿಯ ಬಗ್ಗೆಯೂ ಬೇರೆ ನಿಯಮಗಳೂ ಇವೆ. ಎಲ್ಲವನ್ನೂ ಪಾಲಿಸಿ ದೀಪಾವಳಿ ಆಚರಿಸೋಕೆ ಬೆಂಗಳೂರಿನ ಜನ ಸಜ್ಜಾಗಿದ್ದಾರೆ.

ವರದಿ: ಸೌಮ್ಯಾ ಕಳಸ
Published by:Vijayasarthy SN
First published: