Environmentalist Suicide: ತನ್ನ ಹೋರಾಟಕ್ಕೆ ಸಿಗಲಿಲ್ಲ ನ್ಯಾಯ; ತಾನೇ ಬೆಳೆಸಿದ ಮರಕ್ಕೆ ನೇಣು ಬಿಗಿದುಕೊಂಡ ಪರಿಸರ ಪ್ರೇಮಿ ವೀರಾಚಾರಿ!

ತಮ್ಮ ಹೋರಾಟಕ್ಕೆ ಮನ್ನಣೆ ಸಿಗದೆ ಇದ್ದರೆ ನೇಣು ಹಾಕಿಕೊಳ್ಳುವುದಾಗಿ ವೀರಾಚಾರಿ ಹೇಳಿದ್ದರು. ಸಿದ್ದರಾಮಪ್ಪ ವಿರುದ್ಧ ಸರಿಯಾದ ಕ್ರಮಕೈಗೊಂಡಿಲ್ಲ ಎಂದು ವೀರಾಚಾರಿ ತಾನೇ ಬೆಳೆಸಿದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪರಿಸರ ಪ್ರೇಮಿ ವೀರಾಚಾರಿ

ಪರಿಸರ ಪ್ರೇಮಿ ವೀರಾಚಾರಿ

  • Share this:
ದಾವಣಗೆರೆ (ಸೆ 21): ನ್ಯಾಯದ ಪರ ನಿಂತವ್ರಿಗೆ ಉಳಿಗಾಲ ಇಲ್ಲ ಎನ್ನುವುದು ಮತ್ತೆ ಸಾಬೀತಾಗಿದೆ. ಬಡವರ ಅನ್ನದ ಪರವಾಗಿ ಹೋರಾಟಕ್ಕಿಳಿದ ಪರಿಸರ ಪ್ರೇಮಿ ವೀರಾಚಾರಿ (Environmentalist Veerachari), ಈ ಭ್ರಷ್ಟ ವ್ಯವಸ್ಥೆಗೆ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾರೆ. ದಾವಣಗೆರೆ (Davangere) ಜಿಲ್ಲೆಯ ಹರಿಹರ ತಾಲೂಕಿನ ಮಿಟ್ಲಕಟ್ಟೆ ಗ್ರಾಮದ ಪರಿಸರವಾದಿ ಸಾಲು ಮರದ ವೀರಾಚಾರಿ ತಾನೇ ಬೆಳೆಸಿದ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾರೆ. ಹರಿಹರ (Harihara) ತಾಲೂಕಿನಲ್ಲಿ ವೀರಾಚಾರಿ ಅವರು ಕಳೆದ 30 ವರ್ಷಗಳಿಂದ ರಸ್ತೆ ಬದಿಯಲ್ಲಿ ಸುಮಾರು 3 ಸಾವಿರ ಗಿಡಗಳನ್ನು ನೆಟ್ಟಿದ್ದರು. ವಿಪರ್ಯಾಸವೆಂದ್ರೆ ಇದೆ ನೋಡಿ, ಮಂಗಳವಾರ (ಸೆಪ್ಟೆಂಬರ್​ 26) ತಾವೇ ನೆಟ್ಟು ಬೆಳೆಸಿದ್ದ ಮರಕ್ಕೆ ನೇಣು ಬಿಗಿದುಕೊಂಡು ವೀರಾಚಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಕನ್ನಡ ರಾಜ್ಯೋತ್ಸವ ಪ್ರಶಸ್ತಿ

ಇವರ ಸೇವೆಯನ್ನು ಪರಿಗಣಿಸಿ ವೀರಾಚಾರಿ ಅವರಿಗೆ 2019ರಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಸಹ ನೀಡಲಾಗಿದೆ. ಕಾರ್ಯಕರ್ತರಾಗಿದ್ದ ವೀರಾಚಾರಿ ಅವರು ನ್ಯಾಯ ಬೆಲೆ ಅಂಗಡಿಯಾಗ್ತಿರೋ ಅಕ್ರಮಗಳ ವಿರುದ್ಧ ಹಲವು ಸಂದರ್ಭಗಳಲ್ಲಿ ಧ್ವನಿ ಎತ್ತಿದ್ದರು.

ಅನ್ಯಾಯದ ವಿರುದ್ಧ ಧ್ವನಿ ಎತ್ತಿದ್ದೆ ತಪ್ಪಾಯ್ತಾ?

ನ್ಯಾಯ ಬೆಲೆ ಅಂಗಡಿಯಲ್ಲಿ ನಡೆಯುತ್ತಿದ್ದ ಅನ್ಯಾಯದ ವಿರುದ್ಧ ವೀರಾಚಾರಿ ಅವ್ರು ಧ್ವನಿ ಎತ್ತಿದ್ರು. ತಮ್ಮೂರಿನ ನ್ಯಾಯ ಬೆಲೆ ಅಂಗಡಿಯಲ್ಲಿ ಜನರಿಗೆ ಭಾರೀ ಮೋಸ ನಡೆಯುತ್ತಿತ್ತು. ಜನರಿಗೆ ಸರ್ಕಾರದಿಂದ ನೀಡುವ ಅಕ್ಕಿ, ಗೋಧಿ, ರಾಗಿಯನ್ನ ಪಡಿತರಿಗೆ ಕಡಿಮೆ ನೀಡಲಾಗ್ತಿದೆ. ಉಳಿದ ಅಕ್ಕಿ, ಗೋಧಿ, ರಾಗಿ, ಕಾಳ ಸಂತೆಯಲ್ಲಿ ಮಾರಾಟ ಮಾಡಲಾಗಿದೆ ಎಂದು ವೀರಾಚಾರಿ ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಆಹಾರ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದರು.

Green activist found hanging from tree he planted in Davanagere pvn
ಪರಿಸರ ಪ್ರೇಮಿ ವೀರಾಚಾರಿ


ಹೇಳಿದಂತೆ ಮಾಡಿಯೇ ಬಿಟ್ರು ವೀರಾಚಾರಿ!

ಇದೇ ವಿಚಾರಕ್ಕೆ ಒಂದು ವೇಳೆ ತಮ್ಮ ಹೋರಾಕ್ಕೆ ಮನ್ನಣೆ ಸಿಗದೆ ಇದ್ದರೆ ನೇಣು ಹಾಕಿಕೊಳ್ಳುವುದಾಗಿ ವೀರಾಚಾರಿ ಹೇಳಿದ್ದರು. ದೂರಿನ ಬಳಿಕ ನ್ಯಾಯ ಬೆಲೆ ಅಂಗಡಿ ಮಾಲೀಕ ಸಿದ್ದರಾಮಪ್ಪ ವಿರುದ್ಧ ವೀರಾಚಾರಿ ಹಲವಾರು ದೂರುಗಳನ್ನು ದಾಖಲಿಸಿದ್ದರು. ಸಿದ್ದರಾಮಪ್ಪ 3 ಬಾರಿ ಅಮಾನತುಗೊಂಡಿದ್ದರು.

ಇದನ್ನೂ ಓದಿ: Koragajja: ವಾರವಾದ್ರೂ ಒಣಗಲಿಲ್ಲ ದೈವ ಕೊರಗಜ್ಜನಿಗೆ ಇಟ್ಟಿದ್ದ ವೀಳ್ಯದೆಲೆ; ಎಲೆಯಲ್ಲೇ ಮೂಡಿದೆ ಬೇರು!

ಡಿಸಿ ಎದುರು ಬೇಸರ ಹೊರ ಹಾಕಿದ್ದ ಪರಿಸರವಾದಿ

ಸೋಮವಾರ ಸಂಜೆ ವೀರಾಚಾರಿ ಅವರು ದಾವಣಗೆರೆ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಅವರನ್ನು ಭೇಟಿ ಮಾಡಿದ್ರು. ಅನ್ಯಾಯ ಬೆಲೆ ಅಂಗಡಿ ಮಾಲೀಕ ಸಿದ್ದರಾಮಪ್ಪ ಇದೀಗ ಆರೋಪಗಳಿಂದ ಮುಕ್ತರಾಗುತ್ತಿರುವ ಬಗ್ಗೆ ಮತ್ತೊಮ್ಮೆ ಬೇಸರ ವ್ಯಕ್ತಪಡಿಸಿದರು. ಸಿದ್ದರಾಮಪ್ಪ ಅವರ ಲೈಸೆನ್ಸ್​ ರದ್ದು ಮಾಡಿದ್ದೆವು ಆದ್ರೆ ಅವರು ಹೈಕೋರ್ಟ್‌ನಿಂದ ತಡೆ ಪಡೆದಿದ್ದಾರೆ ಎಂದು ಡಿಸಿ ಹೇಳಿದರು.

ನೇಣು ಬಿಗಿದುಕೊಂಡು ಆತ್ಮಹತ್ಯೆ

ಬಳಿಕ ಮನನೊಂದ ವೀರಾಚಾರಿ ತಾವು ಮಾಡಿದ ವಾಗ್ಧಾನದಂತೆ ನ್ಯಾಯ ಸಿಗದೆ ಇರೋದಕ್ಕೆ ತಾನೇ ಬೆಳೆಸಿದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವೀರಾಚಾರಿ ಪರ ನಿಂತ ಗ್ರಾಮಸ್ಥರು ಅವರ ಸಾವಿಗೆ ನ್ಯಾಯ ಕೊಡಿಸುವಂತೆ ಪಟ್ಟು ಹಿಡಿದಿದ್ದಾರೆ.

ಹರಿಹರಕ್ಕೆ ತಹಶೀಲ್ದಾರ್ ಭೇಟಿ 

ಮಿಟ್ಲೆ ಕಟ್ಟೆ ಗ್ರಾಮಕ್ಕೆ ಆಗಮಿಸಿದ ಹರಿಹರ ತಹಶೀಲ್ದಾರ್, ಪ್ರತಿಭಟನಾಕಾರರ ಮನವೊಲಿಸಿದ್ದಾರೆ ಸರ್ಕಾರದಿಂದ ಬರುವ ಎಲ್ಲಾ ಸವಲತ್ತು ಕೊಡಿಸುವುದಾಗಿ ಅಶ್ವತ್ಥ್​ ಭರವಸೆ ನೀಡಿದ್ದಾರೆ. ಭರವಸೆ ನೀಡಿದ ಬಳಿಕವೇ ಅಂತ್ಯಸಂಸ್ಕಾರಕ್ಕೆ ಕುಟುಂಬಸ್ಥರು ಮುಂದಾದ್ರು. ವೀರಾಚಾರಿ ಅಂತ್ಯಸಂಸ್ಕಾರದಲ್ಲಿ ಹರಿಹರ ತಹಸಿಲ್ದಾರ್ ಅಶ್ವತ್ಥ್​ ಭಾಗಿಯಾಗಿದ್ರು.

ಇದನ್ನೂ ಓದಿ; HDD-Basavaraj Bommai: ದೇವೇಗೌಡರ ಮನೆಗೆ ಬಸವರಾಜ ಬೊಮ್ಮಾಯಿ ಭೇಟಿ; ಯಜಮಾನರೇ ನೀವು ಈಗ್ಲೂ ಮುದ್ದೆನೇ ತಿಂತೀರಾ ಎಂದು ಕೇಳಿದ ಸಿಎಂ

ವೀರಾಚಾರಿ ಆತ್ಮಹತ್ಯೆಗೆ ಸಂಬಂಧಿಸಿದಂತೆ ನಾಲ್ವರ ವಿರುದ್ದ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನ್ಯಾಯ ಬೆಲೆ ಅಂಗಡಿ ಮಾಲಿಕ ಸಿದ್ದರಾಮಪ್ಪ, ಪತ್ನಿ ಶಾರದಮ್ಮ, ಹಾಗೂ ಮಕ್ಕಳಾದ , ರುದ್ರಮುನಿ,ನಿಜಲಿಂಗಪ್ಪ ಮೇಲೆ ದೂರು ದಾಖಲಾಗಿದೆ.  ನಮ್ಮ ತಂದೆಗೆ ಸಿದ್ದರಾಮಪ್ಪ ಕುಟುಂಬದವರು ಎಲ್ಲರೂ ಸೇರಿ ನಿನ್ನನ್ನು ಜೀವಂತ ಸುಟ್ಟು ಬಿಡುತ್ತೇವೆ ಎಂದು ಪ್ರಾಣ ಬೆದರಿಕೆ ಹಾಕಿದ್ದರು ಎಂದು ಮೃತ ವೀರಾಚಾರಿ ಮಗ ಶರಣು ಬಸವೇಶ್ವರ ನಿಂದ ಪೊಲೀಸರಿಗೆ ದೂರು ನೀಡಿದ್ದಾರೆ.
Published by:ಪಾವನ ಎಚ್ ಎಸ್
First published: