ಚಿಕ್ಕಮಗಳೂರು: ವಿಧಾನಸಭಾ ಚುನಾವಣೆಗೆ (Karnataka Assembly Election 2023) ದಿನಗಣನೇ ಶುರುವಾಗಿದ್ದು, ಜಿಲ್ಲಾ ಗಡಿಭಾಗಗಲ್ಲಿ ಪೊಲೀಸರು ಚೆಕ್ಪೋಸ್ಟ್ (Check post) ನಿರ್ಮಿಸಿ ವಾಹನಗಳ ಮೇಲೆ ನಿಗಾ ಇರಿಸಿದ್ದಾರೆ. ಬುಧವಾರ ಕಲಬುರಗಿ (Kalaburagi) ಜಿಲ್ಲೆಯಲ್ಲಿ ಒಂದು ಕೋಟಿ 90 ಲಕ್ಷ ನಗದು ಪತ್ತೆಯಾಗಿದೆ. ಬೆಳಗಾವಿ, ಗದಗ ಜಿಲ್ಲೆಗಳಲ್ಲಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ ಲಕ್ಷಾಂತರ ರೂಪಾಯಿ ಹಣವನ್ನು (Unrecorded Money) ಪೊಲೀಸರು ಜಪ್ತಿ ಮಾಡಿದ್ದಾರೆ. ಇದೀಗ ಚಿಕ್ಕಮಗಳೂರು ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, 2 ಕೋಟಿಗೂ ಅಧಿಕ ಮೌಲ್ಯದ ಚಿನ್ನವನ್ನ (Gold) ವಶಕ್ಕೆ ಪಡೆದು, ವಾಹನ ಚಾಲಕ ಸೇರಿದಂತೆ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.
ತರೀಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಪಿಕಪ್ ವಾಹನದ ಮೂಲಕ ನಾಲ್ಕು ಬಾಕ್ಸ್ಗಳಲ್ಲಿ ಚಿನ್ನವನ್ನು ಸಾಗಾಟ ಮಾಡಲಾಗುತ್ತಿತ್ತು. ತರೀಕೆರೆ ಪಟ್ಟಣದ ಬಳಿ ನಿರ್ಮಿಸಲಾಗಿರುವ ಚೆಕ್ಪೋಸ್ಟ್ ನಲ್ಲಿ ವಾಹನ ಪರಿಶೀಲನೆ ವೇಳೆ ಚಿನ್ನ ಪತ್ತೆಯಾಗಿದೆ.
ನಾಲ್ಕು ಬಾಕ್ಸ್ನೊಳಗೆ ಚಿನ್ನದ ಸರ ಮತ್ತು ಚಿನ್ನದ ಬಿಸ್ಕತ್ ಪತ್ತೆಯಾಗಿದೆ. ಚಿಕ್ಕಮಗಳೂರು ಎಸ್ಪಿ ಉಮಾ ಪ್ರಶಾಂತ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.
ಒಟ್ಟು 2 ಕೋಟಿ 30 ಲಕ್ಷ ರೂಪಾಯಿ ಬೆಲೆ ಬಾಳುವ 9 ಕೆಜಿ 300 ಗ್ರಾಂ ಚಿನ್ನವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬೆಳಗಾವಿಯಲ್ಲಿ ಲಕ್ಷ ಲಕ್ಷ ಹಣ ವಶಕ್ಕೆ
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬುಗಟೆ ಆಲೂರು ಚೆಕ್ ಪೋಸ್ಟ್ ನಲ್ಲಿ 1.9 ಲಕ್ಷ ರೂಪಾಯಿ, ರಾಯಬಾಗ ತಾಲೂಕಿನ ಹಾರೂಗೇರಿ ಚೆಕ್ ಪೋಸ್ಟ್ ದಲ್ಲಿ4 ಲಕ್ಷ ರೂಪಾಯಿ ಮತ್ತು ಅಥಣಿ ತಾಲೂಕಿನ 3.45 ಲಕ್ಷ ರೂಪಾಯಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಸಂಬಂಧಿತರು ಈ ಹಣಕ್ಕೆ ಯಾವುದೇ ದಾಖಲೆಗಳನ್ನು ಸಲ್ಲಿಸಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ