HOME » NEWS » State » GRANITE INDUSTRIES IN ANEKAL NOT PAYING TAXES TO STATE GOVERNMENT GNR

ಅಕ್ರಮ ಗ್ರಾನೈಟ್: ಪ್ರತಿದಿನ ಕೋಟಿಗಟ್ಟಲೆ ವಹಿವಾಟು; ರಾಜ್ಯ ಸರ್ಕಾರಕ್ಕೆ ತೆರಿಗೆ ವಂಚನೆ

ಇನ್ನೂ ಕೃಷಿ ಉದ್ದೇಶಿತ ಜಮೀನುಗಳಲ್ಲಿ ಗ್ರಾನೈಟ್ ಮಳಿಗೆಗಳನ್ನು ನಡೆಸುವುದು ಅಕ್ರಮ. ಹಿಂದಿನಿಂದಲೂ ಅದು ನಡೆದುಕೊಂಡು ಬಂದಿದೆ. ಈ ಹಿಂದೆಯೇ ಅಕ್ರಮ ಮಳಿಗೆಗಳನ್ನು ಗುರುತಿಸಿ ನೋಟೀಸ್ ನೀಡಲಾಗಿದ್ದು, ಆಕ್ರಮ ಗ್ರಾನೈಟ್ ಮಳಿಗೆಗಳ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಆನೇಕಲ್ ತಹಶಿಲ್ದಾರ್ ಮಹಾದೇವಯ್ಯ ತಿಳಿಸಿದ್ದಾರೆ.

news18-kannada
Updated:January 29, 2020, 7:16 AM IST
ಅಕ್ರಮ ಗ್ರಾನೈಟ್: ಪ್ರತಿದಿನ ಕೋಟಿಗಟ್ಟಲೆ ವಹಿವಾಟು; ರಾಜ್ಯ ಸರ್ಕಾರಕ್ಕೆ ತೆರಿಗೆ ವಂಚನೆ
ಸಾಂದರ್ಭಿಕ ಚಿತ್ರ
  • Share this:
ಆನೇಕಲ್(ಜ.29): ಅದು ಏಷ್ಯಾದಲ್ಲಿಯೇ ಎರಡನೇ ಅತಿ ದೊಡ್ಡ ಗ್ರಾನೈಟ್ ಮಾರುಕಟ್ಟೆ. ಅಲ್ಲಿವೆ ಐನೂರಕ್ಕು ಅಧಿಕ ಗ್ರಾನೈಟ್ ಮಳಿಗೆ ಮತ್ತು ಗ್ರಾನೈಟ್ ಕಾರ್ಖಾನೆಗಳು. ಅಲ್ಲಿ ನಿತ್ಯ ನಡೆಯುತ್ತದೆ ಕೋಟಿ ಕೋಟಿ ವಹಿವಾಟು. ಆದ್ರೆ ಸರ್ಕಾರದ ಖಜಾನೆಗೆ ಮಾತ್ರ ನಯಾ ಪೈಸೆ ಸಂದಾಯವಾಗುತ್ತಿಲ್ಲ.

ಹೌದು, ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಜಿಗಣಿ ಕೈಗಾರಿಕಾ ಪ್ರದೇಶ ತರಹೆವಾರಿ ಗ್ರಾನೈಟ್ ಕಲ್ಲುಗಳ ವಹಿವಾಟಿಗೆ ಖ್ಯಾತಿ ಗಳಿಸಿದೆ. ಜೊತೆಗೆ ಇದೀಗ ತರಿಗೆ ವಂಚನೆಯಲ್ಲು ಅಪಖ್ಯಾತಿಗೆ ಒಳಗಾಗುತ್ತಿದೆ. ಬನ್ನೇರುಘಟ್ಟ ಮುಖ್ಯರಸ್ತೆಯಲ್ಲಿ ಬನ್ನೇರುಘಟ್ಟದಿಂದ ಹಾರಗದ್ದೆವರೆಗೆ ಸುಮಾರು ಸಾವಿರಕ್ಕು ಅಧಿಕ ಗ್ರಾನೈಟ್ ಮಳಿಗೆಗಳು ತಲೆಎತ್ತಿವೆ. ನಿತ್ಯಾ ಕೇರಳ, ಮಹಾರಾಷ್ಟ್ರ ಸೇರಿದಂತೆ ದೇಶ ವಿದೇಶಗಳಿಗೆ ಗ್ರಾನೈಟ್ ಮಾರಾಟ ಮಾಡಿ ಕೋಟಿ ಕೋಟಿ ವ್ಯವಹಾರ ನಡೆಸುತ್ತವೆ.

ಬಹುತೇಕ ಗ್ರಾನೈಟ್ ಮಳಿಗೆ ಮತ್ತು ಕಾರ್ಖಾನೆಗಳಿಗೆ ಪರವಾನಗಿ ಪಡೆದುಕೊಂಡಿಲ್ಲ. ಕೃಷಿ ಉದ್ದೇಶಿತ‌ ಹಸಿರು ವಲಯದಲ್ಲಿ ಅಕ್ರಮವಾಗಿ ವ್ಯವಹಾರ ನಡೆಸುತ್ತಿದ್ದು, ಇಲ್ಲಿಯವರೆಗೆ ಸರ್ಕಾರದ ಖಜಾನೆಗೆ ಮಾತ್ರ ನಯಾ ಪೈಸೆ ಟ್ಯಾಕ್ಸ್ ಪಾವತಿಯಾಗುತ್ತಿಲ್ಲ. ಮಂಟಪ ಗ್ರಾಮ ಪಂಚಾಯ್ತಿ ಒಂದರಲ್ಲಿಯೇ ಐನೂರಕ್ಕು ಅಧಿಕ ಗ್ರಾನೈಟ್ ಮಳಿಗೆ ಮತ್ತು ಕಾರ್ಖಾನೆಗಳಿವೆ. ಹಲವು ಬಾರಿ ಟ್ಯಾಕ್ಸ್ ಪಾವತಿಸುವಂತೆ ನೋಟೀಸ್ ನೀಡಿದ್ರು ಒಂದೂ ರೂಪಾಯಿ ಕೂಡ ಟ್ಯಾಕ್ಸ್ ಪಾವತಿಸಿಲ್ಲ. ಗ್ರಾಮ ಪಂಚಾಯತಿ ಅಧಿಕಾರಿಗಳು ಮತ್ತು ಸದಸ್ಯರು ಟ್ಯಾಕ್ಸ್ ಕಟ್ಟುವಂತೆ ತಿಳಿಸಿದರು ಸ್ಪಂದಿಸುವುದಿಲ್ಲ. ನಮಗೆ ಭಾಷೆ ಬರುವುದಿಲ್ಲ ಎಂದು ಉಡಾಫೆಯಾಗಿ ಉತ್ತರಿಸುತ್ತಾರೆ. ಜೊತೆಗೆ ಪ್ರಧಾನಿ ಮೋದಿ ಕೇಂದ್ರ ಸರ್ಕಾರದ ಮಂತ್ರಿಗಳ ಹೆಸರುಗಳನ್ನು ಹೇಳಿ ಹೆದರಿಸುತ್ತಾರೆ.

ಇದನ್ನೂ ಓದಿ: ಐಎಂಎ ಹಗರಣ: ಹೇಮಂತ್ ನಿಂಬಾಳ್ಕರ್ ವಿರುದ್ಧ ಕಾನೂನು ಕ್ರಮಕ್ಕೆ ಸಿಬಿಐಗೆ ರಾಜ್ಯ ಸರ್ಕಾರ ಅನುಮತಿ

ಕಳೆದ ಹತ್ತಾರು ವರ್ಷಗಳಿಂದ ಸರ್ಕಾರಕ್ಕೆ ಕಟ್ಟಬೇಕಾದ ಕಂದಾಯ ಪಾವತಿಸಿದ್ದರೆ ಹಳ್ಳಿಗಳ ಅಭಿವೃದ್ಧಿಗೆ ಬಳಕೆಯಾಗುತ್ತಿತ್ತು. ಹಾಗಾಗಿ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ತೆರಿಗೆ ವಂಚಕ ಅಕ್ರಮ ಗ್ರಾನೈಟ್ ಮಳಿಗೆಗಳ ಮೇಲೆ ಕ್ರಮ ವಹಿಸಬೇಕು ಎಂದು ಮಂಟಪ ಗ್ರಾಪ ಪಂಚಾಯತಿ ಅಧ್ಯಕ್ಷ ನವೀನ್ ಮತ್ತು ಸದಸ್ಯ ಶಿವಕುಮಾರ್ ಒತ್ತಾಯಿಸಿದ್ದಾರೆ.

ಇನ್ನೂ ಬಹುತೇಕ ಅಕ್ರಮ ಗ್ರಾನೈಟ್ ಮಳಿಗೆಗಳು ಕೃಷಿ ಉದ್ದೇಶಿತ ಜಮೀನುಗಳಲ್ಲಿ ವ್ಯವಹರಿಸುತ್ತಿದ್ದು, ಸ್ಥಳೀಯ ಗ್ರಾಮ ಪಂಚಾಯ್ತಿ ಅಧಿಕಾರಿಗಳ ವ್ಯಾಪ್ತಿಗೆ ಬರುವುದಿಲ್ಲ. ಆದ್ರು ಸರ್ಕಾರಕ್ಕೆ ಕಂದಾಯ ಸಂದಾಯವಾಗಲಿ ಎಂದು ಈ ಹಿಂದೆ ಆನೇಕ ಬಾರಿ ನೋಟೀಸ್ ಜಾರಿಗೊಳಿಸಲಾಗಿದೆ. ಆದ್ರು ಇಲ್ಲಿಯವರೆಗೆ ಯಾವುದೇ ಗ್ರಾನೈಟ್ ಮಳಿಗೆಗಳ ಮಾಲೀಕರು ಟ್ಯಾಕ್ಸ್ ಪಾವತಿಸಿಲ್ಲ. ಜೊತೆಗೆ ಟ್ಯಾಕ್ಸ್ ಕಟ್ಟಲು ಕೃಷಿ ಜಮೀನಿಗೆ ಪರವಾನಗಿ ನೀಡಿ ಎಂದು ನಮಗೆ ಷರತ್ತು ಹಾಕುತ್ತಾರೆ. ಆದ್ರೆ ಪಂಚಾಯತ್ ರಾಜ್ ಕಾನೂನಿನ ಪ್ರಕಾರ ಕಂದಾಯ ಇಲಾಖೆ ಸ್ವತ್ತಿಗೆ ಗ್ರಾಮ ಪಂಚಾಯ್ತಿ ಅಧಿಕಾರಿಗಳು ಪರವಾನಗಿ ನೀಡಲು ಅಧಿಕಾರ ಇಲ್ಲ. ಹಾಗಾಗಿ ಇಂತಹ ಟೆಕ್ನಿಕಲ್ ಪ್ರಾಬ್ಲಂಗಳನ್ನು ಮುಂದಿಟ್ಟುಕೊಂಡು ತೆರಿಗೆ ವಂಚನೆ ಮಾಡುತ್ತಿದ್ದಾರೆ ಎಂದು ಗ್ರಾಮ ಪಂಚಾಯ್ತಿ ಅಧಿಕಾರಿ ನರೇಂದ್ರ ಬಾಬು ತಮ್ಮ ಅಸಹಾಯಕತೆಯನ್ನು ತಿಳಿಸಿದ್ದಾರೆ. ಇನ್ನೂ ಕೃಷಿ ಉದ್ದೇಶಿತ ಜಮೀನುಗಳಲ್ಲಿ ಗ್ರಾನೈಟ್ ಮಳಿಗೆಗಳನ್ನು ನಡೆಸುವುದು ಅಕ್ರಮ. ಹಿಂದಿನಿಂದಲೂ ಅದು ನಡೆದುಕೊಂಡು ಬಂದಿದೆ. ಈ ಹಿಂದೆಯೇ ಅಕ್ರಮ ಮಳಿಗೆಗಳನ್ನು ಗುರುತಿಸಿ ನೋಟೀಸ್ ನೀಡಲಾಗಿದ್ದು, ಆಕ್ರಮ ಗ್ರಾನೈಟ್ ಮಳಿಗೆಗಳ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಆನೇಕಲ್ ತಹಶಿಲ್ದಾರ್ ಮಹಾದೇವಯ್ಯ ತಿಳಿಸಿದ್ದಾರೆ.

ಒಟ್ನಲ್ಲಿ ಕೇಂದ್ರ ಸರ್ಕಾರ ತೆರಿಗೆ ವಂಚನೆ ತಪ್ಪಿಸುವ ಸಲುವಾಗಿ ಜಿಎಸ್ಟಿ ಸೇರಿದಂತೆ ಹತ್ತು ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಆದ್ರೆ ಅಕ್ರಮ ಗ್ರಾನೈಟ್ ದಂಧೆಕೋರರು ಕೇಂದ್ರ ಸರ್ಕಾರದ ಮಂತ್ರಿ ಮಹೋದಯರ ಹೆಸರು ಹೇಳಿಕೊಂಡು ತೆರಿಗೆ ವಂಚಿಸುತ್ತಿದ್ದು, ಇಂತಹ ಹೈ ಪ್ರೋಫೈಲ್ ತೆರಿಗೆ ವಂಚಕರಿಗೆ ಸೂಕ್ತ ಕ್ರಮ ಜರುಗಿಸಿ ಬಿಡಿಗಾಸು ಬಿಡದೇ ತೆರಿಗೆ ವಸೂಲಿ ಮಾಡಬೇಕಿದೆ.
First published: January 29, 2020, 7:16 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories