Siddaramaiah Grandson: ಅಜ್ಜನ ಪರ ಚುನಾವಣೆ ಪ್ರಚಾರದಲ್ಲಿ ಮೊಮ್ಮಗ ಧವನ್ ರಾಕೇಶ್​

ಮೊಮ್ಮಗ

ಮೊಮ್ಮಗ

Karnataka Assembly Election 2023: ಈ ಬಾರಿ ಸಿದ್ಧರಾಮಯ್ಯ ಅವರ ಪರ ಅವರ ಮೊಮ್ಮಗ ಸಹ ಚುನಾವಣಾ ಕಣಕ್ಕೆ ಧುಮುಕಿದ್ದು, ತಾತನ ಪರವಾಗಿ ಧವನ್ ರಾಕೇಶ್ ಪ್ರಚಾರ ಮಾಡುತ್ತಿದ್ಧಾರೆ.

  • Share this:

ಕರ್ನಾಟಕ ವಿಧಾನಸಭೆ ಚುನಾವಣೆಯ (Karnataka Assembly Election 2023) ರಣಕಹಳೆ ಈಗಾಗಲೇ ಮೊಳಗಿದ್ದು ಎಲ್ಲಾ ಪಕ್ಷಗಳು (Party) ಬಹುತೇಕ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಹೆಸರನ್ನು ಬಿಡುಗಡೆ ಮಾಡಿದೆ. ಅಲ್ಲದೇ, ನಾಮಪತ್ರ ಸಲ್ಲಿಕೆ ಕೂಡ ಆರಂಭವಾಗಿದೆ. ಇನ್ನು ಕಾಂಗ್ರೆಸ್ ನಾಯಕ ಮಾಜಿ ಮುಖ್ಯಮಂಂತ್ರಿ ಸಿದ್ಧರಾಮಯ್ಯ (siddaramaiah) ಕೂಡ ವರುಣ (Varuna) ಕ್ಷೇತ್ರದಿಂದ ಈ ಬಾರಿ ಚುನಾವಣೆಗೆ ನಿಂತಿದ್ದು, ಪ್ರಚಾರ ಕಾರ್ಯನ್ನು ಭರದಿಂದ ಆರಂಭಿಸಿದ್ದಾರೆ. ಆದರೆ ಈ ಬಾರಿ ಸಿದ್ಧರಾಮಯ್ಯ ಅವರ ಪರ ಅವರ ಮೊಮ್ಮಗ ಸಹ ಚುನಾವಣಾ ಕಣಕ್ಕೆ ಧುಮುಕಿದ್ದು, ತಾತನ ಪರವಾಗಿ ಧವನ್ ರಾಕೇಶ್ (Dhavan Rakesh) ಪ್ರಚಾರ ಮಾಡುತ್ತಿದ್ಧಾರೆ.


ಮೊಮ್ಮಗನ ರಾಜಕೀಯ ಆಸ್ತಿ ಕಂಡು ಮಾಜಿ ಸಿಎಂ ಫುಲ್ ಖುಷ್


ಹೌದು, ಸಿದ್ಧರಾಮಯ್ಯ ಅವರ ಹಿರಿಯ ಮಗ ದಿವಂಗತ ರಾಕೇಶ್​ ಅವರ ಮಗ ಧವನ್ ಈಗ ತಮ್ಮ ತಾತನ ಪರ ಚುನಾವಣೆಯ ಪ್ರಚಾರ ಆರಂಭಿಸಿದ್ದು, ಮೈಸೂರಿನ ಏರ್‌ಪೋರ್ಟ್‌ನಲ್ಲಿ ತಾತನೊಂದಿಗೆ ಕಾಣಿಸಿಕೊಂಡಿದ್ದಾರೆ.


ಇನ್ನು ಮಾಧ್ಯಮಗಳ ಜೊತೆ ಮಾತನಾಡಿದ ಸಿದ್ಧರಾಮಯ್ಯ, ಮೊಮ್ಮಗ ಪ್ರಚಾರ ಕಾರ್ಯದಲ್ಲಿ ಕೈ ಜೋಡಿಸಿರುವುದರಿಂದ ಫುಲ್ ಖುಷಿಯಾಗಿದ್ದು, ಬಹಳ ಜೋಷ್​ನಲ್ಲಿಯೇ ಮಾತನಾಡಿದ್ದಾರೆ. ಮೊಮ್ಮಗನ ರಾಜಕೀಯ ಆಸಕ್ತಿ ಕಂಡು ಸಿದ್ಧರಾಮಯ್ಯನವರಿಗೆ ಸಂತಸವಾಗಿದ್ದು, ಮೊಮ್ಮಗ ರಾಜಕೀಯ ಆಸಕ್ತಿ ತೋರಿಸೋದು ಸಹಜವಾಗಿಯೇ ಖುಷಿ ಆಗುತ್ತೆ ಎಂದಿದ್ದಾರೆ.ಅಲ್ಲದೇ, ಇಡೀ ಚಾಮುಂಡೇಶ್ವರಿ, ವರುಣ ಕ್ಷೇತ್ರವನ್ನು ಅವರಪ್ಪ ರಾಕೇಶ್ ನಿರ್ವಹಿಸುತ್ತಿದ್ದ. ರಾಕೇಶ್ ಇಡೀ ಜಿಲ್ಲೆ ನೋಡಿಕೊಳ್ಳುತ್ತಿದ್ದ. ಅಪ್ಪನ ರಕ್ತ ಅಲ್ವಾ? ಹಾಗಾಗಿ ಮೊಮ್ಮಗನಿಗೂ ರಾಜಕೀಯದ ಆಸಕ್ತಿ ಬಂದಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.


ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ ಧನವ್?


ಇನ್ನು ಅವನಾಗಿಯೇ ಇಷ್ಟಪಟ್ಟು ನನ್ನೊಂದಿಗೆ ಮೈಸೂರಿಗೆ ಬಂದಿದ್ದಾನೆ. ವರುಣಕ್ಕೆ ಪ್ರಚಾರಕ್ಕೆ ಹೋಗು ಅಂತ ನಾನು ಹೇಳಲ್ಲ. ನಮ್ಮ ಮನೆಯ ಯಾರನ್ನೂ ನಾನು ಪ್ರಚಾರಕ್ಕೆ ಕರೆಯಲ್ಲ. ಅವರಾಗಿಯೇ ಬಂದು ಮಾಡಿದರೆ ಮಾಡಲಿ ಎಂದಿದ್ದು, ಈ ಮೂಲಕ ಮೊಮ್ಮಗನ ರಾಜಕೀಯ ಎಂಟ್ರಿ ಬಗ್ಗೆ ಸುಳಿವು ಕೊಟ್ಟಿದ್ದಾರೆ.


ಇದನ್ನೂ ಓದಿ: ಒಂದು ಗಿಡ-ನೂರೊಂದು ಅರ್ಥ; ಚರ್ಚೆಗೆ ಕಾರಣವಾಯ್ತು ತೇಜಸ್ವಿನಿ ಅನಂತ್ ಕುಮಾರ್ ಟ್ವೀಟ್


ಒಟ್ಟಾರೆ ವಿಧಾನಸಭೆ ಚುನಾವಣೆ ದಿನಕ್ಕೊಂದು ರೋಚಕ ತಿರುವು ಪಡೆಯುತ್ತಿದ್ದು, ಈ ಬಾರಿ ಮತದಾರ ಯಾರ ಕೈ ಹಿಡಿಯಲಿದ್ದಾನೆ ಎನ್ನುವುದನ್ನ ಮಾತ್ರ ಕಾದು ನೋಡಬೇಕಿದೆ.

top videos
    First published: