UPSCಯಲ್ಲಿ ರಾಜ್ಯದಿಂದ ಏಕೈಕ ಮುಸ್ಲಿಂ ಅಭ್ಯರ್ಥಿ ಉತ್ತೀರ್ಣ: ಹುಬ್ಬಳ್ಳಿಗೆ ಆಗಮಿಸಿದ ತಹಸೀನ್ ಭಾನುಗೆ ಭವ್ಯ ಸ್ವಾಗತ

ಮುಂಬೈಯಿಂದ ಮಗಳು ಬರುತ್ತಿದ್ದಂತೆಯೇ ಸಿಹಿ ತಿನ್ನಿಸಿ ಪೋಷಕರು ಸಂಭ್ರಮಿಸಿದ್ದಾರೆ. ಘಂಟಿಕೇರಿ ನಿವಾಸಿಗಳು, ಹುಬ್ಬಳ್ಳಿ ನಾಗರಿಕರಿಂದಲೂ ತಹಸೀನ್ ಅವರಿಗೆ ಸನ್ಮಾನ ಮಾಡಲಾಯಿತು. ತಹಸೀನ್ ಬಹುತೇಕ ಶಿಕ್ಷಣವನ್ನು ಧಾರವಾಡ ಜಿಲ್ಲೆಯಲ್ಲಿ ಪೂರೈಸಿದ್ದಾರೆ.

ತಹಸೀನ್ ಭಾನು

ತಹಸೀನ್ ಭಾನು

  • Share this:
ಹುಬ್ಬಳ್ಳಿ: ಯುಪಿಎಸ್ ಸಿ ಪರೀಕ್ಷೆಯಲ್ಲಿ (UPSC Results) ಹುಬ್ಬಳ್ಳಿಯ ತಹಸೀನ್ ಭಾನು (Tehsin Bhanu) ಅವರಿಗೆ 482 ನೇ Rank ಬಂದಿದ್ದು, ತವರಿಗೆ ಬಂದ ಅವರಿಗೆ ಭವ್ಯ ಸ್ವಾಗತ ನೀಡಲಾಯಿತು. ತಹಸೀನ್ ಪೋಷಕರು ಹುಬ್ಬಳ್ಳಿಯ (Hubballi) ಘಂಟಿಕೇರಿಯ ದೊಡ್ಡಮನಿ ಕಾಲೋನಿಯಲ್ಲಿದ್ದು, ಮನೆಯಲ್ಲಿ ಸಂಭ್ರಮದ ವಾತಾವರಣ ನೆಲೆಸಿತ್ತು. ತಹಸೀನ್ ಭಾನು ಮೊದಲ ಪ್ರಯತ್ನದಲ್ಲಿ ಪ್ರಿಲಿಮ್ಸ್ (Prelims) ಸಹ ಪಾಸಾಗಿರಲಿಲ್ಲ. ಆದರೆ ಎರಡನೆಯ ಪ್ರಯತ್ನದಲ್ಲಿ ಪ್ರಿಲಿಮ್ಸ್ ನೊಂದಿಗೆ ಮೇನ್ಸ್ ಎಕ್ಸಾಂ ನಲ್ಲಿ ಪಾಸಾಗಿ, ಸಂದರ್ಶನದಲ್ಲಿಯೂ ಯಶಸ್ಸು ಕಂಡಿದ್ದಾರೆ. ಮಗಳ ಸಾಧನೆಗೆ ತಂದೆ ಖಾದರ್ ಭಾಷಾ ಹಾಗೂ ತಾಯಿ ಹಸೀನಾ ಬೇಗಂ ಸಂತಸ ವ್ಯಕ್ತಪಡಿಸಿದ್ದಾರೆ.

ಮುಂಬೈಯಿಂದ ಮಗಳು ಬರುತ್ತಿದ್ದಂತೆಯೇ ಸಿಹಿ ತಿನ್ನಿಸಿ ಪೋಷಕರು ಸಂಭ್ರಮಿಸಿದ್ದಾರೆ. ಘಂಟಿಕೇರಿ ನಿವಾಸಿಗಳು, ಹುಬ್ಬಳ್ಳಿ ನಾಗರಿಕರಿಂದಲೂ ತಹಸೀನ್ ಅವರಿಗೆ ಸನ್ಮಾನ ಮಾಡಲಾಯಿತು. ತಹಸೀನ್ ಬಹುತೇಕ ಶಿಕ್ಷಣವನ್ನು ಧಾರವಾಡ ಜಿಲ್ಲೆಯಲ್ಲಿ ಪೂರೈಸಿದ್ದಾರೆ.

ಹುಬ್ಬಳ್ಳಿಯಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣ

ಪ್ರಾಥಮಿಕ ಶಿಕ್ಷಣವನ್ನು ಹುಬ್ಬಳ್ಳಿಯ ರೈಲ್ವೆ ಶಾಲೆ, ಪ್ರೌಢ ಶಿಕ್ಷಣವನ್ನು ಕೇಶ್ವಾಪುರದ ಫಾತಿಮಾ ಆಂಗ್ಲ ಶಾಲೆ, ವಿದ್ಯಾನಿಕೇತನ ಕಾಲೇಜಿನಲ್ಲಿ ಪಿಯುಸಿ ವಿದ್ಯಾಭ್ಯಾಸ ಮಾಡಿದ್ದಾರೆ. ಧಾರವಾಡ ಕೃಷಿ ವಿ.ವಿ.ಯಲ್ಲಿ ಬಿ.ಎಸ್ ಸಿ ಅಗ್ರಿ ಅಭ್ಯಾಸದ ನಂತರ UPSC ಕನಸು ಕಂಡಿದ್ದ ತಹಸೀನ್, ಇದೀಗ ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದಾರೆ.

ಮುಂಬೈ ಮತ್ತು ದೆಹಲಿಯಲ್ಲಿ ತರಬೇತಿ

ಜನರ ಸೇವೆ ಮಾಡಬೇಕೆಂಬ ಉದ್ದೇಶದಿಂದ ಯುಪಿಎಸ್ಸಿ ಪರೀಕ್ಷೆಗೆ ತಯಾರಿ ನಡೆಸಿದ ತಹಸೀನ್ ಭಾನು ಮೊದಲು ಮುಂಬಯಿಯ ಹಜ್ ಹೌಸ್ ನಲ್ಲಿ ಪ್ರಿಲಿಮ್ಸ್ ತರಬೇತಿ ಪಡೆದುಕೊಂಡರು. ನಂತರ ಮೇನ್ಸ್ ಗೆ ತಯಾರಿ ಮತ್ತು ಸಂದರ್ಶನ ತರಬೇತಿಯನ್ನು ದೆಹಲಿಯ ಜಾಮೀಯಾ ವಿಶ್ವವಿದ್ಯಾಲಯದಲ್ಲಿ ಪಡೆದುಕೊಂಡರು. ಪ್ರಥಮ ಎರಡನೆಯ ಬಾರಿಗೆ ಮೇನ್ಸ್ ಬರೆದು ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾದರು.

ಇದನ್ನೂ ಓದಿ:  TextBook Row: ಪಠ್ಯ ಪುಸ್ತಕ ಪರಿಷ್ಕರಣೆ ವಿವಾದ; ವಿರೋಧಿಸುವವರನ್ನು ಕರೆದು ಮಾತಾಡಿಸಿ; ಬರಗೂರು ರಾಮಚಂದ್ರಪ್ಪ

ಮುಸ್ಲಿಂ ಸಮುದಾಯದ ಏಕೈಕ ಅಭ್ಯರ್ಥಿ

ಈ ಬಾರಿಯ ಯು.ಪಿ.ಎಸ್.ಸಿ ಪರೀಕ್ಷೆಯಲ್ಲಿ ಕರ್ನಾಟಕದಿಂದ ಉತ್ತೀರ್ಣಗೊಂಡ ಏಕೈಕ ಮುಸ್ಲಿಂ ಅಭ್ಯರ್ಥಿ ತಹಸೀನ್ ಭಾನು ಆಗಿರೋದು ಮತ್ತೊಂದು ವಿಶೇಷ. ಈ ಕುರಿತು ಪ್ರತಿಕ್ರಿಯಿರುವ ತಹಸೀನ್ ಭಾನು, ಯು.ಪಿ.ಎಸ್.ಸಿ.ಯಲ್ಲಿ ಉತ್ತಮ rank ಬಂದಿರೋದಕ್ಕೆ  ಸಂತಸವಾಗ್ತಿದೆ. ನಮ್ಮ ಸಮುದಾಯದಲ್ಲಿ ಕರ್ನಾಟಕದಿಂದ ಉತ್ತೀರ್ಣಗೊಂಡ ಏಕೈಕ ಅಭ್ಯರ್ಥಿ ಎಂಬುದಕ್ಕೆ ಹೆಮ್ಮೆ ಆಗ್ತಿದೆ. ಜೊತೆಗೆ ಬೇರೆಯವರು ಪಾಸಾಗಲಿಲ್ಲವಲ್ಲಾ ಅಂತ ಬೇಸರವೂ ಆಗ್ತಿದೆ ಎಂದರು.

Grand Welcome of UPSC Topper Tehsin bhanu in her home town hubballi saklb mrq
ಪೋಷಕರ ಜೊತೆ ತೆಹಸಿನ್ ಭಾನು


ಪೋಷಕರಿಗೆ ಕೀರ್ತಿ ತರುವ ರೀತಿಯಲ್ಲಿ ಕೆಲಸ ಮಾಡ್ತೇನೆ. ದೇಶಕ್ಕೆ ಹೆಮ್ಮೆ ತರೋ ರೀತಿಯಲ್ಲಿ ಕೆಲಸ ಮಾಡ್ತೇನೆ ಎಂದು ತಹಸೀನ್ ಭಾನು ನ್ಯೂಸ್ 18 ಕನ್ನಡಕ್ಕೆ ಪ್ರತಿಕ್ರಿಯಿಸಿದ್ದಾರೆ.

ಮಗಳ ಸಾಧನೆಗೆ ತಂದೆ ಸಂತಸ

ಮಗಳ ಸಾಧನೆಗೆ ತಂದೆ ಖಾದರ್ ಭಾಷಾ ಸಹ ಸಂತಸ ವ್ಯಕ್ತಪಡಿಸಿದ್ದಾರೆ. ಈ ಫಲಿತಾಂಶವನ್ನು ನಾವು ನಿರೀಕ್ಷಿಸಿರಲಿಲ್ಲ. ಮಗಳು ತಾನು ಅಂದುಕೊಂಡಂತೆಯೇ ಯುಪಿಎಸ್ ಸಿ ಯಲ್ಲಿ ಸಾಧನೆ ಮಾಡಿದ್ದಾಳೆ. ಗುರುಗಳು ಮಾರ್ಗದರ್ಶಕರ ಸಹಾಯದಿಂದ ಈ ಸಾಧನೆ ಮಾಡಿದ್ದಾಳೆ. ವಿದ್ಯಾರ್ಥಿ ದಿಸೆಯಿಂದಲೂ ಆಕೆ ಪ್ರತಿಭಾವಂತೆಯಾಗಿದ್ದಳು. ಯು ಪಿ ಎಸ್ ಸಿ ಪರೀಕ್ಷಾ ಫಲಿತಾಂಶ ಆಕೆಯ ಪ್ರತಿಭೆಗೆ ಮತ್ತಷ್ಟು ಮೆರಗು ಸಿಕ್ಕಿದೆ. ಮಗಳಿಗೆ ಶುಭವಾಗಲಿ ಎಂದು ಖಾದರ್ ಭಾಷಾ ಹಾರೈಸಿದರು.

ಇದನ್ನೂ ಓದಿ:  Siddaramaiah Tweet: ರೋಹಿತ್ ಚಕ್ರತೀರ್ಥ ಒಬ್ಬ ನಾಡದ್ರೋಹಿ; ಪರಿಷ್ಕರಿಸಿರುವ ಪಠ್ಯವನ್ನು ರದ್ದು ಮಾಡಿ- ಸಿದ್ದರಾಮಯ್ಯ ಆಗ್ರಹ

UPSC ಪರೀಕ್ಷೆಯಲ್ಲಿ ಕನ್ನಡಿಗರ ಸಾಧನೆ

ಈ ಬಾರಿ UPSC ಪರೀಕ್ಷೆಯಲ್ಲಿ ಕರ್ನಾಟಕದ 25 ಅಭ್ಯರ್ಥಿಗಳು ಪಾಸ್ ಆಗಿದ್ದು, ಅದರಲ್ಲಿ ದಾವಣಗೆರೆಯ ಅವಿನಾಶ್ 31ನೇ ಸ್ಥಾನ ಪಡೆದಿದ್ದಾರೆ. ಉಳಿದಂತೆ ಬೆನಕ ಪ್ರಸಾದ್ 92, ನಿಖಿಲ್ ಬಿ. ಪಾಟೀಲ್ 139, ವಿನಯ್ ಕುಮಾರ್ ಗಾಡಿಗೆ 151, ಚಿತ್ತರಂಜನ್ 155, ಕೆ. ಮನೋಜ್ ಕುಮಾರ್ 157, ಅಪೂರ್ವ ಬಸೂರ್ 191, ನಿತ್ಯಾ 207, ಮಂಜುನಾಥ್ 219, ರಾಜೇಶ್ ಪೊನ್ನಪ್ಪ 222, ಸಾಹಿತ್ಯ ಆಲದಕಟ್ಟಿ 150, ಕಲ್ಪಶ್ರೀ 291, ಅರುಣಾ 308, ದೀಪಕ್ ರಾಮಚಂದ್ರ ಶೇಠ್ 311ನೇ ರ್‍ಯಾಂಕ್, ಹರ್ಷವರ್ಧನ್ 318, ವಿನಯ್ ಕುಮಾರ್ 352, ಮೇಘನಾ 425, ಸವಿತಾ ಗೋಟ್ಯಾಲ್ 479, ಮೊಹಮ್ಮದ್ ಸಿದ್ದಿಕಿ ಷರೀಫ್ 516, ಚೇತನ್ ಕೆ. 532, ಎನ್.ಎಸ್ ಪ್ರಕಾಶ್ 568, ಪ್ರಶಾಂತ್ ಕುಮಾರ್ 641 ಹಾಗೂ ಸುಚಿನ್ ಕೆ.ವಿ 682ನೇ Rank ಪಡೆದಿದ್ದಾರೆ.
Published by:Mahmadrafik K
First published: