HOME » NEWS » State » GRAMA PANCHAYATHS SHOULD PAY ELECTRICITY BILL OF STREETLIGHTS LG

ಕಗ್ಗತ್ತಲಿನ ಮಗ್ಗುಲಿಗೆ ಹೋಗಿದೆ ಗ್ರಾಮೀಣ ಕರ್ನಾಟಕ; ಬೀದಿದೀಪಗಳ ವಿದ್ಯುತ್​ ಬಿಲ್​ ಕಟ್ಟುವ ಹೊಣೆ ಗ್ರಾ.ಪಂ.ಗಳ ಹೆಗಲಿಗೆ

ಗ್ರಾಪಂಗಳ ESCROW ಖಾತೆಗಳಲ್ಲಿ ಉಳಿದಿರುವ ಅನುದಾನವನ್ನು ಕಡ್ಡಾಯವಾಗಿ ವಿದ್ಯುತ್ ಸರಬರಾಜು ಕಂಪನಿಗಳಿಗೆ ಪಾವತಿಸಬೇಕು. ಬಾಕಿ ಉಳಿಸಿಕೊಳ್ಳದ ಗ್ರಾ.ಪಂ.ಗಳು ಸಹ ಮುಂಗಡವಾಗಿ ಪಾವತಿಸಬೇಕು. 14ನೇ ಹಣಕಾಸು ಆಯೋಗ ಅನುದಾನದಡಿ ವಿದ್ಯುತ್ ಶುಲ್ಕ ಪಾವತಿಗಾಗಿ ನಿಗದಿಪಡಿಸಿರುವ ಅನುದಾನವನ್ನು ಪಾವತಿಸಬೇಕು.

news18-kannada
Updated:August 31, 2020, 9:24 AM IST
ಕಗ್ಗತ್ತಲಿನ ಮಗ್ಗುಲಿಗೆ ಹೋಗಿದೆ ಗ್ರಾಮೀಣ ಕರ್ನಾಟಕ; ಬೀದಿದೀಪಗಳ ವಿದ್ಯುತ್​ ಬಿಲ್​ ಕಟ್ಟುವ ಹೊಣೆ ಗ್ರಾ.ಪಂ.ಗಳ ಹೆಗಲಿಗೆ
ಸಾಂದರ್ಭಿಕ ಚಿತ್ರ
  • Share this:
ಕೊಪ್ಪಳ(ಆ.31): ಸರಿಯಾಗಿ ತಿಂಗಳ ನಂತರ ಮನೆಯ ಕರೆಂಟ್ ಬಿಲ್ ಪಾವತಿಸದಿದ್ದರೆ ದಂಡ ವಿಧಿಸುವ ವಿದ್ಯುತ್ ಸರಬರಾಜು ಮಾಡುವ ವಿವಿಧ ನಿಗಮಗಳು, ದಂಡ ಸಮೇತ ಬಿಲ್ ಕಟ್ಟದಿದ್ದರೆ ಕರೆಂಟ್ ಕಟ್ ಮಾಡುತ್ತವೆ. ನಿಗಮಗಳು ನೀಡುವ ಶಾಕ್ ಈಗ ನೇರವಾಗಿ ರಾಜ್ಯದ ಗ್ರಾಮ ಪಂಚಾಯಿತಿಗಳ ಬಾಗಿಲಿಗೂ ಬಂದಿದೆ. ಖುದ್ದು ಸರಕಾರವೇ ಈ ವಿಷಯವನ್ನ ತಿಳಿಸಿದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿ ಉಮಾ ಮಹಾದೇವನ್ ಅವರು ಆಗಸ್ಟ್ 22ರಂದು ರಾಜ್ಯದ  ಎಲ್ಲ ಜಿಪಂ ಸಿಇಓ, ತಾಪಂ ಇಓ ಹಾಗೂ ಗ್ರಾಪಂ ಪಿಡಿಓಗಳಿಗೆ ಸುತ್ತೋಲೆ ಕಳಿಸಿ, ಬಾಕಿ ಉಳಿಸಿಕೊಂಡಿರುವ ವಿದ್ಯುತ್ ಬಿಲ್ ಪಾವತಿಸಲು ಸೂಚಿಸಿದ್ದಾರೆ. ಇದಕ್ಕಾಗಿ ಯಾವ ಅನುದಾನ ಬಳಸಬೇಕು? ಮುಂಗಡ ಪಾವತಿಗೆ ಬಳಸಬೇಕಾದ ಅನುದಾನ ಯಾವುದು? ಎಂಬ ಮಾಹಿತಿಯ ಸೂಚನೆಯನ್ನೂ ಸಹ ನೀಡಿದ್ದಾರೆ.

Electricity bill for streetlights 15ನೇ ಹಣಕಾಸು ಆಯೋಗದಡಿ ವಿದ್ಯುತ್ ಶುಲ್ಕ ಪಾವತಿಗೆ ನಿಗದಿಪಡಿಸಿರುವ ಅನುದಾನವನ್ನು ಪ್ರಸಕ್ತ ಸಾಲಿನಲ್ಲಿ ಇ-ಗ್ರಾಮ ಸ್ವರಾಜ್ ತಂತ್ರಾಂಶದ ಮೂಲಕ ನೇರವಾಗಿ ವಿದ್ಯುತ್ ಸರಬರಾಜು ನಿಗಮಗಳಿಗೆ ಪಾವತಿಸಬೇಕು. ಈ ಸಂದರ್ಭದಲ್ಲಿ ಬೀದಿ ದೀಪಗಳ ಬಿಲ್​ನ್ನು, ಅನಿರ್ಬಂಧಿತ ಅನುದಾನದಿಂದ ಹಾಗೂ ಕುಡಿಯುವ ನೀರಿನ ಸ್ಥಾವರದ ಬಿಲ್​ನ್ನು, ಶೇಕಡಾ 25ರ ನಿರ್ಬಂಧಿತ ಅನುದಾನದಡಿ ಭರಿಸಲು ಕ್ರಮ ವಹಿಸುವಂತೆ ಸೂಚಿಸಲಾಗಿದೆ.

Karnataka Rain: ಮುಂದಿನ ಮೂರು ದಿನ ರಾಜ್ಯಾದ್ಯಂತ ಭಾರೀ ಮಳೆ; ಕರಾವಳಿ ಭಾಗದಲ್ಲಿ ಯೆಲ್ಲೋ ಅಲರ್ಟ್

ಇಷ್ಟಾದರೂ ವಿದ್ಯುತ್ ಬಿಲ್ ಇನ್ನೂ ಬಾಕಿ ಉಳಿದರೆ ಗ್ರಾಪಂಗಳು ಸ್ವಂತ ಸಂಪನ್ಮೂಲ ನಿಧಿಯನ್ನು ಇದಕ್ಕಾಗಿ ಬಳಸಬೇಕು. ಗ್ರಾಪಂಗಳು ಬೀದಿದೀಪಗಳ ವಿದ್ಯುತ್ ಬಿಲ್ಗಾಗಿ ಪಿಡಿಓ ಮತ್ತು ವಿದ್ಯುತ್ ಸರಬರಾಜು ಕಂಪನಿಗಳ ಅಧಿಕಾರಿಗಳು KSRSAC (ಎಸ್ಕಾಂ ಅಭಿವೃದ್ಧಿಪಡಿಸಿರುವ ಮೊಬೈಲ್ ಆ್ಯಪ್) ಬಳಸಿ ಜಂಟೀ ಲೆಕ್ಕ ಪರಿಶೋಧನೆ ನಡೆಸಬೇಕು. ಜೂನ್ವರೆಗೆ ಉಳಿದಿರುವ ವಿದ್ಯುತ್ನ ಬಾಕಿ ಬಿಲ್ ಸಂಪೂರ್ಣ ಪಾವತಿಸಬೇಕು. ಜುಲೈ ನಂತರ ಪ್ರತಿ ತಿಂಗಳು ಕಡ್ಡಾಯವಾಗಿ ಗ್ರಾ.ಪಂಗಳು ಬೀದಿದೀಪಗಳ ವಿದ್ಯುತ್ ಬಿಲ್ ಪಾವತಿಸಲೇಬೇಕು. ಇಲ್ಲದಿದ್ದರೆ ಇದಕ್ಕೆ ಗ್ರಾಮ ಪಂಚಾಯಿತಿಗಳು ಮತ್ತು ಅಲ್ಲಿನ ಪಿಡಿಓ ಅಧಿಕಾರಿಗಳೇ ಹೊಣೆ ಎಂದು ಸರಕಾರ ಎಚ್ಚರಿಕೆ ನೀಡಿದೆ.
Youtube Video

ಗ್ರಾಮ ಪಂಚಾಯಿತಿಗಳು ಬೀದಿದೀಪಗಳ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿರುವುದು ನಿಜ. ಈಗಾಗಲೇ ಸರಕಾರ ಸುತ್ತೋಲೆ ಹಾಗೂ ಪತ್ರದ ಮೂಲಕ ಮಾಹಿತಿ ತಿಳಿಸಿದ್ದು, ವಿದ್ಯುತ್ ಸರಬರಾಜು ನಿಗಮ ಹಾಗೂ ಗ್ರಾಪಂ ಅಧಿಕಾರಿಗಳು ಜಂಟಿಯಾಗಿ ಲೆಕ್ಕ ಪರಿಶೋಧನೆ ಮಾಡುತ್ತಿದ್ದಾರೆ. ಈ ಕೆಲಸ ಪ್ರಗತಿಯಲ್ಲಿದ್ದು, ರಾಜ್ಯದ ಉಳಿದ ಜಿಲ್ಲೆಗಳಿಗೆ ಹೋಲಿಸಿದರೆ ಕೊಪ್ಪಳ ಜಿಲ್ಲೆಯ ಗ್ರಾಮ ಪಂಚಾಯಿತಿಗಳು ಬೀದಿದೀಪಗಳ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿರುವುದು ಕಡಿಮೆ ಎಂದು ಕೊಪ್ಪಳ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ  ರಘುನಂದನ್ ಮೂರ್ತಿ ಹೇಳಿದ್ದಾರೆ.
Published by: Latha CG
First published: August 31, 2020, 9:24 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories