ಕೋಲಾರ: ಈ ಗ್ರಾಮ ಪಂಚಾಯ್ತಿಯಲ್ಲಿ ಮಹಿಳಾ ಅಧಿಕಾರಿಯ ಕಾರ್ಯವೈಖರಿಗೆ ರಾಜಕಾರಣಿಗಳೇ ಫಿದಾ

ದೇವರಾಯಸಮುದ್ರ ಪಂಚಾಯ್ತಿ ವ್ಯಾಪ್ತಿಯಲ್ಲೂ ತೆರಿಗೆ ವಸೂಲಿ ಮಾಡಿ, ಪಂಚಾಯ್ತಿ ಸಿಬ್ಬಂದಿಗೆ ಸಂಬಳ ನೀಡಿದ್ದಾರೆ. ಇತ್ತ ಹಲವು ಸ್ವಯಂ ಸೇವಾ ಸಂಸ್ಥೆಗಳ ಮೂಲಕ ಸ್ವಚ್ಚ ಭಾರತ್ ಯೋಜನೆ ಯಶಸ್ವಿಗೊಳಿಸಲು ಮುಂದಾಗಿದ್ದಾರೆ.

news18-kannada
Updated:September 25, 2020, 2:44 PM IST
ಕೋಲಾರ: ಈ ಗ್ರಾಮ ಪಂಚಾಯ್ತಿಯಲ್ಲಿ ಮಹಿಳಾ ಅಧಿಕಾರಿಯ ಕಾರ್ಯವೈಖರಿಗೆ ರಾಜಕಾರಣಿಗಳೇ ಫಿದಾ
ಮಹಿಳಾ ಆಡಳಿತಾಧಿಕಾರಿ ಗಿರಿಜೇಶ್ವರಿ ದೇವಿ
  • Share this:
ಕೋಲಾರ(ಸೆ.25): ಸಾರ್ವಜನಿಕರ ಕೆಲಸಗಳನ್ನ ಮಾಡುವ ಇಚ್ಚಾಶಕ್ತಿಯೊಂದು ಇದ್ದಲ್ಲಿ ಮಾತ್ರ ಅಭಿವೃದ್ದಿ ಸಾಧ್ಯ ಎಂಬಂತೆ ಅಧಿಕಾರಿ ತಮ್ಮನ್ನ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಆವಣಿ ಮತ್ತು ದೇವರಾಯಸಮುದ್ರ ಪಂಚಾಯ್ತಿ ವ್ಯಾಪ್ತಿಯಲ್ಲಿ ಆಡಳಿತಾಧಿಕಾರಿ ಆಗಿರುವ, ಮುಳಬಾಗಿಲು ಕ್ಷೇತ್ರ ಶಿಕ್ಷಣಾಧಿಕಾರಿ ಗಿರಿಜೇಶ್ವರಿ ದೇವಿ ಅವರು ಸಾಕಷ್ಟು ಸುದ್ದಿಯಲ್ಲಿದ್ದಾರೆ.  ತಾಲೂಕಿನ ಪ್ರಸಿದ್ದ ಪ್ರವಾಸಿ ಕ್ಷೇತ್ರ ಆವಣಿ ಗ್ರಾಮದಲ್ಲಿ, ರಸ್ತೆ ಅಗಲೀಕರಣ ಕಾಮಗಾರಿ ಸಂಬಂದ ತೆರವು ಕಾರ್ಯಾಚರಣೆ ಬರದಿಂದ ಸಾಗಿದೆ. ಆವಣಿ ಗ್ರಾಮ ಪಂಚಾಯ್ತಿ ಆಡಳಿತಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿರುವ, ಕ್ಷೇತ್ರ ಶಿಕ್ಷಣಾಧಿಕಾರಿ ಗಿರಿಜೇಶ್ವರಿ ದೇವಿ ಅವರ ಕಾರ್ಯವೈಖರಿಗೆ ರಾಜಕೀಯ ನಾಯಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಳೆದ 15 ವರ್ಷದಿಂದ ಪ್ರಸ್ತಾಪದಲ್ಲಿದ್ದು, ನೆನೆಗುದಿಗೆ ಬಿದ್ದಿದ್ದ ಮುಖ್ಯರಸ್ತೆ ಅಗಲೀಕರಣಕ್ಕೆ ಇದೀಗ ವಿರೋಧದ ನಡುವೆಯು ಚಾಲನೆ ಸಿಕ್ಕಿದೆ.

ಆವಣಿ ಗ್ರಾಮದಲ್ಲಿ ಐತಿಹಾಸಿಕ ರಾಮಲಿಂಗೇಶ್ವರ ಜಾತ್ರೆ ಸಮಯದಲ್ಲಿ ಉಂಟಾಗುತ್ತಿದ್ದ ವಾಹನ ದಟ್ಟಣೆ ಸಮಸ್ಯೆ ಈಗ ನಿವಾರಿಸುವ ನಿರೀಕ್ಷೆಯಿದೆ, ಹೀಗಾಗಿ ಒಂದು ಕಿಲೋ ಮೀಟರ್ ಉದ್ದದ, 9 ಮೀಟರ್ ಅಗಲದ ರಸ್ತೆ ಕಾಮಗಾರಿ ಜೊತೆಗೆ, ಚರಂಡಿ, ಡ್ರೈನೇಜ್ ಕಾರ್ಯವು ಬರದಿಂದ ಸಾಗಿದೆ, ಆವಣಿ ಮುಖ್ಯ ರಸ್ತೆ ನಿರ್ಮಾಣಕ್ಕಾಗಿ, ಒಂದು ಕೋಟಿ ಅರವತ್ತು ಲಕ್ಷ ಹಣ, ಮಂಜೂರಾಗಿದ್ದು, ಇನ್ನು ಮೂರು ತಿಂಗಳಲ್ಲಿ ಕಾಮಗಾರಿ ಮುಗಿಯುವ ವಿಶ್ವಾಸವಿದೆ. ರಾಜಕೀಯ ಒತ್ತಡಗಳಿಂದ ನೆನೆಗುದಿಗೆ ಬಿದ್ದಿದ್ದ ರಸ್ತೆ ಕಾಮಗಾರಿ ಆರಂಭಿಸಿದ ಸಂಬಂಧ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.

ಇನ್ನು ಆವಣಿ ಪಂಚಾಯ್ತಿ ಕೇಂದ್ರದಲ್ಲಿ  ಬೀದಿ ಬದಿಯಲ್ಲಿ ಸಾಕಷ್ಟು ವರ್ಷಗಳಿಂದ ವ್ಯಾಪಾರ ವಹಿವಾಟು ನಡೆಸ್ತಿರುವ ಅಂಗಡಿಗಳಿಗೆ ಕಾನೂನು ಪ್ರಕಾರ ಲೈಸೆನ್ಸ್ ನೀಡಿ, ತೆರಿಗೆ ವಸೂಲಿ ಮಾಡಿದ್ದಾರೆ. ಇತ್ತ ದೇವರಾಯಸಮುದ್ರ ಪಂಚಾಯ್ತಿ ವ್ಯಾಪ್ತಿಯಲ್ಲೂ ತೆರಿಗೆ ವಸೂಲಿ ಮಾಡಿ, ಪಂಚಾಯ್ತಿ ಸಿಬ್ಬಂದಿಗೆ ಸಂಬಳ ನೀಡಿದ್ದಾರೆ. ಇತ್ತ ಹಲವು ಸ್ವಯಂ ಸೇವಾ ಸಂಸ್ಥೆಗಳ ಮೂಲಕ ಸ್ವಚ್ಚ ಭಾರತ್ ಯೋಜನೆ ಯಶಸ್ವಿಗೊಳಿಸಲು ಮುಂದಾಗಿದ್ದಾರೆ. ಹೀಗಾಗಿ ದೇವರಾಯಸಮುದ್ರ ಪಂಚಾಯ್ತಿ ವ್ಯಾಪ್ತಿಯ ಕೀಲನಹಳ್ಳಿ, ಮಲ್ಲಪ್ಪನಹಳ್ಳಿ ಗ್ರಾಮದಲ್ಲಿ ಕಸ ಶೇಖರಿಸಲು ಡಸ್ಟ್ ಬಿನ್ ಹಾಗೂ ಸೋಲಾರ್ ಎಲ್‍ಇಡಿ ಲೈಟ್‍ಗಳನ್ನ ಸುಮಾರು 250 ಕ್ಕೂ ಹೆಚ್ಚು ಮನೆಗಳಿಗೆ ನೀಡಿದ್ದಾರೆ.

ಕ್ಷೇತ್ರ ಶಿಕ್ಷಣಾಧಿಕಾರಿ ಗಿರಿಜೇಶ್ವರಿ ದೇವಿ ಅವರ ಈ ಸಮಾಜಮುಖಿ ಕಾರ್ಯಕ್ಕೆ, ಗ್ರಾಮ ಪಂಚಾಯ್ತಿಯ ಮುಖಂಡರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ಅಭಿವೃದ್ದಿ ಮಾಡಲು ಸಾಕಷ್ಟು ಕೆಲಸಗಳಿದೆ, ಅಧಿಕಾರದ ಅವಧಿಯಲ್ಲಿ ಕೈಲಾದಷ್ಟು ಕೆಲಸ ಮಾಡುವುದಾಗಿ ತಿಳಿಸಿದ್ದಾರೆ.

ಒಟ್ಟಿನಲ್ಲಿ ಗ್ರಾಮ ಪಂಚಾಯಿತಿಗಳ ಅಧಿಕಾರವನ್ನ ಸದ್ಯ ಸರ್ಕಾರ ಆಡಳಿತಾದಿಕಾರಿಗಳಿಗೆ ನೀಡಿದ್ದು, ಹಲವೆಡೆ ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನ ಸಮರ್ಥವಾಗಿ ನಿರ್ವಹಣೆ ಮಾಡುವ ಮೂಲಕ ಜನರ ಮೆಚ್ಚುಗೆ ಗಳಿಸಿದ್ದಾರೆ‌. ಪಂಚಾಯಿತಿ ಚುನಾವಣೆ ನಂತರ ಅವಧಿಯಲ್ಲಿ ಅಧಿಕಾರಕ್ಕೆ ಬರೊ ಅಧ್ಯಕ್ಷ್ಯರು ಹಾಗು ಉಪಾಧ್ಯಕ್ಷ್ಯರು ಕೆಲವೊಮ್ಮೆ ರಾಜಕೀಯ ವೈಶಮ್ಯದಿಂದ ಅಭಿವೃದ್ಧಿಯ ಕಡೆ ಗಮನ ಹರಿಸಲ್ಲ, ಹೀಗಾಗಿ ಆಡಳಿತಾದಿಕಾರಿಗಳೆ ಎಷ್ಟೊ ಉತ್ತಮ ಎನ್ನುವ ಅಭಿಪ್ರಾಯವನ್ನು ಸಾರ್ವಜನಿಕರು ಈ ವೇಳೆ  ವ್ಯಕ್ತಪಡಿಸಿದ್ದಾರೆ‌.
Published by: Latha CG
First published: September 25, 2020, 2:44 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading