ಮಂಡ್ಯ: ಸಕ್ಕರೆನಾಡಿನಲ್ಲಿ ಇತ್ತೀಚೆಗೆ ಗ್ರಾ.ಪಂ. ಚುನಾವಣೆ ತನ್ನ ಹೆಂಡತಿಯನ್ನು ನಿಲ್ಲಿಸಿ ಗೆಲ್ಲಿಸಿ ಅಧ್ಯಕ್ಷೆ ಮಾಡಲು ತಹಶೀಲ್ದಾರ್ ಅಧಿಕಾರಿಯೊಬ್ಬರು ಗ್ರಾಮದ ಜನರಿಗೆ 25 ಲಕ್ಷ ಆಫರ್ ನೀಡಿದ ಘಟನೆ ನಡೆದಿತ್ತು. ಆ ಘಟನೆ ಬೆನ್ನಲೆ ಇದೀಗ ಜಿಲ್ಲೆಯ ನಾಗ ಮಂಗಲ ತಾಲೂಕಿನ ಗ್ರಾಮವೊಂದರಲ್ಲಿ ಗ್ರಾಮಸ್ಥರೇ ತಮ್ಮೂರಿನ ಗ್ರಾ.ಪಂ.ಸದಸ್ಯ ಸ್ಥಾನವನ್ನು ಹರಾಜಿಗಿಟ್ಟು ಹರಾಜು ಕೂಗಿದ್ದಾರೆ. ನಾಗಮಂಗಲ ತಾಲೂಕಿನ ಲಾಳನಕೆರೆ ಪಂಚಾಯತಿಯ ವ್ಯಾಪ್ತಿಯ ಬಿದರಕೆರೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ತಮ್ಮೂರಿಗೆ ಬರುವ ಮೂವರು ಗ್ರಾ.ಪಂ. ಸದಸ್ಯ ಸ್ಥಾನವನ್ನು ಊರಿನ ಹಿರಿಯರು ಗ್ರಾಮದ ಅಭಿವೃದ್ದಿ ನೆಪದಲ್ಲಿ ಲಕ್ಷಾಂತರ ರೂಪಾಯಿಗೆ ಹರಾಜು ಕೂಗಿ ಅವಿರೋಧ ಆಯ್ಕೆ ಮಾಡಿದ್ದಾರೆ. ಗ್ರಾಮದ ಮನೆ ಯೊಂದರಲ್ಲಿ ನಡೆದ ಈ ಹರಾಜು ಪ್ರಕ್ರಿಯೆಯ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ. ಗ್ರಾ.ಪಂ.ಸದಸ್ಯ ಸ್ಥಾನ ಹರಾಜು ಹಾಕಿರುವ ಗ್ರಾಮಸ್ಥರ ನಡೆ ವಿರುದ್ದ ಇದೀಗ ಎಲ್ಲೆಡೆ ಟೀಕೆಗಳು ಸೇರಿದಂತೆ ಬುದ್ದಿಜೀವಿ ಗಳಿಂದ ಆಕ್ರೋಶ ವ್ಯಕ್ತವಾಗುತ್ತಿದೆ.
ಗ್ರಾಮದಲ್ಲಿ ನಡೆದ ಪಂಚಾಯತಿ ಸ್ಥಾನಗಳ ಈ ಹರಾಜು ಪ್ರಕ್ರಿಯೆಯಲ್ಲಿ ಒಂದು ಸ್ಥಾನ 8 ಲಕ್ಷಕ್ಕೂ ಮೀರಿ ಹರಾಜು ಕೂಗಲಾಗಿದೆ ಎಂಬ ಮಾಹಿತಿ ಲಭ್ಯ ವಾಗಿದೆ. ಈ ಹರಾಜು ಪ್ರಕ್ರಿಯೆಯಲ್ಲಿ ಹಣದ ಉಳ್ಳವರು ಭಾಗವಹಿಸಿದ್ದು ಬಹುತೇಕ ಬಿಡ್ ನಲ್ಲಿ ಭಾಗಿಯಾ ದವರು ಬೆಂಗಳೂರಿನಲ್ಲಿ ವಾಸವಿದ್ದು ಹಣದ ಉಳ್ಳವರೇ ಆಗಿದ್ದಾರೆ. ಊರಿನ ಅಭಿವೃದ್ದಿಯ ಹೆಸರಲ್ಲಿ ಊರಿನ ಹಿರಿಯರು ಈ ರೀತಿ ಪಂಚಾಯತಿ ಸ್ಥಾನವನ್ನು ಅವಿರೋಧವಾಗಿ ಆಯ್ಕೆ ಮಾಡಲು ಹರಾಜು ಕೂಗಿಸಿದ್ದಾರೆ.
ಇದನ್ನು ಓದಿ: ಕುಡಿಯುವ ನೀರಿನ ಘಟಕಗಳ ಹಗರಣ ತನಿಖೆಗೆ ಜಂಟಿ ಸಮಿತಿ ರಚನೆ; ಸಿಎಂ ಬಿಎಸ್ ಯಡಿಯೂರಪ್ಪ
ಊರಿನ ಹಿರಿಯರ ಈ ನಿರ್ಧಾರದಿಂದ ಊರಿನವರು ಅಸಹಾಯಕರಾಗಿ ಒಪ್ಪಿಕೊಂಡು ಹರಾಜು ಕೂಗಲು ಅನುಮತಿಸಿದ್ದಾರೆ. ಇದು ಕಾನೂನು ಬಾಹಿರವಾಗಿದ್ದರೂ, ಊರಿನ ಹಿರಿಯ ಮಾತಿಗೆ ಜನರು ಎದುರು ಮಾತನಾಡಲಾಗದೆ ಒಪ್ಪಿದ್ದಾರೆ. ಗ್ರಾಮದಲ್ಲಿ ನಡೆದ ಈ ಹರಾಜು ಪ್ರಕ್ರಿಯೆ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಜಿಲ್ಲಾಡಳಿತ ಚುನಾವಣಾ ಇಲಾಖೆ ತನಿಖೆಗೆ ಆದೇಶ ಮಾಡಿದೆ. ಪ್ರಕರಣ ನೈಜತೆ ಪರಿಶೀಲಿಸಿ ಸತ್ಯವಿದ್ದರೆ ಎಫ್ಐಆರ್ ದಾಖಲಿಸುವಂತೆ ಡಿಸಿ ನಾಗಮಂಗಲ ತಹಶೀಲ್ದಾರ್ ಗೆ ಪತ್ರದ ಮೂಲಕ ಆದೇಶ ಮಾಡಿದ್ದಾರೆ.
ಒಟ್ಟಾರೆ ಹಣಬಲದಿಂದ ಪಂಚಾಯಿತಿ ಸದಸ್ಯ ಸ್ಥಾನ ಗಳನ್ನು ಖರೀದಿಸಲು ಹೊರಟ್ಟಿದ್ದವರಿಗೆ ಹಾಗೂ ಹರಾಜು ಹಾಕಲು ಪ್ರಯತ್ನಿಸಿದವರಿಗೆ ಡಿಸಿ ಆದೇಶದಿಂದ ಮುಖಭಂಗವಾಗಿದೆ. ಅಧಿಕಾರಯುತ ಜನಪ್ರತಿನಿ ಸ್ಥಾನಗಳು ಉಳ್ಳ ವರ ಪಾಲಾಗುತ್ತಿವೆ ಎನ್ನುವ ಆರೋ ಪಗಳು ಕೇಳಿ ಬರು ತ್ತಿರುವ ಹೊತ್ತಲ್ಲೇ ನಾಗಮಂಗಲ ತಾಲೂಕಿನ ಹಳ್ಳಿಯ ಲ್ಲಿ ನಡೆದಿರುವ ಈ ಹರಾಜು ಪ್ರ ಕ್ರಿಯೆ ಪ್ರಜಾಪಭುತ್ವ ವ್ಯವಸ್ಥೆಯನ್ನೇ ಅಣಕಿಸುವಂತೆ ಮಾಡಿದ್ದು ಸುಳ್ಳಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ