ಕತ್ತಿ ಸಹೋದರ ಕಮಾಲ್​​; 7 ದಶಕಗಳಿಂದ ಚುನಾವಣೆ ಕಾಣದ ಪಂಚಾಯತಿ; ಗ್ರಾಮದ 33 ಜನ ಅವಿರೋಧ ಆಯ್ಕೆ

ಗ್ರೂಪ್ ಪಂಚಾಯ್ತಿ, ಮಂಡಲ ಪಂಚಾಯ್ತಿ ಕಾಲದಿಂದಲೂ ಸಹ ಬೆಲ್ಲದ ಬಾಗೇವಾಡಿಯಲ್ಲಿ ಅವಿರೋಧ ಆಯ್ಕೆ ಮಾತ್ರ ನಡೆಯುತ್ತಿದೆ. 1977  ರಲ್ಲಿ ಗ್ರಾಮದಲ್ಲಿ ಒಂದು ಬಾರಿ ಒಂದೇ  ವಾರ್ಡ್​​​ಗೆ ಚುನಾವಣೆ ನಡೆದಿದ್ದು ಬಿಟ್ಟರೆ, ಇಲ್ಲಿಯವರೆಗೂ ಸಹ ಗ್ರಾಮಸ್ಥರು ಅವಿರೋಧ ಆಯ್ಕೆ ಮಾಡುತ್ತಾ ಬಂದಿದ್ದಾರೆ.

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

  • Share this:
ಚಿಕ್ಕೋಡಿ(ಡಿ.16): ಚುನಾವಣೆ ಘೋಷಣೆ ಆಗ್ತಿದ್ದಂತೆ ಒಂದೇ ಗಲ್ಲಿಯಲ್ಲಿ ಬೆಳೆದ ಗೆಳೆಯರು ಪರಸ್ಪರ ವಿರೋಧಿಗಳಾಗೋದು ಕಾಮನ್. ಕೆಲವೊಂದು ಬಾರಿ ಅಣ್ಣ-ತಮ್ಮಂದಿರಲ್ಲೆ ಕಲಹ ಶುರುವಾಗಿಬಿಡುತ್ತದೆ. ಅಲ್ಲದೇ ಗ್ರಾಮದಲ್ಲಿ ತಮ್ಮ ಹಿಡಿತ ಸಾಧಿಸಲು ಗ್ರಾಮ ಪಂಚಾಯತಿ ಚುನಾವಣೆ ಒಂದು ಅಡಿಪಾಯ ಆಗುತ್ತೆ . ಬಿರುಸಿನ ಫೈಟ್ ನಡೆಯುವ ಕಾಲದಲ್ಲಿ ಇಲ್ಲೊಂದು ಗ್ರಾಮ ಪಂಚಾಯತಿ ರಚನೆಯಾದಾಗಿನಿಂದ ಅಂದ್ರೆ ಕಳೆದ 7 ದಶಕಗಳಿಂದಲೂ ಚುನಾವಣೆ ನಡೆದಿಲ್ಲ. ಕತ್ತಿ ಸಹೋದರರ ಬೆಂಬಲದಿಂದ ಸತತ ಅವಿರೋಧವಾಗಿ ಆಯ್ಕೆ ನಡೆದು ರಾಜ್ಯದ ಗಮನ ಸೆಳೆದಿರುವುದು ವಿಶೇಷವಾಗಿದೆ.

ಕತ್ತಿ ಸಹೋದರರು ಹೆಸರು ಕೇಳಿದ್ರೆ ಸಾಕು ರಾಜ್ಯದಲ್ಲಿ ಎಲ್ಲರೂ ನೆನಪಿಸಿಕೊಳ್ಳುತ್ತಾರೆ. ರಾಜ್ಯದಲ್ಲೆ ಅತ್ಯಂತ ಹಿರಿಯ ಶಾಸಕ ಉಮೇಶ್ ಕತ್ತಿ ಹಾಗೂ ಸಹೋದರ ರಮೇಶ್ ಕತ್ತಿ ಅವರ ಸ್ವಂತ ಗ್ರಾಮ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ  ಬೆಲ್ಲದ ಬಾಗೇವಾಡಿ  ಗ್ರಾಮ. ಈ ಗ್ರಾಮದ ಜನ  ಕಳೆದ 7 ದಶಕಗಳಿಂದ ಗ್ರಾಮ ಪಂಚಾಯತ್ ಚುನಾವಣೆ ಮಾಡಿ  ಕೈಗೆ ಶಾಯಿ ಹಾಕಿಕೊಂಡ ಉದಾಹರಣೆಯೇ ಇಲ್ಲ. ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಲು ಬ್ಯಾಲೇಟ್ ಪೇಪರ್ ನೋಡೆ ಇಲ್ಲ. ಬದಲಾಗಿ ಕತ್ತಿ ಸಹೋದರರು ಗ್ರಾಮದ ಸದಸ್ಯರನ್ನು ಸೇರಿಸಿ ತೆಗೆದುಕೊಳ್ಳುವ ಒಮ್ಮತದ  ನಿರ್ಧಾರಕ್ಕೆ ಬದ್ದವಾಗಿ ಗ್ರಾಮದ ಅಭಿವೃದ್ದಿ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಿದ್ದಾರೆ.

ಗ್ರೂಪ್ ಪಂಚಾಯ್ತಿ, ಮಂಡಲ ಪಂಚಾಯ್ತಿ ಕಾಲದಿಂದಲೂ ಸಹ ಬೆಲ್ಲದ ಬಾಗೇವಾಡಿಯಲ್ಲಿ ಅವಿರೋಧ ಆಯ್ಕೆ ಮಾತ್ರ ನಡೆಯುತ್ತಿದೆ. 1977  ರಲ್ಲಿ ಗ್ರಾಮದಲ್ಲಿ ಒಂದು ಬಾರಿ ಒಂದೇ  ವಾರ್ಡ್​​​ಗೆ ಚುನಾವಣೆ ನಡೆದಿದ್ದು ಬಿಟ್ಟರೆ, ಇಲ್ಲಿಯವರೆಗೂ ಸಹ ಗ್ರಾಮಸ್ಥರು ಅವಿರೋಧ ಆಯ್ಕೆ ಮಾಡುತ್ತಾ ಬಂದಿದ್ದಾರೆ.

Bangalore Drug Mafia: ಸಿಸಿಬಿ ಪೊಲೀಸರಿಂದ ಡ್ರಗ್​ ಪೆಡ್ಲರ್​​ಗಳ ಬಂಧನ; 1.15 ಕೋಟಿ ಮೌಲ್ಯದ ಮಾದಕ ವಸ್ತು ಜಪ್ತಿ

ಪ್ರಸ್ತುತ ಸಾಲಿನಲ್ಲಿ ಹೆಚ್ಚಿನ ಸಂಖ್ಯೆಯ ಯುವಕರು ಗ್ರಾಮದ 9 ವಾರ್ಡ್​​​ಗಳಿಗೆ ನಾಮಪತ್ರಗಳನ್ನ ಸಲ್ಲಿಕೆ ಮಾಡಿದ್ದಾರೆ. ತಾವು ಸಹ ಚುನಾವಣೆಗೆ ಸ್ಪರ್ಧಿಸಲು ಕಾತುರದಿಂದ ಕಾದು ಕುಳಿತಿದ್ದರು. ಆದರೆ ಕತ್ತಿ ಸಹೋದರರ ಮನವೊಲಿಕೆ ಪ್ರಯತ್ನದಿಂದಾಗಿ ಗ್ರಾಮದ 9 ವಾರ್ಡುಗಳಿಗೆ 33 ಜನ ಸದಸ್ಯರು ಅವಿರೋಧ ಆಯ್ಕೆಯಾಗಿದ್ದಾರೆ.

ಇನ್ನು ಅವಿರೋಧವಾಗಿ ಆಯ್ಕೆಯಾದ ಎಲ್ಲಾ 33 ಸದಸ್ಯರನ್ನು  ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ್ ಕತ್ತಿ ಬೆಲ್ಲದ ಬಾಗೇವಾಡಿ ಗ್ರಾಮದ ತಮ್ಮ ಸ್ವಗೃಹಕ್ಕೆ ಕರೆಸಿ ಸನ್ಮಾನ ಮಾಡಿ ಗ್ರಾಮದ ಏಳಿಗೆಗಾಗಿ ಶ್ರಮಿಸುವಂತೆ ಮನವಿ ಮಾಡಿದ್ದಾರೆ. ಗ್ರಾಮದ ಎಲ್ಲಾ ವರ್ಗದ ಜನ ಚುನಾವಣೆ ನಡೆಸದೆ ಬೆಂಬಲ ಸೂಚಿಸಿ ಅವಿರೋಧ ಆಯ್ಕೆಯಾಗಲು ಬೆಂಬಲ ನೀಡಿದ್ದಾರೆ. ಗ್ರಾಮದಲ್ಲಿ ಜಾತಿ ಭೇದ-ಭಾವ ಮಾಡದೆ ಗ್ರಾಮದ ಅಭಿವೃದ್ಧಿಗೆ ಶ್ರಮಿಸಬೇಕು. ಮಾದರಿ ಗ್ರಾಮ ಪಂಚಾಯತಿ ರಚನೆ ಮಾಡುವ ನಿಟ್ಟಿನಲ್ಲಿ ಅಭಿವೃದ್ಧಿಯ ಯೋಜನೆಗಳನ್ನ ರೂಪಿಸುವಂತೆ ಸಲಹೆ ನೀಡಿದ್ದಾರೆ.

ಒಟ್ಟಿನಲ್ಲಿ ಬೆಲ್ಲದ ಬಾಗೇವಾಡಿ ಗ್ರಾಮದಲ್ಲಿ ಕಳೆದ 7 ದಶಕಗಳಿಂದ ಚುನಾವಣೆ ನಡೆಸದೆ ಯಾವುದೇ ಸಮಸ್ಯೆಯನ್ನು ಮಾಡಿಕೊಳ್ಳದೆ, ಅವಿರೋಧ ಆಯ್ಕೆ ಮಾಡುವ ಮೂಲಕ ಮಾದರಿಯಾಗಿದ್ದರೆ. ಇದಕ್ಕೆ ಕತ್ತಿ ಸಹೋದರರ ಪ್ರಯತ್ನವು ಸಹ ಮಾದರಿ ಎಂದು ಹೇಳಬಹುದು.
Published by:Latha CG
First published: